Wednesday, March 31, 2010

ನಲುಗುತ್ತಿರುವ ಪಾವಿತ್ಯದ ತಳಹದಿ

ಒಂದು ಬಟ್ಟೆ ಅಂಗಡಿ ಇದ್ದರೆ ಸಾವಿರಾರು ಜನ ಬರುತ್ತಾರೆ ಹೋಗುತ್ತಾರೆ.
ಅಲ್ಲಿಯೇ ಒಂದು trial ರೂಮು ಇರುತ್ತದೆ. ಬೇರೆ ಬೇರೆ ಬ್ರಾಂಡು. ಬೇರೆ ಬೇರೆ ಅಳತೆಯ ಬಟ್ಟೆ. ಮಾಟ, ಬಣ್ಣ , ಬ್ರಾಂಡು ಇಷ್ಟ ಆದರೆ ಸಾಲದು. ಅಳತೆ ಸರಿ ಇದೆಯೇ ನೋಡಬೇಕಲ್ಲ.ಅಳತೆ ನೋಡಿದರೆ ಸಾಲದು. ನನಗೆ ಒಪ್ಪುತ್ತದೆಯೋ ನೋಡಬೇಕಲ್ಲ..ಮೊದಲ ಬಾರಿ ಧರಿಸಿದ ತಕ್ಷಣವೇ ನನಗೆ ಆಸಕ್ತಿಯೇ ಕಳೆದು ಹೋದರೆ? ಅಲ್ಲೇ ಮರಳಿಸಿ ಬರಬಹುದು. ಇಲ್ಲವಾದರೆ ಮರಳಿಸುವುದು ಒಂದು ತಲೆನೋವು. ದೊಡ್ಡ procedure .ಒಂದುವೇಳೆ ಹಣ ಕೊಟ್ಟು ಕೊಂಡಮೇಲೆ ಅದನ್ನೇ ಉಪಯೋಗಿಸುವ ಅನಿವಾರ್ಯವು ಬರಬಹುದು. ಅಂಗಿ, ಚುಡಿದಾರ, ಪ್ಯಾಂಟ್ ಎಲ್ಲವನ್ನು ಹಾಕಿ ನೋಡಿ ಕೊಂಡುಕೊಳ್ಳಬಹುದು. ಆದರೆ ನಮ್ಮಲ್ಲಿ ಒಂದು ತಿಂಗಳಾದಮೇಲೆ ಮರಳಿಸುವ ವ್ಯವಸ್ಥೆ ಇಲ್ಲ. ಯಾಕೆಂದರೆ ನಮ್ಮ ಪ್ರಾಮಾಣಿಕತೆಯಲ್ಲಿ ನಂಬಿಕೆ ಇಲ್ಲ. ಆರ್ಥಿಕವಾಗಿ ಯೋಚಿಸಿದರೆ ಸ್ವಂತ ಬಟ್ಟೆಗಿಂತ ಬಾಡಿಗೆಯದಿದ್ದರೆ ಉತ್ತಮ. ಸಂದರ್ಭಕ್ಕೆ ಉಪಯೋಗಿಸಿ ಮರಳಿಸಬಹುದು. ಅದರಿಂದ ಬರುವ ಯಾವ ಆರ್ಥಿಕ ಅಥವಾ ನಿರ್ವಹಣೆಯ ತೊಂದರೆಯೂ ಇರಲಾರದು. ಕೆಲವೊಮ್ಮೆ ಒಳ್ಳೆ ಬ್ರಾಂಡಿನ, ಸುಂದರ ಮಾಟದ, ನಯನ ಮನೋಹರ ಬಣ್ಣದ ಎಲ್ಲಕ್ಕಿಂತ ಮಿಗಿಲಾಗಿ ನಾವು ಬಯಸಿದ ಬಟ್ಟೆ ಕೈಗೆ ಎಟುಕದೆ ಇದ್ದಾಗ ಬಾಡಿಗೆಯ ಯೋಚನೆ ಒಮ್ಮೆಯಾದರು ಮನಸ್ಸಿನಲ್ಲಿ ಸುಳಿದು ಹೋಗಬಹುದೇನೋ? ಅದರೂ ಈ ವ್ಯವಸ್ಥೆ ಇಲ್ಲ.

ಹೌದು ಅಂಗಿಗೆ ಇರುವ ಮರ್ಯಾದೆ ಒಳ ಉಡುಪಿಗೆ ಇಲ್ಲವೇ ಇಲ್ಲ.
ಹಾಕಿ ನೋಡಲು, ನೋಡಿ ಮರಳಿಸಲು ಅಂಗಡಿಯವನು ಬಿಡಲಾರ.ಒಂದು ವೇಳೆ ಅಂಗಡಿಯವನು ಬಿಟ್ಟರು ನಾವೂ ಒಪ್ಪಲಾರೆವು. ಇಲ್ಲಿ ಬಣ್ಣ,ಬ್ರಾಂಡು, ಅಳತೆಗಿಂತ ಮಡಿವಂತಿಕೆ ಅಂದರೆ ಶುಚಿತ್ವ ಮುಖ್ಯ. ಒಂದುವೇಳೆ ತೊಳೆದು ಇಸ್ತ್ರಿ ಮಾಡಿ ಮರಳಿಸಿದರೂ ಅಂಗಡಿಯವ ತೆಗೆದುಕೊಳ್ಳಲಾರ. ಈಗಿನ ಹೊಸ ತಂತ್ರಜ್ಞಾನದಿಂದ ವೇಗವಾಗಿ ಎಲೆಕ್ಟ್ರೋನಿಕ್ ವಾಶ್ ಮಾಡಿದರೂ, ಗಂಗಜಲದಲ್ಲಿ ತೊಳೆದರೂ ನಾವು ಒಪ್ಪಲಾರೆವು. ಹಾಗಂತ ಉಪಯೋಗಿಸಿದ ಬಟ್ಟೆ ಮಾರಟವಾಗುವುದಿಲ್ಲವೇ ? ಆಗುತ್ತದೆ. ಆದರೆ ಅದು ಬೇರೆಯೇ ಮಾರುಕಟ್ಟೆ. ಇಲ್ಲಿಯಂತೆ ಅದು ಸರ್ವ ಮಾನ್ಯವಲ್ಲ. ಒಂದುವೇಳೆ ಲೋಪದೊಶಗಲಿದ್ದರೆ ನ್ಯಾಯಸಿಗುವ ಭರವಸೆ ಅಲ್ಲಿ ಇಲ್ಲ. ಉಪಯೋಗಿಸಿದ ವಸ್ತುಗಳೇ ಹಾಗೆ ಅಲ್ಲವೇ? ಯಾರು ಗ್ಯಾರಂಟೀ ಕೊಡುತ್ತಾರೆ? ಯಾವ ಗ್ರಾಹಕರ ಕಾನೂನು ಕೂಡ ಬೆಂಬಲಕ್ಕೆ ನಿಲ್ಲಲಾರದು. ಅಥವಾ ಕಾನುನೆ ಅಸಮರ್ಪಕ ಎನ್ನಬಹುದು. ಒಂದುವೇಳೆ ಕಾನೂನು ಸರಿಪಡಿಸಿದರು, ಹೊಸ ವಸ್ತುವಿಗಿರುವ ಪರಿಶುಧ್ಧತೆ ಬರಲಾರದು. ಅಥವಾ ಹೊಸ ಬಟ್ಟೆಯಮೇಲೆ ಇರುವ ಪ್ರೀತಿ ಬರಲಾರದು. ಒಂದುವೇಳೆ ಅನಿವಾರ್ಯತೆಯಿಂದ ತೆಗೆದುಕೊಂಡರು ಅದು ಯಾರೋ ಉಪಯೋಗಿಸಿದ್ದು ಅನ್ನುವ ಕೀಳರಿಮೆ ಕಾಡುತ್ತಲೇ ಇದ್ದೀತು.

ಅದೇ ಅಮೆರಿಕ ದೇಶದಲ್ಲಿ ನಾನಿನ್ನೂ ಈ "Trial " ಅನ್ನೋ ಕಾನ್ಸೆಪ್ಟ್ ನೋಡಿಲ್ಲ. ಇಸ್ಟವಾಗದಿದ್ದರೆ ತಿಂಗಳ ಒಳಗಾಗಿ ಬದಲಿಸುವ ವ್ಯವಸ್ಥೆ ಇದೆ. ಹಾಗಂತ ಬದಲಿಸಲಿಕ್ಕೆಂದೇ ಕೊಳ್ಳುವ ಜನ ಇಲ್ಲಿ ಇಲ್ಲವೇ ಇಲ್ಲ. ಬದಲಿಸುವಾಗ ಉಪಯೋಗಿಸಿದ್ದು ಅನ್ನುವುದು ಇಲ್ಲಿ ವಿದಿತವೆ. ಉಪಯೋಗಿಸಿದ್ದೋ ಅಲ್ಲವೋ ಎಂದು ಯಾರು ತಲೆ ಕೆಡಿಸಿಕೊಳ್ಳರು . ಯಾಕೆಂದರೆ ಅದು ಮೂಲ ರೂಪವನ್ನು ಕಳೆದು ಕೊಂಡಿರದು. ಅದಕ್ಕಿನ್ನೂ ಉಪಯುಕ್ತತೆ ಇದ್ದರೆ ಆಯಿತು ಅಸ್ಟೇ. ತೀರ ಹಳೆಯದಾದ ವಸ್ತುಗಳನ್ನು ಮಾತ್ರ ಕಡಿಮೆ ದರದಲ್ಲಿ ಮಾರುವ ವ್ಯವಸ್ತೆ ಇಲ್ಲಿಯೂ ಇದೆ. ಇಲ್ಲಿ ಭಾವನಾತ್ಮಕತೆಗಿಂತ ಉಪಯುಕ್ತತೆ ಮುಖ್ಯ. ಮತ್ತು ವಸ್ತು ತನಗೆ ಬೇಕೋ ಬೇಡವೋ ಮುಖ್ಯ. ಕೊಂಡ ವಸ್ತುವನ್ನೇ ಪ್ರೀತಿಸುತ್ತಾರೆ. ಅದು ಅವರ ಸ್ವತ್ತಾಗಿ ಇರುವ ತನಕ. ಇದನ್ನು ಅರಗಿಸಿಕೊಳ್ಳುವಸ್ತು ಪ್ರಭುಧ್ಧತೆ ಅವರಿಗಿದೆ. ಒಂದುವೇಳೆ ತೆಗೆದುಕೊಂಡ ವಸ್ತು ಮರಳಿಸಬೆಕಾದ ಸಂದರ್ಭ ಬಂದರೆ ಇಲ್ಲಿಯೂ ಜನ ಮಾನಸಿಕ ಕ್ಷೋಭೆಯನ್ನ ಕಿರಿಯನ್ನ ಅನುಭವಿಸುವುದನ್ನು ಕಂಡಿದ್ದೇನೆ. ಅಸಹಜತೆಯೇ ಹಾಗೆ ಅಲ್ಲವೇ?

ಆದರೂ ಪರಿಶುಧ್ಧತೆಯ ಕಲ್ಪನೆ ಇಲ್ಲೂ ಇದೆ. ಮೊದಲು ಹೇಳಿದ ಹಾಗೆ,ಬಹಳ ಜನರು ಮರಳಿಸಿದ ವಸ್ತುವನ್ನು ಯಾರು ಇಷ್ಟಪಟ್ಟು ಕೊಳ್ಳುವುದಿಲ್ಲ. ಯಾಕೆಂದರೆ ಆ ವಸ್ತುವಿನಲ್ಲಿ ಏನೋ ಕೊರತೆ ಇದೆ ಅನ್ನುವುದು ಎಂತಹವನಿಗೂ ತಿಳಿಯದೆ ಇರದು. ಕೊರತೆಯನ್ನೇ ಎತ್ತಿಹಿಡಿದರೆ ಗ್ರಾಹಕನ ಕೆಲಸವೂ ಆಗದು ಅಸ್ಟೇ. ಆದರು ಅದು ಪಧ್ಧತಿ. ಇಲ್ಲಿಯ ಜನ ಇಂತಹ ವ್ಯವಸ್ಥೆಯೊಂದಿಗೆ ಬದುಕಲು ಕಲಿತಿದ್ದಾರೆ ಅಷ್ಟೇ. ಹಾಗಂತ ಇಲ್ಲಿ ವೈಜ್ಞಾನಿಕತೆಯಾಗಲಿ,ಸಮಾಜ ಸುಧಾರಣೆಯಾಗಲಿ ಗುರಿಯಲ್ಲ. ತಾನಾಗಿ ಹುಟ್ಟಿಕೊಂಡ ಪಧ್ಧತಿ ಅದು. ಹೊಸ ಪಧ್ಧತಿ ಬರುವವರೆಗೆ ಇರುವ ಪಧ್ಧತಿ, ವ್ಯವಸ್ತೆ ಮುಂದುವರೆಯುತ್ತದೆ.

ಮೇಲಿನ ಉದಾಹರಣೆಯನ್ನು ವ್ಯಾವಹಾರಿಕ, ಆರ್ಥಿಕ ಮತ್ತು ಭಾವನಾತ್ಮಕ ದೃಷ್ಟಿಕೋನದಿಂದಲೇ ನೋಡಿ. ಇಲ್ಲಿ ಎಲ್ಲವು ಸಂಮಿಳಿತವಾಗಿದೆ. ಆದುದರಿಂದಲೇ ಇಲ್ಲಿ ಎಲ್ಲವು ಮುಖ್ಯವಾಗಿ ಬೇರೆ ಬೇರೆ ವ್ಯವಸ್ಥೆಗಳು ಜನ್ಮ ತಾಳಿವೆ. ಇಷ್ಟೆಲ್ಲಾ ಉದ್ದ ಕಥೆ ಹೇಳಿದ ನಾನು ನಿಮಗೆ "ಸನ್ನಿವೇಶ" ಹೇಳಲು ಮರೆತೇ. ಯಾಕೆಂದರೆ ಎರಡು ಸನ್ನಿವೇಶಗಳಲ್ಲೂ ಮನೋಭೂಮಿಕೆ ಮುಖ್ಯವಾಗುತ್ತದೆ.

ಭಾರತೀಯರು ಒಟ್ಟಾರೆ ಸಮೂಹವಾಗಿ ಹೆಚ್ಚು ಭಾವುಕರು ಅನ್ನುವ ಮೂಲ ತಳಹದಿಯಲ್ಲೇ ನಾವು ಸನ್ನಿವೇಶವನ್ನು ವಿಶ್ಲೇಶಿಸಬೇಕಾಗುತ್ತದೆ.

ಈ ಉದಾಹರಣೆ ನಮ್ಮ ಈಗಿನ ವಿವಾಹ ಪೂರ್ವ ಸಾಂಗತ್ಯ ಕ್ಕೆ ಹೋಲಿಸಿ ಮತ್ತೊಮ್ಮೆ ಓದಿ. ಸತ್ಯ ಪೊರೆ ಕಳಚಿ ನಿಮ್ಮೆದುರು ನಿಲ್ಲುತ್ತದೆ. ಆಯ್ಕೆ ಕೂಡ ಸುಲಭ.ಕೇವಲ ವಾದ-ವಿವಾದಗಳ ಗೊಂದಲಕ್ಕಿಂತ ಇದು ಉತ್ತಮ. ತಮ್ಮ ವಾದದ ಪುಷ್ತೀಕರಣಕ್ಕೆ ಮುಂದುವರೆದ ರಾಷ್ಟ್ರಗಳ ಹೋಲಿಕೆ ಮಾಡುವ ಜನಕ್ಕೆ ಇದು ಒಂದು ಸರಳ ನಿದರ್ಶನ.

ಆದರೆ ಯಾವುದೇ ಒಂದು ಕಾರಣಕ್ಕೆ ಇಲ್ಲಿ ಏನು ಬುಡಮೇಲು ಆಗದು. ಯಾಕೆಂದರೆ ಕೇವಲ ೩೦೦ ವರುಷಗಳ ಇತಿಹಾಸವಿರುವ, ಹೆಚ್ಚಾಗಿ ಒಂದುತಲೆಮಾರು ಮಾತ್ರ ಇಲ್ಲಿ ಬದುಕಿರುವ ಅದೆಷ್ಟೋ ಅಲೆಮಾರಿಗಳ ಬೀಡಾಗಿರುವ ಈ ನಾಡು ತನ್ನದೇ ಎಂದು ಹೇಳಿಕೊಳ್ಳುವ ಯಾವ ಸಂಸ್ಕೃತಿಯನ್ನು ಹುಟ್ಟಿ ಹಾಕಿಲ್ಲ.

ನಮ್ಮಲ್ಲಿಂದ ಬಂದ ಅದೆಷ್ಟೋ ಜನ ಇಲ್ಲಿಯ ಪಧ್ಧತಿಯನ್ನೇ ಅನುಸರಿಸುತ್ತಿದ್ದಾರೆ. ಯಾಕೆಂದರೆ ಅದು ಇಲ್ಲಿಯ ಮಣ್ಣಿನ ಗುಣ. ಈ ದ್ವಂದ್ವ ನಾಗರಿಕತೆ ಅದೆಷ್ಟೋ ಜನಕ್ಕೆ ವರದಾನ. ಎಲ್ಲವನ್ನು ಅನುಭವಿಸಿ ಎರಡು ದೇಶಗಳಲ್ಲೂ ಪರಿಶುಧ್ಧರೆನ್ನಿಸಿಕೊಳ್ಳುವ ಸುವರ್ಣ ಅವಕಾಶ.

ಯಾಕೋ ಬರೆಯಬಾರದು ಅಂದುಕೊಂಡಿದ್ದೆ. ಸಾಮಾಜಿಕ ವಾಸ್ತುಶಿಲ್ಪವೆ ನಲುಗಿ ಹೋಗುವ ಭೀತಿ ಕಾಡುತ್ತಿತ್ತು. ಶಯನಗೃಹ ವೆ ಮನೆ ಅಥವಾ ಮನೆಯೇ ಶಯನಗೃಹ ಅನ್ನುವ ಜನಕ್ಕೆ ಶಯನಗೃಹ ವಯಕ್ತಿಕ ಕೊಠಡಿ ಮಾತ್ರ ಎಂದು ತಿಳಿಸಬೇಕಿದೆ. ಸಾರ್ವಜನಿಕರಿಗೆ ತೆರೆದುಕೊಳ್ಳುವ ಹೊರಾಂಗಣ ಅದಲ್ಲ!

ಆದರೆ ಅಮೇರಿಕಾದಲ್ಲಿ ಸಾಂಗತ್ಯದ ವ್ಯಾಖ್ಯೆ ಹೇಗಿದೆ? ಯಾವಕಾರಣಕ್ಕೆ ಅಮೆರಿಕ ಹೀಗಾಗಿದೆ? ಜನರ ಅಂತರಾತ್ಮ ಏನನ್ನ ಬಯಿಸುತ್ತದೆ? ಆಗಲೇ ನಮಗಿಂತ ತಲೆಮಾರುಗಳಷ್ಟು ಮುಂದಿರುವ ಈ ಶ್ರೀಮಂತ ಜಗತ್ತು ನಿಜವಾಗಿಯೂ ಸಂತೋಷವಾಗಿದೆಯೇ? ಇಲ್ಲಿ ಜನ ಯಾರನ್ನು ಇಷ್ಟಪಡುತ್ತಾರೆ? ಇಲ್ಲಿಯ ಜನರ ಮನಸಿನ ಆಂತರ್ಯವನ್ನು ಹೊಕ್ಕು ಹೊರಬರುವ ಪ್ರಯತ್ನ ಮಾಡಬೇಕೆ?. ಮನಸ್ಸು ಪರಕಾಯ ಪ್ರವೇಶ ಮಾದಿ ಚಿಂತನೆಯನ್ನ ಮಥಿಸಬೇಕೆ?


"ಶೀಲ" ಅನ್ನುವ ಪದಕ್ಕೆ ಅರ್ಥವೇನು? "ಕನ್ಯೆ"ಗು "ಗ್ರಹಿಣಿಗು" ಏನು ಅಂತರ?

"ತ್ಯಾಗಶೀಲೆ" ಅನ್ನಿಸಿಕೊಂಡಿದ್ದ ನಾರಿ "ಶೀಲ-ತ್ಯಾಗ" ಮಾಡಿದಂತಾಗುವುದಿಲ್ಲವೇ?

"ಕನ್ಯಾ-ದಾನ" ಅನ್ನುವ ಶ್ರೇಷ್ಠ ಕಲ್ಪನೆ ಹೋಗಿ "ಮೈ-ದಾನ"ದ ಅಲ್ಪತೆಗೆ ಇಳಿದೀತೇ?

"ಪರಸ್ತ್ರೀ" ಎಂದು ಯಾವಾಗ ಕರೆಯಬಹುದು?

"ಪರಸ್ತ್ರೀ ಎಂದು ಹೇಗೆ ಗುರುತಿಸುವುದು?

"ಪಾವಿತ್ರ್ಯತೆ""ಪಾತಿವ್ರತ್ಯ" ಅರ್ಥಕಳೆದುಕೊಲ್ಲಲಿದೆಯೇ?

ವಿವಾಹ ಪೂರ್ವ ಸಾಂಗತ್ಯ ಹಳ್ಳಿಗಳಲ್ಲಿ ನಗರಗಳಲ್ಲಿ ಸಾಮಾನ್ಯ. ಅಲ್ಲಿ ವರ್ಗೀಕರಣ ಸಲ್ಲದು. ಇಲ್ಲಿ ವಿವಾಹ ಪೂರ್ವವೋ ವಿವಾಹದ ನಂತರವೋ ಅನ್ನುವುದಕ್ಕಿಂತ ಹೀಗೆ ವಿಂಗಡಿಸುವುದು ಮುಖ್ಯ.

ಸುರಕ್ಷಿತ ಸಾಂಗತ್ಯ

ನೈತಿಕ ಸಾಂಗತ್ಯ ಅಥವಾ ವಿವಾಹೇತರ

ಸಮ್ಮತಿ

ಆಸಕ್ತಿ

ಮಾನವೀಯ-ಮೃಗೀಯ-ಪೈಶಾಚಿಕ

ಬೌಧ್ಧಿಕ ಸಾಂಗತ್ಯ - ಭಾವನಾತ್ಮಕ ಸಾಂಗತ್ಯ.

