Tuesday, April 20, 2010

ಇನಿಯ ಬಾರೋ !!


ನಾನು 8ನೆ ತರಗತಿಯಲ್ಲಿ ಇದ್ದಾಗ ನಡೆದ ಘಟನೆ ಇದು. ಪಕ್ಕದಮನೆಯಲ್ಲಿ ಒಬ್ಬರು ಅಜ್ಜಿ ಇದ್ದರು.  ಅವರ ಮಗನ ಅಳಿಯನ ಹೆಸರು ವಿನಯ ಹೆಗಡೆ.
ಈ ಅಜ್ಜಿ ಯಾವಾಗಲು ಅವನನ್ನು ಕರೆಯುತ್ತಿದ್ದದ್ದು "ಇನಿಯ ಬಾರೋ" ಅಥವಾ "ಯಮ್ಮನೆ ಇನಿಯಾ"ಇತ್ಯಾದಿ.
ಮೊಮ್ಮಗಳ ಗಂಡ ಅಜ್ಜಿಗೆ ಈ ರೀತಿ "ಇನಿಯ" ಆಗಿದ್ದ!
ನನ್ನ ಭಾವ ಸುಮಾರು 6-8 ವರ್ಷ ಅಮೇರಿಕಾದಲ್ಲಿ ಇದ್ದ. ತಪ್ಪದೆ ಪ್ರತೀ ವಾರ ಅಮ್ಮನಿಗೆ ಫೋನ್ ಮಾಡ್ತಿದ್ದ.
ಸುಮಾರು ದಿನದಿಂದ ಅವನ ಅಮ್ಮ ಕಾಲು ನೋವಿನಿಂದ ಬಳಳುತ್ತಿದ್ದದ್ದನ್ನು ಮಗನ ಬಳಿ ಮೊದಲ ಬಾರಿ
ಫೋನ್ ನನಲ್ಲಿ ವಿಷಯ ಪ್ರಸ್ತಾಪಿಸಿ
"ಕಾಲು ನೋವು ಶುರು ಅಯ್ದೋ ಮಾರಾಯ"
ಭಾವ ತಕ್ಷಣ " ಮುಂದಿನ ಕಾಲೋ ಹಿಂದಿನ ಕಾಲೋ?" ಕೇಳಿದ್ದ...  ಇಂದು ಇದನ್ನು ನೆನಪಿಸಿ ನಾವು ಈಗಲೂ   ನಗುತ್ತಿರುತ್ತೇವೆ!.


ಭೇದಿಯಿಂದ ನರಳುತ್ತಿರುವ ಮಗನನ್ನು ಕುರಿತು ಟೆನ್ಶನ್ ಮಾಡಿಕೊಂಡ ತಾಯಿ ಗಂಡನಿಗೆ ಫೋನ್ ಮಾಡಿ 
"ಅಯ್ಯೋ ನಮ್ಮನೆ "ಪಾಪು" ಗೆ ಸಿಕ್ಕಾಪಟ್ಟೆ ಭೇದಿ ಆಗೋಯ್ದು."  
ಗಂಡನಿಂದ ತಕ್ಷಣವೇ ಉತ್ತರ ಬಂತು.
"ಅದು ಕಡಿಮೆ ಆಗ್ತು. ಆದ್ರೆ ನೀನು ಅದ್ರ ತಲೆಗೆ ಹಚ್ಹ್ಚಿಕ್ಯಳ್ಳಡಾ":-)

