ನಾನು ಈ ವಾರ ಯಾವ ವಿಷಯದ ಮೇಲೂ ಬರೆಯಲಾಗದೆ ಗೊಂದಲಕ್ಕೆ ಸಿಲಿಕಿದ್ದೆ.
ವೃತ್ತಿಯ ನಡುವೆ ಒಂದು ಗುಣಮಟ್ಟದ, ಉಪಯುಕ್ತ ವಿಷಯದ ಮೇಲೆ ಅಧಿಕಾರಯುತವಾಗಿ ಬರೆಯಬೇಕೆಂದು ಹಂಬಲಿಸುತ್ತಲೇ ಒಂದು ವಾರ ಕಳೆಯಿತು.
ಹೌದು ವೃತ್ತಿ-ಪ್ರವೃತ್ತಿ ಒಂದೇ ಆಗಿದ್ದರೆ ಈ ಒತ್ತಡ ಕಡಿಮೆ ಇರುತ್ತಿತ್ತೆನೋ? ವೃತ್ತಿಯಲ್ಲಿ ಸಾಕಷ್ಟು ನೈಪುಣ್ಯ ಸಾಧಿಸಿದ್ದೇನೆ ಅನ್ನುವ ಭಾವನೆ ಇತ್ತು. ಆದರೆ ಗುರಿಯು ಕೂಡ ನನಗಿಂತಲೂ ಮುಂದೆ ಓಡುತ್ತಲೇ ಇರುತ್ತದೆ. ಕೈಗೆ ಸಿಗದ ಮರೀಚಿಕೆಯ ಹಾಗೆ.
ಏನಾದರು ಹೊಸತನ್ನು ಶೋಧಿಸುವ ಅದಮ್ಯ ಬಯಕೆ.. ಅದು ವೃತ್ತಿಯ ಬೇಡಿಕೆ ಕೂಡ.. "ನಾನು ಓದಿದ್ದೆಲ್ಲ ವೃತ್ತಿಯಲ್ಲಿ ಉಪಯೋಗವಾಗಲಿ..ನನ್ನ ಸಮಯದ ಹೂಡಿಕೆ ಹಣವಾಗಿ ಪರಿವರ್ತಿತವಾಗಲಿ" ಅನ್ನುವುದು ನನ್ನ ಅಂದಿನ Priority ಆಗಿತ್ತು. "Passive income " ಅನ್ನೋ ಹೊಸ ಹುಳ ತಲೆಯೊಳಗೆ ಹೊಕ್ಕಿತ್ತು.ನಾನು ನಿಷ್ಕ್ರಿಯನಾಗಿದ್ದು ನನ್ನ ಜೀವನ ನಿರ್ವಹಣೆಗೆ ಬೇಕಾಗುವ ಹಣವನ್ನ ಗಳಿಸುವುದೇ ಈ passive income.. ನಾನು ಯಶಸ್ವಿಯಾದರೆ ನಾನು ಇಷ್ಟ ಪಡುವ ಸಾಹಿತ್ಯ, ಸಾಮಜಸೇವೆ, ರಾಜಕೀಯ, ಯಕ್ಷಗಾನ ಕ್ಷೇತ್ರಗಳಲ್ಲಿ ಸಾಧನೆ ಮಾಡುವುದು ನನ್ನ ಹೆಬ್ಬಯಕೆಯಾಗಿತ್ತು.. ಆದರೆ ನಾನು ಇದೆಲ್ಲದರಿಂದ ನಿರಾಸಕ್ತನಾಗುವ ಮೊದಲೇ ಬಿಡುಗಡೆ ಪಡೆಯುವುದು ಮುಖ್ಯವಾಗಿತ್ತು. ಅದಕ್ಕೆ ಈ "innovation" ಅಥವಾ "idea creation", "systematic ಅಂಡ್ strategic investment " ಇತ್ಯಾದಿಗಳ ಹಿಂದೆ ಬಿದ್ದಿದ್ದೆ. ಯಾಕೆಂದರೆ ನನ್ನ ಕನಸಿನ "passive income " ಕೊಡುವ ಶಕ್ತಿ ಇರುವುದು ಒಂದು ಅಧ್ಬುತ ಸಂಶೋಧನೆಗೆ ಮಾತ್ರ. ಅದು "stupid " ಇದ್ದಷ್ಟು ಒಳ್ಳೆಯದು... ಏಕೆಂದರೆ ಐಡಿಯಾ ವನ್ನು ಒಂದು ಉತ್ಪನ್ನವಾಗಿ ಪರಿವರ್ತಿತಗೊಲಿಸಬೇಕಾದರೆ ಅನೇಕರ ಸಹಾಯಬೇಕು. ಏಕವ್ಯಕ್ತಿಯಿಂದ ಏನನ್ನು ಪೂರ್ಣಗೊಳಿಸಲು ಸಾಧ್ಯವಾಗದು. ಒಂದು ಚಳುವಳಿ ಆಂದೋಲನ ಪ್ರಾರಂಭ ಒಬ್ಬ ಕನಸಿಗನಿಂದಾದರು, ಅದು ಶಕ್ತಿಯುತ ಸಂದೇಶವನ್ನು ಕೊಡಲು ವಿಫಲವಾದರೆ ಬೆಂಬಲ ಗಳಿಸಲಾರದು. ಪ್ರೆರೆಪಿಸಲಾಗದು. ಹಾಗಾಗಿಯೇ ನಾನು "ಸ್ಟುಪಿಡ್" ಐಡಿಯಾ ಅನ್ನುತ್ತಿರುವುದು...