ಇನ್ನು ಕಾನೂನಿನ ದೃಷ್ಟಿಯಲ್ಲಿ  ವಿವಾಹ ಅನ್ನುವುದು ಆಸ್ತಿ ಮತ್ತು ಅಧಿಕಾರ, ಜಾತಿ, ಪಾಲಕತ್ವ ನಿರ್ಧರಿಸಲು ಅಗತ್ಯ ಅಸ್ಟೇ. ಸ್ವತಂತ್ರತೆ, ಹಣಕಾಸಿನ ಉಳಿತಾಯದ ದೃಷ್ಟಿಯಿಂದ ವಿವಾಹ ರಹಿತವೇ ಹೆಚ್ಚು ಉತ್ತಮವಾದೀತು.
ಧಾರ್ಮಿಕ ದೃಷ್ಟಿಯಿಂದ ವಿವಾಹ ಅನ್ನುವುದು ಬಹಳ ಪ್ರಸ್ತುತ. ಧಾರ್ಮಿಕತೆಯಿಂದಲೇ ನಮ್ಮ ನಿಘಂಟುಗಳಲ್ಲಿ ಅನೇಕ ಶಬ್ದಗಳು ಸೇರಿಕೊಂಡಿವೆ. ಜನ ಮಾನಸದಲ್ಲಿ, ಜೀವನದಲ್ಲಿ ಹಾಸುಹೊಕ್ಕಾಗಿರುವ ಅದೆಷ್ಟೋ ಮೌಲ್ಯಗಳನ್ನು ಪುನರ್-ನಿರೂಪಿಸಬೇಕಾದೀತು!
ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಹೀಗೆ ಎಂದು ಹೇಳುವುದು ಕಷ್ಟ. ಅದು ಅವರವರ ಆಯ್ಕೆಗೆ ಬಿಟ್ಟ ವಿಚಾರ. ಅದರೂ ಹೆಚ್ಚು ಜನ ಯಾವುದನ್ನೂ ಒಪ್ಪುತ್ತಾರೋ ಅದೇ ಒಂದು ದಿನ ಸಂಸ್ಕೃತಿಯಗುತ್ತದೆ ಅನ್ನುವುದಕ್ಕೆ ಅಮೆರಿಕ ಒಂದು ಉದಾಹರಣೆ.

Sunday, March 28, 2010

ಯಕ್ಷಗಾನದ ಸುತ್ತ ಹಾಸ್ಯ ಪ್ರಸಂಗಗಳು..

ನಾನು ಸಣ್ಣವನಾಗಿದ್ದಾಗಅಂದ್ರೆ ಸುಮಾರು ೨೫ ವರ್ಷಗಳ ಹಿಂದಿನ ಮಾತು. ನಮ್ಮೂರು ಇನ್ನು ವಿದ್ಯತ್ , ದೂರದರ್ಶನ ಇತ್ಯಾದಿಗಳ ಹಾವಳಿಗೆ ಒಳಪಟ್ಟಿರದ ಕಾಲವದು. ಮನೋರಂಜನೆಗಾಗಿ ಊರಿನಲ್ಲಿ ಯಕ್ಷಗಾನ ತಾಳಮದ್ದಲೆ, ಊರವರೆ ಕಲಿತು ಆಡುವ ನಾಟಕಗಳು , ೫ ದಿನವು ಸಾಂಸ್ಕೃತಿಕ ಕಾರ್ಯಕ್ರಮದಿಂದ ಗಣೇಶೋತ್ಸವ, ಮಳೆಗಾಲದಲ್ಲಿ ಮಂತ್ರಾಲಯ ರಾಘವೇಂದ್ರ ಜಯಂತಿ, ಕೃಷ್ಣಾಷ್ಟಮಿಯ ಯಕ್ಷಗಾನ, ಗಂಗಾಷ್ಟಮಿಯ ೯ ದಿನಗಳ ಕವಡಿಕೆರೆ ಜಾತ್ರೆ, ಶರನವರಾತ್ರ್ಯಿಯ ೯ ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕೀರ್ತನೆಗಳು, ಅನಂತನ ಚತುರ್ದಶಿ, ಶ್ರಾವಣ ನವರಾತ್ರಿ, ಎಲ್ಲಾಪುರದ ಜಾತ್ರೆ, ಶಿವರಾತ್ರಿ,ಸಿರಸಿ ಜಾತ್ರೆ , ಯುವಜನ ಮೇಳ, ಸಂಗೀತ ಕಾರ್ಯಕ್ರಮ, ಶಾಲಾ ಕಾಲೇಜುಗಳ ವಾರ್ಷಿಕೋತ್ಸವ ಒಂದೇ ಎರಡೇ ವರ್ಷವೆಲ್ಲಾ ಎನದೊರೊಂದು ಕಾರ್ಯಕ್ರಮ ಇದ್ದೆ ಇರುತ್ತಿತ್ತು.

ಅದರಲ್ಲೂ ನಮ್ಮವರೇ ಕಲಿತು ಅದುವ ನಾಟಕ, ಯಕ್ಷಗಾನ, ತಾಳಮದ್ದಲೆ ನನಗೆ ಪಂಚಪ್ರಾಣ.
ಇಂತಹ ಕಾರ್ಯಕ್ರಮಗಳಲ್ಲಿ ಒಂದಲ್ಲ ಒಂದು ಹಾಸ್ಯ ಪ್ರಸಂಗ ನಡೆಯುತ್ತಿತ್ತು. ತಮಗಾಗಿ ಕೆಲವನ್ನು ಸಂಗ್ರಹಿಸಿದ್ದೇನೆ.
ಕೃಷ್ಣ ಸಂಧಾನದಲ್ಲಿ ಕೃಷ್ಣನ ಪಾತ್ರಧಾರಿಯ ಸಂಭಾಷಣೆ:
ಧರ್ಮರಾಯಂಗೆನಾತು ಅರ್ಜುನಂಗೆನಾತು ನನಗೇನು ಗೊತ್ತಪ್ಪ? ಕೌರವನ ಹತ್ರ  ಐದು  ಮಕ್ಕಿ ಗದ್ದೆಯನ್ನಾದರೂ ಪಾಂಡವರಿಗೆ ಕೊಡು ಎಂದು ಕೇಳಿ ಬರಲು ಬಾರಕೋಲು ಹೆಗಲಿಗೆ ಹಾಕ್ಕಂಡು ಸಾತ್ಯಕಿ ಕಟ್ಟಿದ ಗಾಡಿಯಲ್ಲಿ ಹಸ್ತಿನಾವತೀಗೆ ಹೊರಟಿದ್ದೆ. [ ಅಡಿಕೆ ತೋಟವಿಲ್ಲದ , ಕೇವಲ ಭತ್ತದಗದ್ದೆಯನ್ನು ಮಾತ್ರ ಹೊಂದಿದ್ದ ಪಾತ್ರಧಾರಿ "೫ ಮಕ್ಕಿಗದ್ದೆ" ಎಂದು ಹೇಳಿ ನಮ್ಮನ್ನೆಲ್ಲ ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದರು. ಮಕ್ಕಿ ಗದ್ದೆ -ನೀರಿಲ್ಲದ ಎತ್ತರದಲ್ಲಿರುವ ಒಣ ಭತ್ತದ ಗದ್ದೆ. ಬಾರಕೋಲು - ಗಳಿಯ ಅಂದರೆ ಎತ್ತಿನ ಜೋಡಿಯನ್ನು ಗದರಿಸಲು ಚಕ್ಕಡಿ ಗಾಡಿಯನ್ನು ಹೊಡೆಯುವವ ಬಳಸುವ ಮರದ ಹಿಡಿಕೆಯುಳ್ಳ ಚಾವಟಿಗೆ ]

ಅದೇ ಪ್ರಸಂಗದಲ್ಲಿ ಅರ್ಜುನನ ಪಾತ್ರಧಾರಿಯ ಉಪಮೆಯನ್ನು ಕೇಳಿ:

"ಹಾಲಿಗೆ ಉಪ್ಪು ಹಾಕಿದರೆ ಬದ್ದುಹೊಗುತ್ತದೆ ಹಾಗೆಯೇ ಎಣ್ಣೆ ಮತ್ತು ಸೀಗೆಕಾಯಿ ಜೊತೆಯಲ್ಲಿ ಬದುಕಲು ಸಾಧ್ಯವೇ? ಆದರಿಂದ ಕೌರವನಲ್ಲಿ ಕುಸ್ತಿ ಹೊಡೆಯುವುದೇ ಒಳ್ಳೇದು. "

ಇದೆ ಪ್ರಸಂಗದಲ್ಲಿ ಕೃಷ್ಣ ಓಡಿಹೋಗಲಿ ಎಂದು ರಚಿಸಿದ ಓದ್ದೊಳಗವನ್ನು ಉದ್ದೇಶಿಸಿ ಕೌರವ ತನ್ನ ಪರಾಕ್ರಮವನ್ನು ,ಸಭೆಯಲ್ಲಿ ವರ್ಣಿಸಿದ್ದು ಹೀಗೆ:

"ಆಸೇತು ಹಿಮಾಚಲ ಪರ್ಯಂತವಾಗಿ ವಿಜಯ ಪತಾಕೆಯನ್ನು ಹಾರಾಡಿಸಿದ್ದೇನೆ ಅಷ್ಟ ದ್ವಾರಗಳಲ್ಲಿಯು ಸಹಾ ಬಿಚ್ಚುಗಚ್ಚೆಯ ವಾಲರನ್ನು ನಿಲ್ಲಿಸಿದ್ದೇನೆ!". [ ಕಂಠ ಪಾಠ ಮಾಡಿದ್ದ ಪಾತ್ರಧಾರಿಯ ಮಾತಿನಲ್ಲಿ "ಬಿಚ್ಚುಗತ್ತಿಯಾ ಶೂರರನ್ನು " ಅನ್ನುವುದು ಈ ರೀತಿ ಅಪಭ್ರಂಶಕ್ಕೊಳಗಾಗಿತ್ತು ]

ನಮ್ಮ ಮನೆಯ ಪಕ್ಕದ ದೇವರ ಗದ್ದೆಯಲ್ಲಿ ಯಕ್ಷಗಾನ ಬಯಲಾಟವಿತ್ತು. ಸ್ತಳೀಯ ಮೆಳವೊಂದರಿಂದ ಯಕ್ಷಗಾನ. ರಾತ್ರಿ -ಬೆಳಗಾಗುವವರೆಗೆ. ಗದ್ದೆಯಲ್ಲಿ ಒಂದು ಮೂಲೆಯಲ್ಲಿ ಗೊಣಬೆಯನ್ನು ಹಾಕಲಾಗಿತ್ತು. ರಾತ್ರಿ "ಚಂದ್ರಹಾಸ" ಅನ್ನುವ ಮೊದಲ ಪ್ರಸಂಗ. "ಗದಾಯುಧ್ಧ"ಎರಡನೇ ಪ್ರಸಂಗ. ಭರ್ಜರಿಯಾಗಿ ಕುಣಿದು ಜನರನ್ನು ರಂಜಿಸಿದ ದುಷ್ಟ ಬುದ್ದಿ ಪಾತ್ರಧಾರಿ ಎರಡನೇ ಪ್ರಸಂಗದಲ್ಲಿ ಭಾಗವಹಿಸಿರಲಿಲ್ಲ.

ನಂತರ ಗದಯುಧ್ಧ. ರೋಚಕ ಸನ್ನಿವೇಶಗಳಿಂದ ಕೂಡಿದ ಗದಾಯುದ್ಧ ಚೆನ್ನಾಗೆ ಸಾಗಿತ್ತು. ಭೀಮನ ಪಾತ್ರಧಾರಿ "ಕಪಟದ ಜೂಜಿನ ಕುರುಕುಲ ಕುನ್ನಿ ಕಸುವಿನ ಜೂಜಾಡುವ ಬಾರೈ" ಎಂದು ಕೌರವನನ್ನು ಚೆನ್ನಾಗಿ ಹೀಗಳೆದು ಅದ್ಭುತ ಕುಣಿತ ಪ್ರದರ್ಶಿಸಿದ್ದ. ನಂತರ ಕೌರವನಿಂದ ಹಣೆಗೆ ಗದಾಪ್ರಹಾರದಿಂದ ಭೀಮನ ಪಾತ್ರಧಾರಿ ನೆಲಕ್ಕೆ ಮಲಗಿದ್ದ. ಕೌರವ "ನೋಡಿರಿ ಧರ್ಮಜ ಫಲುಗುನಾದಿಗಳು ರೂಢಿಯೋಳನಿಲಜ ಬಿದ್ದ ಚಂದವನು" ಎಂದು ತಮ್ಮ ವಾಕ್ವೈಭವವನ್ನು ಮೆರೆದಿದ್ದರು. ಆದರೆ ಇತ್ತ ಸುಸ್ತಾಗಿದ್ದ ಭೀಮನ ಪಾತ್ರಧಾರಿಗೆ ಚೆನ್ನಾಗಿ ನಿದ್ದೆ ಬಂದಿತ್ತು. ಏನೇ ಮಾಡಿದರು ಭೀಮ ಏಳುತ್ತಲೇ ಇರಲಿಲ್ಲ. ಗೊರಕೆ ಕೂಡ ಕೇಳಲು ಶುರುವಾಗಿತ್ತು. ಅರ್ಥ ಮುಗಿದು ಭಾಗವತರು ಮುಂದಿನ ಪದ್ಯ ಹೇಳುತ್ತಲೇ ಇದ್ದರು. ಭೀಮ ಏಳದಿರುವುದನ್ನು ಕಂಡು ಭಾಗವತರು ಮಧ್ಯದಲ್ಲಿ "ಯೋಳೋ ಭೀಮ... ನರಸಿಂಹ...." ಎಂದು ಆಶು ಪದ್ಯ ಕಟ್ಟಿ ಹಾಡಿದ್ದು ನಮಗೆಲ್ಲ ಗೊತ್ತಾಗಿ ತುಂಬಾ ನಗು ತರಿಸಿತ್ತು. [ ಪಾತ್ರಧಾರಿಯ ಹೆಸರು ನರಸಿಂಹ ಭಟ್ಟ ]

ಕೃಷ್ಣಣ ಪಾತ್ರಧಾರಿ ತನ್ನ ಕೊಳಲಿನಿಂದ ತಿವಿದ ಮೇಲೆ ಭೀಮ ಎದ್ದಿದ್ದು.

ಇದೆ ಪ್ರಸಂಗ ಮುಗಿದು ಬೆಳಿಗ್ಗೆ ಯಕ್ಷಗಾನದವರಿಗೆಲ್ಲ ದೇವಸ್ಥಾನದಲ್ಲಿ ಉಪಾಹಾರ. ವೇಷವನ್ನು ಕಳಚಿ ಮೇಳ ಎಲ್ಲ ಸಾಮಗ್ರಿಗಳನ್ನು ತುಂಬಿ ಕೊಂಡು ಹೊರಟು ಬಂದಿತ್ತು. ಸುಮಾರು ೮ ಗಂಟೆಯ ಸಮಯ. ಹೊರಗೆನಿಂತಿದ್ದ ನಮಗೆ ಗದ್ದೆಯಲ್ಲಿ ವೇಷ ಸಹಿತ ಬರುತ್ತಿರುವ "ದುಷ್ಟ ಬುಧ್ಧಿ "... ನಮಗೆಲ್ಲ ಭಯವೋ ಭಯ. ಊರಿನ ಮಧ್ಯೆ ಹಗಲಲ್ಲಿ ವೇಷ.... ವಿಷಯ ಏನಾಗಿತ್ತು ಅಂದ್ರೆ!!... ಪಾತ್ರಧಾರಿ ಗೊಣಬೆಯ ಅಟ್ಟದ ಪಕ್ಕದಲ್ಲಿ ಮಲಗಿದ್ದು ಕತ್ತಲಲ್ಲಿ ಯಾರಿಗೂ ಕಾಣಿಸಿರಲಿಲ್ಲ. ಬೆಳಕು ಹರಿಯುವ ಮೊದಲೇ ಪ್ರಸಂಗ ಮುಗಿದಿತ್ತು. ಯಾರು ಎಬ್ಬಿಸಿಯು ಇರಲಿಲ್ಲ. ವೇಷಸಹಿತ ನಿದ್ದೆ ಹೋಗಿದ್ದ. ಎದ್ದು ನೋಡಿದಾಗ ಗದ್ದೆಯೆಲ್ಲ ಬರಿದು. ಗೆಜ್ಜೆ,ಕಿರೀತ ಎಲ್ಲ ಇದ್ದ ಆತ ಬರುವುದು ಕಂಡು ನಮಗೆಲ್ಲ ಆಮೇಲೆ ನಗು ತರಿಸಿತ್ತು. ರಾತ್ರಿ ಯಕ್ಷಗಾನ ವೀಕ್ಷಣೆಗೆ ಬಂದಿದ್ದವರಲ್ಲಿ ಕೆಲವರು ಮೂತ್ರ ವಿಸರ್ಜನೆಗಾಗಿ ಗೊಣಬೆಯ ಪಕ್ಕ ಹೋಗುತ್ತಿದ್ದದ್ದು ಈ ಘಟನೆಗೆ ಇನ್ನಷ್ಟು ಒಗ್ಗರಣೆ ಹಾಕಿತ್ತು ಅಂತ ಬೇರೆ ಹೇಳಬೇಕಾಗಿಲ್ಲ....

ನಮ್ಮ ಸ್ಥಳೀಯರಲ್ಲಿ ಅನೇಕ ಮರಿ ಕಲಾವಿದರಿದ್ದರು. ಪ್ರಸಂಗದಲ್ಲಿ ತಂದೆಯನ್ನು ಸಂಬೋಧಿಸಲು "ಹೇ-ತಾತನೆ" "ಹೇ-ತಾತನೆ" ಎಂದು ಪದೇ ಪದೇ ಹೇಳಿದಾಗ ನಾವೆಲ್ಲ ಅಲ್ಲಿಯೇ ಮುಖ ಮುಖ ನೋಡಿ ಮುಸಿ ಮುಸಿ ನಕ್ಕಿದ್ದು, ಚೌತಿಯ ಋಷಿ ಪಂಚಮಿಯ ತಾಳಮದ್ದಳೆಯಲ್ಲಿ - ರಾಮ ನಿರ್ಯಾಣದಲ್ಲಿ ಕಾಲನ ಪಾತ್ರಧಾರಿ ಪದೇ ಪದೇ ಎಲೈ "ದೂರ್ವಾಸನೆ" "ದೂರವಾಸನೆ" ಎಂದು ಸಂಬೋಧಿಸುವಾಗ ಚೌತಿಯ ಪಂಚಕಜ್ಜಾಯಡ ಕಡೆ ಸಂಶಯ ಬಂದಿದ್ದಂತೂ ನೆನೆಸಿಕೊಂಡರೆ....

ಮತ್ತೊಂದು ಬಾರಿ ಕರ್ಣ ಪರ್ವ ಪ್ರಸಂಗ. ಧರ್ಮರಾಯನಿಗು ಕರ್ಣನಿಗೂ ಯುಧ್ಧ. ಸಹಜವಾಗಿ ಕರ್ಣನ ಪಾತ್ರಧಾರಿ ಹೆಚ್ಚು ಪ್ರಸಿದ್ಧ ಕಲಾವಿದರೇ ಆಗಿದ್ದರು. ಧರ್ಮರಾಜನದು ಚಿಕ್ಕ ಸಂಭಾಷಣೆ ಇದ್ದುದರಿಂದ ಮರಿ ಕಲಾವಿದರಿಗೆ ಪ್ರಾಶಸ್ತ್ಯ. ಅವರು ಮಠದ ಪುರೋಹಿತರು ಬೇರೆ. ಯುಧ್ಧದ ಸಂಭಾಷಣೆ ಹೀಗಿತ್ತು.
"ಎಲೈ ಧರ್ಮಜ... ನೀನು ಯಾಕೆ ಯುದ್ಧಕ್ಕೆ ಬಂದೆ? ಮಡಿಯನ್ನು ಉಟ್ಟು ಮಂತ್ರ ಪಠಣ  ಮಾಡು. ಇಲ್ಲವೇ ಜ್ಯೋತಿಷ್ಯ ಹೇಳು.ತಮ್ಮನಾದ ಅರ್ಜುನನನ್ನೋ ಭೀಮನನ್ನೋ ಕಳುಹಿಸು. ಯಾಕೆ ಸುಮ್ಮನೆ ಯುಧ್ಧಕ್ಕೆ ಬಂದು ಹೆಣಗಳ ರಾಶಿಯನ್ನು ಮುಟ್ಟಿ ಮೈ ಮಲಿನ ಮಾಡುತ್ತಿ?"
ತಕ್ಷಣ ಧರ್ಮರಾಜ "ಇದೋ ನಿನಗೆ ವಯುವ್ಯಾಸ್ತ್ರವನ್ನು ಬಿಟ್ಟಿದ್ದೇನೆ" ಅಂದ. ಕರ್ಣ "ಅದನ್ನು ಪರ್ವತಾಸ್ತ್ರದಿಂದ ತದೆದಿದ್ದೇನೆ"
ಇದೋ "ಆಗ್ನೆಯಸ್ತ್ರವನ್ನು ಬಿಟ್ಟಿದ್ದೇನೆ" ಕರ್ಣ "ವರುನಾಸ್ತ್ರದಿಂದ ಶಮನ ಮಾಡಿದ್ದೇನೆ"  ಧರ್ಮಜ" ಇದೋ ನೋಡು ಅಂಗವಸ್ತ್ರವನ್ನು ಬಿಟ್ಟಿದ್ದೇನೆ" ಅನ್ನಬೇಕೆ? ತಕ್ಷಣ ಕರ್ಣನ ಪಾತ್ರಧಾರಿ "ಅಂಗವಸ್ತ್ರವನ್ನು ಕೊಕ್ರಸ್ತ್ರದಿಂದ ಸಿಕ್ಕಿಸಿಹಾಕಿದ್ದೇನೆ" ಕೊನೆಗೂ ಕರ್ಣ ಸೋಲಲೇ ಇಲ್ಲ...ನೆರೆದಿದ್ದ ಜನರೆಲ್ಲಾ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು...

ಸುಧನ್ವಾರ್ಜುನ  ಪ್ರಸಂಗ.. "ಆಗಸುಧನ್ವನು ಬೇಗದಿ ರಣಕನುವಾಗುತ"...  ಮುಗಿಯುತ್ತಿದ್ದಂತೆ ಸುಧನ್ವ ತನ್ನ ತಾಯಿಯನ್ನು ಕಂಡ ಆಶೀರ್ವಾದ ಪಡೆದ ನಂತರ . [ನಾಲ್ಕುಕಾಲಿನ] ಹರಿಯನ್ನು ಕಟ್ಟಿದ ನೆಪದಿಂದ [ಎರಡು ಕಾಲಿನ] ಶ್ರೀಹರಿಯನ್ನು ಕಾಣುವ ತಂದೆಯಾದ ಹಂಸಧ್ವಜನ ಮಹತ್ವಾಕಾಂಕ್ಷೆಯಿಂದ ಮಗ ಸುಧನ್ವ ಯುದ್ಧೋತ್ಸುಕನಾಗಿ     ಮಡದಿಯನ್ನು ಕಾಣಲು ಬರುತ್ತಾನೆ. ನವಯವ್ವನೆಯು ಋತುಸ್ನಾತಳು, ಪುತ್ರಾಕಾಂಕ್ಷಿಯು   ಆಗಿರುವ ಪ್ರಭಾವತಿಯ - ಸುಧನ್ವನ ನಡುವೆ ಪ್ರಣಯ - ಪ್ರೀತಿಯ ರಸಿಕ ಸನ್ನಿವೇಶವದು.   ಪ್ರಭಾವತಿಯ ಪಾತ್ರಧಾರಿ ಗಂಡನನ್ನು ಅಂದರೆ ಸುಧನ್ವನನ್ನು  "ಹಾ-ಪ್ರಿಯ" "ಹಾ- ಪ್ರಿಯ " ಎಂದು ಸಂಬೋಧಿಸುತ್ತಿದ್ದ. ಇದು ಗ್ರಾಮೀಣ    ಜನಕ್ಕೆ  "ಹಪ್ರಿಯ" "ಹಪ್ರಿಯ" ಎಂದು ಕೇಳಿಸಿತ್ತು. ["ಹಪ್ರಿಯ" ಎಂದರೆ ಒಣ  ಎಲೆಯ  ಬಣ್ಣವನ್ನು ಹೋಲುವ ಒಂದು ಜಾತಿಯ ಹಾವು.]

