ಇರಲಿ ಇದರಿಂದ ಈ ವರ್ಣನೆಯಿಂದ ಯಾರಿಗೂ ಲಾಭವಿಲ್ಲ. ಸುಸಂಸ್ಕೃತ ಸಮಾಜ ಎಂದೋ ತನ್ನನ್ನು ನೀರಿನ ಮೇಲಿನ ತೈಲದಂತೆ ಬೇರ್ಪದಿಸಿಕೊಂಡಿದೆ. ತನ್ನ ಆಯ್ಕೆ ಏನೆಂದು ತಿಳಿದಿದೆ.
ಪರಹಾರದ ಕುರಿತು ರಚನಾತ್ಮಕ ಚಿಂತನೆಯಲ್ಲಿ ತೊಡಗಬೇಕು. ನಾನು ಪರಿವೀಕ್ಷಿಸಿದ ಅನೇಕ ವಿಷಯಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತೇನೆ.
ಹಾಗಿದ್ದರೆ ನಾವು ಎಲ್ಲಿ ನಮ್ಮ ಪ್ರಯತ್ನವನ್ನು ಕೇಂದ್ರೀಕರಿಸಬೇಕು? ನಮ್ಮ ಶಿಕ್ಷಣ ಎಲ್ಲಿ ಬದಲಾಗಬೇಕು?
- ಯಾವುದು ಮುಖ್ಯ ಯಾವುದು ಅಮುಖ್ಯ? ಯಾವುದು ಕಲ್ಪನೆ? ಯಾವುದು ವಾಸ್ತವ?ಯಾವುದು ಪ್ರಾಯೋಗಿಕ? ಎಲ್ಲಿದೆ ಸತ್ವ? ಯಾವುದು ಪ್ರಚ್ಚನ್ನ? ಗುರುತಿಸುವ - ಆಯ್ಕೆ ಮಾಡುವ ಸಾಮರ್ಥ್ಯ
- ಕೃಷ್ಣದೇವರಾಯನ ಹೆಂಡತಿಯರ ಸಂಖ್ಯೆ ಎಷ್ಟು? ಭಾರತದಲ್ಲಿ ಎಷ್ಟು ಯುದ್ಧಗಳಾದವು ? ಯಾರ್ಯಾರು ದಂಡೆತ್ತಿ ಬಂದರು? ಕಲಿಕೆ ಬೇಕಿಲ್ಲ. ಇತಿಹಾಸ ಹೊಟ್ಟೆ ತುಂಬಿಸದು.
- ಹಿಂದಿನದನ್ನು ಮೆಲುಕುಹಾಕುತ್ತಾ ಮುಂದಿನದನ್ನು ಮರೆಸುವ ವಿಚಲಿತಗೊಳಿಸುವ, ವೈಫಲ್ಯಗಳನ್ನು ವೈಭವೀಕರಿಸುವ ಅಗತ್ಯವಿಲ್ಲ
- ಮಕ್ಕಳಿಗ ಜಗತ್ಪರ್ಯಟನೆ ಅವಕಾಶ ಶಾಲೆಯಲ್ಲಿರುವಾಗ ಸಿಗಬೇಕು. ಕಣ್ಣಿಗೆ ಕಂಡಿದ್ದು ಬಾಯಲ್ಲಿ ವರ್ಣಿಸಿದ್ದಕ್ಕಿಂತ, ಪುಸ್ತಕಲ್ಲಿ ಓದಿದ್ದಕ್ಕಿಂತ ಪರಿಣಾಮಕಾರಿ
- ಪ್ರಭಾವಿ ಪರಿಣಾಮಕಾರೀ ಅಭಿವ್ಯಕ್ತಿ ಕೌಶಲ್ಯ ಮತ್ತು ಶೈಲಿ ಬೆಳೆಸಬೇಕು
- ವೈಫಲ್ಯಗಳನ್ನು ಜಯಿಸುವ ವೈಫಲ್ಯಗಳನ್ನು ಸಮಚಿತ್ತದಿಂದ ಸ್ವೀಕರಿಸುವದು
- ಅನಿಮಿತ ಅಪಾಯದ ಅನಿಯತ ಪಲಿತಾಂಶದ ಗುರಿಯತ್ತ ಛಲದಿಂದ ಮುನ್ನುಗ್ಗುವ ಗುಣ
- ಫಲಹೇತುಗಲಾಗದೆ ಕರ್ಮಭೀರುಗಲಾಗುವುದು
- ಗುರಿಯನ್ನು ಸಾಕಾರಗೊಳಿಸಲು ಬೇಕಾಗುವ ಹೂಡಿಕೆ ಮತ್ತು ಪರಿಕರ ಒದಗಿಸುವುದು
- ಶಿಸ್ತಿನ ,ನಿರ್ಧಿಷ್ಟ, ನಿರೀಕ್ಷಿತ ಮೈಲುಗಲ್ಲುಗಲಿರುವ ಕಾರ್ಯ ಅನುಸಂಧಾನ
- ಸ್ವಾಭಿಮಾನ,ಸ್ವಾವಲಂಬನೆ ಮತ್ತು ಸ್ವತಂತ್ರ ಚಿಂತನೆ.