ನನಗೆ ಸಣ್ಣವನಿರುವಾಗಿನ ಅಡ್ಡ ಹೆಸರು "ಮರಿ"!!. ಅಜ್ಜನ ಹೆಸರೇ ನನಗೂ ಇಟ್ಟಿದ್ದರಿಂದ ನನ್ನ ಅಜ್ಜಿ ನನ್ನ ಹೆಸರನ್ನು ಕರೆಯಲು ಆಗದೆ ಇಟ್ಟ ಪ್ರೀತಿಯ  ಹೆಸರು ಅದು. ಆದರೆ ಶಿವರಾಮ ಅನ್ನುವ ಹೆಸರಿನ ಗಂಡ ಇರುವ ಎಲ್ಲರಿಗು ಒಳ್ಳೆ ಅನುಕೂಲ ಆಗಿತ್ತು.
ಇದು ಇಷ್ಟೇ ಆಗಿದ್ದರೆ ಸಮಸ್ಯೆಯೇ ಇರಲಿಲ್ಲ. ನನ್ನ ಮಾವನ ಮಗನ ಹೆಸರೂ "ಮರಿ" ಆಯಿತು. ಕೊನೆಗೆ ಅವನಿಗೆ "ದೊಡ್ದಮರಿ" ಎಂದು ಬದಲಾಯಿಸಿದ್ದರು. ನಮ್ಮ ಮನೆ ಅಡಿಕೆ ತೋಟದ ಸಮೀಪ ಸ್ವಲ್ಪ ತಗ್ಗು ಪ್ರದೇಶದಲ್ಲಿತ್ತು. ಹಾಗಾಗಿ ನಮ್ಮ ಮನೆಗೆ "ಕೆಳಗಿನ ಮನೆ " ಅನ್ನೋ ಹೆಸರು. ಕೊನೆಗೆ ಈ ನಾಮ ವಿಶೇಷವೂ ನನ್ನ ಹೆಸರಿಗೆ ಅಂಟಿಕೊಂಡು ಪಡ್ಡೆ ಹುಡುಗರ-ಹುಡುಗಿಯರ ಬಾಯಲ್ಲಿ "ಕೆಳಗಿನ ಮರಿ" ಆಯ್ತು. ಚಿಕ್ಕವನಿರುವಾಗ ಹೇಗೋ ಅದು ಅಷ್ಟು ತಲೆ ನೋವು ಆಗಿರಲಿಲ್ಲ. ಕೊನೆಗೆ ನನ್ನನ್ನು ಕೆಣಕಲು  "ಕೆಳಗಿನ ಮರಿ" ಎಂದು ಕರೆದು ಹಾಸ್ಯ ಮಾಡತೊಡಗಿದ್ದರು. ಈಗ ಮಾತ್ರ ನನಗೆ ಮುಜುಗರ ಉಂಟಾಗಿತ್ತು. "ಕೆಳಗಿನ ಮರಿ" ಎಂದು ಕರೆದಾಗ "ಮರಿ ಬೇಕ ?" ಹೇಳಿ ಕೇಳಲು ಶುರು ಮಾಡಿದಮೆಲೆಯೇ ಅವರು "ತಮ್ಮ" ಎಂದು  ಬದಲಾಯಿಸಿದ್ದು!!. 
ಇದೆ ರೀತಿ ನಮ್ಮೊರಿನ "ರಾಮಕೃಷ್ಣ" ಅನ್ನುವ ವ್ಯಕ್ತಿಗೆ ಸುಂದರ ಹೆಸರಿದ್ದು ಬಳಕೆ ಹೆಸರು "ಕುಟ್ಟು" ಆಗಿತ್ತು . ಅವನನ್ನು "ಕುಟ್ಟು ಭಾವ" ಅನ್ನುತ್ತಿದ್ದರು.  "ಕುಟ್ಟು ಬಾರೋ" ಎಂತಲೋ "ಕುಟ್ಟು ಭಟ್ಟ" ಎಂತಲೋ ಕರೆದಾಗ ಕಿಲಾಡಿಗಳು ನಗುತ್ತಿದ್ದದ್ದು ಮಜವಾಗಿತ್ತು.
ನಮ್ಮೂರಿನಲ್ಲಿ ಇರುವ ಹಳೆ ಕಾಲದ ಜನರಲ್ಲಿ ಅಪಾರ  ಹಾಸ್ಯದ ಪ್ರಜ್ಞೆ ಇತ್ತು. ಶ್ರಾಧ್ಧಕ್ಕೆ ನಮ್ಮ ಮನೆತನದವರೊಬ್ಬರ ಮನೆಗೆ ಹೋಗಿ ತಿರುಗಿ ಬರುವಾಗ ಸಿಕ್ಕಿದ ಭಟ್ಟರನ್ನು ನಮ್ಮ ದೊಡ್ಡಪ್ಪ ಕೆಣಕಲು "ಭಟ್ರೇ ಶ್ರಾಧ್ಧ ಚಲೋ ಆತ? ಎಲ್ಲಾ ಪಿತ್ರುಗೋ ಬಂದಿದ್ವ? ನಮ್ಮನೆ ಅಪ್ಪಯ್ಯ ಬಂದಿದ್ನ?" ಅಂದ. [ಶ್ರಾಧ್ಧದಲ್ಲಿ  ಸಮೀಪದ ಎಲ್ಲ ಕೈಲಾಸವಾಸಿ  ಪಿತೃ ಗಳನ್ನೂ ಕರೆಯುವುದು ಪಧ್ಧತಿ.] ಅದಕ್ಕೆ ತಕ್ಷಣ ಚತುರ ಮತಿಯಾಗಿದ್ದ ಅವರು"ಹೌದೋ ಬಂದಿದ್ದ. ನಿನಗೂ ಬರುಲೇ ಹೇಳಿದ್ದ" ಅಂದಕೂಡಲೇ ಬಸ್ ಸ್ಟ್ಯಾಂಡ್ ನಲ್ಲಿ ಇದ್ದ ನಾವೆಲ್ಲಾ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದೆವು.
ಮಾಗೋಡು KPC ಕಾಲೋನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾನು ನಾಲ್ಕನೆ ತರಗತಿಯಲ್ಲಿ ಇದ್ದಾಗ ನಡೆದಾಡು. ನನ್ನ ಸಹಾಪಾಥಿ ಚಲುವಾದಿ ಅನ್ನುವ ಹುಡುಗ ಒಬ್ಬ ಇದ್ದ. ಸರಸ್ವತಿಯ ಅವಕೃಪೆಗೆ ಒಳಗಗಿದ್ದನೋ ಇಲ್ಲ ಕಾಳಿದಾಸನ ಭವಿಷ್ಯ ಇತ್ತೋ ಗೂತ್ತಿಲ್ಲ್ಲ. ಆದರೆ ಓದು ಮಾತ್ರ ಹತ್ತಿರಲಿಲ್ಲ. ಕಿರು ಪರೀಕ್ಷೆಯೊಂದರಲ್ಲಿ ನನ್ನ ಪಕ್ಕ ಕುಳಿತಿದ್ದ. ಕಾಪಿ ಮಾಡಲು ಈ ಛಲವಾದಿ [?] ನನ್ನ ಪೇಪರ್ ತೋರಿಸುವಂತೆ ಕೇಳುತ್ತಿದ್ದ. ತಂದೆಯಿಂದ ಕ್ರೂರವಾಗಿ ಹೊಡೆತ ತಿನ್ನುವುದನ್ನು  ಕಣ್ಣಾರೆ ಕಂಡಿದ್ದ ನಾನು ಪಾಪ ಎಂದು ಪೇಪರ್  ತೋರಿಸಿದ್ದೆ. ಎಲ್ಲ ಚೆನ್ನಾಗಿಯೇ ಕಾಪಿ ಮಾಡಿದ್ದ. ಆದರೆ ಪೇಪರ್ ಕೊಟ್ಟಾಗ ನನಗೆ ಒಂದೇ ವಿಷಯದಲ್ಲಿ ಎರಡು ಪೇಪರ್. ಈ ಚಲುವಾದಿ ಉತ್ತರವಲ್ಲದೆ ನನ್ನ ಹೆಸರನ್ನೂ ಕಾಪಿ ಮಾಡಿದ್ದ!!.
ಆಮೇಲೆ ಇಬ್ಬರು ಚೆನ್ನಾಗಿ ಮಾಸ್ತರರ ಮಂತ್ರ ದಂಡದಿಂದ  ಅನುಗ್ರಹಕ್ಕೊಳಗಾದದ್ದು  ನೀವು ಸುಲಭವಾಗೇ ಊಹಿಸಬಹುದು.

ಹಾಸ್ಯದ ಸರಣಿಯಲ್ಲಿ ಇನ್ನೂ ಇದೆ. ಸಮಯದ ಆಭಾವ!!. 
  
  
  