Wednesday, March 24, 2010

ಅನನ್ಯ ಭಾವ



ಅನನ್ಯ  ಭಾವ

ಆವ ಜನ್ಮದಿ ಗೈದ ಪುಣ್ಯದ ಫಲದಿ

ಮಗಳಾಗಿ ನಾ ಪಡೆದೆ ನಿನ್ನನೀ ಭವದಿ

ಹರ್ಷವ ನೀ ತಂದೆ ಏನ್ನೆಯ ಮನದಿ

ಇಲ್ಲವಾಯಿತು ನನ್ನ ಭಾಗ್ಯದ ಪರಿಧಿ



ನಿತ್ಯವೂ ನೀ ಎನ್ನ ಪ್ರೇಮದ ಜಲಧಿ

ಬಾಲಭಾಷೆಯ ನಿನ್ನ ಮಾತಿನ ವಿಧದಿ

ಬಾಲಮುಕುಂದ ನಿನ್ನಪಾರ ಗುಣದಿ

ಮನೆಯಾಯ್ತು ಮಥುರೆಯ ನಂದನ ತೆರದಿ


ಅನಿವಾರ್ಯ ಬಹುದೂರ ಬದುಕು ಈ ಜಗದಿ

ಆತ್ಮಜೆಯೇ ಬಹುಬೇಗ ಮುಗಿಯಲಿ ಅವಧಿ

ಆಕಳು ಕರುವನು ಸೇರುವ ತೆರದಿ

ಓಡೋಡಿ ಬೇಗ ನಾಬರುವೆ ನಿಶ್ಚಯದಿ!!

Tuesday, March 23, 2010

ವಲಸೆಗೆ ಕಡಿವಾಣ - ಭಾರತಕ್ಕೆ ವರದಾನ?

ಅಮೆರಿಕ ನಿನ್ನೆಯಷ್ಟೇ ಅರೋಗ್ಯ ಮಸೂದೆಯನ್ನ ಅಂಗೀಕರಿಸಿದೆ. ಈಗ ವಲಸೆ ನಿಯಂತ್ರಣದ ಕುರಿತು ಪಿಸು ಮಾತು ಪ್ರಾರಂಭವಾಗಿದೆ. ಯವುದೇ ಸರಕಾರೀ ನೀತಿಯು ಕೂಡ ತಜ್ಞರ ವರದಿಯನ್ನು ಆಧರಿಸಿರುತ್ತದೆ. ೧೦ ಪ್ರತಿಶತ ನಿರೋದ್ಯೋಗಿಗಳನ್ನು ಹೊಂದಿರುವ ಅಮೆರಿಕಾದ ಆತ್ಮಸ್ಥೈರ್ಯ ಕುಸಿಯುತ್ತಿರುವುದು ಸರಕಾರವನ್ನು ಕಂಗೆಡಿಸಿದೆ.


ನಿರುದ್ಯೋಗದ ಕೂಗು ಮುಗಿಲು ಮುಟ್ಟಿದೆ. ನಿರುದ್ಯೋಗಕ್ಕೆ ಕಾರಣ ಹುಡುಕ ಹೋರಾಟ ಒಂದುಗುಂಪಿಗೆ ಸಹಜವಾಗಿ ಕಂಡದ್ದು ವಲಸಿಗರು.. ವಲಸಿಗರ ನಾಡಾಗಿ ಸುಖದ ಕನಸು ಹೊತ್ತು ಬಂದ ಅನೇಕ ದೇಶ-ಭಾಷೆ-ಜನಾಂಗಗಳನ್ನ ತನ್ನಲ್ಲಿ ಬರಮಾಡಿಕೊಂಡ ಅಮೆರಿಕ ಇಂದು ವಲಸೆಯ ಸತ್ಪರಿಣಾಮ ಮತ್ತು ದುಷ್ಪರಿಣಾಮದ ಕುರಿತು ದತ್ತಾಧಾರಿತ ಅಧ್ಯಯನ ನಡೆಸಿದೆ.


ದೇಶದ ಒಟ್ಟಾರೆ ಅರ್ಥಿಕ ಪರಿಸ್ಥಿತಿ, ಜನಾಂಗೀಯ ಅಶಾಂತತೆ, ಅತಿಯಾದ ನಾಗರೀಕತೆಯಿಂದ ಹದಗೆಡುವ ಪರಿಸರ, "ಕೊರತೆ" ಯನ್ನು ಕಂಡರಿಯದ ನಗರಗಳು ಇಂದು ಮೂಲಸೌಕರ್ಯಕ್ಕೆ ಪರಿತಪಿಸುವನ್ತಾಗಿದ್ದು, ಉದ್ಯೋಗ ಹಾನಿ, ಹಣದುಬ್ಬರ, ಔದ್ಯೋಗೀಕರಣದಿಂದ ನಾಶವಾದ ಅರಣ್ಯ ಸಂಪತ್ತು ಹೀಗೆ ವಿವಿಧ ಆಯಾಮದಲ್ಲಿ ವಿಮರ್ಶೆ ಚರ್ಚೆಗೆ ನಾಂದಿ ಹಾಡಿದೆ. ಪ್ರಪಂಚದ ಎಲ್ಲ ಆಗುಹೋಗುಗಳಲ್ಲಿ ಮೂಗು ತೋರಿಸುತ್ತಾ ತನ್ನ ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧಕರನ್ನು ನೇಮಿಸುವ ಅಮೆರಿಕ ಪೂರ್ವ ನಿಯಾಮಕ ಪ್ರವೃತ್ತಿಯನ್ನು ಹೊಂದಿದೆ. ಅದೆಂದೂ ಬೆಂಕ ಬಿದ್ದಮೇಲೆ ಬಾವಿ ತೋಡುವ ಜಡತ್ವ ತೋರದು.


ಒಂದು ವಾಕ್ಯದಲ್ಲಿ ವಿವರಿಸಬೇಕೆಂದರೆ "ಒಬಾಮ ಸರಕಾರ ಚುರುಕಾಗಿ ಕಾರ್ಯೋನ್ಮುಖವಾಗಿದೆ."


ಇದರ ಬಿಸಿ ನಮ್ಮ ಪಲಾಯನ ವಾದಿಗಳಿಗೆ ತಟ್ಟದಿರದು. ದಶಕಗಳಿಂದ ದೇಶದ ಅತ್ಯುತ್ತಮ ಪ್ರತಿಭೆಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಿ ಉಡುಗೊರೆಯಾಗಿ ನೀಡುವ ಸರಬರಜುಗಾರ ಭಾರತವಾಗಿತ್ತು. ಉತ್ತಮ ಜೀವನ ಮಟ್ಟದ ಆಕರ್ಷಣೆಗೆ ಒಳಗಾಗಿ ದೇಶವನ್ನು ತ್ಯಜಿಸಿ ಅಮೇರಿಕಾದಲ್ಲಿ ನೆಲೆಸಿರುವ ಅದೆಸ್ತೋ ಜನ ಇಲ್ಲಿನ ನಾಗರಿಕತ್ವ ಪಡೆದಿದ್ದು ಜೀವನದೊಂದಿಗೆ ಬೆರೆತು ಹೋಗಿದ್ದಾರೆ. ೧೯ನೆ ಶತಮಾನದಲ್ಲಿ ಯುರೋಪೆ ೨೦ನೆ ಶತಮಾನದಲ್ಲಿ ಏಶಿಯ ಅತ್ಯಧಿಕ ವಲಸಿಗರನ್ನು ಕಾಣಿಕೆ ನೀಡಿದೆ.


ಇದರಿಂದ ಭಾರತ ಉತ್ತಮ ಮಾನವಸಂಪನ್ಮೂಲವನ್ನು ತನ್ನಲ್ಲೇ ಉಳಿಸಿಕೊಲ್ಲಲಿದೆ. ಸೀಮಿತ ಅವಧಿಯಲ್ಲಿ ಇದು ನೋವಾಗಿ ಪರಿಣಮಿಸಿದರು ಭಾರತದ ಅಭ್ಯುಥ್ಥಾನಕ್ಕೆ ಇದು ಅಡಿಗಲ್ಲಾದೀತೇ? ತಾವು ಜೀವಿಸುವ ನಾಡಲ್ಲೇ ಸಾಧನೆಗೈಯುವ ಹೊಸ ಪ್ರವೃತ್ತಿಗೆ ಕಾರಣವಾದೀತೇ? ಜಾಗತೀಕರಣ ಚಳುವಳಿ ಸ್ತಬ್ಧವಾಗಿ ಮತ್ತೆ ಸ್ವದೇಶೀ ಚಳುವಳಿ ಶುರುವಾದೀತೇ? ಪರಕೀಯರೆಂದು ನಮ್ಮವರಲ್ಲ ಎನ್ನುವ ಕಟು ಸತ್ಯ ನಮ್ಮ ಯುವಕರಿಗೆ ತಿಳಿದೀತೇ? ನಿತ್ಯವೂ ಸಾಗರೋಲ್ಲಂಘನದ ಕನಸು ಕಾಣುವ ನಮ್ಮ ನಗರವಾಸಿಗಳ ಮನೋಭಿಲಾಷೆ ಇನ್ನಾದರೂ ಬದಲಾದೀತೆ?


ಬದಲಾವಣೆಯ ಗಾಳಿಯಂತು ಬೀಸುತ್ತಿದೆ. ಅಮೆರಿಕ ಎಂದೆಂದಿಗೂ ಕಂಡರಿಯದ ಭಯದಿಂದ ತಲ್ಲಣಗೊಂಡಿದೆ. ಕೆಲಸ ಪರಭಾರೆ ಮಾಡುವುದು ಕೂಡ ಇಲ್ಲಿ ಟೀಕೆಗೆ ಗುರಿಯಾಗಿದೆ. ತಯಾರಿಕ ಘಟಕಗಳು ಚೀನಾಕ್ಕೆ ಚಲಿಸಿದರೆ ತಂತ್ರ್ರಜ್ಞಾನ ಭಾರತದ ಕಡೆ ದಾಪುಗಾಲು ಹಾಕುತ್ತಿದೆ. ಅಮೆರಿಕ ಕೇವಲ ಲಾಭದಿಂದ ತೃಪ್ತಿ ಪದೆಯುವನ್ತಿಲ್ಲ . ಏಕೆಂದರೆ ಕೆಲಸಗಾರರು ಗಳಿಸಿದ ಹಣ ಎಲ್ಲಿ ವ್ಯಯವಗುತ್ತದೋ ಆ ಆರ್ಥಿಕತೆ ಅಭಿವ್ರುದ್ದಿಯಾಗುತ್ತದೆ ಎನ್ನುವ ಸರಳ ತತ್ವ ಒಬ್ಬ taxi ಚಾಲಕನಿಗೂ ತಿಳಿಯುತ್ತಿದೆ. ಹೀಗಾಗಿ ಬಹುರಾಷ್ಟ್ರೀಯ ಕಂಪನಿಗಳ ಲಾಭ ಗಳಿಸುವ ಲಾಲಸೆಗೆ ಸರಕಾರ ಮೂಗುದಾರ ಹಾಕುತ್ತಿದೆ. ಸ್ವದೇಶೀ ಚಳುವಳಿ ಅಮೇರಿಕಾದಲ್ಲೂ ಪ್ರಾರಂಭ. ಆದರೆ ಅದನ್ನು ಮೊದಲು ಪರಿಕಲ್ಪಿಸಿದ್ದು ಭಾರತೀಯರೇ ಅನ್ನುವುದು ಮಾತ್ರ ವಿಪರ್ಯಾಸ .

Saturday, March 20, 2010

ಭಾರತ ಸಂಸ್ಕೃತಿಯ ಪುನರುತ್ಥಾನ

ಭಾರತ ಸಂಸ್ಕೃತಿಯ ಪುನರುತ್ಥಾನ

ಮಾರ್ಚ್ ೧೯ ಕರ್ನಾಟಕದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಕೆತ್ತಿಡಬೇಕಾದ  ಸುದಿನ.
೧. ಗೋಹತ್ಯ ನಿಷೇಧ ಮಸೂದೆ ಅಂಗಿಕಾರ
೨. ಸಂಸ್ಕೃತ ವಿಶ್ವವಿದ್ಯಾಲಯದ ಸ್ಥಾಪನೆ
೩. ವಿವಾಹಿತ ಮಹಿಳೆಗೆ   ಆಸ್ತಿಯಲ್ಲಿ ಸಮಪಾಲು - ಕೋರ್ಟ್ ತೀರ್ಮಾನ 

 ಕಾಕತಾಳೀಯ ಅನ್ನುವಂತೆ ಈ  ಮೂರರ ಮೂಲಮಂತ್ರ ಒಂದೇ. ಹಿಂದೂ ಸಂಸ್ಕೃತಿಯ   ಪ್ರತಿಷ್ಥಾಪನೆ .

ಭಾರತೀಯತೆ ಸಂಸ್ಕೃತಿ ಪುನರ್ ಸ್ಥಾಪನೆಯಲ್ಲಿ ಗೋಹತ್ಯಾ  ನಿಷೇಧ ಬೀಜಮಂತ್ರ .

ನಾವು ಯಾವಕಾರಣಕ್ಕೆ ವಿಶ್ವದಲ್ಲಿ ಅಗ್ರಪಟ್ಟ ಪಡೆದಿದ್ದವೋ ಯಾವುದು ನಮ್ಮ ಸಂಸ್ಕೃತಿಯ ಜೀವಾಳವಾಗಿತ್ತೋ  ಯಾವ ಭಾಷೆಯಲ್ಲಿ ನಮ್ಮ ಮಹಾಕಾವ್ಯಗಳ ಉಗಮವಾಯಿತೋ ಯಾವ ಭಾಷೆ ನಮ್ಮ ಬೌಧ್ಧಿಕ ಗರಿಮೆಗೆ ಸಾಕ್ಷಿಯಾಗಿ ನಿಂತು ನಮ್ಮಲ್ಲಿ ದಿವ್ಯ ಚೇತನವನ್ನ ಪ್ರೆರೆಪಿಸುತ್ತಿತ್ತೋ ಅಂತಹ ಸರಳ ಸುಂದರ ಮಧುರ ಗೀರ್ವಾಣಭಾರತಿಯಾದ ಸಂಸ್ಕೃತಕ್ಕೆ   ನಮ್ಮಲ್ಲೇ ವಿಶ್ವ ವಿದ್ಯಾಲಯ!!
ಇಂತಹ ದಿಟ್ಟ ಹಾಗು ಯೋಗ್ಯ ನಿರ್ಧಾರ ಕೈಗೊಂಡ ಸರಕಾರಕ್ಕೆ ನತಮಸ್ತಕನಾಗಿದ್ದೇನೆ. ಕೇವಲ ಲೌಕಿಕ ಪ್ರಾಪಂಚಿಕ ಸುಖದ ಅನ್ವೇಷಣೆಯಲ್ಲಿ ಸದಾ ತುಂಬಿರುವವರ ನಡುವೆಯೂ  ಸಮಕಾಲೀನ ಆಳುವವರಿಂದ ನಿರೀಕ್ಷೆಗೂ ಮೀರಿದ ಸಾಧನೆ ಇದು.
ಸಂಸ್ಕೃತದ ಅಧ್ಯಯನ ಸಂಶೋಧನೆಗೆ ಪೂರಕ ವಾತಾವರಣ ಕಲ್ಪಿಸಿದ್ದರಿಂದ  ಅಧುನಿಕ ಹಾಗು ಆಧ್ಯಾತ್ಮಿಕತೆಯ ಸಮ್ಮಿಳಿತ ವಿಕಸನ ಇದರಿಂದ ಸಾಧ್ಯ. ಸಂಸ್ಕೃತಕ್ಕೆ ಪರಕೀಯರ ಪೋಷಣೆ ಬೇಕಿಲ್ಲ..ಸ್ವಂತ ಶಕ್ತಿಯಿಂದ ಪುಟಿದೆದ್ದು ಆತ್ಮ್ಮಭಿಮಾನದ ಕಿಡಿಯನ್ನು ಹೊತ್ತಿಸಿ ಜಗತ್ತನ್ನು ಬೆಳಗುವ ಸತ್ವ ವಾಗ್ದೇವಿಯ  ವಾಣಿಗಿದೆ.

"ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಹ " ಎಂದು ಉದ್ಘೋಷಿಸಿದ ಮನುಧರ್ಮ ಶಾಸ್ತ್ರ ಇಂದಿಗೂ ಎಷ್ಟು ಪ್ರಸ್ತುತ ಎಂದು ನ್ಯಾಯಾಲಯ ತೀರ್ಪಿನ ಮುದ್ರೆಯೋತ್ತಿದೆ. ಅದಕ್ಕಿಂತ ಮುಖ್ಯವಾಗಿ ನನ್ನ ಗಮನ ಸೆಳೆದದ್ದು ನ್ಯಾಯಾಲಯದ ಟಿಪ್ಪಣಿ.
"ಪುತ್ರ ಸತಿ ಬರುವ ವರೆಗಾದರೆ ಪುತ್ರಿ ಆಜನ್ಮ ಪರ್ಯಂತ" !

ಹೌದು ನಮ್ಮ ಸಮಾಜ ಎಂತಹ ಪ್ರತಿಗಾಮಿ ಶಕ್ತಿಯಿದ್ದರೂ ಪ್ರತಿಕೂಲತೆಯಿದ್ದರು ತನ್ನ ತನವನ್ನ ಅರಿತು ಮೇಲೇಳುವ ಶಕ್ತಿಯನ್ನ ಹೊಂದಿದೆ ಅನ್ನುವುದಕ್ಕೆ ಜ್ವಲಂತ ಸಾಕ್ಷಿ.

ವಿಭಿನ್ನವಾಗಿ ಯೋಚಿಸುವವರನ್ನು ಹಂಗಿಸುವ ಆಧುನಿಕರ ನಡುವೆ "ಹೊಸತೆಲ್ಲ ಅಮೃತ ಹಳೆಯದೆಲ್ಲ ವಿಷ " ಎನ್ನುವರ ನಡುವೆ
ಇದು ಅಲ್ಪ ಸಾಧನೆಯಲ್ಲ.

ಇಂದಿನ ಒಂದು ದಿನ ನನ್ನನ್ನು ನಮ್ಮವರ ಬಗೆಗೆ ಅಭಿಮಾನ ಪಡುವಂತೆ ಮಾಡಿದೆ. ನಿಸ್ಸಂಶಯ..

Friday, March 19, 2010

ಶ್ರೀ ಕೃಷ್ಣ ಸಂಧಾನ ಯಕ್ಷಗಾನ ಪದ್ಯಗಳು

ಶ್ರೀ ಕೃಷ್ಣ ಸಂಧಾನ ಯಕ್ಷಗಾನ ಪದ್ಯಗಳು

ಶೃಂಗಾರ  ಕರುಣ ಭೀಭತ್ಸ ಶಾಂತ ರೌದ್ರ ಭಕ್ತಿ ಮೊದಲಾದ ರಸೋಪೇತವಾದ ಕೃಷ್ಣ ಸಂಧಾನ ನನ್ನ ಅಚ್ಚುಮೆಹ್ಚಿನ ಪ್ರಸಂಗ.
ಮಳೆಗಾಲದ ಸುರಿಯುವ ಮಳೆಯಲ್ಲಿ ಕತ್ತಲಿನ ರಾತ್ರಿಯಲ್ಲಿ ಬೆಂಕಿಯನ್ನು ಕಾಯಿಸುತ್ತಾ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡುವ
ನನ್ನ ಅಪ್ಪನ   ಭಾಗವತಿಕೆಗೆ ನಾನು ಅರ್ಥಧಾರಿಯಾಗಿ ಅನುಭವಿಸಿದ ಮಧುರ ಕ್ಷಣಗಳು ನೆನಪಾದರೆ ಈಗಲೂ ಊರಿಗೆ ಓಡೋಣ ಎನ್ನಿಸುತ್ತದೆ. ಗದ್ದೆಯ ಮಾಳ, ಆಲೆಮನೆ, ಅಡಿಕೆ ಸುಲಿಯುವಾಗಿನ  ನಮ್ಮ ತಾಳಮದ್ದಲೆ  ಇಂದು ನೆನಪಾದರೆ ಮನಸ್ಸು ಆನಂದ ತುಂದಿಲವಾಗುತ್ತದೆ. software ಅನ್ನೋ ಶುಷ್ಕ ಬದುಕನ್ನು ತ್ಯಜಿಸಿ ಮರಳಿ ಗೂಡಿಗೆ ಸೇರುವ ಸೆಳೆತ   ಬಲವಾಗುತ್ತದೆ.
ಒಂದೊಂದು ಪದ್ಯವು ಕೂಡ ಭಕ್ತಿ-ಭಾವ  ಪೂರಿತವಾಗಿ ಸ್ವರ ಲಯ ಬಧ್ಧವಾಗಿ ರಸಿಕನ ಮನಸ್ಸಿಗೆ ರಸಗವಳದ ಪುಷ್ಕಳ ರುಚಿಯನ್ನ ನೀಡದಿರದು.

ಧರ್ಮಜನ ಶಾಂತತೆ ಸಾತ್ವಿಕತೆ, ವಿದುರನ ಭಕ್ತಿ ಭೀಮನ ಪೌರುಷ ಕೌರವನ ಛಲ ಅರ್ಜುನನ ಪರಾಕ್ರಮ ಕೃಷ್ಣನ  ವಾತ್ಸಲ್ಯ ದ್ರೌಪದಿಯ ಹತಾಶೆ,ಕರುಣೆ, ಶೃಂಗಾರ ಗುಣಗಳ ನೈಜ, ಜೀವಂತ ನಿರೂಪಣೆ ಇಲ್ಲಿದೆ.
ಪ್ರಕಾಂಡ  ಪಾಂಡಿತ್ಯ ಆಶು ವಾಕ್ಪಟುತ್ವ ಅಧ್ಬುತ ಅಭಿನಯ ಭಾವಪೂರಿತ ಪಾತ್ರ ಪೋಷಣೆ ಪ್ರಸಂಗದ ಚೌಕಟ್ಟಿನಲ್ಲಿ
ಅರ್ಥಗರಿಕೆಯನ್ನ  ನೇಯ್ದು  ನೃತ್ಯ ವೈಭವ ನಟನ ಕೌಶಲ ಮೆರೆದು ನಮ್ಮನ್ನು  ಪರವಶರನ್ನಗಿಸುವ ಬೃಹಸ್ಪತಿಗಳನೆಕರು ಈ ಕಲೆಯನ್ನು ಶ್ರೀಮಂತಗೊಳಿಸಿದ್ದಾರೆ.