- ಅನುಪಯುಕ್ತತೆ, ಅಪವ್ಯಯ ನಿಯತ್ರಣ
- ವೃತ್ತಿಪರತೆ, ವೃತ್ತಿಪ್ರೇಮ, ವೃತ್ತಿಗೌರವ , ವೃತ್ತಿಯ ಗಾಂಭೀರ್ಯ ಮತ್ತು ಅಭಿಮಾನ
- ಅಂತಿಮವಾಗಿ ಚಾರಿತ್ರ್ಯ, ಧೈರ್ಯ, ಆತ್ಮವಿಶ್ವಾಸ ತುಂಬಿದ ನೇರ, ಪ್ರಾಮಾಣಿಕ, ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ
- ಕನಸುಗಾರರಾಗಿ ಮಹತ್ಸಾಧನೆಯತ್ತ ಸಂತೋಷ ಆನಂದದ ತ್ರಪ್ತಿ ತುಂಬಿದ ಸುಂದರ ಬದುಕಿನ ಅದಮ್ಯ ಆಸೆಯ ಹಸಿವನ್ನ ಅಂತರ್ಗತವಾಗಿಸುವುದು
ಹೌದು ಇಲ್ಲಿ ಹೊಸ ಚಿOತನೆಯೇನಿಲ್ಲ! ಎಲ್ಲಿ ಯೋ ಓದಿದ್ದು ಯಾರಿಂದಲೋ ತಿಳಿದಿದ್ದು ಅನ್ನಿಸದೆ?. ಹೌದು ಯಾವುದನ್ನೂ ಒಪ್ಪಿಕೊಳ್ಳದ ಗೌರವಿಸದ ಅನುಷ್ಟಾನಗೊಳಿಸದ ಜನ ನಾವಲ್ಲವೇ?
ನಮ್ಮ ಬುಧ್ಧಿ ಅಪರಿಮಿತ! ಅನುಷ್ಠಾನ ಮಾತ್ರ ಶೂನ್ಯ! ನಮ್ಮ ರಾಜಕಾರಣಿಗಳು ಹೀಗೆ! ಮಾಧ್ಯಮಗಳು ಹೀಗೆ! ಕೊನೆಗೆ ಬಹುತೇಕರು ಹೀಗೆಯೇ!"ಹೆಸರು ಗಲಿಸಳಿಕೆಸಪ ಹಣಗಳಿಸಲಿಕೆಸಪ ದುರಿತಗಲ್ಗೆನೆಯುಂಟೆ?" ಕವಿವಾಣಿ ಅದೆಷ್ಟು ಸತ್ಯ? ಎಲ್ಲಿಯೋ ನಮಗೆ ಪ್ರಚಾರದ ಪೆಡಂಭೂತ ಅಂಟಿಕೊಂಡಿದೆ! ಎಲ್ಲವು ಪ್ರಚಾರ! ಎಲ್ಲದಕ್ಕೂ ಪ್ರಚಾರ!
