ಒಂದು ಬಟ್ಟೆ ಅಂಗಡಿ ಇದ್ದರೆ ಸಾವಿರಾರು ಜನ ಬರುತ್ತಾರೆ ಹೋಗುತ್ತಾರೆ.
ಅಲ್ಲಿಯೇ ಒಂದು trial ರೂಮು ಇರುತ್ತದೆ. ಬೇರೆ ಬೇರೆ ಬ್ರಾಂಡು. ಬೇರೆ ಬೇರೆ ಅಳತೆಯ ಬಟ್ಟೆ. ಮಾಟ, ಬಣ್ಣ , ಬ್ರಾಂಡು ಇಷ್ಟ ಆದರೆ ಸಾಲದು. ಅಳತೆ ಸರಿ ಇದೆಯೇ ನೋಡಬೇಕಲ್ಲ.ಅಳತೆ ನೋಡಿದರೆ ಸಾಲದು. ನನಗೆ ಒಪ್ಪುತ್ತದೆಯೋ ನೋಡಬೇಕಲ್ಲ..ಮೊದಲ ಬಾರಿ ಧರಿಸಿದ ತಕ್ಷಣವೇ ನನಗೆ ಆಸಕ್ತಿಯೇ ಕಳೆದು ಹೋದರೆ? ಅಲ್ಲೇ ಮರಳಿಸಿ ಬರಬಹುದು. ಇಲ್ಲವಾದರೆ ಮರಳಿಸುವುದು ಒಂದು ತಲೆನೋವು. ದೊಡ್ಡ procedure .ಒಂದುವೇಳೆ ಹಣ ಕೊಟ್ಟು ಕೊಂಡಮೇಲೆ ಅದನ್ನೇ ಉಪಯೋಗಿಸುವ ಅನಿವಾರ್ಯವು ಬರಬಹುದು. ಅಂಗಿ, ಚುಡಿದಾರ, ಪ್ಯಾಂಟ್ ಎಲ್ಲವನ್ನು ಹಾಕಿ ನೋಡಿ ಕೊಂಡುಕೊಳ್ಳಬಹುದು. ಆದರೆ ನಮ್ಮಲ್ಲಿ ಒಂದು ತಿಂಗಳಾದಮೇಲೆ ಮರಳಿಸುವ ವ್ಯವಸ್ಥೆ ಇಲ್ಲ. ಯಾಕೆಂದರೆ ನಮ್ಮ ಪ್ರಾಮಾಣಿಕತೆಯಲ್ಲಿ ನಂಬಿಕೆ ಇಲ್ಲ. ಆರ್ಥಿಕವಾಗಿ ಯೋಚಿಸಿದರೆ ಸ್ವಂತ ಬಟ್ಟೆಗಿಂತ ಬಾಡಿಗೆಯದಿದ್ದರೆ ಉತ್ತಮ. ಸಂದರ್ಭಕ್ಕೆ ಉಪಯೋಗಿಸಿ ಮರಳಿಸಬಹುದು. ಅದರಿಂದ ಬರುವ ಯಾವ ಆರ್ಥಿಕ ಅಥವಾ ನಿರ್ವಹಣೆಯ ತೊಂದರೆಯೂ ಇರಲಾರದು. ಕೆಲವೊಮ್ಮೆ ಒಳ್ಳೆ ಬ್ರಾಂಡಿನ, ಸುಂದರ ಮಾಟದ, ನಯನ ಮನೋಹರ ಬಣ್ಣದ ಎಲ್ಲಕ್ಕಿಂತ ಮಿಗಿಲಾಗಿ ನಾವು ಬಯಸಿದ ಬಟ್ಟೆ ಕೈಗೆ ಎಟುಕದೆ ಇದ್ದಾಗ ಬಾಡಿಗೆಯ ಯೋಚನೆ ಒಮ್ಮೆಯಾದರು ಮನಸ್ಸಿನಲ್ಲಿ ಸುಳಿದು ಹೋಗಬಹುದೇನೋ? ಅದರೂ ಈ ವ್ಯವಸ್ಥೆ ಇಲ್ಲ.