Wednesday, April 14, 2010

ಮೂರ್ಖ ಚರಿತ್ರೆ

 ಮೂರ್ಖರ ದಿನ ಬರೆಯಬೇಕದದ್ದನ್ನ ಮೂರ್ಖರ ತಿಂಗಳಿನಲ್ಲಾದರು ಬರೆದುಮುಗಿಸೋಣ ಅಂದುಕೊಂಡೆ. ಯಾಕೆಂದರ ನಾನು ಮಾತ್ರ ಮೂರ್ಖ ಅಲ್ಲ ಅನ್ನೋ ಬಲವಾದ ನಂಬಿಕೆ ನನ್ನದು. ಅದು ಮದುವೆ ಆದಮೇಲೆ! ನಾನು ಈ ವಾಕ್ಯ ಬರೆಯುವ ಹೊತ್ತಿಗೆ ಮೂರ್ಖರ ಸಂಖ್ಯೆ ಇನ್ನು ಹೆಚ್ಚಾಗಿರಬಹುದು! ಈ ಮೂರ್ಖರನ್ನು ಸರ್ವೇ ಮಾಡುವ ಕೆಲಸ ಬಹಳ ಕಷ್ಟ. ಮೂರ್ಖತನಕ್ಕೆ ಹಲವು ಮುಖ. ಅದಕ್ಕೆ ಇರಬೇಕು. ಬೇರೆಯವರಿಗೆ ಬಹು ಬೇಗ ತಿಳಿಯೋ ತನಗೆ  ಮಾತ್ರ ಗೊತ್ತಾಗದ  ದೊಡ್ಡ ಗುಣ ಅಲ್ಲವೇ ಇದು?ಅಯ್ಯೋ ಮಾತಾಡಿ ಮೂರ್ಖ ಆಗುವುದಕ್ಕಿಂತ ಸುಮ್ಮನೆ ಇದ್ರೆ ಒಳ್ಳೇದು ಬಿಡಿ. ಸುಮ್ನೆ ಇದ್ರೂ ಈ ಮೂರ್ಖ ಅನ್ನೋ ಕೀರೀಟ ತಪ್ಪಿದ್ದಲ್ಲ.  
ಮಾಡಿದವನಿಗಿಂತ ಅಡಿದವನೇ ಮೂರ್ಖ ಈಗಿನ ಕಾಲದಲ್ಲಿ. ಈ ಲೇಖನ ಓದಿದಮೇಲೆ ನಿಮಗೆ ತಿಳಿಯಬಹುದು!ಆಡಿದವ ಅಂದ ತಕ್ಷಣ ನೆನಪಾಯ್ತು. ಕ್ರಿಕೆಟ್ ನಲ್ಲಿ ಮಾತ್ರ ಆಡಿದವನಿಗಿಂತ ನೋಡಿದವ ಮೂರ್ಖ. ಅಯ್ಯೋ ಮೂರ್ಖರ ಮೇಲೆ ನನಗೆಷ್ಟು  ಪ್ರೀತಿ ಅಂದುಕೋಬೇಡಿ! ಮೂರ್ಖರು ಇರೋದ್ರಿನ್ದನೆ ನಾನೂ ಬುಧ್ಧಿವಂತ ಅನ್ನಿಸಿಕೊಳ್ಳೋಕೆ  ಸಾಧ್ಯ ಅಲ್ವ?
ಬರೀ ಗಂಡಸರು ಮಾತ್ರ ಮೂರ್ಖರು ಅಂದುಕೊಂಡಿದ್ದೆ. ಆದ್ರೆ ಮೂರ್ಖರ ಸೃಷ್ಟಿಗೆ ಹೆಂಗಸರೂ ಕೈಜೋದಿಸಿರ್ಲೆಬೇಕು ಅಲ್ವೇ?
ಹಾಗಾಗಿ ಲಿಂಗ ಭೇದ ಸುದ್ದಿ ತೆಗೆದು ಹೊಸ ಗಲಾಟೆ ಮಾಡು ಮೂರ್ಖತನ ಬೇಡ ಬಿಡಿ.
ಮೊನ್ನೆ ನಡೆದ  ನಿತ್ಯಾನಂದ ಜಗದ್ಗುರುಗಳ ವಿಷ್ಯ ತಗೊಳ್ಳಿ...ಅಲ್ಲರೀ ಸ್ವಾಮೀಜಿಗಳ ಬಳಿ ಹುಡುಗಿ ಬಿಟ್ಟವರನ್ನ ಏನಂತ ಕರೆಯೋಣ?
ಹುಡುಗಿ ವಿಷಯದಲ್ಲಿ ಗಲಾಟೆ ಅದಮೇಲು ಮತ್ತೆ ಸನ್ಯಾಸಿಗಳ ಹತ್ರ ಹೋಗಬೇಕಾದ್ರೆ ರೋಮಾಂಚಕ ಡ್ರೆಸ್ ಮಾಡ್ಕೊಂಡು ಮತ್ತೆ ಹೋಗೋದೇ ಇಲ್ವಾ ನಮ್ಮ ಜನ? ಹಾಗಾಗೆ ಹೇಳಿದ್ದು ಸಂಖ್ಯೆ ಬೆಳೀತಾನೆ ಇದೆ.
ಮೂರ್ಖರ ಕೈಯಲ್ಲಿ ಇಂತ ಗುಟ್ಟಿನ ವಿಷ್ಯ ಹೇಳಲೇ ಬಾರ್ದು. ಮತ್ತೆ ನಾಲ್ಕು ಜನಕ್ಕೆ ಹೇಳಿ ಜಗತ್ತಿನಲ್ಲಿ ಮೂರ್ಖರಿಲ್ಲದ ಮನೇನೆ ಇಲ್ಲದ ಹಾಗೆ ಮಾಡಿಬಿಡ್ತಾರೆ. ಮದುವೆ ಆದ್ರೆ ಮೂರ್ಖ ಅಂತಾರೆ. ನಿತ್ಯಾನಂದ ಸನ್ಯಾಸಿ ಆಗಿದ್ದು ಅದಕೆ ಇರ್ಬೇಕು.
ಮದುವೆ ಅಂದ ಕೂಡ್ಲೇ ನೆನಪಾಯ್ತು ನೋಡಿ. ಮದುವೆ ಆದ್ರೆ ಮೂರ್ಖ ಅಂತಾರಲ್ಲ? ಅದು ಗಂಡೋ ಹೆಣ್ಣೋ? ಅಪ್ಪ ಅಮ್ಮ ಮೂರ್ಖರಿರ್ಲಿಕ್ಕಿಲ್ಲ ಬಿಡಿ! ಕೆಲವು  ಬುದ್ದಿವಂತರು ಹುಟ್ಟಿಲ್ವ? ಅದ್ರು ಮಗುವೆ ಆಗೋದು ಮುಂಚೆ cooker ತಗೊಂಡ್ರೆ ವಾಶಿಂಗ್ ಮಷಿನ್ ತಗೊಂಡ್ರೆ ಮೂರ್ಖ ಅಂತಾರೆ. ಅಕಸ್ಮಾತ್ ಮೊದಲೇ ತಗೊಂಡ್ರೆ ಮದುವೆ ಯಾಕೆ ಅಲ್ವ?
ಹೆಂಡತಿಗೆ ಹೇಳ್ಬೇಡಿ... ಅವಳ ಅಣ್ಣ, ಅಪ್ಪ ಎಲ್ಲರಿಗು ಹೇಳಿ ನಾನು ಮೂರ್ಖ ಅನ್ನೋದು ಸಾಬೀತು ಮಾಡೀಯಾರು! 
