Thursday, March 04, 2010

ನಾವೇಕೆ ಹೀಗೆ?

ಇಂದಿನ ದಿನಪತ್ರಿಕೆಯಲ್ಲಿ ಇನ್ನೊಂದು ಸ್ಪೋಟಕ ಸುದ್ದಿ! ಬೆಂಕಿ! ಪೋಲಿಸ್! ದೊಂಬಿ
ಎಲ್ಲರ ಬಾಯಲ್ಲೂ ಇದೆ ಮಾತು! ಮೊನ್ನೆಯ ಕೋಮು ಗಲಭೆ ಇನ್ನೂ ಕಾವಾರುವ ಮುನ್ನ !
ಮೊನ್ನೆಯಷ್ಟೇ ನ್ಯೂ ಯಾರ್ಕ್ ನಗರ ನೋಡಿ ಸ್ತಂಭೀಭೂತನಾಗಿದ್ದ ನಾನು ವಿಚಾರ ಮಗ್ನನಾಗಿದ್ದೆ
ವಲಸಿಗರ ನಾಡಾದ ಅಮೇರಿಕ ಇಂದು ಜಗತ್ತಿನ ಶ್ರೀಮಂತ ದೇಶ. ೧೬ ಲಕ್ಷ ಬುಧ್ಧಿವಂತ ಭಾರತೀಯರನ್ನು ಆಕರ್ಷಿಸಿದ ಸ್ವರ್ಗ!
ಕೇವಲ ೩ ಶತಮಾನದಲ್ಲಿ ಇಷ್ಟು ಸಾಧನೆ! ೨೬ ಕೋಟಿ ಜನಸಂಖ್ಯೆ. ಅತ್ಯಂತ ಕಷ್ಟಕರ ಭೌಗೋಲಿಕ ಪರಿಸರ. ಹೀಗಿದ್ದು ಇಂತಹ ಸಾಧನೆ ಹೇಗೆ ಸಾಧ್ಯ? ವಿವಿಧ ದೇಶಿಗರು ವಿವಿಧ ಧರ್ಮೀಯರು ವಿವಿಧ ಮೂಲವಾಸಿಗಳನ್ನು ಹೊಂದಿದ, ಯಾವುದೇ ಒಂದು ಸಂಸ್ಕೃತಿಯ ಒಂದು ಜನಾಂಗದ ನೆಲೆಬೀಡಾಗಿರದ ಈ ದೇಶ ಇಂದು ಅಭಿವೃದ್ದಿಯ ಉತ್ತುಂಗಕ್ಕೇರಿದೆ
ನಮ್ಮಲ್ಲಿ ಒಂದು apple, ಒಂದು google ಒಂದು intel ಒಂದು TI ಒಂದು ಮೈಕ್ರೊಸಾಫ್ಟ್
ಯಾಕಿಲ್ಲ? ಅಂತಹ ಸಾಧನೆ ಸಾಧ್ಯವೇ? ಭವ್ಯ ನಗರಗಳ ನಿರ್ಮಾಣ ನಮ್ಮಲ್ಲಿ ಸಾಧ್ಯವೇ? ಕೋಟಿ ಕೋಟಿ ಋಷಿ ಸಂತಾನರನ್ನು ಹೊಂದಿದ್ದ ಭಾರತ ಇಂದು ಕೇವಲ ಪಶು ಸಂತಾನರ ಬೀಡಾಗಿ ಹೋಗಿದ್ದೇಕೆ?
ನನ್ನ ಮನಸ್ಸು ಕುಗ್ಗಿ ಹೋಗಿತ್ತು ಕ್ಲೆಶಭರಿತವಾಗಿತ್ತು.
ನಾಡು-ನುಡಿಯ ಕುರಿತಾದ ನನ್ನ ಮನದ ಭಾವನೆಗಳು ರಕ್ತ ನಾಡಿಗಳನ್ನು ಸೇರಿ ಹೃದಯದೊಂದಿಗೆ ಮಿಳನಗೊಂದು ಮಸ್ತಿಸ್ಕದಲ್ಲಿ ಮಿಡಿಯತೊದಗಿತ್ತು!
ಕುವೆಂಪು ವಿರಚಿತ "ಭಾರತ ಜನನಿಯ ತನುಜಾತೆ" ಕವಿತೆಯಾಗಿ ಏಕೆ ಉಳಿಯಿತು?
ಜನ ಗಣ ಮನ ವಿಶ್ವದ ಸುಂದರ ರಾಷ್ಟ್ರ ಗೀತೆ ಎಂದು ಕರೆಸಿಕೊಂಡಿತು! ಗೀತೆ ರವೀಂದ್ರರ ಕನಸೇ? ಭ್ರಮೆಯೇ? ಕೃಣ್ವoತೋ ವಿಶ್ವಮಾರ್ಯಂ ಘೋಷಣೆಯಾಗಿ ಉಳಿಯಿತೆಕೆ?
ಹೌದು! ಕಾರಣ ?
  • ಅಲ್ಪ ತೃಪ್ತಿ, ಆತ್ಮ ರತಿ
  • ಸೋಲಿನ ಭೀತಿ.
  • ನಮ್ಮ ಶ್ರಮ ದೊಂಬಿಗಲಲ್ಲಿ, ವ್ಯರ್ಥ ಚಿಂತನೆಯಲ್ಲಿ, ವ್ಯರ್ಥಾಲಾಪದಲ್ಲಿ ವ್ಯಯ
  • ನಾವು ಋಣಾತ್ಮಕ ಚಿಂತಕರು
  • ಪಲಿತಾಂಶದಲ್ಲಿಲ್ಲ ನಮ್ಮ ಗಮನ
  • ನಾವು ಭಾಷಣ ಶೂರರು
  • ಕೂತು ತಿನ್ನುವವರು ಹಲವರಾದರೆ ದುಡಿಯುವವರು ಕೆಲವು
  • ನಾವು ಬಯಸುವ ಬದಲಾವಣೆ ನಮ್ಮಿಂದ ಸಾಧ್ಯವಿಲ್ಲ ಬದಲಾವಣೆ ನಾವಾಗಲು ಸಿದ್ಧರಿಲ್ಲ