ಇಂದು ಕೂಡ ಈ ವಾರವೂ ಕೂಡ ನಾನು ವೃತ್ತಿಯಲ್ಲೇ ಕಾರ್ಯ ಮಗ್ನನಾಗಿದ್ದೆ. ಮಧ್ಯೆ ಒಂದೆರಡು ವಿಷಯಗಳು ಆಗಾಗ್ಗೆ ಬಂದು ಹೋಗುತ್ತಿದ್ದವು.
ನಾನು ಬಹಳ ತಡವಾಗಿ ಈ ಬ್ಲಾಗಿಂಗ್ ಲೋಕಕ್ಕೆ ಬಂದೆ. ಬಂದಮೇಲೆ ಯಾಕೋ ಇದು ನನ್ನನ್ನ ಸೆಳೆಯತೊಡಗಿತು... ಹೊಸತೊಂದು ಹವ್ಯಾಸ ಅಂಟಿಕೊಂಡಿತ್ತು...
ಈಗ ನನಗೆ ಅರಿವಾದ ಕೆಲವು ಮುಖ್ಯ ಅಂಶಗಳ ಒಂದು ಸಣ್ಣ ಟಿಪ್ಪಣಿ ಇದು.
೧. ಒಂದೇ ಕ್ಷೇತ್ರದಲ್ಲಿ ವೃತ್ತಿ -ಪ್ರವೃತ್ತಿ ಇದ್ದರೇ ಮಾತ್ರ ಜಗತ್ ಪ್ರಸಿದ್ಧ ಸಾಧನೆ ಸಾಧ್ಯ.
೨. ಯಶಸ್ಸು ಬೇಕಾದರೆ ಆಯ್ಕೆ ಮಾಡಿದ ಕೆಲಸದ ಬಗ್ಗೆ ಗಾಢವಾದ ಪ್ರೀತಿಯಿರಬೇಕು.
೩. ಕಡಿಮೆ ಶಬ್ಧದಲ್ಲಿ ಹೆಚ್ಚು ಅರ್ಥ ಕೊಡುವ ಆಸಕ್ತಿ ಕೆರಳಿಸುವ ಕಲೆಯಿರಬೇಕು
೪. ನಮ್ಮ ಧ್ಯೇಯ ಸಾಧನೆಗೆ ಬೆಂಬಲ ಗಳಿಸುವ ಕಲೆಯಿರಬೇಕು
೫. ಸದಾ ನಮ್ಮನ್ನು ಚೈತನ್ಯ ಪೂರಿತರಾಗಿ ಸ್ವಯoಪ್ರೇರೆಪಿಸುವ ಅಂತಃಶಕ್ತಿಯಿರಬೇಕು.
ಹೌದು ಈ ಮೊದಲು ಅನೇಕ ವಿಷಯಗಳಲ್ಲಿ ಆಸಕ್ತಿ ಇತ್ತು. ಎಲ್ಲದರಲ್ಲೂ ಹೆಸರು ಗಳಿಸುವ ಕನಸು ಇತ್ತು..ಹಾಗಾಗಿಯೇ ಬಾಲ್ಯದಲ್ಲಿ ಎಲ್ಲವನ್ನು ಮುಟ್ಟಿ ನೋಡುವ ಎಲ್ಲದರಲ್ಲಿಯೂ ಸೂಕ್ಷ್ಮ ಸಂವೇದನೆ ಹೊಂದುವ ರಸಾನುಭೂತಿಯನ್ನು ಪಡೆಯುವ ಆಸೆಯಿಂದ ಓದಿದ ಪುಸ್ತಕಗಳೆಷ್ಟೋ .. ಮಾಡಿದ ಪ್ರಯತ್ನಗಲೆಷ್ಟೋ..ಅತ್ಯಂತ ಗಹನವಾದ ವಿಚಾರಗಳ ಹೊತ್ತಗೆಯಿಂದ ಹಿಡಿದು ಗಪ್ಪಣ್ಣನ ತೆಲೆದಿಮ್ಬಿನ ಕೆಳಗಿನ ಗ್ರಂಥಾಲಯದವರೆಗೂ ನನ್ನ ವ್ಯಾಪ್ತಿ.