ಮೊನ್ನೆ ಅಷ್ಟೇ ಬೆಂಗಳೂರಲ್ಲಿ ಜನ ಮೂರ್ಖರಾದ್ರು. ಮತ ಹಾಕಿ. ರಾಜಕಾರಣಿಗಳ   ಮಾತಾ ನಂಬಿದ್ರೆ ಬುಧ್ಧಿವಂತ ಆಗೋದು ಒಂದೇ ಸಲ! ಹೋಗ್ಲಿ ಇಲ್ಲಿ ಅಮೇರಿಕಾದಲ್ಲಿ ಸ್ವಲ್ಪ ಕಡಿಮೆ ಮೂರ್ಖರು ಇರಬಹುದು ಅಂದುಕೊಂಡಿದ್ದೆ.
ಅಯ್ಯೋ ದೇವ್ರೇ! ಇವರೆಲ್ಲ ಬುಧ್ಧಿವಂತ ಮೂರ್ಖರು... ಡಾಲರ್ ಆಶೆಗೆ ಇಲ್ಲಿಗೆ ಬಂದು ಅಪ್ಪ ಅಮ್ಮನೇ ಮೂರ್ಖರು ಅಂತ ಇದ್ದಾರೆ!  ಅಪ್ಪ ಅಮ್ಮನ ದೂರ ಮಾಡಿ ಮೂರ್ಖರಾದ್ವಿ ಅನ್ನೋ ಸ್ನೇಹಿತರು ಇದ್ದಾರೆ.ಡಾಲರ್ ಕನ್ವರ್ಟ್ ಮಾಡಿ ಬ್ಯಾಂಕ್ನಲ್ಲಿ ಇಟ್ಟು ಹಣ ಬೆಳೀತಾ ಇದೆ ಅನ್ನೋ ಮೂರ್ಖರು ಒಂದಷ್ಟು. ಅದೆಂತದೋ ಈ ಆರ್ಥಿಕ ಕುಸಿತ ದಿಂದ ಇವರ ಸಂಖ್ಯೆ ಇನ್ನು ಹೆಚ್ಚಾಗಿ ಯಾರನ್ನು ನೋಡಿದರು ಮೂರ್ಖರೆ ಅನ್ನಿಸೋ ಹಾಗಾಗಿದೆ ಇಲ್ಲಿ.  
ಆದರು ಮೂರ್ಖರು ಹೆಚ್ಚಿರೋದು ನಮ್ಮ ದೇಶದಲ್ಲಿ. ಅತೀ ವೇಗದಲ್ಲಿ ಮೂರ್ಖರ ಸೃಷ್ಟಿ ನಡೀತಿದೆಯಲ್ಲ! ಇನ್ನು ಸ್ವಲ್ಪ ದಿನ
ಹೋದ್ರೆ ಮೂರ್ಖರ ಪಾರ್ಟಿ ಅಧಿಕಾರ ಹಿಡಿದು ಬುದ್ದಿವಂತರನ್ನ ಹೀಯಾಳಿಸೋಕೆ ಶುರು ಮಾಡಿದ್ರೆ? ಬದುಕು ಶಾಶ್ವತ ಅನ್ನೋದೇ ಒಂದು ಮೂರ್ಖತನ ಆಗಿರುವಾಗ ಇದೆಲ್ಲ ಏನ್ ಬಿಡಿ? ಜಾಣರನ್ನು ದಡ್ಡರ ಮಾಡೋದು ಗೊತ್ತಿರೋದು ಮೂರ್ಖರಿಗೆ ಮಾತ್ರ. ಹಾಗಾಗಿ ಮೂರ್ಖರೆ ಬಲಾಡ್ಯರು.  ದುಡಿದಿದ್ದಕ್ಕಿಂತ ಹೆಚ್ಚು ಖರ್ಚು ಮಾಡಿದ್ರೆ ಮೂರ್ಖರಗೋದು ಗ್ಯಾರಂಟೀ.
ಈ ಮೂರ್ಖತನ ಅನ್ನೋದು ಯಾರನ್ನು ಬಿಟ್ಟಿಲ್ಲ ನೋಡಿ. ಧರ್ಮರಾಜನೆ ದೊಡ್ಡ ಮೂರ್ಖ ಆಗಿದ್ದ. ಬ್ರಿಟಿಷರನ್ನು ಓಡಿಸಿದ ಗಾಂಧಿನೇ ಮೂರ್ಖ ಅನ್ನೋ ಕಾಲ ಇದು. "ಸಗರ ಮನು ಮಾಂಧಾತರೆ ಶಾಶ್ವತವಾಗಿ ಈ ಭೂಮಿಯನ್ನು ಆಳಿಲ್ಲ.
"ನೈಕೆನೋಪಿ ಸಮಂಗತೆ ವಸುಮತಿ ಮುಂಜತ್ವಯೋ ಯಸ್ಯತಿ" ಎಂದು ಮೂರ್ಖತನವನ್ನು ಎತ್ತಿತೋರಿಸಿದ ಭೋಜರಾಜ ರಾಜ್ಯವನ್ನೇ  ಪಡೆದ. ಆದರೆ ಇಂತಹ ವಿಚಾರ ಈಗ ಹೇಳಿದರೆ ನಾವು ಮೂರ್ಖರಾಗುವುದು ಶತಃ ಸಿಧ್ಧ.
ಈಗಂತೂ "ಫೂಲ್"ಗಳಿಗೆ "ಟೂಲ್" ಸಿಧ್ಧಪದಿಸೋ ಭರಾಟೆ. "ಫೂಲ್ ವಿಥ್ ಅ ಟೂಲ್ ಇಸ್ ಸ್ಟಿಲ್ ಅ ಫೂಲ್ " ಅನ್ನೋದು
ಈ ಫೂಲ್ಗಳಿಗೆ ಹೇಗೆ ಗೊತ್ತಾಗುತ್ತೆ ಅಲ್ವ?
ಮೂರ್ಖರೆಲ್ಲ ಸೇರಿ ಒಂದುದಿನ ಗಲಾಟೆ ಮಾಡ್ತಾ ಇದ್ರೂ. ಅಧ್ಯಕ್ಷರ ಆಯ್ಕೆ ಸಮಸ್ಯೆ. ಎಲ್ಲರಿಗೂ ಸಮಾನ ಅರ್ಹತೆ ಇರೋದ್ರಿಂದನೆ ಈ ಸಮಸ್ಯೆ. ಬುಧ್ಧಿವಂತನ  ಹತ್ರ ಬಂದು ಮೂರ್ಖರ ಸಂಘಕ್ಕೆ ಅಧ್ಯಕ್ಷರನ್ನ ಆಯ್ಕೆ ಮಾಡುವ ಉಪಾಯ ಕೇಳಿದ್ರು.
ಬುಧ್ಧಿವಂತ ಮನಸ್ಸಿನಲ್ಲೇ ಒಂದು ಹಣ್ಣು ನೆನಪಿಸಿಕೊಂಡು ಅದರ ಹೆಸರು ಯಾರು ಹೇಳುತ್ತಾರೋ ಅವರೇ ಅಧ್ಯಕ್ಷರು ಅಂದ.
ಬುಧ್ಧಿವಂತ ಅದೇ ಹಳದಿ ಬಣ್ಣದ ಹಣ್ಣು ಇದೆಯಲ್ಲ ಅದನ್ನ ಮನಸ್ಸಲ್ಲಿ ಇಟ್ಕೊಂಡಿದ್ದ. ನಿಮಗೆ ಗೊತ್ತ ಹಳದಿ ಬಣ್ಣದ ಯಾವ್ಯಾವ ಹಣ್ಣುಗಳಿದೆ ಅಂತ?ನೆನಪಾದ್ರೆ ಕಾಮೆಂಟ್ ನಲ್ಲಿ ಹಾಕಿ. 
ರಾತ್ರಿ ಹನ್ನೆರದಾಯ್ತು. ಇನ್ನು ಈ ಮೂರ್ಖಪುರಾಣ ನಿಲ್ಲಿಸದಿದ್ದರೆ ನಾಳೆ ಆಫೀಸಿನಲ್ಲಿ ನಾನು ಮೂರ್ಖನಾಗುವುದು ಖಂಡಿತ.
 