ಹೌದು ಅಂಗಿಗೆ ಇರುವ ಮರ್ಯಾದೆ ಒಳ ಉಡುಪಿಗೆ ಇಲ್ಲವೇ ಇಲ್ಲ.
ಹಾಕಿ ನೋಡಲು, ನೋಡಿ ಮರಳಿಸಲು ಅಂಗಡಿಯವನು ಬಿಡಲಾರ.ಒಂದು ವೇಳೆ ಅಂಗಡಿಯವನು ಬಿಟ್ಟರು ನಾವೂ ಒಪ್ಪಲಾರೆವು. ಇಲ್ಲಿ ಬಣ್ಣ,ಬ್ರಾಂಡು, ಅಳತೆಗಿಂತ ಮಡಿವಂತಿಕೆ ಅಂದರೆ ಶುಚಿತ್ವ ಮುಖ್ಯ. ಒಂದುವೇಳೆ ತೊಳೆದು ಇಸ್ತ್ರಿ ಮಾಡಿ ಮರಳಿಸಿದರೂ ಅಂಗಡಿಯವ ತೆಗೆದುಕೊಳ್ಳಲಾರ. ಈಗಿನ ಹೊಸ ತಂತ್ರಜ್ಞಾನದಿಂದ ವೇಗವಾಗಿ ಎಲೆಕ್ಟ್ರೋನಿಕ್ ವಾಶ್ ಮಾಡಿದರೂ, ಗಂಗಜಲದಲ್ಲಿ ತೊಳೆದರೂ ನಾವು ಒಪ್ಪಲಾರೆವು. ಹಾಗಂತ ಉಪಯೋಗಿಸಿದ ಬಟ್ಟೆ ಮಾರಟವಾಗುವುದಿಲ್ಲವೇ ? ಆಗುತ್ತದೆ. ಆದರೆ ಅದು ಬೇರೆಯೇ ಮಾರುಕಟ್ಟೆ. ಇಲ್ಲಿಯಂತೆ ಅದು ಸರ್ವ ಮಾನ್ಯವಲ್ಲ. ಒಂದುವೇಳೆ ಲೋಪದೊಶಗಲಿದ್ದರೆ ನ್ಯಾಯಸಿಗುವ ಭರವಸೆ ಅಲ್ಲಿ ಇಲ್ಲ. ಉಪಯೋಗಿಸಿದ ವಸ್ತುಗಳೇ ಹಾಗೆ ಅಲ್ಲವೇ? ಯಾರು ಗ್ಯಾರಂಟೀ ಕೊಡುತ್ತಾರೆ? ಯಾವ ಗ್ರಾಹಕರ ಕಾನೂನು ಕೂಡ ಬೆಂಬಲಕ್ಕೆ ನಿಲ್ಲಲಾರದು. ಅಥವಾ ಕಾನುನೆ ಅಸಮರ್ಪಕ ಎನ್ನಬಹುದು. ಒಂದುವೇಳೆ ಕಾನೂನು ಸರಿಪಡಿಸಿದರು, ಹೊಸ ವಸ್ತುವಿಗಿರುವ ಪರಿಶುಧ್ಧತೆ ಬರಲಾರದು. ಅಥವಾ ಹೊಸ ಬಟ್ಟೆಯಮೇಲೆ ಇರುವ ಪ್ರೀತಿ ಬರಲಾರದು. ಒಂದುವೇಳೆ ಅನಿವಾರ್ಯತೆಯಿಂದ ತೆಗೆದುಕೊಂಡರು ಅದು ಯಾರೋ ಉಪಯೋಗಿಸಿದ್ದು ಅನ್ನುವ ಕೀಳರಿಮೆ ಕಾಡುತ್ತಲೇ ಇದ್ದೀತು.