ಪದ್ಯಗಳನ್ನು ಓದಿ ಆನಂದ ಪಡಿ..

ಗಜಮುಖ ನಾನಿನ್ನ ಪಾದವ ನೆನೆವೆ
ಭಜಕಗೆ ಕರುಣಿಸೋ ವರಗಳ ಪ್ರಭುವೇ
ಮೂಷಿಕ ವಾಹನ ಮೋದಕ ಹಸ್ತ
ಪಾಶಾಂಕುಶ ಧರ ಪರಮ ಪವಿತ್ರ

ದೇವ ದೇವರ ದೇವ ದೇವನಲ್ಲವೇ
ಓ ದೇವ ದೇವರ ದೇವನಲ್ಲವೇ


ಇಂದಿರೆಗೆ ತಲೆಬಾಗಿ ಪರಮಾನಂದ ಭಕ್ತಿಯೋಳಜನ ಧ್ಯಾನಿಸಿ
ವಂದಿಸುವೆ ಶಾರದೆಗೆ ಶಕ್ರಾದಿ ಅಮರರಿಂಗೆರಗಿ
ನಾಂದಿಯೋಳು ಗುರು ಕೃಪಾದ್ಯರ ಚರಕಾನತನಾಗಿ
ಮುನಿಗಳ ಸನ್ನಿಧಿಗೆರಗಿ ಪೇಳುವೆ ಈ ಕಥಾಮೃತವ



ಬಂದನು ದೇವರ ದೇವ
ಬೆಂಬಿಡದೆ ಭಕ್ತರ ಕಾಯ್ವ
ಚಂದ್ರ ಕೋಟಿಪ್ರಕಾಶ
ಚಾರುತರ ವಿಲಾಸ
ಇಂದುಧರನ ಮಿತ್ರ ಕರುಣ ಸಂಜೀವ




ದಾಯಭಾಗದೊಲೈದು ಗ್ರಾಮವಂ ತನಗೆ
ಕುರುರಾಯ ಸುವಿವೆಕದಿಂ ಕೊಡುವಂದದಲಿ
ಕೃಷ್ಣರಾಯ ಸಂಧಾನವಂ ಮಾಡಿ ಬರಬೇಕು
ನೀನೆನಲೆಂದ ಆ ಮಹಿಮನು

ನೀತಿಯೇ ಕರುಣಾಳು ನಿನಗೆ ವಿಘಾತನೆನಿಸಿದ
ದುಷ್ಟನಲಿ ಸಂಪ್ರೀತಿಯೇ
ಸಂಧಾನಕನುವಾಗುವರೆ ಪೇಳೆನಲು
ಖ್ಯಾತ ಧರ್ಮಜ ನುಡಿದ
ಅನಿಬರಪಾತಕವು ಮಗುಳವರ ಪೊಂದುವುದು
ಆತನಲಿ ಸಂಧಿಯ ಪ್ರಯತ್ನವ ಮಾಡಿ ಬಹುದೆಂದ

ಅರಸನಿಂದೆನಲಾಗ ಮಾಧವ
ಕಿರುನಗೆಯ ಕೇವಣಿಸಿ ಮಾಧವ
ಭೀಮನ ಕರೆದು ಧರ್ಮಜನಿಂದು
ಕುರುಭೂವರನ ಬಳಿಗೆ

ಅಣ್ಣನವರಿಗೆ ನೀತಿಯಾದರೆ
ನಿನ್ನಮನಕೊಪ್ಪಿದರೆ
ಭೂತಲವನ್ನು ಕೌರವನಿತ್ತರೆನಗೆನಿಂನು ದುಗುಡ?
ಎನಲು ಪಾರ್ಥಗೆ ಮಾದ್ರಿಯನುಗರು
ಅನುವರಿಸಲರುಹಿದರು ಮೂವರ ಮನವೇ
ನಿನ್ನಯ ಚಿತ್ತವೆನ್ದರ್ಜುನ ನಕುಲರು

ರಣವ ಗಂಟಿಕ್ಕುವನೆ ಮುರರಿಪು
ಸನುಮತವಿದೆನ್ದಬಲೇ
ಪೋನ್ನಂದಣವನೇರಿಯೇ ಪೊರಟಲು

ಅಮ್ಬುಜಾಕ್ಷಿಯರಗಡಣದಲಿ
ಇನ್ತಾನಂದದೊಲಾ ಸಿರಿವನ್ತೆಯು
ಬಂದು ಅನ್ದಳವಿಡಿದು ಅನಿಳಜಗೆರಗಳು
ಕಂತುವಿನರಗಿಣಿಯಂ ಕಂಡು
ಅಂತಃಕರಣದಿ ಮನ್ನಿಸುತೆಂದ ಸತಿಯೋಳು

ಕೋಮಲಾಂಗಿ ಕೇಳೆ
ಮದಗಜ ಗಾಮಿನಿ ಪಾಂಚಾಲೆ
ಕಾಮುಕ ಕುರುಭೂಕಾಂತನ ನಿಳಯಕೆ
ಸ್ವಾಮಿಯ ಸಂಧಿಗೆ ಧರ್ಮಜ ಕಳುಹುವ

ಆತನ ದುಷ್ಕ್ರುತವು
ಮಗುಳಿನ್ನಾತನ ಪೊಂದುವವು
ಆತನೋಳನುಬರವೇತಕೆ ನಮಗೆ
ಇನ್ನಾತನೋಲೈರೀತನು ಬೇಡುವ

ಪ


ಸಂಧಿಯೇ ಕಲಿ ಭೀಮ ನಿನಗಾನಂದವೇ
ಕುರುಭೂಪನೊಳು ಹಿತಬಂದುದೆ
ಧರುಮಜಗೆ ಪಾರ್ಥಗೆ ಹರಿಗೆ ಸನುಮತವೆ
ಚಂದದೊಳಗಿನ್ನೊಮ್ಮೆ ನುಡಿ ಮೊದಲೆಂದ ವಚನವ ಶಿವ ಶಿವಾ
ನೀವಿಂದು ಕೈಗೊಂಡಿರೆ ಯತಿತ್ಯವನಿಂದು ಹೊರಳಿದಳು

ಪ

ಏನಯ್ಯ ಪವನಜನೆ
ಕೌರವನಿಗೆ ನಾನೇ ದುರ್ಜನಲಾದೆನೆ
ಹೀನ ವೃತ್ತಿಯ ತಾಳ್ದಿರಿ
ನೀವೈವರೆನ್ನ ಪ್ರಾಣಕೆ ಬಗೆಯಾದಿರಿ
ಪ
ಮಂದಲೆಯ ಪಿಡಿದು
ನಿನ್ನಯಾ ಕಣ್ಣ ಮುಂದೆ ಸೀರೆಯ ಪೆಳೆದು
ಬಂಧಿಸಿರುವ ಮುಡಿಯ ಸುರಿದುದೋ ಕಂಗಳಿಂದ
ನೋಡಿವಿರಕ್ತಿಯೂ

ಪ


ಲಲನೆ ತಾನತಿ ಮರುಗುತಿರಲು
ಖಲಿ ಮರುತ್ಸುತ ನುಡಿದ ತನ್ನೆದಿರು ಅವನದಿರು
ತಾ ಮಾಡ್ವುದೇನು ಅರಿ ಭಟರ ಮುಂದಿನಲಿ
ತಿಳುಹು ಯಮಜಗೆ ಮರಳಿ ಕೃಷ್ಣಗೆ
ಒಲಿಸಿ ನಕುಲಾದಿಗಳನುರೆ
ರೋಷವನ್ನೇಳಿಸೆನ್ದಳು

ಪ


ಮರುಗುತ ಭೀಮನ ಕೊರಳಪ್ಪಿಯೇ
ನಯನದಾ ಶರದೊಲಂಗವ ತೊಳೆದು
ವರಭಾಷೆಗಳ ತೀರ್ಚದಿರೆ ಪ್ರಾಣ ಬಿಡುವೆ
ಎಂಬರಸಿಗೆ ಮಗುಲೆಂದನು


ವನಿತೆ ಕೇಳ ಜನನಿಯ
ಬಸಿರಿಂದಿಲಿದಾ ಮೇಲೆ
ದಿನವೊಂದಾದರು ಸುಖವ
ಕನಸಿಲಿ ಕಂಡವ ನಾನಲ್ಲ

ಕಷ್ಟವ ಉಳುತಾ ನೂಕಿದೆ ಜನ್ಮವ
ಭಾರವಾಯಿತು ಗದೆ
ಧೈರ್ಯ ಹಿಂಗೊಲಿಸಿತು
ನಾರಿ ನೀನೇನೆ ಅಂದರು

ಕೌರವ ಣ ನೀಕೊಲಲಾರೆ
ಈ ಪೌರುಷವೆಕೆನಲೆನ್ದಳು
ಅಹಹ ಪವನಜ ಗಂಡುಗಲಿ
ನೀ ಅಹುದೆಲೈ
ಖಳ ಕುರುನ್ರುಪಾಲನ
ಸಹಜ ಏನ್ನೆಯ ತುರುಬನೆಲೆಯುತ್ತಿಹುದ ನೋಡಿ



ನನಗೆ ಬಲ ಸಹದೇವ ಪಾಪಿಯೋಲ್
ತನಯರೈವರು ಖಲಿ ಘತೊತ್ಚಚ
ಜನಕ ದ್ರುಪದಂದಿಹುದು
ಮೂರಕ್ಸ್ಹೋಹಿನಿ ಬಲವು

ವನಿತೆಯ ಕಟೋರ ನುಡಿಯಂ ಕೇಲ್ದು ಪವನಜಂ
ಖಳನೋಗ್ರವೆತ್ತು ಗದೆಯಂ ತಿರುಹುತೆಂದ





ಈಶನ ಮೊರೆಹೊಗಲಿನ್ನು

ಬಿಡೆ ನಾಸಮರಡಿ ರಿಪುಗಳನು

ನಾಶವ ಮಾಡುವೆನಯ್ಯ

ವರ ಭಾಷೆಯ ಸಲಿಸುವೆ ಮತಿಯ



ದಾನವಾಂತಕ ಕೇಳು ಏನೆಂಬೆ ಬಗೆಗೆ

ಮಾನಿನಿ ಅನಿಲಜ ಆಡುವ ನುಡಿಗೆ

ಆವ ಜನ್ಮದಿ ಗೈದ ಪಾಪದ ಪಳದಿ

ಕುವಲಯವ ಬಿಟ್ಟು ಅಲೆದೆವೋ ವನದಿ



ದೊರೆತನ ಸುದಲಿನ್ನು

ಬಡತನ ಯೆನಗಕ್ಕು

ಕುರುರಾಯ ಸುಖಿಯೆಂದು ಕೇಳ್ದರೆ ಸಾಕು



ವರ ಸಂಧಿ ಲೇಸು

ತೋರ್ಪುದೋ ಎನ್ನ ಮನದಿ

ವಿರಚಿಸಲರ್ಜುನ ಭೀಮಾದಿಗಳ ತೆರದಿ



ಫಲುಗುಣನುಸುರಿದ

ಯಮಸುತ ವಿಪಿನದಿ ಬಳಲಿದ ದುಗುಡವನು

ಖಳನುತ ರಿಪುಗಳ ಶರದಲಿ ತರಿಯದೆ

ಅಳುಕುವುದ್ ಉಂಟೆನಯ್?



ಧನುಜಾರಿ ದ್ರೌಪದಿಯಂ ಸತೈಸಳನ್ನಿದಂ

ಮಣಿಮಯ ವರೂಥವಂ ದಾರುಕಂ ತರಲು

ದುರ್ಜನೆರೆಡೆಗೆ ಪೋಪುದೆಂದು

ಅಗಣಿತಾಯುಧವ ಸಾತ್ಯಕಿ ತುಂಬಿದ ರಥದೊಳು





ನೋಡಿದಂ ಕಣ್ ದಣಿಯೇ

ಚಿನುಮಯನ ಮೂರ್ತಿಯಂ

ಮಾಡಿದಂ ನಿಯತ ಸಂಸ್ತುತಿಗಳಂ

ಪಿರಿದು ಕೊಂಡಾಡಿದಂ

ತನಗೆ ಲಕ್ಷ್ಮೀ ರಮಣ ದಯವಾದ

ಎನುತಲಾ ವಿದುರನಂದು

ಪಾಡಿದಂ ಗುಣ ಗಣವ

ಬೇಕಾದ ವರಗಳಂ ಬೇಡಿದಂ

ಮನದೊಳಾನಂದ ಸಾಗರದಲಿ ಒಲಾಡಿದಂ

ಕೈಮುಗಿದು ನಿಂದಿರಲವನ ತಕ್ಕೈಸಿ ಮುರಹರನೆಂದನು

ನಿನ್ನ ಭಕ್ತಿಗೆ ಮೆಚ್ಚಿದೇನೋ

ವಿದುರಾ ಎನಗಿನ್ನು ತೀರದು ನಿನ್ನ ಪೊಗಳಲು

ಅನ್ನ ಪಾನಗಳಿಲ್ಲದೆ ಬಳಲೀರ್ಪೆ ತಾನೆಂದಾ



ಮಗುಲೇ ಪುರುಷೋತ್ತಮನ
ಸುಪ್ಪತ್ತಿಗೆಯನೆರಿಸಿ ಸಿರಿಪದಾಮ್ಬುಜಯುಗಳ ಅರ್ಚಿಸಿ
ನಮಿಸಿ ಪೇಲ್ದನು ನಗುತತನ್ನಯ ಸವಿಯೋಳು ತೋಷವೆಂದಾ

ಅರಸ ಕೇಳಾ ಕುರುಭೂವರನ
ಒಡ್ಡೋಲಗದ ಘನ ಸಿರಿ
ಮೆರೆಯುತಿಹನೆನೆಮ್ಬೆ ಇಂದ್ರನ
ಸಭೆಯ ನಿಂದಿಸಿತು

ನೋಡಿದೆಯ ವಿದುರ
ಕೌರವ ಮಾಡಿದೊಲಗವ
ಓಡಿ ಹೋಗಲಿ ಕೃಷ್ಣ ಎನುತ
ಗಾಢಗರ್ವದಲಿ ಕುಳಿತಿರುವ ಈ ಭೂವರನು
ಕೇಡುಗರ ಒಡನಾಡಿ ಕೆಟ್ಟ

ಸಲಹೆ ಕೇಳಿದೆಯ ಕರ್ಣ
ಜೂಜಿಗೆ ಮಹಿಯ ಸೋತವರೆನ್ನ
ಸಹನ ವೇಕೆ ಎನಗೆ ಸಂಧಾನಕೆ




ಅಟ್ಟಿರುವರೀ ಚೋರನ

ಮತ್ತೆಮಗೆ ಕೆಟ್ಟೆಒದೆಮಗೆನಿವನ

ಶೇಷದಿಮ್ ಕುಳಿತನೆನುತ

ಸಖನ ಕೈ ತಟ್ಟಿ ಪೇಳಿದನು ನಗುತ

ಏನಯ್ಯ ಅಂಥದ್ದೆನಯ್ಯ
ನಮ್ಮೆಯ ಬರವ ಕಂಡು
ಜ್ಞಾನ ತಪ್ಪೀತೆ ಪರಮಾನಂದದೊಳಗೆ

ವರಗದ್ದುಗೆಯ ಇಳಿವುದು ತಡವೆನುತ
ಭರದಿಂದೆಕೋಭಾವದಲಿ ಪೀಠ ಸಹಿತ
ಚರಣ ದೋಲ್ ಉರುಳುವುದುಂತೆ
ನಾನಿನ್ನ ಸರಿಸಕೆ ಬರುತೀರ್ದೆನಲ್ಲೋ ಸಂಪನ್ನ

ಅರಸ  ನೀ   ಅತಿ ಸುಖವನ್ತನಲ್ಲಯ್ಯ
ಹರ ಹರ ತನುಎಸು ನೊಂದಿತೋ ನಿನಗೆ
ಹೊರಳ ಬೇಡೆಳೆಂದ    ಈ ಸಭೆಯೊಳಗೆ

ಪೋದವಿಗೊಸುಗ ಬಳಗ ಸಹಿತಲಿ

ನಡೆಯಬೇಡ ಕೃತಾನ್ತನಲ್ಲಿಗೆ

ಕೊಡು ಕುಶಸ್ತಲ ವರ ವ್ರುಕಸ್ಥಳ ವಾರನಾವತಿಯ

ಬಿದುಬೆ ಬಿದೆಳವೋ ಅವನ್ತಿನಗರವ

ಒಡನೆ ಶಕ್ರಪ್ರಶ್ಥ ಪುರವನು

ಮಿದುಕದೆ ಧರ್ಮಜಗೆ ಸಾಮದೊಲೆನಲು

ಮಗುಳೆಂದ





ನಡೆಯಲೋ ಮುರಾರಿ ಸುಖದೊಳು

ಸಲುಗೆ ಮಾತನುಡಿದು ಪೆಟ್ಟ ತಿನ್ನದೇನ್ನೋಳು

ನೀನು ಬೇಡಿತೈದು ಗ್ರಾಮಕೆ

ನಾನು ಕೊಡುವನಲ್ಲ ಸಾಮದಿ


ಎಲವೋ ಪಾತಕಿ ಬರಿದೆ ಸಾಯದಿರ್


ಒಲಿದು ಪಾಂಡವರುಗಳ ಕೂಡಿಕೋ


ಕೊಲಿಸಲಾರೆನು ಸರ್ವಥಾsss ಕುಳುಗುಳದಿ ನಿನ್ನ

1





ಎಲೆ ಧರಾಧಿಪ ನುಡಿಯನರಿತಿಹೆ

ದನುಜರಿಪು ನೀ ಇಳೆಯ ಭಾರವ

ಇಳಿಸಲವತಸಿರುವ ಮಾಯಾ ಮನುಜನೆಂದು



ಧುರಕೆ ಬೆದರುವನಲ್ಲ ರಿಪುಗಳ

ಕರೆಸಿಕೊದುವವನಲ್ಲ ರಾಜ್ಯವ

ಹರಣದಾಸೆಗಳಿಲ್ಲ ನನಗೆಂದರಸ ನುಡಿದಾ



ಎಲೆ ಮುರಾನ್ತಕ ಲಾಲಿಸೈ

ಬೆಂಬಳಕೆ ಭೂಪರನರಹಿ ಕುರುಮಂಡಳಕೆ

ಸಂನಧ್ಧವಾಗಿ ಸಮರಕೆ ಬರಲಿ ಪಾಂಡವರು



ಕಲಹದಲಿ ನಿನ್ನೆಯೋಳೆನ್ನೆಯ

ತಲೆಯನಿದು ಸಮರ್ಪಿಸ್ಸುವೆ

ಇದಕಳುಗೆ ಎಂದೆನುತ ವೀಲ್ಯವನಿತ್ತ ಅಚ್ಚುತಗೆ



ನಡುಗಲಾ ಮಾಧವಮ್ ದ್ರೋಣ ಕೃಪ ಗಾಂಗೆಯರಿಗೆ ಪೇಳ್ದ

ಮರಣವಂ ಬಯಸೀರ್ಪ ನೀ ಖಳಂ

ಮಗುಳೆನ್ನದೂರದಿರೆ ಎನುತ ನೀತಿಯಾ ತಿಳುಹಿ

ಮಾರನಯ್ಯನ ಮಾತ
ಮೀರದೆ ಗೋಕುಲ
ಭೂವರೇಣ್ಯನಾ ಉದರದಲಿ ಪುಟ್ಟಿ
ಧೀರ ಕಂಸಗೆ ತನ್ನ
ಘೋರರೂಪವ ತೋರಿ
ಹಾರಿದೆ ಗಗನಕೆ ಸೇರಿದೆ ಇಳೆಗೆ





ಮಂಗಳಂ

ಶುಭಮಸ್ತು

Monday, March 15, 2010

ಸ್ವಗತ

ನಾನು ಈ ವಾರ ಯಾವ ವಿಷಯದ ಮೇಲೂ ಬರೆಯಲಾಗದೆ ಗೊಂದಲಕ್ಕೆ ಸಿಲಿಕಿದ್ದೆ.

ವೃತ್ತಿಯ ನಡುವೆ ಒಂದು ಗುಣಮಟ್ಟದ, ಉಪಯುಕ್ತ ವಿಷಯದ ಮೇಲೆ ಅಧಿಕಾರಯುತವಾಗಿ ಬರೆಯಬೇಕೆಂದು ಹಂಬಲಿಸುತ್ತಲೇ ಒಂದು ವಾರ ಕಳೆಯಿತು.

ಹೌದು ವೃತ್ತಿ-ಪ್ರವೃತ್ತಿ ಒಂದೇ ಆಗಿದ್ದರೆ ಈ ಒತ್ತಡ ಕಡಿಮೆ ಇರುತ್ತಿತ್ತೆನೋ? ವೃತ್ತಿಯಲ್ಲಿ ಸಾಕಷ್ಟು ನೈಪುಣ್ಯ ಸಾಧಿಸಿದ್ದೇನೆ ಅನ್ನುವ ಭಾವನೆ ಇತ್ತು. ಆದರೆ ಗುರಿಯು ಕೂಡ ನನಗಿಂತಲೂ ಮುಂದೆ ಓಡುತ್ತಲೇ ಇರುತ್ತದೆ. ಕೈಗೆ ಸಿಗದ ಮರೀಚಿಕೆಯ ಹಾಗೆ.

