ಭಾರತ ಸಂಸ್ಕೃತಿಯ ಪುನರುತ್ಥಾನ
ಮಾರ್ಚ್ ೧೯ ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಕೆತ್ತಿಡಬೇಕಾದ ಸುದಿನ.
೧. ಗೋಹತ್ಯ ನಿಷೇಧ ಮಸೂದೆ ಅಂಗಿಕಾರ
೨. ಸಂಸ್ಕೃತ ವಿಶ್ವವಿದ್ಯಾಲಯದ ಸ್ಥಾಪನೆ
೩. ವಿವಾಹಿತ ಮಹಿಳೆಗೆ ಆಸ್ತಿಯಲ್ಲಿ ಸಮಪಾಲು - ಕೋರ್ಟ್ ತೀರ್ಮಾನ
ಕಾಕತಾಳೀಯ ಅನ್ನುವಂತೆ ಈ ಮೂರರ ಮೂಲಮಂತ್ರ ಒಂದೇ. ಹಿಂದೂ ಸಂಸ್ಕೃತಿಯ ಪ್ರತಿಷ್ಥಾಪನೆ .
ಭಾರತೀಯತೆ ಸಂಸ್ಕೃತಿ ಪುನರ್ ಸ್ಥಾಪನೆಯಲ್ಲಿ ಗೋಹತ್ಯಾ ನಿಷೇಧ ಬೀಜಮಂತ್ರ .
ನಾವು ಯಾವಕಾರಣಕ್ಕೆ ವಿಶ್ವದಲ್ಲಿ ಅಗ್ರಪಟ್ಟ ಪಡೆದಿದ್ದವೋ ಯಾವುದು ನಮ್ಮ ಸಂಸ್ಕೃತಿಯ ಜೀವಾಳವಾಗಿತ್ತೋ ಯಾವ ಭಾಷೆಯಲ್ಲಿ ನಮ್ಮ ಮಹಾಕಾವ್ಯಗಳ ಉಗಮವಾಯಿತೋ ಯಾವ ಭಾಷೆ ನಮ್ಮ ಬೌಧ್ಧಿಕ ಗರಿಮೆಗೆ ಸಾಕ್ಷಿಯಾಗಿ ನಿಂತು ನಮ್ಮಲ್ಲಿ ದಿವ್ಯ ಚೇತನವನ್ನ ಪ್ರೆರೆಪಿಸುತ್ತಿತ್ತೋ ಅಂತಹ ಸರಳ ಸುಂದರ ಮಧುರ ಗೀರ್ವಾಣಭಾರತಿಯಾದ ಸಂಸ್ಕೃತಕ್ಕೆ ನಮ್ಮಲ್ಲೇ ವಿಶ್ವ ವಿದ್ಯಾಲಯ!!
ಇಂತಹ ದಿಟ್ಟ ಹಾಗು ಯೋಗ್ಯ ನಿರ್ಧಾರ ಕೈಗೊಂಡ ಸರಕಾರಕ್ಕೆ ನತಮಸ್ತಕನಾಗಿದ್ದೇನೆ. ಕೇವಲ ಲೌಕಿಕ ಪ್ರಾಪಂಚಿಕ ಸುಖದ ಅನ್ವೇಷಣೆಯಲ್ಲಿ ಸದಾ ತುಂಬಿರುವವರ ನಡುವೆಯೂ ಸಮಕಾಲೀನ ಆಳುವವರಿಂದ ನಿರೀಕ್ಷೆಗೂ ಮೀರಿದ ಸಾಧನೆ ಇದು.