ಅದೇ ಅಮೆರಿಕ ದೇಶದಲ್ಲಿ ನಾನಿನ್ನೂ ಈ "Trial " ಅನ್ನೋ ಕಾನ್ಸೆಪ್ಟ್ ನೋಡಿಲ್ಲ. ಇಸ್ಟವಾಗದಿದ್ದರೆ ತಿಂಗಳ ಒಳಗಾಗಿ ಬದಲಿಸುವ ವ್ಯವಸ್ಥೆ ಇದೆ. ಹಾಗಂತ ಬದಲಿಸಲಿಕ್ಕೆಂದೇ ಕೊಳ್ಳುವ ಜನ ಇಲ್ಲಿ ಇಲ್ಲವೇ ಇಲ್ಲ. ಬದಲಿಸುವಾಗ ಉಪಯೋಗಿಸಿದ್ದು ಅನ್ನುವುದು ಇಲ್ಲಿ ವಿದಿತವೆ. ಉಪಯೋಗಿಸಿದ್ದೋ ಅಲ್ಲವೋ ಎಂದು ಯಾರು ತಲೆ ಕೆಡಿಸಿಕೊಳ್ಳರು . ಯಾಕೆಂದರೆ ಅದು ಮೂಲ ರೂಪವನ್ನು ಕಳೆದು ಕೊಂಡಿರದು. ಅದಕ್ಕಿನ್ನೂ ಉಪಯುಕ್ತತೆ ಇದ್ದರೆ ಆಯಿತು ಅಸ್ಟೇ. ತೀರ ಹಳೆಯದಾದ ವಸ್ತುಗಳನ್ನು ಮಾತ್ರ ಕಡಿಮೆ ದರದಲ್ಲಿ ಮಾರುವ ವ್ಯವಸ್ತೆ ಇಲ್ಲಿಯೂ ಇದೆ. ಇಲ್ಲಿ ಭಾವನಾತ್ಮಕತೆಗಿಂತ ಉಪಯುಕ್ತತೆ ಮುಖ್ಯ. ಮತ್ತು ವಸ್ತು ತನಗೆ ಬೇಕೋ ಬೇಡವೋ ಮುಖ್ಯ. ಕೊಂಡ ವಸ್ತುವನ್ನೇ ಪ್ರೀತಿಸುತ್ತಾರೆ. ಅದು ಅವರ ಸ್ವತ್ತಾಗಿ ಇರುವ ತನಕ. ಇದನ್ನು ಅರಗಿಸಿಕೊಳ್ಳುವಸ್ತು ಪ್ರಭುಧ್ಧತೆ ಅವರಿಗಿದೆ. ಒಂದುವೇಳೆ ತೆಗೆದುಕೊಂಡ ವಸ್ತು ಮರಳಿಸಬೆಕಾದ ಸಂದರ್ಭ ಬಂದರೆ ಇಲ್ಲಿಯೂ ಜನ ಮಾನಸಿಕ ಕ್ಷೋಭೆಯನ್ನ ಕಿರಿಯನ್ನ ಅನುಭವಿಸುವುದನ್ನು ಕಂಡಿದ್ದೇನೆ. ಅಸಹಜತೆಯೇ ಹಾಗೆ ಅಲ್ಲವೇ?
ಆದರೂ ಪರಿಶುಧ್ಧತೆಯ ಕಲ್ಪನೆ ಇಲ್ಲೂ ಇದೆ. ಮೊದಲು ಹೇಳಿದ ಹಾಗೆ,ಬಹಳ ಜನರು ಮರಳಿಸಿದ ವಸ್ತುವನ್ನು ಯಾರು ಇಷ್ಟಪಟ್ಟು ಕೊಳ್ಳುವುದಿಲ್ಲ. ಯಾಕೆಂದರೆ ಆ ವಸ್ತುವಿನಲ್ಲಿ ಏನೋ ಕೊರತೆ ಇದೆ ಅನ್ನುವುದು ಎಂತಹವನಿಗೂ ತಿಳಿಯದೆ ಇರದು. ಕೊರತೆಯನ್ನೇ ಎತ್ತಿಹಿಡಿದರೆ ಗ್ರಾಹಕನ ಕೆಲಸವೂ ಆಗದು ಅಸ್ಟೇ. ಆದರು ಅದು ಪಧ್ಧತಿ. ಇಲ್ಲಿಯ ಜನ ಇಂತಹ ವ್ಯವಸ್ಥೆಯೊಂದಿಗೆ ಬದುಕಲು ಕಲಿತಿದ್ದಾರೆ ಅಷ್ಟೇ. ಹಾಗಂತ ಇಲ್ಲಿ ವೈಜ್ಞಾನಿಕತೆಯಾಗಲಿ,ಸಮಾಜ ಸುಧಾರಣೆಯಾಗಲಿ ಗುರಿಯಲ್ಲ. ತಾನಾಗಿ ಹುಟ್ಟಿಕೊಂಡ ಪಧ್ಧತಿ ಅದು. ಹೊಸ ಪಧ್ಧತಿ ಬರುವವರೆಗೆ ಇರುವ ಪಧ್ಧತಿ, ವ್ಯವಸ್ತೆ ಮುಂದುವರೆಯುತ್ತದೆ.