ಏನಾದರು ಹೊಸತನ್ನು ಶೋಧಿಸುವ ಅದಮ್ಯ ಬಯಕೆ.. ಅದು ವೃತ್ತಿಯ ಬೇಡಿಕೆ ಕೂಡ.. "ನಾನು ಓದಿದ್ದೆಲ್ಲ ವೃತ್ತಿಯಲ್ಲಿ ಉಪಯೋಗವಾಗಲಿ..ನನ್ನ ಸಮಯದ ಹೂಡಿಕೆ ಹಣವಾಗಿ ಪರಿವರ್ತಿತವಾಗಲಿ" ಅನ್ನುವುದು ನನ್ನ ಅಂದಿನ Priority ಆಗಿತ್ತು. "Passive income " ಅನ್ನೋ ಹೊಸ ಹುಳ ತಲೆಯೊಳಗೆ ಹೊಕ್ಕಿತ್ತು.ನಾನು ನಿಷ್ಕ್ರಿಯನಾಗಿದ್ದು ನನ್ನ ಜೀವನ ನಿರ್ವಹಣೆಗೆ ಬೇಕಾಗುವ ಹಣವನ್ನ ಗಳಿಸುವುದೇ ಈ passive income.. ನಾನು ಯಶಸ್ವಿಯಾದರೆ ನಾನು ಇಷ್ಟ ಪಡುವ ಸಾಹಿತ್ಯ, ಸಾಮಜಸೇವೆ, ರಾಜಕೀಯ, ಯಕ್ಷಗಾನ ಕ್ಷೇತ್ರಗಳಲ್ಲಿ ಸಾಧನೆ ಮಾಡುವುದು ನನ್ನ ಹೆಬ್ಬಯಕೆಯಾಗಿತ್ತು.. ಆದರೆ ನಾನು ಇದೆಲ್ಲದರಿಂದ ನಿರಾಸಕ್ತನಾಗುವ ಮೊದಲೇ ಬಿಡುಗಡೆ ಪಡೆಯುವುದು ಮುಖ್ಯವಾಗಿತ್ತು. ಅದಕ್ಕೆ ಈ "innovation" ಅಥವಾ "idea creation", "systematic ಅಂಡ್ strategic investment " ಇತ್ಯಾದಿಗಳ ಹಿಂದೆ ಬಿದ್ದಿದ್ದೆ. ಯಾಕೆಂದರೆ ನನ್ನ ಕನಸಿನ "passive income " ಕೊಡುವ ಶಕ್ತಿ ಇರುವುದು ಒಂದು ಅಧ್ಬುತ ಸಂಶೋಧನೆಗೆ ಮಾತ್ರ. ಅದು "stupid " ಇದ್ದಷ್ಟು ಒಳ್ಳೆಯದು... ಏಕೆಂದರೆ ಐಡಿಯಾ ವನ್ನು ಒಂದು ಉತ್ಪನ್ನವಾಗಿ ಪರಿವರ್ತಿತಗೊಲಿಸಬೇಕಾದರೆ ಅನೇಕರ ಸಹಾಯಬೇಕು. ಏಕವ್ಯಕ್ತಿಯಿಂದ ಏನನ್ನು ಪೂರ್ಣಗೊಳಿಸಲು ಸಾಧ್ಯವಾಗದು. ಒಂದು ಚಳುವಳಿ ಆಂದೋಲನ ಪ್ರಾರಂಭ ಒಬ್ಬ ಕನಸಿಗನಿಂದಾದರು, ಅದು ಶಕ್ತಿಯುತ ಸಂದೇಶವನ್ನು ಕೊಡಲು ವಿಫಲವಾದರೆ ಬೆಂಬಲ ಗಳಿಸಲಾರದು. ಪ್ರೆರೆಪಿಸಲಾಗದು. ಹಾಗಾಗಿಯೇ ನಾನು "ಸ್ಟುಪಿಡ್" ಐಡಿಯಾ ಅನ್ನುತ್ತಿರುವುದು...

ಇಂದು ಕೂಡ ಈ ವಾರವೂ ಕೂಡ ನಾನು ವೃತ್ತಿಯಲ್ಲೇ ಕಾರ್ಯ ಮಗ್ನನಾಗಿದ್ದೆ. ಮಧ್ಯೆ ಒಂದೆರಡು ವಿಷಯಗಳು ಆಗಾಗ್ಗೆ ಬಂದು ಹೋಗುತ್ತಿದ್ದವು.
ನಾನು ಬಹಳ ತಡವಾಗಿ ಈ ಬ್ಲಾಗಿಂಗ್ ಲೋಕಕ್ಕೆ ಬಂದೆ. ಬಂದಮೇಲೆ ಯಾಕೋ ಇದು ನನ್ನನ್ನ ಸೆಳೆಯತೊಡಗಿತು... ಹೊಸತೊಂದು ಹವ್ಯಾಸ ಅಂಟಿಕೊಂಡಿತ್ತು...

ಈಗ ನನಗೆ ಅರಿವಾದ ಕೆಲವು ಮುಖ್ಯ ಅಂಶಗಳ ಒಂದು ಸಣ್ಣ ಟಿಪ್ಪಣಿ ಇದು.

೧. ಒಂದೇ ಕ್ಷೇತ್ರದಲ್ಲಿ ವೃತ್ತಿ -ಪ್ರವೃತ್ತಿ ಇದ್ದರೇ ಮಾತ್ರ ಜಗತ್ ಪ್ರಸಿದ್ಧ ಸಾಧನೆ ಸಾಧ್ಯ.

೨. ಯಶಸ್ಸು ಬೇಕಾದರೆ ಆಯ್ಕೆ ಮಾಡಿದ ಕೆಲಸದ ಬಗ್ಗೆ ಗಾಢವಾದ ಪ್ರೀತಿಯಿರಬೇಕು.

೩. ಕಡಿಮೆ ಶಬ್ಧದಲ್ಲಿ ಹೆಚ್ಚು ಅರ್ಥ ಕೊಡುವ ಆಸಕ್ತಿ ಕೆರಳಿಸುವ ಕಲೆಯಿರಬೇಕು

೪. ನಮ್ಮ ಧ್ಯೇಯ ಸಾಧನೆಗೆ ಬೆಂಬಲ ಗಳಿಸುವ ಕಲೆಯಿರಬೇಕು

೫. ಸದಾ ನಮ್ಮನ್ನು ಚೈತನ್ಯ ಪೂರಿತರಾಗಿ ಸ್ವಯoಪ್ರೇರೆಪಿಸುವ ಅಂತಃಶಕ್ತಿಯಿರಬೇಕು.

ಹೌದು ಈ ಮೊದಲು ಅನೇಕ ವಿಷಯಗಳಲ್ಲಿ ಆಸಕ್ತಿ ಇತ್ತು. ಎಲ್ಲದರಲ್ಲೂ ಹೆಸರು ಗಳಿಸುವ ಕನಸು ಇತ್ತು..ಹಾಗಾಗಿಯೇ ಬಾಲ್ಯದಲ್ಲಿ ಎಲ್ಲವನ್ನು ಮುಟ್ಟಿ ನೋಡುವ ಎಲ್ಲದರಲ್ಲಿಯೂ ಸೂಕ್ಷ್ಮ ಸಂವೇದನೆ ಹೊಂದುವ ರಸಾನುಭೂತಿಯನ್ನು ಪಡೆಯುವ ಆಸೆಯಿಂದ ಓದಿದ ಪುಸ್ತಕಗಳೆಷ್ಟೋ .. ಮಾಡಿದ ಪ್ರಯತ್ನಗಲೆಷ್ಟೋ..ಅತ್ಯಂತ ಗಹನವಾದ ವಿಚಾರಗಳ ಹೊತ್ತಗೆಯಿಂದ ಹಿಡಿದು ಗಪ್ಪಣ್ಣನ ತೆಲೆದಿಮ್ಬಿನ ಕೆಳಗಿನ ಗ್ರಂಥಾಲಯದವರೆಗೂ ನನ್ನ ವ್ಯಾಪ್ತಿ.

ಇಂದು ಎಂದಿಗಿಂತ ಹೆಚ್ಚು ಗೊಂದಲ... ನಿನ್ನೆಯ ತಂತ್ರಜ್ಞಾನ ನಾಳೆ ಮಾಯಾ.. ಚೆನ್ನಾಗಿರುವುದೆಲ್ಲ ಹಣಗಳಿಸುವುದಿಲ್ಲ..ಮೌಲ್ಯಗಳು ಕೂಡ ಅದಲು ಬದಲು...ಬದಲಾವಣೆಯ ಬಿರುಗಾಳಿ ಬಹಳ ಬೇಗ ತರಗೆಲೆಗಳಂತೆ ನಮ್ಮನ್ನು ಎಲ್ಲಿಯೋ ಸೇರಿಸಿಬಿಡುತ್ತದೆ.

Saturday, March 13, 2010

ಗೋಹತ್ಯೆ ನಿಷೇಧ -ನನ್ನ ದೃಷ್ಟಿಯಲ್ಲಿ

ಇತ್ತೀಚಿಗೆ ಗೋಹತ್ಯ ನಿಷೇಧ ಚರ್ಚೆಗೆ ಗ್ರಾಸವಾಗುತ್ತಿದೆ. ಪರ-ವಿರೋಧ ಗುಂಪುಗಳು ತಮ್ಮೆಲ್ಲ ಬೌಧ್ಧಿಕ ಸಾಮರ್ಥ್ಯವನ್ನು ಬಳಸಿ ತಮ್ಮ ವಾದದ ಸಮರ್ಥನೆಯಲ್ಲಿ ತೊಡಗಿವೆ

ಯಾವುದು ಸರಿ ಯಾವುದು ತಪ್ಪು ಅನ್ನುವ ವಿಚಾರ ಹಾಗಿರಲಿ, ಜನರ ಧೋರಣೆ ಮಾತ್ರ ವಿಚಿತ್ರವಾಗಿದೆ.

ಕುವೆಂಪುರವರ ಗ್ರಂಥದಲ್ಲಿನ ಅಭಿಪ್ರಾಯವನ್ನು ಉದಾಹರಿಸಿ ಪ್ರಜಾವಾಣಿ ವಾಚಕರ ವಿಭಾಗದಲ್ಲಿ ಗೋಹತ್ಯೆ ನಿಷೇಧ ಶಾಸನವನ್ನು ಬಲವಾಗಿ ಖಂಡಿಸಿದ ಮಾನ್ಯರೊಬ್ಬರು ಸನಾತನ ಧರ್ಮಾಚರಣೆಯ ಕುರಿತು ಕುವೆಂಪು ತಮ್ಮ ವಾಕ್ಪಟುತ್ವದಿಂದ ಸಾಹಿತ್ಯಕ ಶಕ್ತಿಯಿಂದ ಪರಿಣಾಮಕಾರಿಯಾಗಿ ವಿರೋಧಿಸಿದ್ದನ್ನು ಪ್ರಕಟಿಸಿದ್ದರು. ಇದು ನನ್ನನ್ನು ವಿಚಾರಕ್ಕೆ ಹಚ್ಚಿತು.ಕುವೆಂಪುರವರ ಕ್ಷೇತ್ರಕ್ಕೂ ಗೋಹತ್ಯೆ ನಿಷೆಧಿಸುವುದಕ್ಕು ಎಲ್ಲಿಯ ಸಂಬಂಧ? ಸಾಹಿತ್ಯ ಬುದ್ದಿಯ ಚಾತುರ್ಯವನ್ನು ಪ್ರಕಟ ಪಡಿಸುವ, ಭಾವವನ್ನು, ಕಲ್ಪನೆಯನ್ನು ಉದ್ದೀಪನಗೊಳಿಸುವ ಕ್ರಿಯೆ. ಅದು ಸಾಹಿತಿಯ ವಯಕ್ತಿಕ ವಿಚಾರ, ಸೃಷ್ಟಿ.ಕಲ್ಪನೆ.. ಆದರೆ ಗೋಹತ್ಯೆ ಒಂದು ಸಾಮಾಜಿಕ ಕಳಕಳಿ. ಕೃಷಿಯನ್ನೇ ಜೀವನಾಧಾರವಾಗಿ ಅವಲಂಬಿಸಿರುಬ ಭಾರತೀಯನ ಬೆನ್ನೆಲುಬೆ ಗೋ ಸಂತತಿ.... ಗೋ ಜನಿತ ಉತ್ಪನ್ನಗಳು ನಮ್ಮ ಜೀವನಾವಶ್ಯಕ...ಕ್ಷೀರ, ದಧಿ, ಘೃತ ದಿಂದಲೇ ಪಂಚಾಮೃತ...
ದೈವವನ್ನೇ ನಂಬಿ ಜೀವಿಸುವ ಕೋಟ್ಯಾನು ಕೋಟಿ ಭಾರತೀಯರ ಆರಾಧ್ಯ ಮೂರ್ತಿ ನಮ್ಮೆಲ್ಲರ ಆರಾಧ್ಯ ದೈವ ಪ್ರೀತಿಯ ಸಖ ಮುಗ್ಧ ಮಕ್ಕಳಲ್ಲಿ ನಾವುಕಾಣುವ ನಿತ್ಯದೈವ ಶ್ರೀ ಕೃಷ್ಣನಾದರೆ, ಶ್ರೀಕೃಷ್ಣನ ಪ್ರೀತಿಯ ಗೋಮಾತೆಯನ್ನು ಭಗವಂತ ಪ್ರತ್ಯಕ್ಷ ದೈವವಾಗಿ ಭೂಲೋಕದಲ್ಲಿ ನಮಗೆ ಕರುಣಿಸಿದ. ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ  ಶ್ರೀಕೃಷ್ಣನಿಗೆ ಅತ್ಯಂತ ಶ್ರೇಷ್ಠ. ಪ್ರೀತಿ ಕೂಡ.

ಹಿಂದೂ  ಧರ್ಮದಲ್ಲಿ ನಿಶಿಧ್ಧವಾಗಿರುವ ಪಂಚ ಮಹಾ ಪಾತಕಗಳಲ್ಲಿ ಗೋ ಹತ್ಯೆಯು ಒಂದು. [ಸ್ತ್ರೀ ಹತ್ಯೆ, ಭ್ರೂಣ ಹತ್ಯೆ, ಶಿಶು ಹತ್ಯೆ, ಭ್ರಹ್ಮ ಹತ್ಯೆ ಇತರ ಪಾತಕಗಳು ] ಹಿಂದೂ ಧರ್ಮದಲ್ಲಿ ಶ್ರಧ್ಧೆ ಇರುವ ಯಾರೂ ಇದನ್ನು ಒಪ್ಪಲಾರರು. [ವಿಭೂತಿ,  ಜ್ಯೋತಿಷ್ಯಗಳಲ್ಲಿ ನಂಬಿಕೆಯಿರುವಂತೆ  ನಟಿಸುವ  ದೇಶದ ರಾಜಕೀಯ ನಾಯಕರೊಬ್ಬರು ಹತ್ಯೆಯನ್ನು ಸಮರ್ಥಿಸುವುದು ಅವರ ರಾಜಕೀಯ ಪ್ರೇರಿತ ದ್ವಂದ್ವ ನೀತಿಗೆ ಸಾಕ್ಷಿ. ಅವರ ಆಶಾಢಭೂತಿತನಕ್ಕೆ  ಸಾಕ್ಷಿ.  ]

ಭಾವನಾತ್ಮಕತೆ ಬದಿಗಿಟ್ಟರು, ವ್ಯವಹಾರಿಕ ದೃಷ್ಟಿಯಿಂದಲೂ ಗೊಸಂತತಿಯ ಉಳಿವು ಅಗತ್ಯ.

ಸಾವಯವ ಕೃಷಿಯ ಕಚ್ಚಾವಸ್ತು ಸಗಣಿ ಗೊಬ್ಬರ.ರಾಸಾಯನಿಕ ಗೊಬ್ಬರದ ಬಳಕೆಯಿಂದ ಆಗುವ ಅನಾಹುತ ಅಷ್ಟಿಷ್ಟಲ್ಲ ... ಅದಕ್ಕೆ ಸಹಾಯಧನ ಬೇರೆ. ಅದೆಂದೂ ರೈತನನ್ನ ಸ್ವಾವಲಮ್ಬಿಯನ್ನಾಗಿ ಮಾಡಿಲ್ಲ. ಅತ್ತ ಹಣ ಒದಗಿಸಲು ಆಗದೆ, ಇತ್ತ ಹಿಂತೆಗೆಯಲು ಆಗದೆ ನಮ್ಮ ಸರಕಾರಗಳು ರಸಗೊಬ್ಬರದ ಸಹಾಯಧನವನ್ನು ಮುಂದುವರೆಸಿ ಅವೈಜ್ಞಾನಿಕ ಪರಂಪರೆಯನ್ನು ನ್ಯಾಸಗೊಳಿಸಿದ್ದಾರೆ. ರಸಗೊಬ್ಬರ ರೈತನ ಅಸರೆಯಗುವುದರ ಬದಲು ಖಾರ್ಖಾನೆಗಳ ಜೇಬು ತುಂಬುತ್ತಿದೆ. ಹೀಗಿರುವಾಗ ಗೋಹತ್ಯೆಯನ್ನು ಒಂದು ಜನಾಂಗದ ಆಹಾರದ ಸಮಸ್ಯೆಯಾಗಿಯೋ ಇನ್ನೊಂದು ಜನಾಂಗದ ಧಾರ್ಮಿಕ ಭಾವನಾತ್ಮಕ ಕೊಂಡಿಯಾಗಿಯೋ ಪರಿಕಲ್ಪಿಸಿ ತಮ್ಮ ಬೌಧ್ಧಿಕ ಸಾಹಿತ್ಯಕ ಚಮತ್ಕಾರಗಳಿಂದ ಸಮಾಜವನ್ನು ಪ್ರಭಾವಗೊಳಿಸುವ ಪ್ರಯತ್ನ ನಡೆಯುತ್ತಿದೆ.

ಗೋಮಾಂಸ ಭಕ್ಷಣೆಯನ್ನು ನಾಸ್ತಿಕತೆಯ ಓರೆಗಲ್ಲಿಗೆ ಹಚ್ಚಿ ಚರ್ಚಿಸಲಾಗುತ್ತಿದೆ. ಆದರೆ ಸಮಾಜ ಕೇವಲ ಸಾಹಿತಿಗಳಿಂದ ಅದುನಿಕ ಬುಧ್ಧಿ ಜೀವಿಗಳಿಂದ ಮಾತ್ರ ತುಂಬಿಲ್ಲ. ಇಲ್ಲಿ ಎಲ್ಲರು ಬೇಕು... ರೈತನು ಬೇಕು... ಧರ್ಮ ಭೀರುಗಳು ಬೇಕು...ಸಾಮಾನ್ಯ ನಾಗರೀಕರು ಬೇಕು, ರಾಜನು ಬೇಕು ಸೇವಕನು ಬೇಕು. ಹೀಗಾಗಿಯೇ ಸಾಹಿತಿಗಳೆಂದು ಸಮಾಜದ ನಾಯಕತ್ವದ ಜವಾಬ್ದಾರಿಯನ್ನು ಯಶಸ್ವಿಯಾಗಿ ಹೊರಲು ಸಾಧ್ಯವಾಗಿಲ್ಲ. ಇಂದಿನ ಸಾಹಿತಿಗಳoತು ಜ್ಞಾನಪೀಠ ಕೊಡಿಸಿದ ರಾಜಾಶ್ರಯಕ್ಕೆ ಕಪ್ಪ ಸಲ್ಲಿಸಲು ತಮ್ಮ ಬುಧ್ಧಿ ಮತ್ತು ಚತುರತೆಯನ್ನು ಮುಡುಪಾಗಿಟ್ಟಿದ್ದಾರೆ .
ಇದಕ್ಕೆ ಪರಿಸರ ಪ್ರೇಮಿ ಸಾಹಿತಿ ಚಿಂತಕ ವಿಜ್ಞಾನಿ ಸುಧಾರಕ ಶಿವರಾಮಕಾರಂತರಂತಹವರ ಚುನಾವಣಾ   ಸೋಲೇ ನಿದರ್ಶನ.
ಸಮಾಜ ಅವರ ಪ್ರತಿಭೆಯನ್ನು ಮೆಚ್ಚಿ ಹೊಗಳಿತು. ಆದರೆ ಲೋಕಸಭೆಯಲ್ಲಿ ಸಮರ್ಥವಾಗಿ ಉತ್ತರಕನ್ನಡದ ಅಭಿವೃಧ್ಧಿಯ ಕುರಿತು ಧ್ವನಿಯೆತ್ತುವ, ವಿವಿಧವರ್ಗಗಳ ನೋವಿನ ಜೊತೆ ಕೇಳುವ ಕಿವಿಯಾಗಿ, ಕೈಹಿಡಿದು ಎತ್ತುವ ಬೆಂಬಲಿಗನಾಗಿ ಅಸ್ಟೇ ಅಲ್ಲದೆ ಇತರ ನಾಯಕರೊಂದಿಗೆ ಸಹಕರಿಸಿ ನಡೆಯುವ ಸಂಯಮಿಯಾಗಿ ಕಾಣಲಿಲ್ಲ... ಜನ ಚಳುವಳಿಗೆ ಕೊಟ್ಟ ಬೆಂಬಲವನ್ನು ಚುನಾವಣೆಯಲ್ಲಿ ಕೊಡಲಿಲ್ಲ.. ಚಳುವಳಿಯೇ ಬೇರೆ ಚುನಾವಣೆಯೇ ಬೇರೆ ಎನ್ನುವುದು ಇದರಿಂದಲೇ ವಿದಿತ.. ರಾಜಕೀಯ ಇಚ್ಚಾ ಶಕ್ತಿ ಮತ್ತು ಬೆಂಬಲವಿದ್ದರೆ ಗೋಹತ್ಯೆ ನಿಷೇಧ ಖಂಡಿತ ಸಾಧ್ಯ.. ವ್ಯಕ್ತಿ ಪೂಜೆಯಲ್ಲಿ ನಿಪುಣರು, ವಿತಂಡ ವಾದಿಗಳು, ಕೇವಲ ಪ್ರಾಕ್ತನರಿಂದ ಯಾವ ಘನ ಸಾಧನೆಯು ಆಗದು.

ಗೋಹತ್ಯೆ ನಿಷೇಧಕ್ಕೆ ನನ್ನ ಹೃತ್ಪೂರ್ವಕ ಬೆಂಬಲವಿದೆ... ಕಸಾಯಿಖಾನೆಯಲ್ಲಿ ಅರೆಯಲ್ಪುಡುವ ಮುದ್ದು ಕರುಗಳನ್ನು ಕಂಡಾಗ ನಮ್ಮ ಮನೆಯ ಕೊಟ್ಟಿಗೆಯ ಪುಟಾಣಿ "ಬೆಳ್ಳಿ" "ಕಾಳಿ" "ಹಂಡಿ""ಚುಂಚಿ""ಪುಟ್ಟಿ" ಗಳ ನೆನಪಾಗದೆ ಇರದೇ?ತಾಯಿಯಿಲ್ಲದ ಮುಗ್ಧ ಕಂದಮ್ಮಗಳಿಗೆ ಅಮೃತ ಸಿಂಚನ ಮಾಡುವ ಸಾಕ್ಷಾತ್ ಮಾತೃ ಸ್ವರೂಪಿ ಯಾಗಿರುವ ಗೋವನ್ನು ತಿಂದು ಆಹಾರ ಮಾಡುವ ಅನಿವಾರ್ಯತೆ ಇದೆಯೇ?

ಗೋಮಾತೆಯನ್ನು ಪೂಜಿಸುವ ಅಸಂಖ್ಯಾತ ಆಸ್ತಿಕ ಬಂಧುಗಳು ತುಂಬಿರುವ ಈ ದೇಶದಲ್ಲಿ ಗೋಹತ್ಯ ನಿಷೇಧದ ವಿರುಧ್ಧ
ಪ್ರತಿಭಟನೆ ನಡೆಯುತ್ತಿದೆ. ಇದು ನಮ್ಮ ಸಂಸ್ಕೃತಿಯ ಅಧೋಪತನಕ್ಕೆ, ಎಲ್ಲವನ್ನು ಲಾಭದ ದೃಷ್ಟಿಯಿಂದಲೇ ಅಳೆಯುವ  ಕೆಟ್ಟ ಸಂಪ್ರದಾಯಕ್ಕೆ, ಭಾವುಕರನ್ನು ನೋಯಿಸಿ ಪೈಶಾಚಿಕ ತೃಪ್ತಿ ಅನುಭವಿಸುವ ಕುಹಕತೆಗೆ ನಿದರ್ಶನ.