ವರ್ತಮಾನ ಪತ್ರಿಕೆಗಳ ಮುಖಪುಟಗಳನ್ನೇ ನೋಡಿ... ಅಂಕಿ ಅಂಶಗಳ ಸಮೇತ ನಡೆಯುವುದು ಏನನ್ನೋ ಕೆರಳಿಸುವ ಪ್ರಚಾರ!
ವಿಜ್ಞಾನ ತಂತ್ರಜ್ಞಾನ ಕೃಷಿ ಶಿಕ್ಷಣ ಕ್ಷೇತ್ರಗಳಲ್ಲಿ ನೂತನತೆಯಾ ಪ್ರಚಾರವೆಕಿಲ್ಲ? ನಮ್ಮನ್ನು ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳ ವಾಸ್ತವಿಕ ಅಂಕಿ ಅಂಶಗಳ ಪ್ರಕಟವೇಕಿಲ್ಲ? ಅದು ಇನ್ಯಾರದೋ ಕೆಲಸ ಅಲ್ಲವೇ?ಅದಕ್ಕೆ ಸರಕಾರ ಅಥವಾ ಸಂಸ್ಥೆಗಳಿವೆ ಅಲ್ಲವೇ?
ಜನ ಬಯುಸುವುದು ಅದನ್ನೇ! ನಮ್ಮಲ್ಲಿ ಯಾವುದು ಹೆಚ್ಚು ಮಾರಾಟವಾಗುತ್ತದೋ ಅದನ್ನೇ ಮಾರಲಾಗುತ್ತಿದೇಯಲ್ಲ?
ಹೌದು ನಮ್ಮನ್ನು ನಾವು ಅರಿತರೆ ಭಯವಾಗುತ್ತದಲ್ಲವೇ? ನಮ್ಮ ಮುಖದರ್ಶನ ನಮಗೆ ನಾಚಿಕೆ ತರಿಸದೇ?
ನಾವು ಎಲ್ಲವನ್ನು ದುರ್ಬಲಗೊಳಿಸುತ್ತೇವೆ! ಸರಕಾರವನ್ನು, ಧರ್ಮವನ್ನು, ಕಾನೂನನ್ನು, ಶಿಸ್ತನ್ನು,ಸಮಾಜವನ್ನು, ಸೈನ್ಯವನ್ನು, ಕೊನೆಗೆ ನಮ್ಮನ್ನು ನಮ್ಮವರನ್ನೂ ಅಲ್ಲವೇ?
ನಮ್ಮಲ್ಲಿ ಸಂಬಂಧಗಳು ದುರ್ಬಲವಾಗುತ್ತಿದೆ ಶರೀರ ದುರ್ಬಲವಾಗುತ್ತಿದೆ ಕೊನೆಗೆ ಮನಸ್ಸು ಕೂಡ ಇಂತಹ ಬಲು ದುರ್ಗಮವಾದ ಅನೇಕ ವಿಧವಾದ ಅಡ್ಡ ಗೋಡೆಯನ್ನು ಕಂಡು ಭೀತವಾಗಿ ದುರ್ಬಲವಾಗದಿದ್ದೀತೆ?
ನಮಗೆ ಮಾರ್ಗ ಮುಖ್ಯವಲ್ಲ! ಪಡೆಯುವ ಲಾಭ ಮುಖ್ಯ!
ಈ ನನ್ನ ಕಿರು ಲೇಖನದಲ್ಲಿ ಋಣತ್ಮಕತೆ ಎಷ್ಟು? ನಿರರ್ಗಳವಾಗಿ ಋಣಮುಖ ಭಾವನೆ ಅನಿಯಂತ್ರಿತವಾಗಿ ಸ್ಪುಟವಾಗಿ ಹೇಗೆ ಹೊಮ್ಮಿದೆ ನೋಡಿ?ಅಷ್ಟು ಹಾಸುಹೊಕ್ಕಾಗಿದೆ ವಿತಂಡವಾದ!
ಇದು ಆತ್ಮ ವಿಮರ್ಶೆಯಲ್ಲ! ಈ ವ್ಯಕ್ತಿ ಎಲ್ಲರಲ್ಲಿದ್ದಾನೆ! ಹಾಗಾಗಿ ಒಟ್ಟಾರೆ ಭಾರತೀಯರೇ ಹೀಗೆ!