Saturday, April 03, 2010

ಉಷ್ಣ ಕಾಲೇಷು ಶೀತಲಂ.

ನನಗೆ   ಎರಡನೇ  ತರಗತಿಯಲ್ಲಿ  ಉಪನಯನ. ಮೂರನೇ ತರಗತಿಯಲ್ಲಿದ್ದಾಗ ನಮ್ಮ ಮನೆಯ ಜಗುಲಿಯಲ್ಲೇ  ಗುರುಕುಲ ಪದ್ದತಿಯಲ್ಲಿ ವೇದ ಮಂತ್ರ ಪಾಠಶಾಲೆ.    ಅಕ್ಕ ಪಕ್ಕದ ಉಪನಯನವಾದ ಮಕ್ಕಳು ಒಂದೆಡೆಸೇರಿ ಬೇಸಿಗೆ ಮತ್ತು ಚಳಿಗಾಲದ ರಜೆಯನ್ನು ಕಳೆಯುವ ಸಮ್ಮರ್  ಅಥವಾ ವಿಂಟರ್ ಕ್ಯಾಂಪು. ನಮ್ಮೊರಿನ ಭಟ್ಟರೊಬ್ಬರು ನಮಗೆ ಗುರುಗಳು. ನನ್ನ ತಂದೆ ಇಂತಹ ಒಂದು ವ್ಯವಸ್ತೆಯನ್ನು ಕಲ್ಪಿಸಿದ್ದರು. ನಾವೆಲ್ಲ ಬಿಳಿ ಲುಂಗಿ ಕಡವೆ ಶಾಲು ಹೊದ್ದು ಕುರುಡoದಿಗೆ[ದೊಡ್ಡ ರಾಕ್ಷಸ ನೊಣ ]  ಹೊಡೆಯುತ್ತ ಸ್ತೋತ್ರ, ಮಂತ್ರ ಕಲಿಯುತ್ತಿದ್ದೆವು.
ನೆಲ್ಲಿ ಮರ, ಸಂಪಿಗೆಮರ, ಗೇರು ಮರ ಹತ್ತಿ ಹಣ್ಣು ಕಾಯಿ ತಿಂದು ಧುಪಳಿ  ಮಾಡಿ  ಮುಳ್ಳ ಹಣ್ಣು ಕೊಯ್ದು ಅಡಗಿಸಿ ಇಟ್ಟುಕೊಂಡು ಪಾಠ ಹೇಳುವಾಗ ಕದ್ದು ತಿನ್ನುತ್ತಿದ್ದೆವು.

ಭಟ್ಟರ ದಾಸವಾಳದ ಕೋಲು ಹೋರಿಗಳನ್ನು ಹೊಡೆಯಲು ಸದಾ ಸಿಧ್ಧವಿರುತ್ತಿತ್ತು....

ಮಧ್ಯಾನ್ಹ ಊಟ ಮಾಡುವಾಗ ಗ್ರಂಥ ಹೇಳಬೇಕಾಗಿತ್ತು. ಸಂಜೆ ಮತ್ತೆ ಬಾಯಿ ಪಾಠ. ಶಂಕರ ಸಂಹಿತೆಯ

"ಶ್ರೀಮದಖಿಲಾಧಾರನಿಗಮಸ್ತೊಮನಾಯಕ
ಪ್ರಣವ ಪಂಜರದಾಮಹಾಸುಕ
ಮೊದಕಾಂಕಿತ ಪಾಶ  ವರಹಸ್ತಾ...."   ಎಂದು ಭಾಮಿನಿ ಷಟ್ಪದಿಯ ಗಮಕ,

ತನಯರೋಳ್ ಕಾದಿ  ಮೂರ್ಚಿತನಾದ  ರಾಮನಂ
ಮುನಿ ಮೌಳಿ ವಾಲ್ಮೀಕಿ ಬಂದು ಸಂತೈಸುತ್ತ
ಧನುಜಾಶ್ವಮೆಧವಂ ಪೂರೈಸಿ ಸೀತೆಸಹಿತವನಿಯಂ ಪಾಲಿಸಿದರೂ .....

ಎಂದು ವಾರ್ಧಿಕ್ಯ ಷಟ್ಪದಿಯ ಜೈಮಿನೀ ಭಾರತವನ್ನೂ ರಾಗ ಬಧ್ಧವಾಗಿ ಓದಿ ಅರ್ಥ ಹೇಳಬೇಕಾಗಿತ್ತು.
ಕುಮಾರವ್ಯಾಸನ ಈ ಕೆಳಗಿನ ಒಗಟನ್ನು ಬಿಡಿಸಬೇಕಿತ್ತು.

ವೆದಪುರುಷನಸುತನ ಸುತನ
ಸಹೋದರನ ಮೊಮ್ಮಗನ ಮಗನ
ತಳೋದರಿಯ ಮಾತುಳನ  ಮಾವನ ಅತುಳ ಭುಜಬಲದಿ
ಕಾದಿಗೆಲಿದನ ಅಣ್ಣನವ್ವೆಯ
ನಾದಿನಿಯ ಜಟರದೊಳು ಜನಿಸಿದ
ಆದಿ ಮೂರುತಿ ಸಲಹೋ ಗದುಗಿನ ವೀರನಾರಾಯಣ

ನಮ್ಮಲ್ಲಿ ಒಳ್ಳೆಯ ಸ್ಪರ್ಧೆಯು ಏರ್ಪಡುತ್ತಿತ್ತು.
೧ ಗಂಟೆ ಉರು ಹೊಡೆದು ಬೇಜಾರಗುತ್ತಿದ್ದ ನಮಗೆ ನಮ್ಮ ಭಟ್ಟರು ಕೆಲವು ಸಂಸ್ಕೃತದ ಹಾಸ್ಯ ಪದ್ಯ, ಶ್ಲೋಕಗಳನ್ನೂ ಕಲಿಸಿದ್ದರು.
ಕೆಲವು ನೆನಪಿನಲ್ಲಿ ಉಳಿದಿದೆ. ಅರ್ಥ ಬರೆಯಲು ಪುರುಸೊತ್ತಿಲ್ಲ... ಸುಲಭವಿದೆ. ಓದಿ ಎಂಜಾಯ್ ಮಾಡಿ

ಹೆಗ್ಗಂಬಿ ಧೋತ್ರಂ ಹರಟ ಪ್ರಮಾಣಂ
ಹಣೆ ಗೀರು ಗಂಧಂ ಮೊಳ ಉದ್ದ ಟೋಪ್ಯಂ
ಯಥೇಚ್ಛ ಗಡ್ಡಂ ವಿಪರೀತ ದಡ್ದಂ
ಯದ್ವಾಯ ತಡವಾಯ  ವದಂತಿ ಭಟ್ಟ :

[ ಮಂತ್ರ ಗೊತ್ತಿಲ್ಲದೇ ಮದುವೆಯ ಮಂಟಪಕ್ಕೆ ದಕ್ಷಿಣೆಯ ಆಶೆಗಾಗಿ ಮುಂದೆ ಮುಂದೆ ಹೋಗಿ ಕುಳಿತುಕೊಳ್ಳುವ ಬ್ರಾಹ್ಮಣರ ಕುರಿತು ರಚಿತವಾದ ಶ್ಲೋಕವಿದು ]

ಅತ್ಯಾಶ್ಚರ್ಯಂ ವಿಠಲೋಪಾಧ್ಯ    ಗೇಹೇ
ಕಶ್ಚಿದ್ ಚೋರರೂ ಅಟ್ಟದಾ ಮೇಲೆ ಬಂದೂ
ಎಚ್ಚರಿದ್ದವೋ ಇಲ್ಲವೋ ಎಂದು ದೃಷ್ಟ್ವ
ಪಶ್ಚಾದ್ಯಾತಃ ಪೆಟ್ಟಿಗೆ ಹೊತ್ತುಕೊಂಡೂ  