ಮೇಲಿನ ಉದಾಹರಣೆಯನ್ನು ವ್ಯಾವಹಾರಿಕ, ಆರ್ಥಿಕ ಮತ್ತು ಭಾವನಾತ್ಮಕ ದೃಷ್ಟಿಕೋನದಿಂದಲೇ ನೋಡಿ. ಇಲ್ಲಿ ಎಲ್ಲವು ಸಂಮಿಳಿತವಾಗಿದೆ. ಆದುದರಿಂದಲೇ ಇಲ್ಲಿ ಎಲ್ಲವು ಮುಖ್ಯವಾಗಿ ಬೇರೆ ಬೇರೆ ವ್ಯವಸ್ಥೆಗಳು ಜನ್ಮ ತಾಳಿವೆ. ಇಷ್ಟೆಲ್ಲಾ ಉದ್ದ ಕಥೆ ಹೇಳಿದ ನಾನು ನಿಮಗೆ "ಸನ್ನಿವೇಶ" ಹೇಳಲು ಮರೆತೇ. ಯಾಕೆಂದರೆ ಎರಡು ಸನ್ನಿವೇಶಗಳಲ್ಲೂ ಮನೋಭೂಮಿಕೆ ಮುಖ್ಯವಾಗುತ್ತದೆ.
ಭಾರತೀಯರು ಒಟ್ಟಾರೆ ಸಮೂಹವಾಗಿ ಹೆಚ್ಚು ಭಾವುಕರು ಅನ್ನುವ ಮೂಲ ತಳಹದಿಯಲ್ಲೇ ನಾವು ಸನ್ನಿವೇಶವನ್ನು ವಿಶ್ಲೇಶಿಸಬೇಕಾಗುತ್ತದೆ.
ಈ ಉದಾಹರಣೆ ನಮ್ಮ ಈಗಿನ ವಿವಾಹ ಪೂರ್ವ ಸಾಂಗತ್ಯ ಕ್ಕೆ ಹೋಲಿಸಿ ಮತ್ತೊಮ್ಮೆ ಓದಿ. ಸತ್ಯ ಪೊರೆ ಕಳಚಿ ನಿಮ್ಮೆದುರು ನಿಲ್ಲುತ್ತದೆ. ಆಯ್ಕೆ ಕೂಡ ಸುಲಭ.ಕೇವಲ ವಾದ-ವಿವಾದಗಳ ಗೊಂದಲಕ್ಕಿಂತ ಇದು ಉತ್ತಮ. ತಮ್ಮ ವಾದದ ಪುಷ್ತೀಕರಣಕ್ಕೆ ಮುಂದುವರೆದ ರಾಷ್ಟ್ರಗಳ ಹೋಲಿಕೆ ಮಾಡುವ ಜನಕ್ಕೆ ಇದು ಒಂದು ಸರಳ ನಿದರ್ಶನ.
ಆದರೆ ಯಾವುದೇ ಒಂದು ಕಾರಣಕ್ಕೆ ಇಲ್ಲಿ ಏನು ಬುಡಮೇಲು ಆಗದು. ಯಾಕೆಂದರೆ ಕೇವಲ ೩೦೦ ವರುಷಗಳ ಇತಿಹಾಸವಿರುವ, ಹೆಚ್ಚಾಗಿ ಒಂದುತಲೆಮಾರು ಮಾತ್ರ ಇಲ್ಲಿ ಬದುಕಿರುವ ಅದೆಷ್ಟೋ ಅಲೆಮಾರಿಗಳ ಬೀಡಾಗಿರುವ ಈ ನಾಡು ತನ್ನದೇ ಎಂದು ಹೇಳಿಕೊಳ್ಳುವ ಯಾವ ಸಂಸ್ಕೃತಿಯನ್ನು ಹುಟ್ಟಿ ಹಾಕಿಲ್ಲ.