ಇಂದು ಎಂದಿಗಿಂತ ಹೆಚ್ಚು ಗೊಂದಲ... ನಿನ್ನೆಯ ತಂತ್ರಜ್ಞಾನ ನಾಳೆ ಮಾಯಾ.. ಚೆನ್ನಾಗಿರುವುದೆಲ್ಲ ಹಣಗಳಿಸುವುದಿಲ್ಲ..ಮೌಲ್ಯಗಳು ಕೂಡ ಅದಲು ಬದಲು...ಬದಲಾವಣೆಯ ಬಿರುಗಾಳಿ ಬಹಳ ಬೇಗ ತರಗೆಲೆಗಳಂತೆ ನಮ್ಮನ್ನು ಎಲ್ಲಿಯೋ ಸೇರಿಸಿಬಿಡುತ್ತದೆ.
2 comments:
'ಸ್ವಗತ' ದಲ್ಲಿ ಸ್ವ-ವಿಶ್ಲೇಷಣೆ ಹಿಡಿಸಿತು. ವೃತ್ತಿ ಮತ್ತೆ ಪ್ರವೃತ್ತಿಯಲ್ಲಿ ವೃತ್ತಿಯಲ್ಲಿ ಯಶಸ್ಸು ಕಂಡವರನ್ನೂ ಹಾಗೆಯೇ ಪ್ರವೃತ್ತಿಯಲ್ಲಿ ಯಶಸ್ಸು ಕಂಡವರನ್ನೂ ನಾವು ಕಂಡಿದ್ದೇವೆ ಅಲ್ಲವೇ.
ಮಾವ,
ಧನ್ಯವಾದ.
ಸತ್ಯ.. ಆದರೆ "ಜಗತ್ ಪ್ರೆಸಿದ್ದ" ಅನ್ನುವ ಗುಣಾರೋಹ ಎರಡಕ್ಕೂ ಸಿಕ್ಕಿದೆಯೇ ಅನ್ನುವುದೇ ಸಂಶಯ.
[ಅಂದರೆ ವಿಭಿನ್ನ ಕ್ಷೇತ್ರಗಳಲ್ಲಿ ]
ಒಂದುವೇಳೆ ನಮಗೆ ವಿರಳ ಉದಾಹರಣೆ ಸಿಕ್ಕರೂ ಅದು ಮಾರ್ಗದರ್ಶಿ ಸೂತ್ರವಾಗಲಾರದು ಅಲ್ಲವೇ?
ಬಹುಷಃ ನಮ್ಮ ಕಾರ್ಯಕ್ಷೇತ್ರ ಸೀಮಿತವಿದ್ದಸ್ಟು ಜಾಗತಿಕ ಮಟ್ಟದ ಸಾಧನೆ ಸಾಧ್ಯ ಅನ್ನುವುದೇ ನನ್ನ ಅಭಿಪ್ರಾಯ.
ಕ್ರಿಕೆಟ್ ಆಡುವಾಗ ತೆಂಡೂಲ್ಕರ್, ಸಂಗೀತ ಹೇಳುವಾಗ ತಾನ್ಸೇನ್, ಸಾಹಿತ್ಯ ಬರೆಯುವಾಗ ಕಾಳಿದಾಸ, ಸಾಫ್ಟ್ವೇರ್ ನಲ್ಲಿ
bill gates , ಮಂತ್ರ ಪಥಣದಲ್ಲಿ ವಸಿಷ್ಠ, ಜ್ಞಾನದಲ್ಲಿ ಬೃಹಸ್ಪತಿ ಹೀಗೆ ಎಲ್ಲವು ಆಗುವುದು ಅಸಾಧ್ಯ ಅನ್ನುವುದೇ ಸಾರಾಂಶ.
ಶಿವಣ್ಣ
Post a Comment