ಈ ಕೆಳಗಿನ ಶ್ಲೋಕ "Gastroenterologist" ರಚಿಸಿದ್ದು...
ಉತ್ತಮಂ ಡುಮುಕೋ   ರಾಯ
ಮಧ್ಯಮೋ ಟರ್ರ ಟುರ್ರಿ
ಅಧಮಂತು ಪುನ್ಗಿನಾದಾಯ
ತೊಂಯಿ ಪುಸುಕು ಪ್ರಾಣ ಘಾತುಕಹ  

ಮನೆಗೆ ಬಂದ ಅತಿಥಿಯನ್ನು ಸತ್ಕರಿಸುವ ಅಭ್ಯಾಸವಿಲ್ಲದ ಊರಿನ ದೊಡ್ಡ ಮನುಷ್ಯರೋಬ್ಬರಮೇಲೆ
ನಿರ್ಮಿತವಾದ ಶ್ಲೋಕ...

"*****"ಪಾಲು ಮಹಾಕ್ಷೆತ್ರೆ
"****"ಭಟ್ಟ ಮಹಾಪ್ರಭುಹು
ಆಸನಂ ಭೋಜನಂ ನಾಸ್ತಿ
ಸುಂಣಂ ಕಣ್ಣೀರು ವರ್ಜಯೇತ್

[ ಆಸನ ಕೊಟ್ಟು ಊಟ ಹಾಕುವುದಿರಲಿ ಎಲೆ ಅಡಿಕೆಗೆ ಸುಣ್ಣ ಕೇಳಿದರೆ ಕಣ್ಣೀರು ಬರುವಷ್ಟು ಮಾತನಾಡಿದರು ಅನ್ನುವುದು ತಾತ್ಪರ್ಯ ] 

ಮಾಸಂ ತರತಿ ಇತಿ ಮಾಸ್ತರಹ : ತಿಂಗಳನ್ನು ಲೆಕ್ಕ ಹಾಕುವವ ಯಾವನೋ ಅವನೇ ಮಾಸ್ತರ.

ಅನೆಕಾನಿ ವ್ಯತೀತಾನಿ
ಜನ್ಮಾನಿ ತವ "charju" ನಾ.

ಅನೇಕಜನ್ಮಗಳು ಕಳೆದರು ನಿನಗೆ ನೌಕರಿ ಸಿಗಲ್ಲಿಲ್ಲವಲ್ಲೋ ಅನ್ನುವ ಅರ್ಥದಲ್ಲಿ ಭಗವದ್ಗೀತೆಯ ಶ್ಲೋಕವನ್ನು ತಿರುಚಲಾಗಿತ್ತು.

ಮಂತ್ರಾಕ್ಷತೆಯ ಸಂದರ್ಭದಲ್ಲಿ ಹೇಳುವ ಮಂತ್ರ...
ತಾಮ್ಬೂಲಾನಿ ಪಾಂತು. ಐಶ್ವರ್ಯಮಸ್ತು. ತಂಡುಲಾನಿ ಪಾಂತು ಬ್ರಾಹ್ಮನ್ರಿಂಗ್ ಚಾನ್ಸು...

ಮದುವೆಯಲ್ಲಿ ಸಭಾಪೂಜೆ ಮಂತ್ರದಲ್ಲಿ ಹಾಸ್ಯ ಹೊಕ್ಕಾಗ!!

"ಬ್ರಾಹ್ಮಣೆಭ್ಯೋ ಮಹದ್ಭ್ಯಶ್ಚ ಓಡಿಬಿದ್ನೋ ಮಹೇಶ್ವರಹ
ಪುರಾಣ ಶಾಸ್ತ್ರ ವಿದ್ಭ್ಯಶ್ಚ ಸರ್ವೆಭ್ಯೋ ವೈ ನಮೋ ನಮಃ  

ದೊಡ್ಡ ಹೆಡ್ಡ ಗೌಡನಮನೆಯಲ್ಲಿ ನಾಯಿ ೫ ಮರಿಹಾಕಿದ್ದಕ್ಕೆ ಶಾಂತಿ ಮಾಡಿಸುತ್ತ ಭಟ್ಟರು ಗೌಡನಿಗೆ ತಿಳಿಯದ ಹಾಗೆ ಬೇರೆ ಭಟ್ಟರಿಗೆ ಹೇಳಿದ ಮಂತ್ರ
ಹೆಡ್ಡಸ್ಯ  ದೊಡ್ಡ ಗೌಡಸ್ಯ ಪಂಚಕುನ್ನಿ ಪ್ರಸೂಯತಹ 
ಮಮಪ್ಯರ್ಧಂ ತವಪ್ಯರ್ಧಹ ಸ್ವಾಹಾ  [ ಬಂದ ಲಾಭದಲ್ಲಿ ನಿಮಗರ್ಧ ತಮಗರ್ಧ ]

ರುದ್ರ ಮಂತ್ರದಲ್ಲಿ ಬರುವ ಒಂದು ಸಾಲು ನಮ್ಮ  ಸಹಪಾಟಿಯಾ ನಾಲಗೆ ತಿದ್ದದೆ, ಸರಿಯಾಗಿ ಓಡದೆ  ಹೀಗಾಗಿತ್ತು.
"ದಿವಿತಿಷ್ಟತ್ಯೆ ಕಸ್ತೆ ನೇದಂ ಪೂರ್ಣಂ ಪುರುಷೆಣ  ಸರ್ವಂ" ಅನ್ನೋದು ಉಪ್ಪುತಿಂದ ಬಾಯಲ್ಲಿ ಈ ರೀತಿ ವ್ಯತ್ಯಾಸವಾಗುತ್ತಿತ್ತು.
"ದಿವಿತಿಷ್ಟತ್ತಿಗೆ  ಕಚ್ಚೆನೇದಂ ಪೂರ್ಣಂ  ಪುರುಷೆಣ  ಸರ್ವಂ".ಕೇಳಿಕೊಂಡ ಭಟ್ಟರ ಹತ್ರ ದಾಸವಾಳದ ಶೇಳೆಯಿಂದ "ತಾಡನಂ ಪರಮೌಷಧಂ" ಎಂದು  ಚೆನ್ನಾಗಿ ತಿಂದಿದ್ದು ನೆನಪಿದೆ. ಈ ಮಂತ್ರದ ಹನಸು ಬಾಯಿಪಾಟ  ಆಗುವವರೆಗೂ, ನಗು ತಡೆಯಲು ಆಗುತ್ತಿರಲಿಲ್ಲ.

ಇನ್ನು ರಸಿಕತೆಯ ರಸ ತುಂಬಿರುವ ಅದೆಷ್ಟೋ ಕಾವ್ಯಕುಸುಮಗಳನ್ನು ನಮ್ಮ ಕರ್ಣದ  ಮೇಲೆ ಸಿಕ್ಕಿಸಿದ್ದರು....
ಕಾಲೇಜು ಜೀವನದಲ್ಲಿ ನನ್ನ ರೂಮು ಆಕರ್ಷಣೆಯ ಕೇಂದ್ರವಾಗಲು ಇಂತಹ ಸಂಗ್ರಹಗಳ ಪಾಲು ಸಾಕಿಷ್ಟಿದೆ.
ಈ ಸುಭಾಷಿತ ವನ್ನೇ ನೋಡಿ ಇದೊಂದು sample ಅಷ್ಟೇ.