ನಮ್ಮಲ್ಲಿಂದ ಬಂದ ಅದೆಷ್ಟೋ ಜನ ಇಲ್ಲಿಯ ಪಧ್ಧತಿಯನ್ನೇ ಅನುಸರಿಸುತ್ತಿದ್ದಾರೆ. ಯಾಕೆಂದರೆ ಅದು ಇಲ್ಲಿಯ ಮಣ್ಣಿನ ಗುಣ. ಈ ದ್ವಂದ್ವ ನಾಗರಿಕತೆ ಅದೆಷ್ಟೋ ಜನಕ್ಕೆ ವರದಾನ. ಎಲ್ಲವನ್ನು ಅನುಭವಿಸಿ ಎರಡು ದೇಶಗಳಲ್ಲೂ ಪರಿಶುಧ್ಧರೆನ್ನಿಸಿಕೊಳ್ಳುವ ಸುವರ್ಣ ಅವಕಾಶ.
ಯಾಕೋ ಬರೆಯಬಾರದು ಅಂದುಕೊಂಡಿದ್ದೆ. ಸಾಮಾಜಿಕ ವಾಸ್ತುಶಿಲ್ಪವೆ ನಲುಗಿ ಹೋಗುವ ಭೀತಿ ಕಾಡುತ್ತಿತ್ತು. ಶಯನಗೃಹ ವೆ ಮನೆ ಅಥವಾ ಮನೆಯೇ ಶಯನಗೃಹ ಅನ್ನುವ ಜನಕ್ಕೆ ಶಯನಗೃಹ ವಯಕ್ತಿಕ ಕೊಠಡಿ ಮಾತ್ರ ಎಂದು ತಿಳಿಸಬೇಕಿದೆ. ಸಾರ್ವಜನಿಕರಿಗೆ ತೆರೆದುಕೊಳ್ಳುವ ಹೊರಾಂಗಣ ಅದಲ್ಲ!
ಆದರೆ ಅಮೇರಿಕಾದಲ್ಲಿ ಸಾಂಗತ್ಯದ ವ್ಯಾಖ್ಯೆ ಹೇಗಿದೆ? ಯಾವಕಾರಣಕ್ಕೆ ಅಮೆರಿಕ ಹೀಗಾಗಿದೆ? ಜನರ ಅಂತರಾತ್ಮ ಏನನ್ನ ಬಯಿಸುತ್ತದೆ? ಆಗಲೇ ನಮಗಿಂತ ತಲೆಮಾರುಗಳಷ್ಟು ಮುಂದಿರುವ ಈ ಶ್ರೀಮಂತ ಜಗತ್ತು ನಿಜವಾಗಿಯೂ ಸಂತೋಷವಾಗಿದೆಯೇ? ಇಲ್ಲಿ ಜನ ಯಾರನ್ನು ಇಷ್ಟಪಡುತ್ತಾರೆ? ಇಲ್ಲಿಯ ಜನರ ಮನಸಿನ ಆಂತರ್ಯವನ್ನು ಹೊಕ್ಕು ಹೊರಬರುವ ಪ್ರಯತ್ನ ಮಾಡಬೇಕೆ?. ಮನಸ್ಸು ಪರಕಾಯ ಪ್ರವೇಶ ಮಾದಿ ಚಿಂತನೆಯನ್ನ ಮಥಿಸಬೇಕೆ?
"ಶೀಲ" ಅನ್ನುವ ಪದಕ್ಕೆ ಅರ್ಥವೇನು? "ಕನ್ಯೆ"ಗು "ಗ್ರಹಿಣಿಗು" ಏನು ಅಂತರ?
"ತ್ಯಾಗಶೀಲೆ" ಅನ್ನಿಸಿಕೊಂಡಿದ್ದ ನಾರಿ "ಶೀಲ-ತ್ಯಾಗ" ಮಾಡಿದಂತಾಗುವುದಿಲ್ಲವೇ?