ಒಂದು ಚಿಕ್ಕ ಮಗು ಕೂಡ ಸಂಶೋಧನಾತ್ಮಕ ಪ್ರಭಂಧ ಮಂಡಿಸುವಷ್ಟು ಸಮಸ್ಯೆಗಳು ನಮ್ಮಲ್ಲಿವೆ!
ಹಾಗಿದ್ದರೆ ನಾವು ನಿಷ್ಪ್ರಯೋಜಕರೆ? ಖಂಡಿತ ಅಲ್ಲ
ನಾವು ಭಾವುಕರು! ಭಾವೋದ್ವೇಗಕ್ಕ ಸುಲಭಡ ತುತ್ತು ನಾವು! ನಮ್ಮ ಭಾವನೆಯೇ ನಮ್ಮ ಸುತ್ತ ಬೃಹತ್ ಪ್ರತಿಭಂಧಕವಾಗಿ ನಮ್ಮೆಲ್ಲ ಸಮಸ್ಯೆಗಳ ಮೂಲ.
ಅಮೇರಿಕಾದಲ್ಲಿ ಸ್ವಾವಲಂಬನೆ ಒಂದು ಆಯ್ಕೆಯಲ್ಲ! ಅದು ಶಾಸನ! ಜೀವ ವಿಮೆ ಕೂಡ ಒಂದು ಶಾಸನ! ಆರೋಗ್ಯ ಮತ್ತು ಶಿಕ್ಷಣ ಕೂಡ ! ವ್ಯವಸ್ಥೆಯೇ ಜನರನ್ನು ಕರ್ಮ ಮಾರ್ಗಿಗಳನ್ನಾಗಿ ಮಾಡಿದೆ!
ನಮ್ಮಲ್ಲೂ ಮೂಲಭೂತ ಹಕ್ಕುಗಳ ಕಲ್ಪನೆ ಇದೆ. ನಮ್ಮಲ್ಲೂ ಶಾಸನ ಇದೆ. ಸ್ವಲ್ಪ ಜಾಸ್ತಿಯೇ ಇರಬೇಕು! ಜನ ಪಾಲಿಸದಷ್ಟು... ಸರ್ಕಾರ ನಿಯಂತ್ರಿಸದಸ್ತು ಅಥವಾ ನಿರಾಸಕ್ತಿ ಬರುವಷ್ಟು... ಹಣ ಇದ್ದರೇ ಎಲ್ಲವು. ನಮ್ಮ ವ್ಯವಸ್ತೆ ಶ್ರೀಮಂತರಿಗಾಗಿ... ದರಿದ್ರರಿಗೆಕೆ ವ್ಯವಸ್ತೆ? ಅದು ಅವರ ಕರ್ಮ !
ನಮ್ಮ ಇಚ್ಚಾಶಕ್ತಿ ಇರುವುದು ಹಕ್ಕುಗಳ ಅನುಸ್ತಾನದಲ್ಲಲ್ಲ... ಹಕ್ಕುಗಳನ್ನು ಕಸಿಯುವುದರಲ್ಲಿ...
ಹಾಗಾಗಿಯೇ ನಾವು ಅಲ್ಪ ಪ್ರಾಪಂಚಿಕ ವಸ್ತುಗಳಿದ್ದರೂ ಅತ್ಯಾನಂದ ಭರಿತರು! ಇಸ್ಟೆಲ್ಲಾ ಸಮಸ್ಯೆಯಿದ್ದರೂ ಪ್ರಪಂಚದಲ್ಲಿ ಭಾರತೀಯರೇ ಬಹು ಸಂತೋಷಿಗಳು!ನಿತ್ಯ ಆತ್ಯಂತಿಕ ಸಂತೋಷ ಅನುಭವಿಸುವ ಮದನ ಸಂತಾನರು!