ಕೂಪ ವಾರಿ ವಟಚ್ಚಾಯ
ತಾಂಬೂಲಂ ತರುಣೀಸ್ತನಂ
ಶೀತಕಾಲೆ ಭವೆದ್ಯುಶ್ಣಂ
ಉಷ್ಣ ಕಾಲೇಷು ಶೀತಲಂ.

"ನಿತ್ಯಾನಂದಕರೀ ವರಾ ಭಯಕರಿ" ಅನ್ನುವ ಸ್ತೋತ್ರದ ಶೈಲಿಯ ಕಿಲಾಡಿಗಳ ಶ್ಲೋಕ

ನಿತ್ಯಾನಂದಕರಿ ಹಳೆ ಮನೆಕರಿ
ಬೇಕಷ್ಟು ಪಾಯಸಾ ಸುರೀ
ಗೊಡ್ಡೆಮ್ಮೆ  ಕಾಲ್ಕಟ್ಟಿ ಹಾಲನು ಕರಿ
ಜೋರಿದ್ದ ಕುನ್ನೀ ಮರಿ
ನಮ್ಮೂರ ಕಾಯ್ಕಳ್ಳು ಶಿದ್ದೀ ಮರಿ
ಓಡಿ ಹೋಗಿ ಕಾಲಾ ಮುರಿ...


ಒಂದು ಚಳಿಗಾಲದ  ರಜೆಯಲ್ಲಿ ಮನೆಯ ಪಕ್ಕದ ದೇವಸ್ತಾನದಲ್ಲಿ ಮೂರ್ತಿ ಪ್ರತಿಷ್ಠೆ ಕಾರ್ಯಕ್ರಮ. ಗೋಕರ್ಣದಿಂದ ಸುತ್ತಲಿನ ಊರಿನಿಂದ ಬಂದ ವೈದಿಕರಿಗೆ ನಮ್ಮ ಮನೆಯಲ್ಲಿ ವಸತಿ ವ್ಯವಸ್ತೆ.
ಸ್ನಾನಕ್ಕೆ ಹೊರಗೆ ದೊಡ್ಡ ಕೊಪ್ಪರಿಗೆಯಲ್ಲಿ ಬಿಸಿನೀರು ಕಾಯಿಸಿ ಇಡುತ್ತಿದ್ದೆವು. ಬೆಳಿಗ್ಗೆ ಬೇಗಲೇ ಪ್ರಾರಂಭವಾಗುವ ಕಾರ್ಯಕ್ರಮ.
ಎಲ್ಲರು ಮಡಿ ಉಟ್ಟು ಸಿಧ್ಧವಾಗಿರಬೇಕಗಿತ್ತು. ನಾನು - ಅಣ್ಣ   ವೈದಿಕರ ಸೇವೆಗೆ ಸ್ವಯಂ ಸೇವಕರು.
ಆದರೆ ನಾವು ನಿರೀಕ್ಷಿಸದ ಒಂದು ಸಮಸ್ಯೆ ಎದುರಾಗಿತ್ತು. ಹತ್ತಿಪ್ಪತ್ತು ವರ್ಷಗಳಲ್ಲಿ ಒಮ್ಮೆಯೂ ನಡೆಯದಿದ್ದ ಈ ಅದ್ಭುತ ದೇವಕಾರ್ಯಕ್ಕೆ
ಸುತ್ತಲಿನ ಊರುಗಳಿಂದ ಧಾರವಾಡ ಪೊಲೀಸರು ಬಂದಿದ್ದರು. [ ಬಿಳಿ ಸೀರೆ ಉಟ್ಟು ಅತ್ಯಂತ ಶ್ರಧ್ಧೆಯಿಂದ ಪೂಜೆ ಪುನಸ್ಕಾರ ಮಾಡುವ ಆಗಿನ ಕಾಲದ ನಮ್ಮ ಕಡೆಯ ವಯೋವೃಧ್ಧ ವಿಧವೆಯರಿಗೆ ನಾವು ಇತ್ತ ಕೋಡ್ ವರ್ಡ್ ]. ಬೆಳ್ಳಕ್ಕಿ ಮರಿಗಳಂತೆ ಬಂದು ಸೇರುವ ಗುಂಪು ನಮಗಿಂತ ಬೇಗಲೇ ಎದ್ದು ಕೊಪ್ಪರಿಗೆ ನೀರನ್ನು ಖಾಲಿ ಮಾಡುತ್ತಿದ್ದರು.ಅಷ್ಟೇ ಅಲ್ಲದೆ ನಮ್ಮ ಮನೆಯಲ್ಲಿ ವೈದಿಕರ ಸಂಧ್ಯಾ ವನ್ದನೆಗೆ ಇತ್ತ ತಾಮ್ರ, ಹಿತ್ತಾಳೆಯ ಚಂಬುಗಳು ಮಾಯವಾಗಿ ಗುಡ್ಡೆಯ [ ಅಡವಿ, ಕಾಡು ]ಮೇಲೆ ಪ್ರವಾಸ ಹೋಗುತ್ತಿದ್ದವು. ಕೊಪ್ಪರಿಗೆಯ  ಪಕ್ಕದಲ್ಲಿ
tear ಅಂಡ್ wear   ಗಳ ಹಾವಳಿ ಬೇರೆ... ಇದಕ್ಕೆ ಬಂದಿರುವ ವೈದಿಕರಲ್ಲೊಬ್ಬರು ಚತುರ ಉಪಾಯವೊಂದನ್ನು ಹೇಳಿಕೊಟ್ಟ ಮೇಲೆ  ಸಮಸ್ಯೆ ಬಗೆಹರಿದಿದ್ದು.ಒಂದಷ್ಟು ಅವಲಕ್ಕಿ ತಂದು ಕೊಪ್ಪರಿಗೆಯ ಸುತ್ತ ಹಾಕಿದ್ದೆವು. ಅನ್ನವೆಂದು ಭ್ರಮಿಸಿದ ಬೆಳ್ಳಕ್ಕಿ ತಂಡ ಮುಸುರೆ ಭಯದಿಂದ ಮರುದಿನದಿಂದ ಮಾಯಾ.ಒಂದೆರಡು "tear ಅಂಡ್ wear"  ಮೇಲೆ ಬೂದಿ ಬೇರೆ ಹಾಕಿದ್ದೆವು.