ಹೌದು... ಸ್ವೇಚ್ಚಾಚಾರ ವೈಚಾರಿಕತೆಯೆಂಬ ಭ್ರಮೆಯ ಹಿಂದೆ ಅಡಗಿ ಕುಳಿತು ಜನರನ್ನು ಹಾದಿತಪ್ಪಿಸುವ ಮುನ್ನ ನಾವು ಎಚ್ಚೆತ್ತು ನಿಜವಾಗಿಯೂ ಮಾತೆಯಾಗಿರುವ ಗೋವಿನ ನಿಷೇಧದ ಮೂಲಕ ಋಣ ಸಂದಾಯ ಮಾಡೋಣವೆ?

Sunday, March 07, 2010

ಸೆಲ್ ಫೋನ್ ಆವಿಷ್ಕಾರ ಮತ್ತು ಒಂದು ವಿಶ್ಲೇಷಣೆ

೨೦ ನೆ ಶತಮಾನದ ಅದ್ಬುತ ಆವಿಷ್ಕಾರಗಲ್ಲಿ ಕೋಶ ದೂರವಾಣಿಯು[ಸೆಲ್ ಫೋನ್] ಕೂಡ ಒಂದು. ಅದರ ಸಂಶೋಧಕ ಅಮೆರಿಕಾದ ಮಾರ್ಟಿನ್ ಕೂಪೆರ್. ಸಂಶೋಧನೆ ನಡೆದದ್ದು ೧೯೬೦ ಕ್ಕೂ ಮೊದಲು. ಚಲಿಸುವ ಕಾರಿನ ಸಂಪರ್ಕ ಸಾಧಿಸುವ ಉಪಕರಣದ ನಿರ್ಮಾಣದ ಗುರಿ ಹೊತ್ತಿದ್ದ ತಂಡಕ್ಕೆ ಹೊಳೆದದ್ದು ವೈಯಕ್ತಿಕ ಸಂಪರ್ಕ ಸಾಧನದ ಉಪಾಯ. ಅದಾಗಲೇ ಮರ್ಕೊನಿಯಿಂದ ತಂತು ರಹಿತ ರೇಡಿಯೋ ಸಂಶೋಧನೆಯಾಗಿತ್ತು. ಬಾನುಲಿಯ ಮುಂದುವರೆದ ಅಭಿವ್ರುಧ್ಧಿಯೇ ಈ ಕೋಶ ದೂರವಾಣಿ ಅಥವಾ ಸೆಲ್ ಫೋನ್.ಸೀಮಿತ ಕಂಪನ ವ್ಯಾಪ್ತಿಯ [limited frequency range ] ಮೂಲ ವಿಚಾರವನ್ನು ಕಲ್ಪನೆನ್ನು ಆಧಾರವಾಗಿಸಿ ಈ ಹೊಸ ಉಪಕರಣವನ್ನು ಸಿಧ್ಧಪದಿಸಲಾಗಿತ್ತು.ವರ್ಣಪಟಲದ ಮರುಉಪಯೋಗ ಮತ್ತು ಕೋಶದಿಂದ ಕೋಶಕ್ಕೆ ಮಾಹಿತಿಯ ಹಸ್ತಾಂತರ ಮಾಡಿ ಗುರಿಯನ್ನು ತಲುಪುವಂತೆ ಮಾಡುವುದೇ ತಂತ್ರಜ್ಞಾನದ ಆಶಯವಾಗಿತ್ತು. ಈ ಹೊಸ ಉಪಕರಣದ ಮೊದಲ ಆವೃತ್ತಿಯಲ್ಲಿ ಬಿತ್ತರವಾಗಿದ್ದು ಮಾಹಿತಿಯ ಒಂದು ತುಂಡು [ bit ] ಮಾತ್ರ ಅದು ೬ ಸೆಕೆಂಡುಗಳಲ್ಲಿ. ಆಗ ಅತಿಕಿರಿದಾದ ವರ್ಣಪಟಲವನ್ನು ಈ ಉದ್ದೇಶಕ್ಕೆ ಬಳಸಲಾಗಿತ್ತು..ಇಂದು ಕೋಟಿ ಕೋಟಿ ಅಷ್ಟಕಗಳನ್ನು [ bytes ] ಅದೇ ಕಂಪನ ವ್ಯಾಪ್ತಿಯಲ್ಲಿ ಬಿತ್ತರಗೊಲಿಸಲಾಗುತ್ತಿದೆ... ವರ್ಣಪಟಲದ ಫಲದಾಯಕತೆ [efficiency ] ಹೆಚ್ಚಿಸಲಾಗಿದೆ. ವಿದ್ಯುತ್ ಕಾಂತೀಯ ಅಲೆಗಳ ಪ್ರಸರಣಕ್ಕೆ ಬೇಕಾಗುವ ಸ್ಪರ್ಶಿಕೆಗಳು ಕೂಡ [antenna ] ಸಾಕಷ್ಟು ನಯಗೊಳಿಸಲ್ಪತ್ತಿವೆ.

ಮೊದಲು ಈ ತಂತ್ರಜ್ಞಾನದ ಅಭಿವೃಧ್ದಿಗೆ ಸಹಸ್ರಾರು ಡಾಲರುಗಳನ್ನು ವ್ಯಯಿಸಲಾಗಿತ್ತು. ಅದು ೧೯೭೩ ರ ಕಾಲದ ಡಾಲರು. ಮೊದಲ ಉಪಕರಣದ ಬೆಲೆ ೪೦೦೦ ಡಾಲರು ಆಗಿತ್ತು. ಅದರ ತೂಕ ೨.೨ ಕಿಲೋ. ಇಂತಹ ಉಪಕರಣ ವನ್ನು ಉಳ್ಳವರು ಮಾತ್ರವೇ ಕೊಳ್ಳಬಹುದಾಗಿತ್ತು. ಹೌದು ಮಾರ್ಟಿನ್ ಕೂಪೆರ್ ಅಸ್ಟೊಂದು ದುಬಾರಿಯಾದ ಇಂತಹ ಸಾವಿರಾರು ಉಪಕರಣಗಳನ್ನು ಮಾರಿ ಲಾಭಗಳಿಸಿ ತಂತ್ರಜ್ಞಾನವನ್ನು ಇನ್ನು ಅಭಿವೃಧ್ಧಿಗೊಳಿಸಿದರು. ಮೋಟೊರೋಲ ಕಂಪನಿ ಕೂಡ ಇದಕ್ಕೆ ಪುಷ್ಟಿ ನೀಡಿತ್ತು.

ಪ್ರತಿ ೩೦ ತಿಂಗಳಿಗೆ ವರ್ಣಪಟಲದ ವಿಸ್ತಾರವಾಗುತ್ತಿದೆ. ಮೊದಲು ೧೦೦ ಮೇಗ ಹೆರ್ತ್ಜ್ ತಂತ್ರಜ್ಞಾನದಿಂದ ಪ್ರಾರಂಭವಾದ ತಂತ್ರಜ್ಞಾನ ಇಂದು ೩ ಗೀಗ ಹೆರ್ತ್ಜ್ ತನಕ ಬಂದು ನಿಂತಿದೆ.. ಅದೇ ವರ್ಣಪಟಲದಲ್ಲಿ ಹೆಚ್ಚು ಹೆಚ್ಚು ಮಾಹಿತಿಯನ್ನು ಹೇರಿ ಬಿತ್ತರಿಸುವ ತಂತ್ರೋಪಾಯಗಳಿವೆ. ಮಾಹಿತಿಯ ವಿಸ್ಪೋಟವು ಅದೇ ವೇಗದಲ್ಲಿ ನಡೆಯುತ್ತಿದೆ. ಈಗಿನ ವರ್ಣಪಟಲದ[ spectrum ] ಸಾಮರ್ಥ್ಯದ ಸಾವಿರಪಟ್ಟು ಹೆಚ್ಚು ಬಿತ್ತರಯೋಗ್ಯ ಮಾಹಿತಿ ನಮ್ಮಲ್ಲಿದೆ. ಬೇಡಿಕೆ ಕೂಡ ಈದೆ. ಆದರೆ ಅದು ಸರಕಾರದ ನಿಯಂತ್ರಣದಲ್ಲಿದೆ. ಅದನ್ನು ಬೇರೆ ಬೇರೆ ಸಾಧನಗಳಲ್ಲಿ ಬಳಸಲಾಗುತ್ತಿದೆ. ವ್ಯೋಮಂತರಿಕ್ಷ ವಾಹಕಗಳು, ಯುದ್ದ ನೌಕೆಗಳು, ಮಿಲಿಟರಿ ಉಪಕರಣಗಳು ಮತ್ತು ದೇಶವಾಸಿಗಳ ಸುರಕ್ಷತಾ ವ್ಯವಸ್ತೆಗಳಲ್ಲಿ ಬಳಕೆಯಲ್ಲಿದೆ. ಅದನ್ನು ಹೆಚ್ಚು ಬೆಲೆ ನಿಗದಿ ಪಡಿಸಿ ಸವಾಲುಗಳ ಮೂಲಕ ಹಂಚಿಕೆ ಮಾಡಲಾಗುತ್ತಿದೆ. ಇಂತಹ ನಿಸ್ತಂತು ಸಂಪರ್ಕ ವ್ಯವಸ್ತೆಗೆ ಇನ್ನು ೧೦೦೦ ಪಟ್ಟು ಹೆಚ್ಚು ವಿಸ್ತಾರದ ಹರಹಿನ ವರ್ಣಪಟಲ ಇದ್ದರು ಸಾಲದು.. ಹಾಗಾಗಿ ಈ ದಿಶೆಯಲ್ಲಿ ಸರಕಾರ ಸಹಾಯಧನ ನೀಡಿ ಸಂಶೋದನೆ ಕೈಗೆತ್ತಿಕೊಳ್ಳಬೇಕು.

ನಾನು ಮೊದಲೇ ಹೇಳಿದ ಹಾಗೆ ಎಲ್ಲ ಉಪಕರಣಗಳು ಕೂಡ ಇತರ ಉಪಕರಣಗಳ ಸಹಾಯದಿಂದಲೇ ಉಪಯುಕ್ತತೆಗಳನ್ನು ಪಡೆಯುತ್ತವೆ. ಮಾಹಿತಿಯನ್ನು ಸಂಗ್ರಹಿಸುವ, ಮಾಹಿತಿಯನ್ನು ರೂಪಾಂತರ ಗೊಳಿಸುವ, ಮಾಹಿತಿಯನ್ನು ಸಂಕುಚಿಸುವ, ಮಾಹಿತಿಯನ್ನು ಸಂಸ್ಕರಿಸುವ ತಂತ್ರಜ್ನಾನವಿಲ್ಲದೇ ಮಾಹಿತಿಯನ್ನು ಬಿತ್ತರುವ ತಂತ್ರಜ್ಞಾನ ಬೆಳೆಯದು. ಕೋಶ ದೂರವಾಣಿಯನ್ನು ಶೋಧಿಸಿದಾಗ ಗಣಕ ಯಂತ್ರವಿರಲಿಲ್ಲ . ಸಂಗೀತವನ್ನು ಸೊಗಸಾಗಿ ನುಡಿಸುವ ಶ್ರಾವ್ಯಕಗಳಿರಲಿಲ್ಲ [ audio players ]..ಪರದೆಯಮೇಲೆ ಚಲನ ದೃಶ್ಯಗಳನ್ನು ದೋಷರಹಿತವಾಗಿ ಪ್ರದರ್ಶಿಸುವ, ಮುದ್ರಿಸುವ ಸಾಧನಗಲಿರಲಿಲ್ಲ. ಇಂದು ನೂರಾರು ಬಳಕೆಗಳನ್ನು ಒಂದೇ ಉಪಕರಣದಲ್ಲಿ ಕಾಣಬಹುದು. "iphone " ಆವಿಷ್ಕಾರ ವಿವಿಧ ಬಳಕೆಗಳ ಏಕೀಕೃತ ಸಾಧನ. ಒಂದೊಂದು ತುಣುಕು ಕೂಡ ಬೇರೆಯಾಗಿ ಬೇರೆಯವರಿಂದ ಬೇರೆ ಬೇರೆ ಸಮಯದಲ್ಲಿ ಸಂಶೋಧಿಸಲ್ಪತ್ತವು. ಅದರ ಜಾಣ ಉಪಯುಕ್ತತೆಯನ್ನು ಮನುಕುಲದ ಬದುಕನ್ನು ಹಸನಾಗಿಸಲು ನಿರಂತರ ಪ್ರಯತ್ನದಿಂದ ಸಿದ್ಧಗೊಳಿಸಲಾಯಿತು.

ಈ ಸೆಲ್ ಫೋನ್ ಅಥವಾ ಮೊದಲ ಮೊಬೈಲ್ ಫೋನ್ ಕೂಡ ಕೇವಲ ಇಪ್ಪತ್ತು ನಿಮಿಷ ಮಾತ್ರ ಕೆಲಸ ಮಾಡುತ್ತಿತ್ತು. ವಿದ್ಯುತ್ಸಂಗ್ರಾಹಕದಲ್ಲಿ ವೇಗವಾಗಿ ಶಕ್ತಿಯ ವ್ಯಯ ವಾಗುತ್ತಿತ್ತು. ವಿಜ್ಞಾನಿಗಳು ಅದನ್ನು ಕೂಲಂಕುಶವಾಗಿ ಪರಿಶೋಧಿಸಿ ಶಕ್ತಿಯ ಅಪವ್ಯವವನ್ನು ತಡೆಗಟ್ಟಿ ಅದನ್ನು ಗಂಟೆಗಳ ಕಾಲ ಬಾಳುವಂತೆ ಮಾಡಿದರು. 3G ವರ್ಣಪಟಲದ ನಂತರ ಭೌತಶಾಸ್ತ್ರ ಅಡ್ಡಗಾಲು ಹಾಕುತ್ತದೆ... ಕಂಪನದ ಸೃಷ್ಟಿ ಸಾಧ್ಯವಿಲ್ಲ ಸೃಸ್ತಿಸಿದರೂ ಮತ್ತು ಶುಧ್ಧತೆ ಧ್ವನಿ ವಾಹಕವಾಗಿ ಯೋಗ್ಯವಾಗಲಾರದು. ಸಂಕೇತಗಳ ವಿಶ್ವಾಸಾರ್ಹತೆ ಇಲ್ಲಿ ಮುಖ್ಯವಾಗುತ್ತದೆ

"antenna " ಅಭಿವೃದ್ದಿಯು ಕೂಡ ಸರಳ ತತ್ವದ ಆಧರದ ಮೇಲೆ ನಿಂತಿದೆ. ಗುರಿಯನ್ನು ತಲುಪದ ಮಾಹಿತಿಯೆಲ್ಲ ಅನುಪಯುಕ್ತವೆ ತ್ಯಾಜ್ಯ ಯೋಗ್ಯವೇ. ಮೊದಲು ಅನುಪಯುಕ್ತ ಸಂಜ್ಞೆಗಳನ್ನು ತ್ಯಜಿಸುವುದು.. ಅನುಪಯುಕ್ತ ದಿಶೆಯಲ್ಲಿ ಬಿತ್ತರಿಸಿ ಮಾಹಿತಿ ತ್ಯಾಜ್ಯವಾಗದಂತೆ ನೋಡಿಕೊಳ್ಳುವುದು ಸಂಜ್ಞೆಯು ಕಲುಷಿತ ವಾಗದಂತೆ ತಡೆಯುವುದು ಸಂಜ್ಞೆಯು ಅನ್ಯ ತರಂಗಗಳ ಅಲೆಗಳಿಂದ ಅಡ್ದಬರದಂತೆ ರೂಪಿಸುವುದು ಇತ್ಯಾದಿ. ಸುಧಾರಣೆಯು ಮಾಹಿತಿಯನ್ನು ಕಳುಹುವುದರಲ್ಲಿ ಮತ್ತು ಸ್ವೀಕರಿಸುವಿದರಲ್ಲಿ ನಡೆಯುತ್ತಲೇ ಇದೆ.

ನಾವು ವೈಜ್ಞಾನಿಕ ಕ್ಷೇತ್ರದಲ್ಲಿ ೨೦ನೆ ಶತಮಾನದಲ್ಲಿ ಹಿಂದೆ ಬಿದ್ದಿದ್ದು ನಿಜ.. ಪ್ರಪಂಚ ನಿಬ್ಬೆರಗಾಗುವ ಯಾವುದೇ ಘನ ಆವಿಷ್ಕಾರ ನಮ್ಮಿಂದ ನಡೆದಿಲ್ಲ.ಇದೆ ವಿಷಯವನ್ನಿಟ್ಟುಕೊಂಡು ಕಾರಣವನ್ನು ಅಭ್ಯಾಸಿಸೋಣ.
ಸಂಶೋಧನೆಗೆ ಸಾಧನೆಗೆ ಪೂರಕ ಪರಿಸರ ಮುಖ್ಯ. ೧೯೪೭ರಲ್ಲಿ ಆಗಷ್ಟೆ ಸ್ವತಂತ್ರರಾಗಿ ಚೆತರಿಸಿಕೊಳ್ಳುತ್ತಿದ್ದ ಭಾರತ ಹಿಂದೆ ಬಿದ್ದಿರುವುದು ಸಹಜ. ಇಂದು ಭಾರತ ವಿಶ್ವದ ಬೃಹತ್ ಮಾರುಕಟ್ಟೆ. ಇದನ್ನೇ ಗುರಿಯಾಗಿಸಿ ವಿಶ್ವದ ಅನೇಕ ಕಂಪನಿಗಳು ಲಗ್ಗೆ ಹಾಕಿವೆ.. ಎಲ್ಲಿ ಕೊಳ್ಳುವರಿರುವರೋ ಅಲ್ಲಿ ಎಲ್ಲವು ಸಹಜವಾಗಿ ಸಿಧ್ಧಿಸುತ್ತವೆ. ನಮ್ಮ ಅಪರಿಮಿತ ಮಾನವ ಸಂಪನ್ಮೂಲ ಮೊಂದೊಂದು ದಿನ ಅಸಾಧಾರಣ ಶಕ್ತಿಯಾಗುವುದರಲ್ಲಿ ನಿಸ್ಸಂಶಯ ಆದರೆ ಅದು ನಮ್ಮ ಜೀವಿತದಲ್ಲೇ ಆಗಿದ್ದರೆ ನಾವು ಹೆಮ್ಮೆ ಪಡಬಹುದೇನೋ.. ಅನುಭವಿಸಬಹುದೇನೋ.ಹೊಸ ಆವಿಷ್ಕಾರಗಳು ನಡೆದೇ ನಡೆಯುತ್ತವೆ. ನಡೆಯಲೇ ಬೇಕು...ನಡೆದೇ ತೀರುತ್ತವೆ.. ಅದು ಕೂಡ ನಮ್ಮಲ್ಲೇ ನಡೆದರೆ ನಾವು ಅದರ ಫಲದ ಬೃಹತ್ ತುಣುಕನ್ನು ಪಡೆಯಬಹುದು.
ಈ ಉದಾಹರಣೆಯನ್ನೇ ತೆಗೆದುಕೊಳ್ಳಿ...

ಮಾರುಕಟ್ಟೆಯ ಬಗ್ಗೆ ಕಿಂಚಿತ್ತು ವಿಶ್ವಾಸವಿಲ್ಲದೇ ಹೂಡಿದ ಹಣ ತಿರುಗಿ ಲಾಭ ತರುವ ಭರವಸೆಯಿಲ್ಲದೆ ಇಂತಹ ಅಸಾಮಾನ್ಯ ಸಾಹಸ ನಮ್ಮಲ್ಲಿ ಸಾಧ್ಯವೇ? ನಾವು ತತ್ರಜ್ನಾನಕ್ಕೆ ಬೆಂಬಲ ಸೂಚಿಸಲಾಗಲಿ, ತಂತ್ರಜ್ಞಾನವನ್ನು ಮೊದಲು ಕೊಂಡು ಅನುಭವಿಸುವುದಕ್ಕಾಗಲಿ ಅಥವಾ ತಂತ್ರಜ್ಞಾನವನ್ನು ತಿಳಿದುಕೊಳ್ಳುವುದಕ್ಕಾಗಲಿ ಹಣ ತೆರುವುದಿಲ್ಲ.. ಅದು ಬೇರೆಯವರು ಕೊಂಡು ಬಿನ್ನಾಣದಿಂದ ಬಿಂಕದಿಂದ ಬೀಗುವುದನ್ನು ಕಂಡಾಗ ಮಾತ್ರ ನಾವು ಪ್ರತಿಸ್ತೆಗಾಗಿ ಕೊಳ್ಳುತ್ತೇವೆ. ಯಾರಾದರು ಕೊಡುಗೆ ನೀಡಿದರೆ ಇನ್ನು ಸಂತೋಷ. ಪುಕ್ಕಟೆಯಾಗಿ ಕೊಡುತ್ತಾರೆಂದರೆ ಕಡಲೆ ಬೀಜಕ್ಕು ಸರದಿಸಾಲಿನಲ್ಲಿ ನಿಲ್ಲುವ ನಾವು ಇನ್ನು ಇಂತಹ ಉತ್ಪನ್ನಗಳನ್ನು ಪ್ರೋತ್ಸಾಹಿಸುವುದು ಕನಸಿನ ಮಾತು. ನಾವು ಕೂಡ ಸಮಾಜದ ಶಕ್ತಿ ಅಪವ್ಯಯವಗುವುದನ್ನು ಮೊದಲು ಗುರುತಿಸಬೇಕು. ಗುರುತಿಸಿದಮೇಲೆ ನಿಯಂತ್ರಿಸಬೇಕು. ನಂತರ ಸಮಾನಾಂತರವಾದ ಮಾರ್ಗಗಳನ್ನು ಹುಡುಕಬೇಕು.ಪರಿಹಾರ ಇರುವುದೇ ಅಲ್ಲಿ.

ಇಂತಹ ಭಾಧ್ಯತೆ ಮತ್ತು ಬದ್ದತೆಯನ್ನು ನಾವು ಹೊಂದಿದ್ದೆವೆಯೇ? ನಮ್ಮನ್ನಾಳುವವರು ಹೊಂದಿದ್ದರೆಯೇ?
ಎಲ್ಲ ಯಶಸ್ಸಿಗೂ ಮೂಲ ಬಧ್ಧತೆ ಮತ್ತು ಧೋರಣೆ.