ಸಂಸ್ಕೃತದ ಅಧ್ಯಯನ ಸಂಶೋಧನೆಗೆ ಪೂರಕ ವಾತಾವರಣ ಕಲ್ಪಿಸಿದ್ದರಿಂದ ಅಧುನಿಕ ಹಾಗು ಆಧ್ಯಾತ್ಮಿಕತೆಯ ಸಮ್ಮಿಳಿತ ವಿಕಸನ ಇದರಿಂದ ಸಾಧ್ಯ. ಸಂಸ್ಕೃತಕ್ಕೆ ಪರಕೀಯರ ಪೋಷಣೆ ಬೇಕಿಲ್ಲ..ಸ್ವಂತ ಶಕ್ತಿಯಿಂದ ಪುಟಿದೆದ್ದು ಆತ್ಮ್ಮಭಿಮಾನದ ಕಿಡಿಯನ್ನು ಹೊತ್ತಿಸಿ ಜಗತ್ತನ್ನು ಬೆಳಗುವ ಸತ್ವ ವಾಗ್ದೇವಿಯ ವಾಣಿಗಿದೆ.
"ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಹ " ಎಂದು ಉದ್ಘೋಷಿಸಿದ ಮನುಧರ್ಮ ಶಾಸ್ತ್ರ ಇಂದಿಗೂ ಎಷ್ಟು ಪ್ರಸ್ತುತ ಎಂದು ನ್ಯಾಯಾಲಯ ತೀರ್ಪಿನ ಮುದ್ರೆಯೋತ್ತಿದೆ. ಅದಕ್ಕಿಂತ ಮುಖ್ಯವಾಗಿ ನನ್ನ ಗಮನ ಸೆಳೆದದ್ದು ನ್ಯಾಯಾಲಯದ ಟಿಪ್ಪಣಿ.
"ಪುತ್ರ ಸತಿ ಬರುವ ವರೆಗಾದರೆ ಪುತ್ರಿ ಆಜನ್ಮ ಪರ್ಯಂತ" !
ಹೌದು ನಮ್ಮ ಸಮಾಜ ಎಂತಹ ಪ್ರತಿಗಾಮಿ ಶಕ್ತಿಯಿದ್ದರೂ ಪ್ರತಿಕೂಲತೆಯಿದ್ದರು ತನ್ನ ತನವನ್ನ ಅರಿತು ಮೇಲೇಳುವ ಶಕ್ತಿಯನ್ನ ಹೊಂದಿದೆ ಅನ್ನುವುದಕ್ಕೆ ಜ್ವಲಂತ ಸಾಕ್ಷಿ.
ವಿಭಿನ್ನವಾಗಿ ಯೋಚಿಸುವವರನ್ನು ಹಂಗಿಸುವ ಆಧುನಿಕರ ನಡುವೆ "ಹೊಸತೆಲ್ಲ ಅಮೃತ ಹಳೆಯದೆಲ್ಲ ವಿಷ " ಎನ್ನುವರ ನಡುವೆ
ಇದು ಅಲ್ಪ ಸಾಧನೆಯಲ್ಲ.
ಇಂದಿನ ಒಂದು ದಿನ ನನ್ನನ್ನು ನಮ್ಮವರ ಬಗೆಗೆ ಅಭಿಮಾನ ಪಡುವಂತೆ ಮಾಡಿದೆ. ನಿಸ್ಸಂಶಯ..
2 comments:
ಸಕಾಲಿಕ ಬರಹ ಚನ್ನಾಗಿದೆ...
ಕೋರ್ಟ್ ತೀರ್ಮಾನ ಸದ್ಬಳಕೆಯಾದರೆ ಇ೦ದಿನ ದಿನದ ಸ೦ತೋಷ ಸಾರ್ಥಕ....!!!
ವ೦ದನೆಗಳು.
ನೀವು ಟೆ೦ಪ್ಲೇಟ್ ಬದಲಾಯಿಸಿದರೆ ನಿಮ್ಮ ಸಮಸ್ಯೆಗೆ ಪರಿಹಾರ ದೊರಕಬಹುದಾ.....ಅ೦ತ.ಕೆಲವು ಟೆ೦ಪ್ಲೇಟ್ ಗಳಲ್ಲಿ ದೋಷವಿದೆ....!
ನೋಡಿ ....
Post a Comment