ಈ "tear ಅಂಡ್ wear" ಅಂದ ತಕ್ಷಣ  ಮತ್ತೊಂದು ನೆನಪಾಯ್ತು.
ನಮ್ಮೊರ ಗಂಡಿನ ಮದುವೆ ಇತ್ತು. ಬೇರೆ ದೂರದ ಊರಿನ ಹೆಣ್ಣು.ಹೆಣ್ಣಿನ ಮನೆಯಲ್ಲೇ ಮದುವೆ.  ಆ ಊರನ್ನು ನೋಡುವ ಆಸೆಯಿಂದ ತುಂಬಾ ಜನ ದಿಬ್ಬಣದ ಜೊತೆಯಲ್ಲಿ ಹೊರಟಿದ್ದರು. ಬೇರೆ ಊರಿನ ವಿವಾಹಕ್ಕೆ ಹೋದಾಗ ಅಕ್ಕ ಪಕ್ಕದ ನಡೆದು ಹೋಗಬಹುದಾದ ಮನೆಗಳಿಗೂ ಭೇಟಿ ಕೊಡುವುದು ಜನರ [ದುರ್ ] ಅಭ್ಯಾಸ. ಹಳ್ಳಿಯಲ್ಲಿ ಸಾಮಾನ್ಯವಾಗಿ ಮನೆಗೆ ಬಂದವರಿಗೆ ಆಸರಿಗೆ ಕೊಡುವುದೂ ರೂಢಿ. ಚಳಿಗಾಲವಾದರೆ ಚಹಾ. ಬೆಸಿಗೆಯಾದರೆ ನಿಂಬೂ ಪಾನಕವೋ [ ಇತ್ತೀಚಿಗೆ ಕೋಕಂ ] ಮಜ್ಜಿಗೆಯೋ ಕೊಡುವುದು ಪದ್ಧತಿ.
ಹೀಗೆ ಒಂದಷ್ಟು ಜನ ಸೇರಿಕೊಂಡು ಮದುವೆ ಮನೆಯ ಪಕ್ಕದ ಮನೆಗೆ ಹೋಗಿದ್ದರಂತೆ. ಮನೆಯಲ್ಲಿ ೧೪-೧೫ ವರ್ಷದ ಹುಡುಗಿ ಒಬ್ಬಳೇ ಇದ್ದಳು. ಅವಳ ಜೊತೆಯಲ್ಲಿ ೭೦-೭೫ ವರ್ಷದ ಧಾರವಾಡ ಪೋಲಿಸು ಅಂದರೆ ಹುಡುಗಿಯ ಅಜ್ಜಿ. ಅಜ್ಜಿ ದೇವರ ಕೊನೆಯಲ್ಲಿ ರಾಮ ರಾಮ ಅನ್ನುತ್ತ ಪೂಜೆ ಮಾಡುತ್ತಿದ್ದರು. ಹುಡುಗಿ ಮನೆಗೆ ಬಂದ ಜನಕ್ಕೆ ಬಿಸಿ ಬಿಸಿ ಚಹಾ ತಂದು ಕೊಟ್ಟಳು. ತಿನ್ನಲು ಹಲಸಿನ ಚಿಪ್ಸು.ಕಾಯಿ ಹಲ್ವ...
ಹೋಗಿದ್ದ ಜನ ಹೊರಗೆ ಕುಳಿತು ಸುದ್ದಿ ಹೇಳುತ್ತಾ ಇರುವಾಗ ಅಜ್ಜಿ ಮತ್ತು ಮಗಳ ನಡುವಿನ ಈ ಸಂಭಾಷಣೆ ಹೊರಗಿದ್ದವರಿಗೆ ಕೇಳುತ್ತಿತ್ತು.

ಅಜ್ಜಿ: ಕೂಸೇ ಬಂದವಕೆ ಆಸರಿಗೆ  ಕೊಟ್ಯ?
ಮೊಮ್ಮಗಳು: ಹೌದು. ಚಾ ಕೊಟ್ಟೆ.
ಅಜ್ಜಿ: ಚಾ ಎಂತದರಲ್ಲಿ ಅರಿಸಿದೆ? [ ಅರಿಸು -ಫಿಲ್ಟರ್ ಮಾಡು ]
ಮೊಮ್ಮಗಳು: ಅಲ್ಲೇ ಓಲೆ ಹತ್ರ ಇದ್ದ ಅರಿವೆಯಲ್ಲಿ. ಚಾ ಫಿಲ್ಟರ್ ಹುಡುಕಿದರು ಸಿಕ್ಕಿದ್ದಿಲ್ಲೇ
ಅಜ್ಜಿ: ಥೋ ಕೂಸೇ ಅಯ್ಯೋ ಅದು ಎನ್ಕೆ ಮಾಲೆಯ.. ಇಲ್ಲೆ ಓಲೆ ಹತ್ರ ಒಣಗಿಸುಲೇ ಇದ್ದ ಎನ್ನ ಮಾಲು ಕಾಣುತ ಇಲ್ಲೆ....

ಹೊರಗೆ ಕುಳಿತವರ ಪರಿಸ್ಥಿತಿ ಹೇಗಿತ್ತೋ ಯಾರು ನನಗೆ ಹೇಳಿಲ್ಲ.

ಈಗ tear ಅಂಡ್ wear ಬಿಸಿನೆಸ್ ತುಂಬಾ ಡೌನ್ ಆಗಿದೆ. ಹಳೆ ಮನೆಗಳಲ್ಲಿ ಭತ್ತದ ಪಣತದ ಮೂಲೆಯಲ್ಲಿ, ಹೂವಿನ ಗಿಡಗಳ ಮೇಲೆ ಅಲಂಕಾರಿಕವಾಗಿ ಬಣ್ಣ ಬಣ್ಣಗಳಲ್ಲಿ   ಕಾಣ ಸಿಗುತ್ತಿದ್ದ ಈ ಪುರಾತನ ವಸ್ತು ನಶಿಸಿಯೇ ಹೋಗಿದೆ.

ಓದುಗರಲ್ಲಿ ವಿನಂತಿ: ಇದು ಹಾಸ್ಯಕ್ಕಾಗಿ ಮಾತ್ರ ಬರೆದದ್ದು. ಯಾರನ್ನೂ ಗೇಲಿಮಾಡುವ ಉದ್ದೇಶ ಇದಕ್ಕಿಲ್ಲ. ಅಷ್ಟೇ ಅಲ್ಲದೆ ಕರೆಯದೆ ಬರುವ ಅನಾಗರೀಕತೆ, ಕೆಲವೊಮ್ಮೆ ನಮ್ಮನ್ನು ತೀರ ಹಿಂಸೆಗೆ ಗುರಿ ಮಾಡುವ ಬೆಳ್ಳಕ್ಕಿಗಳು ನಮ್ಮಲ್ಲಿದ್ದರು. ಅವರ ಅಸಹಾಯಕತೆಗೆ ನಮಗೆ ವಿಶಾದವಿದ್ದರು ಸಂಕುಚಿತ ಮನೋಭಾವಕ್ಕೆ ಸಿಟ್ಟು ಕೂಡ ಇದೆ.  ಆಗ ಚಿಕ್ಕ ಬಾಲಕನಾಗಿದ್ದ ನನಗೆ ಆದ ತೊಂದರೆ ಕೂಡ ಅಷ್ಟಿಷ್ಟಲ್ಲ.

ಕಟಿಣ ಪದಗಳ ಅರ್ಥ.
tear ಅಂಡ್ wear - "ರಾಮ  ಭಾಮ ಶ್ಯಾಮ" ಸಿನಿಮಾ  ನೋಡಿ





[ "^ಸ್" ]