1989 ನಾನು ಆಗ ಭರತನ ಹಳ್ಳಿಯ ಪ್ರಗತಿ ಪ್ರೌಢ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ. ನಮ್ಮೂರಿನವರೇ ಆದ ಗಣಪತಿ ಭಟ್ IRS ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರಿಂದ ಸನ್ಮಾನ ಏರ್ಪಡಿಸಲಾಗಿತ್ತು. ಸಮಾರಂಭದ ಅಂಗವಾಗಿ ರಸಪ್ರಶ್ನೆ ಕಾರ್ಯಕ್ರಮ.
ಪ್ರಶ್ನೆ :
೧೯೮೭ನೆ ವರ್ಷದ ವಿಶೇಷತೆ ಏನು?
ಉಳಿದ ಮೂರುತಂಡಗಳು ಉತ್ತರ ನೀಡುವ ಉತ್ಸುಕರಿದ್ದರು. ಆದರೆ ಉತ್ತರಿಸುವುದು ನನ್ನ ಸರದಿ . ನಾನು ಎದ್ದು ನಿಂತು ದೈರ್ಯವಾಗಿ ಹೇಳಿದೆ "ಫ್ರೆಂಚ್ ಕ್ರಾಂತಿಯ ದ್ವಿಶತಮಾನೋತ್ಸವ " ನಿರ್ಣಾಯಕರ ದೃಷ್ಟಿಯಲ್ಲಿ ಉತ್ತರ ತಪ್ಪಾಗಿತ್ತು ಉಳಿದವರು ಎದ್ದು ನಿಂತು ಜವಾಹರ ಲಾಲ್ ನೆಹರು ಜನ್ಮ ಶತಮಾನೋತ್ಸವ ಎಂದು ಹೇಳಿ ಪೂರ್ಣ ಅಂಕ ಗಿಟ್ಟಿಸಿದ್ದರು ... ಯಾಕೆಂದರೆ ಆ ವರ್ಷ ದೇಶಾದ್ಯಂತ ನೆಹರು ಜನ್ಮ ಶತಾಬ್ದಿ ವರ್ಷಾಚರಣೆ ನಡೆಯುತ್ತಿತ್ತು . ಸುಲಭದ ಪ್ರಶ್ನೆಗೆ ಸುಲಭದ ಉತ್ತರ ಎಲ್ಲರಿಗು ತಿಳಿದಿತ್ತು . ಆದರೆ ನನ್ನ ಉತ್ತರ ಬೇರೆಯೇ ಆಗಿತ್ತು . ಆಗ ನನ್ನ ನೆರವಿಗೆ ಬಂದಿದ್ದು ಗಣಪತಿ ಭಟ್ . ಹೌದು ನಿಜವಾಗಿಯೂ ೧೯೮೭ ಫ್ರೆಂಚ್ ಕ್ರಾಂತಿಯ ದ್ವಿಶತಮಾನೋತ್ಸವ ವರ್ಷವೇ ಆಗಿತ್ತು . ಸುಲಭದ ಪ್ರಶ್ನೆಗೆ ನಾನು ನೀಡಿದ್ದ ಉತ್ತರ ಉಳಿದವರಿಗೆ ಕಷ್ಟಕರವಾಗಿತ್ತು. ನನಗೆ ಪೂರ್ಣ ಅಂಕ ಕೊಡಿಸಿದ ಗಣಪತಿ ಭಟ್ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರತ್ಯುತ್ಪನ್ನ ಮತಿತ್ವ ಸಹಾಯಕಾರಿ ಎಂದು ವಿವರಿಸಿದ್ದರು ಕೂಡ.
No comments:
Post a Comment