"ಕನ್ಯಾ-ದಾನ" ಅನ್ನುವ ಶ್ರೇಷ್ಠ ಕಲ್ಪನೆ ಹೋಗಿ "ಮೈ-ದಾನ"ದ ಅಲ್ಪತೆಗೆ ಇಳಿದೀತೇ?
"ಪರಸ್ತ್ರೀ" ಎಂದು ಯಾವಾಗ ಕರೆಯಬಹುದು?
"ಪರಸ್ತ್ರೀ ಎಂದು ಹೇಗೆ ಗುರುತಿಸುವುದು?
"ಪಾವಿತ್ರ್ಯತೆ""ಪಾತಿವ್ರತ್ಯ" ಅರ್ಥಕಳೆದುಕೊಲ್ಲಲಿದೆಯೇ?
ವಿವಾಹ ಪೂರ್ವ ಸಾಂಗತ್ಯ ಹಳ್ಳಿಗಳಲ್ಲಿ ನಗರಗಳಲ್ಲಿ ಸಾಮಾನ್ಯ. ಅಲ್ಲಿ ವರ್ಗೀಕರಣ ಸಲ್ಲದು. ಇಲ್ಲಿ ವಿವಾಹ ಪೂರ್ವವೋ ವಿವಾಹದ ನಂತರವೋ ಅನ್ನುವುದಕ್ಕಿಂತ ಹೀಗೆ ವಿಂಗಡಿಸುವುದು ಮುಖ್ಯ.
ಸುರಕ್ಷಿತ ಸಾಂಗತ್ಯ
ನೈತಿಕ ಸಾಂಗತ್ಯ ಅಥವಾ ವಿವಾಹೇತರ
ಸಮ್ಮತಿ
ಆಸಕ್ತಿ
ಮಾನವೀಯ-ಮೃಗೀಯ-ಪೈಶಾಚಿಕ
ಬೌಧ್ಧಿಕ ಸಾಂಗತ್ಯ - ಭಾವನಾತ್ಮಕ ಸಾಂಗತ್ಯ.
ಇನ್ನು ಕಾನೂನಿನ ದೃಷ್ಟಿಯಲ್ಲಿ ವಿವಾಹ ಅನ್ನುವುದು ಆಸ್ತಿ ಮತ್ತು ಅಧಿಕಾರ, ಜಾತಿ, ಪಾಲಕತ್ವ ನಿರ್ಧರಿಸಲು ಅಗತ್ಯ ಅಸ್ಟೇ. ಸ್ವತಂತ್ರತೆ, ಹಣಕಾಸಿನ ಉಳಿತಾಯದ ದೃಷ್ಟಿಯಿಂದ ವಿವಾಹ ರಹಿತವೇ ಹೆಚ್ಚು ಉತ್ತಮವಾದೀತು.
ಧಾರ್ಮಿಕ ದೃಷ್ಟಿಯಿಂದ ವಿವಾಹ ಅನ್ನುವುದು ಬಹಳ ಪ್ರಸ್ತುತ. ಧಾರ್ಮಿಕತೆಯಿಂದಲೇ ನಮ್ಮ ನಿಘಂಟುಗಳಲ್ಲಿ ಅನೇಕ ಶಬ್ದಗಳು ಸೇರಿಕೊಂಡಿವೆ. ಜನ ಮಾನಸದಲ್ಲಿ, ಜೀವನದಲ್ಲಿ ಹಾಸುಹೊಕ್ಕಾಗಿರುವ ಅದೆಷ್ಟೋ ಮೌಲ್ಯಗಳನ್ನು ಪುನರ್-ನಿರೂಪಿಸಬೇಕಾದೀತು!
ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಹೀಗೆ ಎಂದು ಹೇಳುವುದು ಕಷ್ಟ. ಅದು ಅವರವರ ಆಯ್ಕೆಗೆ ಬಿಟ್ಟ ವಿಚಾರ. ಅದರೂ ಹೆಚ್ಚು ಜನ ಯಾವುದನ್ನೂ ಒಪ್ಪುತ್ತಾರೋ ಅದೇ ಒಂದು ದಿನ ಸಂಸ್ಕೃತಿಯಗುತ್ತದೆ ಅನ್ನುವುದಕ್ಕೆ ಅಮೆರಿಕ ಒಂದು ಉದಾಹರಣೆ.