ಇಂದು ಅಮೆರಿಕ ಸಾಮಾಜಿಕ ಅಸ್ಥಿರತೆಯಿಂದ ತೊಳಲಾಡುತ್ತಿದೆ! ವಿತ್ತ ಸ್ವಾತಂತ್ರ್ಯ - ಸಂಭಂಧಗಳಲ್ಲಿ ಬಿರುಕು ಮೂಡಿಸುತ್ತಿದೆ! ದಣಿದ ಶರೀರ ಸಹಭಾಗಿಯ ಅವಜ್ಞೆಗೆ ಅನ್ನವಾಗಿದೆ!ಮಾತೃತ್ವ - ಪಿತೃತ್ವ ಅರ್ಥಕಳೆದುಕೊಂಡು ಎಲ್ಲಿಯೂ ಪಾವಿತ್ರ್ಯದ ಪರಿಕಲ್ಪನೆ ನಶಿಸಿಹೋಗಿದೆ!
ಇಲ್ಲಿಯ ವೈಭವದ ಸುಲಭ ಜೀವನದ ಮಹದಾಸೆಯಿಂದ ವಲಸಿಗರಾಗಿ ಬಂದ ಭಾರತೀಯರು ಅತ್ತ ಮರಳಲಾರದೆ ಇತ್ತ ಇರಲು ಆಗದೆ ಸಾಕ್ಷಾತ್ ತ್ರಿಶಂಕು ಸ್ವರ್ಗದ ವಿಶಿಸ್ತ ಅನುಭವದಲ್ಲಿ ಮೀಯುತ್ತಿದ್ದಾರೆ!ಸತ್ಯದ ಅರಿವಾದರೂ ತಾನು ಮಾಡಿದ್ದು ಸರಿ ಅನ್ನುವ ಬಿಂಕದ ಮಾತು ಮಾತ್ರ ಇನ್ನು ಜೀವಂತ! ಇನ್ನು ಹೆಚ್ಚು ವಲಸಿಗರನ್ನು ಕರೆದು ತಂದು ಬಹುಸಂಖ್ಯಾತರಾಗಿ ತನ್ನ ಸ್ವಾರ್ಥ ಸಾಧಿಸುವ ಹುನ್ನಾರ ಬೇರೆ!
ಹೌದು ಎಲ್ಲವು ಒಂದು ಅನುಭವ! ನಾನು ಬಣ್ಣಿಸಿದ ಸಮಕಾಲೀನ ಭಾರತವು ಒಂದು ಅನುಭವ ಆದರೆ ಅನುಭವಗಳು ಸ್ವಲ್ಪ ಬೇರೆ! ಅಷ್ಟೇ!
ಅದಕ್ಕೆ ಹೇಳಿದ್ದು ನಾವು ಬಯಸುವ ಬದಲಾವಣೆ ನಾವಾಗಲು ಸಿಧ್ಧರಿಲ್ಲ ನಮ್ಮ ಮನೆಯನ್ನು ಸ್ವಚ್ಚಗೊಳಿಸಲು ನಾವು ಸಿಧ್ಧರಿಲ್ಲ!
ಎಲ್ಲಿ ಸುಲಭವೋ ಅಲ್ಲಿ ನಾವು!
ಹಾಗಾಗಿಯೇ ನಾವು ಇನ್ಫೋಸಿಸ್ ವಿಪ್ರೋ ಮತ್ತು TCS ಗಳಲ್ಲೇ ತೃಪ್ತಿ. ಸೇವೆಯೇ ಪರಮೋಧರ್ಮ! ಸೇವೆಯಿಂದ ಸುಲಭ ಗಳಿಕೆ! SAVE ಇಂದ ಸುಲಭ ಜೀವನ ನಮ್ಮ ಮಂತ್ರ!
ಹಾಗಾಗಿ ಕೊಳೆತು ನಾರುವಷ್ಟು ಹಣ ನಮಗೆ ಬೇಕು! ಇನ್ನು ಬೇಕು ಮತ್ತು ಬೇಕು!
ಯಾಕೆಂದರೆ ನಾನು ಮದುವೆಯಾಗಬೇಕು ಸುಂದರ ಕನ್ಯೆ ನನ್ನವಳಾಗಬೇಕಾದರೆ! ನಾನು ಗಳಿಸಬೇಕು ಉಳಿಸಬೇಕು! ಹಾಗಾಗಿ ನಾನು ತುಳಿದ ದಾರಿ ಹಣ ತರುವನ್ತಿರಬೇಕು
ನಾನು ಪ್ರೀತಿಸುವ ವಸ್ತು ನನ್ನದಾಗಬೇಕು... ಇಂತಹ ಮನೋಧರ್ಮ ನಮ್ಮದು.