ತಂತ್ರಜ್ಞಾನ ಸಂಶೋದನೆಗೆ ಮುನ್ನ ವಿಜ್ಞಾನದ ಮೂಲ ತತ್ವಗಳ ಅರಿವು ಮುಖ್ಯ ಆಳವಾದ ಜ್ಞಾನ ಮುಖ್ಯ. ಇದ್ಯಾವುದರ ಪರಿವೆಯೇ ಇಲ್ಲದ ನಮ್ಮವರು ಮೊಬೈಲ್ ಫೋನ್ ಆರೋಗ್ಯಕ್ಕೆ ಹಾನಿಕರ ಎನ್ನುವ ವಿತಂಡವಾದವನ್ನು ಮಂಡಿಸಿ ಧೀನತರೆಂದು ಕರೆಸಿಕೊಂಡಿದ್ದಾರೆ.ವಿದ್ಯುತ್ ಸಂಕೇತಗಳು, ನಿರೋಧಕಗಳು, ವಿದ್ಯುತ್ ಪ್ರವಾಹ, ಅರ್ಧ-ವಾಹಕಗಳ ಗುಣ, ಮೊಬೈಲ್ ಫೋನ್ ಗಳಲ್ಲಿ ಉಷ್ಣದ ಉತ್ಪತ್ತಿ ಏಕೆ ಮತ್ತು ಹೇಗೆ ಆಗುತ್ತದೆ?ಶಕ್ತಿಯ ಉಳಿತಾಯ ಮತ್ತು ಸೋರಿಕೆ ಇತ್ಯಾದಿ ವಿಷಯಗಳ ಮೇಲೆ ಅಧಿಕಾರಯುಕ್ತ ತಿಳಿವಳಿಕೆ ಇರಬೇಕು. ಇಲ್ಲವಾದಲ್ಲಿ ಸಾಧನೆಯ ದಾರಿಯಲ್ಲಿ ಸಾಗುವುದರ ಬದಲು ಸಾಧಕರನ್ನು ಹೊಗಳುವುದು ಅಥವಾ ಸಾಧಕರನ್ನು ವಿಮರ್ಶಿಸುವುದು, ತೆಗಳುವುದನ್ನು ವೃತ್ತಿಯನ್ನಾಗಿಸಿ ನಾವು ಪ್ರಾಜ್ನರೆನ್ನಿಸಿಕೊಳ್ಳುತ್ತೇವೆ.

ತಂತ್ರಜ್ಞಾನ ಬೆಳೆದಂತೆಲ್ಲ ಅದರ ಕುರಿತಾದ ಭಯವು ಹುಟ್ಟಿಕೊಳ್ಳುತ್ತದೆ ಅದರ ದುರುಪಯೋಗದ ಕುರಿತು ಕಾಲೇಜಿನ ಹೆಣ್ಣು ಮಕ್ಕಳಿಂದ ಹಿಡಿದು ಸುಂದರ ಸುಕೋಮಲ ಶರೀರೆಯರಾದ ನವ ತರುಣಿಯರನ್ನ ಕೇಳಬೇಕು ಸೆಲ್ ಫೋನ್ ನ ಹಾನಿಯಕುರಿತು! ವೃಧ್ಧೆಯರ ಕಿವಿಯಲ್ಲಿ ಹೊಸ ಚಲನ ಚಿತ್ರ ಗೀತೆಯ ಪ್ರೇಮ ಕವಿತೆಗಳು ರಿಂಗ್ tone ಆಗಿ ಮಾರ್ದನಿಸುತ್ತವೆ ಅದು ರಾತ್ರಿಯಲ್ಲಿ... ಯಾಕೆಂದರೆ ಅಜ್ಜಿಯ ಮೊಮ್ಮಗ ತನ್ನ ಪ್ರೇಯಸಿಗಾಗಿ ಹಾಕಿದ ಕುಚೋದ್ಯದ ಗೀತೆ ಅಜ್ಜಿ ತಾಯಿ ತಂಗಿಯರ ಕಿವಿಯಲ್ಲಿ ಅಸಹ್ಯ ಹುಟ್ಟಿಸುತ್ತದೆ!

ಸೆಲ್ ಫೋನ್ ನಿಂದ ಮೆದುಳು ಕಾನ್ಸೆರ್ ಬರುತ್ತದೆ ಅನ್ನುವ ಊಹೆ ಕೂಡ ಇದೆ. ಆದರೆ ಅದು ಅಧಾರ ಸಮೇತ ಪ್ರಾಯೋಗಿಕವಾಗಿ ನಿಖರವಾಗಿ ಪುನರಾವರ್ತಿತವಾಗಿ ನಿರೂಪಿಸಲ್ಪತ್ತಿಲ್ಲ. ಮಾನವ ದೇಹದ ಮೇಲಾಗುವ ಪರಿಣಾಮದ ಕುರಿತು ಅನುರಣಿತವಾಗಿ ಕೂಗು ಕೇಳಿಬರುತ್ತಲೇ ಇರುತ್ತದೆ. ಆದರೆ ಸುಮಾರು ದಶಕಗಳಿಂದ ಬಳಸಿದ ಅಸಂಖ್ಯಾತ ಗ್ರಾಹಕರು ಬಾಹ್ಯಗೊಚರವಾಗುವ ಯಾವುದೇ ಪರಿಣಾಮ ಅನುಭವಿಸಿಲ್ಲ. ಉಪಕರಣದ ಉಷ್ಣದ ಪ್ರಭಾವ ನಗಣ್ಯ.

ವರ್ಣ ಪಟಲ ಒಂದು ಅಮೂಲ್ಯ ಆಸ್ತಿ. ಹಾಗಾಗಿಯೇ ಸಂಪರ್ಕ ಕ್ಷೇತ್ರ ಸರಕಾರದ ಅಧೀನ. ಪ್ರಜೆಗಳ ಹಿತಾಸಕ್ತಿಯನ್ನು ಕಾಪಾಡಲು ಸರಕಾರ ಬಧ್ಧವಾಗಿರಬೇಕು. ಯಾರ್ಯಾರು ಎಸ್ಟೆಷ್ಟು ತರಂಗ ಪಟಲದ ಹರವನ್ನು ಯಾವ ಯಾವ ಬಳಕೆಗೆ ಬಳಸುತ್ತಿದ್ದಾರೆ ಎನ್ನುವ ನಿಖರ ಮಾಹಿತಿ ಪಾರದರ್ಶಕವಾಗಿ ದೊರೆಯುವಂತಿರಬೇಕು.

ಹೌದು ನಮ್ಮಲ್ಲಿ ಯಾವುದೇ ಬದಲಾವಣೆ ಬರುವುದು ಸುಲಭವಲ್ಲ. ಅಧಿಕಾರಶಾಹಿ ಧೋರಣೆ.. ಪಂಡಿತ ಪಂಡಿತರಲ್ಲಿ ಇರದ ಹೊಂದಾಣಿಕೆ ಕಾರಣವಿರಬಹುದು.ನಮ್ಮಲ್ಲಿಯ ಮೇಧಾವಿಗಳು ಯಾವುದೇ ವಿಷಯದಲ್ಲಿ ಬೇಗ ಸಮ್ಮತಿಸಿ ಸೇರಿ ನಡೆಯಲಾರರು.ನಮ್ಮ ಸಮಸ್ಯೆಗಳು ಹೊಸತವೇನಲ್ಲ ಜಗತ್ತಿನ ಯಾವುದೋ ಮೂಲೆಯಲ್ಲಿ ಮಾನವ ಇತಿಹಾಸದಲ್ಲಿ ಅನುಭವಿಸಿದ ಪರಿಹರಿಸಿದವುಗಳೇ.ನಾವು ಕೇವಲ ಹುಡುಕುವ ಕೆಲಸ ಮಾಡಿದರೆ ಸಾಕು.. ಭ್ರಷ್ಟತೆ ರಹಿತವಾದರೆ ಸಾಕು.. ನಾವು ತಂತ್ರಾಂಶ ಅಭಿವೃದ್ಧಿಯಲ್ಲಿ ವಾಸ್ತುಶಿಲ್ಪಗಳಮಾದರಿ ಪಡಿಯಚ್ಚಿನ ಬೇಟೆ ಮಾಡಿ ಹೊಸ ಹೊಸ ವಿನ್ಯಾಸ ರೂಪಿಸುತ್ತೇವೆ. ಅದನ್ನೇ ಅದೇ ಉಪಾಯವನ್ನೇ ನಮ್ಮ ಮೂಲ ಸೌಕರ್ಯಗಳ ಅಭಿವೃಧ್ಧಿಗೆ ನಗರ ನಿರ್ಮಾಣಕ್ಕೆ ಯಾಕೆ ಬಳಸಬಾರದು?

ನಾನು ಮೊದಲೇ ಹೇಳಿದ ಹಾಗೆ ಬಧ್ಧತೆ ಮತ್ತು ಧೋರಣೆ ಬದಲಾಗಬೇಕು ಅಷ್ಟೇ.

ಖಾಸಗಿ ಕಂಪನಿಗಳು ಕೂಡ ಹೊಸ ವಿದ್ಯುನ್ಮಾನ ಉಪಕರಣಗಳ ಸ್ವತಂತ್ರ ನಿರ್ಮಾಣದಂತಹ ಸಾಹಸಕ್ಕೆ ಕೈ ಹಾಕಲಾರವು. ಏಕೆಂದರೆ ಗ್ರಾಹಕ ಕಂಪನಿಗಳ ತಂತ್ರಜ್ಞಾನ ಬಯಲು ಮಾಡದಂತೆ ಅವು ಕಾನೂನಿನ ಕಟ್ಟಳೆಗೆ ಒಳಪಟ್ಟಿರುತ್ತವೆ. ತಾವು ವಿದ್ಯುನ್ಮಾನ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿ ಎಂದು ಗ್ರಾಹಕ ಕಂಪನಿಗಳು ದೂರಸರಿದರೆ ಎನ್ನುವ ಭಯ ಬೇರೆ. ಇನ್ನು ಮುಖ್ಯ ವಿಷಯವೆಂದರೆ ಸಂಶೋಧನೆ ಮತ್ತು ಅಭಿವೃದ್ದಿ ಕಮಪನಿಗಳ ಭವಿಷ್ಯದ ನೋಟದಲ್ಲಿಯೇ ಇಲ್ಲ. ಆವಿಷ್ಕಾರ ಅದರ ವರ್ಣ ತಂತುಗಳಲ್ಲಿ ಮೊದಲೇ ಇಲ್ಲ. ಇತ್ತೀಚಿಗೆ ವಾರ್ಷಿಕ ಕಾರ್ಯನಿರ್ವಹಣೆಯ ಬೆಲೆಕಟ್ಟುವ ಪರಿಸ್ಕರಣಾ ಪಧ್ಧತಿಯಲ್ಲಿ ಪೇಟೆಂಟ್ ಅನ್ನುವ ಕ್ರಮ ಅಳವಡಿಸಿದ್ದಾರೆ. ಆದರೆ ಮೂಲ ಆಶಯವೇ ಬೇರೆ. ಗ್ರಾಹಕರನ್ನು ಆಕರ್ಷಿಸಲು ನಡೆಸುತ್ತಿರುವ ದೊಮ್ಬರಾಟದಂತೆ ಅದು ವಾಮಮಾರ್ಗೀಯ ಚಟುವಟಿಕೆಯಾಗಿ ಅಂಕಿ-ಸಂಖ್ಯೆಗಳ ಪ್ರದರ್ಶನದ ಆಟವಾಗಿದೆ.

ಪೇಟೆಂಟ್ ಜ್ಞಾನವನ್ನು ಸೃಷ್ಟಿಸಿ ಕಾನೂನು ಬದ್ಧ ರಕ್ಷಣೆ ಪಡೆದು ರಾಯಧನ ಪಡೆಯುವ ಸಾಧನವಸ್ತೆ. ಉತ್ಪನ್ನವಾಗಿ ಲಾಭತರದ ಅದೆಸ್ಟೋ ಸಂಶೋಧನೆಗಳು ಹಣದ ಹೂಡಿಕೆಯಿಲ್ಲದೆ ಮಾರುಕಟ್ಟೆಗೂ ಬರದೆ ಸಂಗ್ರಾಹಕಗಳಲ್ಲಿ ಕೊಲೆಯುತ್ತಿರುತ್ತವೆ. ಪ್ರತಿಸ್ಪರ್ಧಿಗಳನ್ನು ತಾಂತ್ರಿಕವಾಗಿ ನಿಯಂತ್ರಿಸುವ ಕಟ್ಟಿಹಾಕುವ ಶಕುನಿ ಉಪಾಯದಲ್ಲಿ ಇದು ಕೂಡ ಒಂದು.

ಹೌದು ಎಲ್ಲರು ಕಂಪನಿಗಳನ್ನು ಕಟ್ಟುವುದು ಲಾಭಕ್ಕಾಗಿ. ಅಲ್ಲಿ ಲಾಭವೇ ಮೂಲಮಂತ್ರ. ಲಾಭ ಬದುಕುವುದಕ್ಕೆ ಅನುವು ಮಾಡಿಕೊಡುತ್ತದೆ. ಕಂಪನಿಗಳು ಮೊದಲು ಬದುಕುವುದು ಮುಖ್ಯ. ಆದರೆ ಅದೇ ಸಾರ್ವಕಾಲಿಕ ಗುರಯಾಗಬಾರದು.ಕಾರಣಗಳು ಅನೇಕವಿರಬಹುದು..ಆದರೆ ನಮ್ಮ ಅಧುನಿಕ ಭಾರತ ಅದ್ಭುತ ಕನಸುಗಾರರ ಕೊರತೆಯಿಂದ ಬಡವಾಗಿದೆ. ಇನ್ನೊಬ್ಬ ಟಾಟಾ ಮತ್ತೆ ಹುಟ್ಟಿ ಬರಬೇಕೇನೋ.

Saturday, March 06, 2010

ನೆನಪು

ರಾಷ್ಟ್ರ ಕವಿ ಕುವೆಂಪುರವರಿಗೂ ನನಗು ಒಂದು ಸಾಮ್ಯವಿದೆ
:-)  ನಾನು ಶ್ರೀರಾಮಕೃಷ್ಣ ಆಶ್ರಮದ ಹಳೆಯ ವಿದ್ಯಾರ್ಥಿ ನಾನು ಎರಡು ವರ್ಷ ಅಲ್ಲಿ ಉಳಿದಿದ್ದರೆ ಕುವೆಂಪು ಅವರು ಉಳಿದದ್ದು ಹನ್ನೆರಡು ವರ್ಷ!ಕುವೆಂಪು ಅವರ ಕೃತಿಗಳು ೨೦ ನೆ ಶತ ಮಾನದ ಅಧ್ಬುತಗಳು! ಜನ್ಮತಹ ಒಕ್ಕಲಿಗರಾದ ಕುವೆಂಪು ಯಾವ ಸಂಸೃತ ವಿದ್ವಾಂಸರಿಗೂ ಕಡಿಮೆ ಇಲ್ಲದಸ್ಟು ಅಸಾಮಾನ್ಯ ಸಂಸ್ಕ್ರತ ಪಾಂಡಿತ್ಯ ಹೊಂದಿದ್ದರು. ಕುವೆಂಪು ಬರಹ ವೇದ ಉಪನಿಶತ್ತುಗಳಂತೆ ತತ್ವ  ಭರಿತವು  ಸತ್ವ  ಭರಿತವು  ಆಗಿ  ಗೀರ್ವಾಣಿ ಮತ್ತು ಕನ್ನಡದ  ದಿವ್ಯ ಮಿಲನವಾಗಿತ್ತು .
ಹೌದು. ಕುವೆಂಪು ಜೀವನದಲ್ಲಿ ಸ್ವಾಮೀ ವಿವೇಕಾನಂದರ ಪ್ರಭಾವ ಅಂತಸ್ತವಾಗಿದೆ. ಅವರ ವಿಶ್ವ ಮಾನವ ಕಲ್ಪನೆಯಿರಲಿ, ಸನಾತನ ಹಿಂದೂ ಧರ್ಮದ ಅನರ್ಥ ನಂಬಿಕೆಗಳ ಮೂಲೋತ್ಪಾಟನೆಯ ಕಲ್ಪನೆಯಿರಲಿ ವಿವೇಕಾನಂದರ ಸ್ಪೋಟಕ ವಿಚಾರಗಳ ಕನ್ನಡದ ಆವೃತ್ತಿ ಎಂದರೆ ತಪ್ಪಲ್ಲ.
ಕುವೆಂಪು ವಿರಚಿತ "ಸ್ವಾಮೀ ವಿವೇಕಾನಂದ " ಒಂದು ಅಧ್ಬುತ ಕೃತಿ. ನನ್ನನ್ನು  ಸರ್ವರೀತಿಯಿಂದ ರೂಪಿಸಿದ ಮಾರ್ಗದರ್ಶಿ. ಶ್ರೀರಾಮಕೃಷ್ಣ ಮಠದ ಗರಡಿಯಲ್ಲಿ ಬೆಳೆದ ಕುವೆಂಪುರವರ ವ್ಯಕ್ತಿತ್ವ ವಿವೇಕಾನಂದರ ನೆರಳು.
ಕೊಲಂಬೊದಿಂದ ಅಲ್ಮೊರಕೆ, ವಿವೇಕಾನಂದರ ಕೃತಿಶ್ರೇಣಿ, ಶ್ರೀ ರಾಮಕೃಷ್ಣ ವಚನವೇದ ಅಲ್ಲದೆ ಶ್ರೀರಾಮಕೃಷ್ಣರ ಪರಂಪರೆಯ ಅನೇಕ ಸ್ವಾಮೀಜಿಗಳ ದಿವ್ಯ ಕೃತಿಗಳನ್ನು, ಸ್ತೋತ್ರ ಗೀತೆಗಳನ್ನು ಮೂಲಭಾವಕ್ಕೆ ತಕ್ಕಂತೆ ಭಾಷಾಂತರಿಸಿದ ಕುವೆಂಪು ಶಬ್ದಗಳ ಗಾರುಡಿಗ.
ರಾಮಕೃಷ್ಣ ಮಠದ "ಜ್ಯೋತಿ" ಅಥವಾ "ಕೀರ್ತನ ಸಂಗ್ರಹ"ದಲ್ಲಿ ಕುವೆಂಪುರವರ ಭಾಷಾಂತರಿತ ಸ್ತೋತ್ರಗಳು ಗೀರ್ವಾಣ ಭಾರತಿಯ ಅರ್ಥ ಗೌರವವನ್ನ ತುಂಬಿಕೊಂಡ ಸುಂದರ ಮಧುರ ಭಕ್ತಿ ವೇದ.
ಇಂದಿಗೂ ಯಾವುದೇ ಧರ್ಮ ತಾರತಮ್ಯ ಹೊಂದಿರದ, ಯಾವುದೇ ಪೂರ್ವಗ್ರಹ ಪೀಡಿತ ತತ್ವ ಪ್ರಚುರಪದಿಸದ, ಯಾವುದೇ ಹಗರಣಗಳ ನೆರಳು ಸೊಂಕದೆ ತನ್ನ ಪಾವಿತ್ರ್ಯ ಕಾಪಾಡಿಕೊಂಡಿರುವ, ತೆರೆ ಮರೆಯಲ್ಲಿ ಪ್ರಚಾರದ ಅಬ್ಬರವಿಲ್ಲದೆ ಸಮಾಜದ ಏಳ್ಗೆಗೆ ಸಮರ್ಪಣ ಭಾವದಿಂದ
ಸರ್ವ ಸಂಗ ಪರಿತ್ಯಾಗಿಗಳಾಗಿ ದುಡಿಯುತ್ತಿರುವ ಅಸಂಖ್ಯಾತ ಮಹಾತ್ಮರನ್ನು ಕೊಡುಗೆ ನೀಡಿದ್ದು ಶ್ರೀ ರಾಮಕೃಷ್ಣ ಮಠ.
ಹೌದು ರಾಮಕೃಷ್ಣ  ಮಠ ಶ್ರೀ ಸ್ವಾಮೀ ಜಗದಾತ್ಮಾನಂದರು, ಪುರುಷೋತ್ತಮಾನಂದರು, ಶ್ರೀ ಹರ್ಷನಂದಜಿ ಯವರಂತಹ ಮಹಾತ್ಮರು ಬಾಳಿ ಸಮಾಜವನ್ನು ಬೆಳಗಿದ ಈ ದೇಶದ ಮಹಾನ್ ಸಂಸ್ಥೆ. ಇಂತಹ ಮಹಾನ್ ಸಂಸ್ಥೆ ನನ್ನಂತಹ ಸಾವಿರಾರು  ಬಡ ವಿದ್ಯಾರ್ಥಿಗಳಿಗೆ ಆಶ್ರಯ ತಾಣವಾಗಿತ್ತು. ವ್ಯಕ್ತಿತ್ವ ರೂಪಿಸಿತ್ತು. ಅಲ್ಲಿಯ ಸ್ವಾಮೀಜಿಗಲೊಂದಿಗಿನ ನನ್ನ ಒಡನಾಟ ನನ್ನ ಜೀವನದ ಮಧುರ ಗೀತೆ.ಜೀವನದಲ್ಲಿ  ನಿತ್ಯ ಸ್ಮರಣೀಯ ಅಮೂಲ್ಯ ಕ್ಷಣನಗಳನ್ನು ಕಳೆದದ್ದು  ಅಲ್ಲಿಯೇ. ನನ್ನ ಬಾಲ್ಯವನ್ನು ಅತ್ಯಂತ ಸುಂದರ ಅದ್ಭುತ ಕಾವ್ಯವಾಗಿ ರೂಪಿಸಿ, ಈ ದೇಶದ ಅನೇಕ ಮಾಹನ್ ವ್ಯಕ್ತಿಗಳ ದರ್ಶನ-ಸಂಪರ್ಕದ  ಅವಕಾಶ ನೀಡಿದ ಗುರುಕುಲ.
ಶ್ರೀ ಸ್ವಾಮೀ ಪುರುಷೋತ್ತಮಾನಂದರು ತಮ್ಮ ಕೊಠಡಿಗೆ  ನನ್ನನ್ನು ಬರಮಾಡಿ ತಮ್ಮ ಅನೇಕ ಕೃತಿಗಳನ್ನು ಓದಲು ಕೊಡುತ್ತಿದ್ದರು. ಅವರ "ವಿದ್ಯಾರ್ಥಿಗೊಂದು ಪತ್ರ" "ಶಕ್ತಿ ಶಾಲಿ ವ್ಯಕ್ತಿತ್ವ ನಿರ್ಮಾಣ" ಮೊದಲಾದ ಅಮೂಲ್ಯ ಕಿರು ಹೊತ್ತಗೆಗಳ ಬಾಲ ವಿಮರ್ಶಕ ನಾನಾಗಿದ್ದೆ.
ನ್ಯಾಷನಲ್ ಕಾಲೇಜಿನಿಂದ ವಿದ್ಯಾರ್ಥಿ ಮಂದಿರಂ ನ ದಾರಿಯಲ್ಲಿ ಶ್ರೀ ಮಠಕ್ಕೆ ನಾನು ನಿತ್ಯವೂ ಹೋಗುತ್ತಿದ್ದೆ. ಅಲ್ಲಿಯ ಸುಂದರ ಪರಿಸರ, ಸಾತ್ವಿಕರ ಪಾದಸ್ಪರ್ಶದಿಂದ ಪವಿತ್ರವಾಗಿರುವ ಭೂತಲ, ಚಿಂತಕರು,  ಸದಾಚಾರ ಸಂಪನ್ನರು, ಉನ್ನತ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳ ಒಡೆಯರಾಗುವ ವಿಪುಲಾವಕಾಶವನ್ನು ತೊರೆದು ಭಗವಂತನ ಆರಾಧಕರಾಗಿ ಎಲ್ಲ ಬಂಧಗಳ ಕೊಂಡಿಯನ್ನು ಕಳಚಿ ಸರ್ವ ತ್ಯಕ್ತರಾದ , ಮಠದ ಶಿಷ್ಯವರ್ಗದ ಸಹೋದರ ಭಾವ ತುಂಬಿದ ಪ್ರೀತಿಯ ಸಂಭಾಷಣೆ, ವೇದ ಮಂತ್ರಗಳ ಸಹಪಠಣ ಎಲ್ಲವು ನನ್ನ ಜೀವನದ ಅತ್ಯಮೂಲ್ಯ   ಘಳಿಗೆಗಳು.
ನಿತ್ಯ ಪ್ರಾರ್ಥನೆಯಿಂದ ಪ್ರಾರಂಭವಾಗಿ ಸಂಜೆಯ ಎರಡು ಗಂಟೆಗಳ ಹೊರಾಂಗಣ ಕ್ರೀಡೆ ಮತ್ತೆ ಸಾಯಂ ಪ್ರಾರ್ಥನೆ. ಸಾಯಂ ಪ್ರಾರ್ಥನೆಯಲ್ಲಿ ನಿತ್ಯವೂ ಬದುಕಲು ಕಲಿಯಿರಿ, ವಿವೆಕಾಂದರ ಸ್ಫೂರ್ತಿ ವಾಣಿ, ವಚನವೇದ ಇತ್ಯಾದಿ ಗ್ರಂಥಗಳ ಆಯ್ದ ಭಾಗಗಳ ಚುಟುಕನ್ನು ಧ್ವನಿವರ್ಧಕದಲ್ಲಿ ಓದಿ ವಿವರಿಸುವ ಭಾಗ್ಯ ನನ್ನದಾಗಿತ್ತು. ನಿತ್ಯವೂ ಪ್ರಶಾಂತ ವಾತವರಣದಲ್ಲಿ ಏಕಾಗ್ರತೆಯಿಂದ ಓದು, ಮಂಜು ಮಹಾರಾಜ್, ಡಾಕ್ಟರ ಮಹಾರಾಜ್, ವಿಷ್ಣು ಮಯಾನಂದಜಿ ಸ್ವಾಮೀಜಿವರ ಪ್ರೋತ್ಸಾಹ ನನ್ನ ಬೆಂಗವಲಾಗಿತ್ತು. ನಾಗೇಂದ್ರ, ಕೋಟೆಮನೆ ಮಂಜು, ಶಿರನಾಲೆ ನಾಗರಾಜ, ಆನಂದ ಹೆಗಡೆ, ಗಣಪತಿ ಹೆಗಡೆ, ಕಿರಣ್, ವಿಶ್ವನಾಥ ಮುಂತಾದ ಆತ್ಮೀಯ ಸ್ನೇಹಿತರ ದಂಡು ಬೇರೆ. ನ್ಯಾಷನಲ್ ಕಾಲೇಜಿನ ಅಧ್ಯಾಪಕರ  ಪ್ರೀತಿ ನನಗೆ ಸ್ಪೂರ್ತಿಯ ಒರತೆಯಾಗಿತ್ತು.
ಹೌದು... ವ್ಯಕ್ತಿಯ ಬಾಹ್ಯ ನಡತೆ ಬಹಿರಂಗದಲ್ಲಿ ಆತನನ್ನ ಚಿತ್ರಿಸುತ್ತದೆ. ಅಂತರಂಗದ ಅಲ್ಲೋಲ ಕಲ್ಲೋಲಗಳು ವ್ಯಾಕುಲ ಮನಸ್ಸಿನ ತುಮುಲಗಳು ರಸಿಕ ಮನಸ್ಸಿನ ಚಪಲಗಳು, ಅಂತರ್ಧಾನಗೊಂಡ ಅಪ್ರಕಟಿತ ಭಾವನೆಗಳು, ಕುಟಿಲತೆ ಕಪಟತೆ ಗಳು ಮಾನವಸಹಜ ಅರಿಷಡ್ವರ್ಗ ಪ್ರೇರಿತ ಚಿತ್ತ ಚಾಂಚಲ್ಯ, ಅಂತರತಮ ಆತ್ಮದ ತಮೋ-ರಜ ಗುಣಗಳು  ಎಲ್ಲವು ಸೇರಿ ವ್ಯಕ್ತಿಯ ಪರಿಪೂರ್ಣ ಅಕಾರವನ್ನು ಬಿಂಬಿಸುತ್ತದೆ...
ಹಾಗಾಗಿ ಯಾವ ಆತ್ಮ ಕಥೆಯು ಪರಪೂರ್ಣವು ಅಲ್ಲ ಸತ್ಯವು ಅಲ್ಲ... ಯಾವ ಜೀವನ ಚರಿತ್ರೆಯು ಟೀಕೆಗೆ ಒಳಗಾಗದೆ ಇಲ್ಲ..
ಆದರೆ ನಾನು ಇಲ್ಲಿ ವ್ಯಕ್ತ ಪಡಿಸಿದುದ್ದು ಒಂದು ವ್ಯಕ್ತಿ ಮಾನವನಾಗಿ ಚೈತನ್ಯ ಪೂರ್ಣನಾಗಿ ರೂಪುಗೊಳ್ಳಲು ಹಿನ್ನೆಲೆ ಅದೆಷ್ಟು ಕಾರಣ?
ಕುವೆಂಪು ಒಬ್ಬ ಅಬ್ರಾಹ್ಮಣ್ಯ ಭಾವನೆಗಳ ಹರಿಕಾರರಗಿದ್ದರು.. ಅವರು ವಿಪ್ರ ದ್ವೇಶಿಯಾಗಿಲ್ಲಡಿದ್ದರು ಸನಾತನ ಆಚರಣೆಗಳ ಕುರಿತಾದ ಅಕ್ರೋಶವಿತ್ತು...   ಹೌದು ನಮ್ಮಲ್ಲಿಂದು ಅನೇಕ ಬುಧ್ಧಿವಂತರು ತಮಗೆ ಅಮೂಲ್ಯ ಜ್ಞಾನದ ದರ್ಶನವನ್ನು ನೀಡಿದ, ತಮ್ಮ ಮೂಲ ವ್ಯಕ್ತಿತ್ವಕ್ಕೆ ಸುಂದರ ರೂಪ ಕೊಟ್ಟ ನಮ್ಮ ಅರ್ಷೆಯ ಪರಂಪರೆ ಸಂಸ್ಕೃತ-ಸಂಸ್ಕೃತಿಯನ್ನು ದೂರಿ ಸಮಾಜದಲ್ಲಿ ತಮಗೊಂದು ವಿಶಿಷ್ಟ  ಸ್ಥಾನವನ್ನು ಪಡೆದಿದ್ದಾರೆ. ಹಣವನ್ನು ಗಳಿಸಿದ್ದಾರೆ. ಪುಸ್ತಕಗಳನ್ನು ಬರೆದಿದ್ದಾರೆ. ಅಂತರ್ಯದಲ್ಲಿ ಎಲ್ಲವನ್ನು ನಂಬಿ ಬಹಿರಂಗದಲ್ಲಿ ಹೊಸ ವಿಚಾರಗಳನ್ನು ವಿಸ್ಫೋಟಕ   ಭಾವನೆಗಳ ಕ್ರಿಯಾಶೀಲತೆಯನ್ನು ಮೆರೆದು ಅಧುನಿಕ ಸಮಾಜದ ಗಣನೆಗೆ ಪಾತ್ರರಾಗಿದ್ದಾರೆ.
ಹೀಗಾಗಿಯೇ ನಾನು ಹೇಳುವುದು. ವ್ಯಕ್ತಿಯ ನಿಜರೂಪ ಆತ ಏರಿದ ಎತ್ತರದಿಂದ ಅಳೆಯಲಾಗದು ಎಂದು.
ಬೌಧ್ಧಿಕ ನಾಯಕತ್ವದ ದಿಗಂತದಲ್ಲಿ ತಾರೆಯರಾಗಿ ಮೆರೆದ ಅನೇಕರು ಮಾನ್ಯರಾದರು. ಇನ್ನನೇಕರು
ಪ್ರಚ್ಚತೆಯಿದ್ದರು ಏರಿದ ಎತ್ತರ ಕಡಿಮೆಯಾಗಿ ಮಂದ ಬೆಳಕಿನ ಮಿಂಚು ಹುಳಗಳಂತೆ ಅಳಿದು ಹೋದರು.
ಮುಂದಿನ ಲೇಖನಕ್ಕೆ ನನಗೆ ಅದೇ ವಸ್ತು.