2 comments:
ನಿಜ... ಪಾವಿತ್ರ್ಯ ತನ್ನ ಅರ್ಥ ಕಳೆದುಕೊಳ್ಳುತ್ತಿದೆ ಈಗೀಗ...
ಭಾರತೀಯ ಸಮಾಜದಲ್ಲಿ ಶುಚಿ ಮತ್ತು ಶೀಲಕ್ಕೆ ಕೊಡುವಷ್ಟು ಬೆಲೆಯನ್ನು ಮತ್ಯಾವುದಕ್ಕೂ ಕೊಡಲಾರರು... ಈಗೀಗ ಬದಲಾವಣೆಯ ಗಾಳಿ ಎಲ್ಲಾ ಕಡೆ...!!
ಯಾವುದಕ್ಕೂ ನಮ್ಮ ಮನದ ಒಳಗಿನ ಕಾನೂನು ಸರಿಯಾಗಿರಬೇಕು...!
ಉತ್ತಮ ವಿಚಾರ ತಿಳಿಸಿದ್ದಕ್ಕೆ ಧನ್ಯವಾದಗಳು...
ಚುಕ್ಕಿಚಿತ್ತಾರ ಅವರೇ,
ನಮ್ಮ ಹವ್ಯಕ ಸಮಾಜದ ಸುಶಿಕ್ಷಿತರನೆಕರು ಇಲ್ಲಿ ಅಮೆರಿಕಾದಲ್ಲಿದ್ದಾರೆ. ನಗರಗಳಲ್ಲಿಯೂ ಇದ್ದಾರೆ. ಹಣ ವಿದ್ಯೆ ಸ್ವತಂತ್ರತೆ ಎಲ್ಲವೂ ಇದ್ದರು ತಮ್ಮ ಕುಟುಂಬವನ್ನೇ ಪ್ರೀತಿಸುತ್ತ ಹೆಚ್ಚು ಜನ ಶುಧ್ಧ ಚರಿತರಾಗಿದ್ದಾರೆ. ನಮ್ಮ ಕುಟುಂಬದಲ್ಲಿ, ಸುತ್ತಲ ಪರಿಸರದಲ್ಲಿ ಎಲ್ಲರು ನಮ್ಮ ಸಂಸ್ಕೃತಿಯನ್ನು ಪ್ರೀತಿಸುತ್ತಾರೆ.
ಬೆಂಕಿಯಷ್ಟೇ ಪರಿಶುಧ್ಧರಾದ ನಮ್ಮವರನ್ನು ಕಂಡಾಗ ಗೌರವ ಮೂಡುತ್ತದೆ. ಬೇರೆಯವರನ್ನು ಸ್ವಂತ ಮಕ್ಕಳಂತೆ ಕಾಣುವ, ಅದೆಸ್ಟೋ ತಾಯಂದಿರನ್ನು, ಸ್ವಂತ ಒದಹುತ್ತಿದವನಂತೆ ನೋಡುವ ಅದೆಷ್ಟೋ ಸಹೋದರಿಯರು ಪವಿತ್ರಾತ್ಮರು ನಮ್ಮಲ್ಲಿದ್ದಾರೆ. ನೀವಂದಂತೆ ಶುಚಿತ್ವ -ಪರಿಶುಧ್ಧತೆ ಮುಖ್ಯ. ಈ ಕಲ್ಪನೆಯೇ ಖುಷಿಯನ್ನು ಮೂಡಿಸುತ್ತದೆ.
ನಮ್ಮ ಕೌಟುಂಬಿಕ ಮೌಲ್ಯಗಳು, ಭಾರತೀಯ "Vision -mission -value" ಗಳು ಅತ್ಯಧ್ಭುತ.
ತಮ್ಮ ಪ್ರತಿಕ್ರಿಯೆಗೆ ವಿನಮ್ರ ಧನ್ಯವಾದಗಳು.
ಶಿವರಾಂ
Post a Comment