ಸಾಂಘಿಕವಾಗಿ ನಾವು ಇಂತಹ ಭಾವನೆಗಳನ್ನು ಉಳಿಸುತ್ತೇವೆ ಬೆಳೆಸುತ್ತೇವೆ ಒಂದು ರೀತಿಯಲ್ಲಿ ನಾವು ಭಯೋತ್ಪಾದಕರೆ! ಭಯೋತ್ಪಾದಕರ ಗುರಿಯು ದೇಶದ ಉತ್ಪನ್ನತೆಯನ್ನು ಕುಂದಿಸುವುದು ನಾವು ಮಾಡುತ್ತಿರುವುದು ಅದನ್ನೇ! ನಮ್ಮ ಭಯೋತ್ಪಾದನಾ ಮಾರ್ಗ ಮಾತ್ರ ಬೇರೆ!
ನನ್ನ ಉದ್ದೇಶ ನಮ್ಮ ವೈಫಲ್ಯಕ್ಕೆ ಕಾರಣ ಎತ್ತಿತೊರಿಸುವುದು ನಮ್ಮ "blind spot " ಅಥವಾ "ಕುರುಡುತನದ" ಅರಿವು ಮೂಡಿಸುವುದು! ನಮಗೆ ಬೇಕಾಗಿರುವುದು ದೃತರಾಷ್ಟ್ರ ಗಾಂಧಾರಿಗಳಲ್ಲ!ಚೈತನ್ಯವನ್ನು ಸಂಸ್ಫುರಿಸಿ ಸಮರೋತ್ಸಾಹ ತುಂಬುವ ಗೀತಾಚಾರ್ಯರು!
ವಿಷಾದ ಯೋಗದಿಂದ ಭಗವದ್ಗೀತೆ ಹುಟ್ಟಿತು! ನನ್ನ ಅಧುನಿಕ ವಿಷಾದ ಮುಂದಿನ ಸಾಂಖ್ಯ ಯೋಗವನ್ನು ಸೃಷ್ಟಿಸಲಿ. ಕರ್ಮ, ಜ್ಞಾನ ಯೋಗದಿಂದ ಹಿಡಿದು ಮೋಕ್ಷ ಸನ್ಯಾಸ ಯೋಗದವರೆಗೆ ನಮ್ಮನ್ನು ಸುಲಲಿತವಾಗಿ ಕೊಂಡೊಯ್ಯುವ ನೌಕೆ ನಮಗೆ ಬೇಕಲ್ಲವೇ?
ನನ್ನ ಮುಂದಿನ ಲೇಖನ ಅಂತಹ ಒಂದು ಪ್ರಯತ್ನಕ್ಕೆ ನಾಂದಿ ಹಾಡಲಿದೆ! ನಿರೀಕ್ಷಿಸಿ......
1 comment:
ತುಂಬಾ ಉತ್ತಮ ಬರವಣಿಗೆ ನಿನ್ನದು. ವಿಷಯ ಯಾವುದೇ ಇರಲಿ, ನಿನ್ನ ಸಮಗ್ರ, ವಸ್ತುನಿಷ್ಟ ಮಂಡನೆ ಮತ್ತು ವಿಮರ್ಶೆ ನನ್ನನ್ನು ಯಾವಾಗಲೂ ಆಕರ್ಷಿಸುತ್ತದೆ. ನೀನು ಬ್ಲಾಗ್ ಲೋಕಕ್ಕಿಳಿದದ್ದು ನನಗೆ ಖುಷಿ ತಂದಿದೆ.. ಹೀಗೇ ಯಾವಾಗಲೂ ಚಿಂತನಾತ್ಮಕ ಲೇಖನಗಳು 'ಸುಪ್ತ ಸಂವೇದನೆಗೆ' ಹರಿದು ಬರುತ್ತಿರಲಿ.
Post a Comment