ಎಲ್ಲಿದೆ ಆಶಾ ಕಿರಣ ?

ನಾನಂತೂ ಮೂರು ದಶಕಗಳನ್ನು ಸವೆಸಿ ನಲ್ಕದರತ್ತ ದಾಪುಗಾಲು ಹಾಕುತ್ತಿರುವೆ!! ನಮ್ಮ ತಲೆಮಾರಿಗೆ ನಮ್ಮ ಅನ್ಧತೆಯ ಅರಿವಿಲ್ಲ ಅರಿವಾಗುವಷ್ಟರಲ್ಲಿ ಮಿನ್ಚಿಹೋಗಿದೆ ಕಾಲ! ನಾವು ಮಾಡಬೇಕಾದುದು ಇಸ್ಟೇ.ನಮ್ಮ ಮುಂದಿನ ಪೀಳಿಗೆಗೆ ಗುರಿಯ ಕಿಚ್ಚು ಹೊತ್ತಿಸಿ ವಾಸ್ತವಿಕತೆಯ ಬೆಳಕು ತೋರಿಸುವುದು! ಮಕ್ಕಳೇ ನಮ್ಮ ಆಸ್ತಿ! ನಮ್ಮ ಹೂಡಿಕೆ !ಸತ್ಯ ಮಾರ್ಗದರ್ಶನ ಭದ್ರ ಬುನಾದಿ!

ಮುಂದಿನ Bill Gate ಭಾರತದಲ್ಲಿ ಎನ್ನುವ ಅಮೆರಿಕನ್ನರ ಭವಿಷ್ಯ ನಿಜವಾಗಲಿ

1 comment:

Anonymous said...

sir,
chennagide lekhanagalu. sogasaagi odisikondu hodavu. mattu bareyuttiri.
-poornima