Friday, March 05, 2010

ಚಿಂತನೆ

ನಿನ್ನೆ ನಮ್ಮ ಸಮಸ್ಯೆಗಳ ಬಗ್ಗೆ ಬರೆದಿದ್ದೆ ಭಾರತದ ಸಮಸ್ಯೆಗಳನ್ನುವರ್ಣಿಸಲು ಕಾಳಿದಾಸನ ಉಪಮೆಯೋ ದಂಡಿಯ ಪದ ಲಾಲಿತ್ಯವೋ ಬೇಕಿಲ್ಲ.ಸುಮ್ಮನೆ ನಮ್ಮ ನಗರಗಳ ಬೀದಿಗಳತ್ತಲೋ ಖಾಲಿ ನಿವೆಶನಗಳತ್ತಲೋ ನಿರ್ಜನ ಪ್ರದೇಶಗಳಲ್ಲಿರುವ ಉದ್ಯನಗಳತ್ತಲೋ ಕಣ್ಣು ಹಾಯೋಸಿದರೆ ನಮ್ಮ ಭಾರತ ಮಾತೆಯ ಇಂದಿನ ಸ್ಥಿತಿಯ ವಿಶ್ವರೂಪ ದರ್ಶನವಾಗುತ್ತದೆ. ಪಶುಸದೃಶ ಜೀವಿಗಳಿಂದ ತುಂಬಿದ ಯಮಪುರಿಯ ವೈಭವ ಮರ್ತ್ಯಲೋಕದಲ್ಲಿ ಆವಿರ್ಭವಿಸಿದಂತೆ ಗೋಚರವಾಗುತ್ತದೆ

ಇರಲಿ ಇದರಿಂದ ಈ ವರ್ಣನೆಯಿಂದ ಯಾರಿಗೂ ಲಾಭವಿಲ್ಲ. ಸುಸಂಸ್ಕೃತ ಸಮಾಜ ಎಂದೋ ತನ್ನನ್ನು ನೀರಿನ ಮೇಲಿನ ತೈಲದಂತೆ ಬೇರ್ಪದಿಸಿಕೊಂಡಿದೆ. ತನ್ನ ಆಯ್ಕೆ ಏನೆಂದು ತಿಳಿದಿದೆ.

ಪರಹಾರದ ಕುರಿತು ರಚನಾತ್ಮಕ ಚಿಂತನೆಯಲ್ಲಿ ತೊಡಗಬೇಕು. ನಾನು ಪರಿವೀಕ್ಷಿಸಿದ ಅನೇಕ ವಿಷಯಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತೇನೆ.

ಹಾಗಿದ್ದರೆ ನಾವು ಎಲ್ಲಿ ನಮ್ಮ ಪ್ರಯತ್ನವನ್ನು ಕೇಂದ್ರೀಕರಿಸಬೇಕು? ನಮ್ಮ ಶಿಕ್ಷಣ ಎಲ್ಲಿ ಬದಲಾಗಬೇಕು?

  • ಯಾವುದು ಮುಖ್ಯ ಯಾವುದು ಅಮುಖ್ಯ? ಯಾವುದು ಕಲ್ಪನೆ? ಯಾವುದು ವಾಸ್ತವ?ಯಾವುದು ಪ್ರಾಯೋಗಿಕ? ಎಲ್ಲಿದೆ ಸತ್ವ? ಯಾವುದು ಪ್ರಚ್ಚನ್ನ? ಗುರುತಿಸುವ - ಆಯ್ಕೆ ಮಾಡುವ ಸಾಮರ್ಥ್ಯ
  • ಕೃಷ್ಣದೇವರಾಯನ ಹೆಂಡತಿಯರ ಸಂಖ್ಯೆ ಎಷ್ಟು? ಭಾರತದಲ್ಲಿ ಎಷ್ಟು ಯುದ್ಧಗಳಾದವು ? ಯಾರ್ಯಾರು ದಂಡೆತ್ತಿ ಬಂದರು? ಕಲಿಕೆ ಬೇಕಿಲ್ಲ. ಇತಿಹಾಸ ಹೊಟ್ಟೆ ತುಂಬಿಸದು.
  • ಹಿಂದಿನದನ್ನು ಮೆಲುಕುಹಾಕುತ್ತಾ ಮುಂದಿನದನ್ನು ಮರೆಸುವ ವಿಚಲಿತಗೊಳಿಸುವ, ವೈಫಲ್ಯಗಳನ್ನು ವೈಭವೀಕರಿಸುವ ಅಗತ್ಯವಿಲ್ಲ
  • ಮಕ್ಕಳಿಗ ಜಗತ್ಪರ್ಯಟನೆ ಅವಕಾಶ ಶಾಲೆಯಲ್ಲಿರುವಾಗ ಸಿಗಬೇಕು. ಕಣ್ಣಿಗೆ ಕಂಡಿದ್ದು ಬಾಯಲ್ಲಿ ವರ್ಣಿಸಿದ್ದಕ್ಕಿಂತ, ಪುಸ್ತಕಲ್ಲಿ ಓದಿದ್ದಕ್ಕಿಂತ ಪರಿಣಾಮಕಾರಿ
  • ಪ್ರಭಾವಿ ಪರಿಣಾಮಕಾರೀ ಅಭಿವ್ಯಕ್ತಿ ಕೌಶಲ್ಯ ಮತ್ತು ಶೈಲಿ ಬೆಳೆಸಬೇಕು
  • ವೈಫಲ್ಯಗಳನ್ನು ಜಯಿಸುವ ವೈಫಲ್ಯಗಳನ್ನು ಸಮಚಿತ್ತದಿಂದ ಸ್ವೀಕರಿಸುವದು
  • ಅನಿಮಿತ ಅಪಾಯದ ಅನಿಯತ ಪಲಿತಾಂಶದ ಗುರಿಯತ್ತ ಛಲದಿಂದ ಮುನ್ನುಗ್ಗುವ ಗುಣ
  • ಫಲಹೇತುಗಲಾಗದೆ ಕರ್ಮಭೀರುಗಲಾಗುವುದು
  • ಗುರಿಯನ್ನು ಸಾಕಾರಗೊಳಿಸಲು ಬೇಕಾಗುವ ಹೂಡಿಕೆ ಮತ್ತು ಪರಿಕರ ಒದಗಿಸುವುದು
  • ಶಿಸ್ತಿನ ,ನಿರ್ಧಿಷ್ಟ, ನಿರೀಕ್ಷಿತ ಮೈಲುಗಲ್ಲುಗಲಿರುವ ಕಾರ್ಯ ಅನುಸಂಧಾನ
  • ಸ್ವಾಭಿಮಾನ,ಸ್ವಾವಲಂಬನೆ ಮತ್ತು ಸ್ವತಂತ್ರ ಚಿಂತನೆ.
  • ಅನುಪಯುಕ್ತತೆ, ಅಪವ್ಯಯ ನಿಯತ್ರಣ
  • ವೃತ್ತಿಪರತೆ, ವೃತ್ತಿಪ್ರೇಮ, ವೃತ್ತಿಗೌರವ , ವೃತ್ತಿಯ ಗಾಂಭೀರ್ಯ ಮತ್ತು ಅಭಿಮಾನ 
  • ಅಂತಿಮವಾಗಿ ಚಾರಿತ್ರ್ಯ, ಧೈರ್ಯ, ಆತ್ಮವಿಶ್ವಾಸ ತುಂಬಿದ ನೇರ, ಪ್ರಾಮಾಣಿಕ, ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ
  • ಕನಸುಗಾರರಾಗಿ ಮಹತ್ಸಾಧನೆಯತ್ತ ಸಂತೋಷ ಆನಂದದ ತ್ರಪ್ತಿ ತುಂಬಿದ ಸುಂದರ ಬದುಕಿನ ಅದಮ್ಯ ಆಸೆಯ ಹಸಿವನ್ನ ಅಂತರ್ಗತವಾಗಿಸುವುದು

ಹೌದು ಇಲ್ಲಿ ಹೊಸ ಚಿOತನೆಯೇನಿಲ್ಲ! ಎಲ್ಲಿ ಯೋ ಓದಿದ್ದು ಯಾರಿಂದಲೋ ತಿಳಿದಿದ್ದು ಅನ್ನಿಸದೆ?. ಹೌದು ಯಾವುದನ್ನೂ ಒಪ್ಪಿಕೊಳ್ಳದ ಗೌರವಿಸದ ಅನುಷ್ಟಾನಗೊಳಿಸದ ಜನ ನಾವಲ್ಲವೇ?

ನಮ್ಮ ಬುಧ್ಧಿ ಅಪರಿಮಿತ! ಅನುಷ್ಠಾನ ಮಾತ್ರ ಶೂನ್ಯ! ನಮ್ಮ ರಾಜಕಾರಣಿಗಳು ಹೀಗೆ! ಮಾಧ್ಯಮಗಳು ಹೀಗೆ! ಕೊನೆಗೆ ಬಹುತೇಕರು ಹೀಗೆಯೇ!"ಹೆಸರು ಗಲಿಸಳಿಕೆಸಪ ಹಣಗಳಿಸಲಿಕೆಸಪ ದುರಿತಗಲ್ಗೆನೆಯುಂಟೆ?" ಕವಿವಾಣಿ ಅದೆಷ್ಟು ಸತ್ಯ? ಎಲ್ಲಿಯೋ ನಮಗೆ ಪ್ರಚಾರದ ಪೆಡಂಭೂತ ಅಂಟಿಕೊಂಡಿದೆ! ಎಲ್ಲವು ಪ್ರಚಾರ! ಎಲ್ಲದಕ್ಕೂ ಪ್ರಚಾರ!

ವರ್ತಮಾನ ಪತ್ರಿಕೆಗಳ ಮುಖಪುಟಗಳನ್ನೇ ನೋಡಿ... ಅಂಕಿ ಅಂಶಗಳ ಸಮೇತ ನಡೆಯುವುದು ಏನನ್ನೋ ಕೆರಳಿಸುವ ಪ್ರಚಾರ!

ವಿಜ್ಞಾನ ತಂತ್ರಜ್ಞಾನ ಕೃಷಿ ಶಿಕ್ಷಣ ಕ್ಷೇತ್ರಗಳಲ್ಲಿ ನೂತನತೆಯಾ ಪ್ರಚಾರವೆಕಿಲ್ಲ? ನಮ್ಮನ್ನು ಬಾಧಿಸುತ್ತಿರುವ ಜ್ವಲಂತ ಸಮಸ್ಯೆಗಳ ವಾಸ್ತವಿಕ ಅಂಕಿ ಅಂಶಗಳ ಪ್ರಕಟವೇಕಿಲ್ಲ? ಅದು ಇನ್ಯಾರದೋ ಕೆಲಸ ಅಲ್ಲವೇ?ಅದಕ್ಕೆ ಸರಕಾರ ಅಥವಾ ಸಂಸ್ಥೆಗಳಿವೆ ಅಲ್ಲವೇ?

ಜನ ಬಯುಸುವುದು ಅದನ್ನೇ! ನಮ್ಮಲ್ಲಿ ಯಾವುದು ಹೆಚ್ಚು ಮಾರಾಟವಾಗುತ್ತದೋ ಅದನ್ನೇ ಮಾರಲಾಗುತ್ತಿದೇಯಲ್ಲ?
ಹೌದು ನಮ್ಮನ್ನು ನಾವು ಅರಿತರೆ ಭಯವಾಗುತ್ತದಲ್ಲವೇ? ನಮ್ಮ ಮುಖದರ್ಶನ ನಮಗೆ ನಾಚಿಕೆ ತರಿಸದೇ?

ನಾವು ಎಲ್ಲವನ್ನು ದುರ್ಬಲಗೊಳಿಸುತ್ತೇವೆ! ಸರಕಾರವನ್ನು, ಧರ್ಮವನ್ನು, ಕಾನೂನನ್ನು, ಶಿಸ್ತನ್ನು,ಸಮಾಜವನ್ನು, ಸೈನ್ಯವನ್ನು, ಕೊನೆಗೆ ನಮ್ಮನ್ನು ನಮ್ಮವರನ್ನೂ ಅಲ್ಲವೇ?

ನಮ್ಮಲ್ಲಿ ಸಂಬಂಧಗಳು ದುರ್ಬಲವಾಗುತ್ತಿದೆ ಶರೀರ ದುರ್ಬಲವಾಗುತ್ತಿದೆ ಕೊನೆಗೆ ಮನಸ್ಸು ಕೂಡ ಇಂತಹ ಬಲು ದುರ್ಗಮವಾದ ಅನೇಕ ವಿಧವಾದ ಅಡ್ಡ ಗೋಡೆಯನ್ನು ಕಂಡು ಭೀತವಾಗಿ ದುರ್ಬಲವಾಗದಿದ್ದೀತೆ?

ನಮಗೆ ಮಾರ್ಗ ಮುಖ್ಯವಲ್ಲ! ಪಡೆಯುವ ಲಾಭ ಮುಖ್ಯ!

ಈ ನನ್ನ ಕಿರು ಲೇಖನದಲ್ಲಿ ಋಣತ್ಮಕತೆ ಎಷ್ಟು? ನಿರರ್ಗಳವಾಗಿ ಋಣಮುಖ ಭಾವನೆ ಅನಿಯಂತ್ರಿತವಾಗಿ ಸ್ಪುಟವಾಗಿ ಹೇಗೆ ಹೊಮ್ಮಿದೆ ನೋಡಿ?ಅಷ್ಟು ಹಾಸುಹೊಕ್ಕಾಗಿದೆ ವಿತಂಡವಾದ!
ಇದು ಆತ್ಮ ವಿಮರ್ಶೆಯಲ್ಲ! ಈ ವ್ಯಕ್ತಿ ಎಲ್ಲರಲ್ಲಿದ್ದಾನೆ! ಹಾಗಾಗಿ ಒಟ್ಟಾರೆ ಭಾರತೀಯರೇ ಹೀಗೆ!
ಒಂದು ಚಿಕ್ಕ ಮಗು ಕೂಡ ಸಂಶೋಧನಾತ್ಮಕ ಪ್ರಭಂಧ ಮಂಡಿಸುವಷ್ಟು ಸಮಸ್ಯೆಗಳು ನಮ್ಮಲ್ಲಿವೆ!

ಹಾಗಿದ್ದರೆ ನಾವು ನಿಷ್ಪ್ರಯೋಜಕರೆ? ಖಂಡಿತ ಅಲ್ಲ

ನಾವು ಭಾವುಕರು! ಭಾವೋದ್ವೇಗಕ್ಕ ಸುಲಭಡ ತುತ್ತು ನಾವು! ನಮ್ಮ ಭಾವನೆಯೇ ನಮ್ಮ ಸುತ್ತ ಬೃಹತ್ ಪ್ರತಿಭಂಧಕವಾಗಿ ನಮ್ಮೆಲ್ಲ ಸಮಸ್ಯೆಗಳ ಮೂಲ.

ಅಮೇರಿಕಾದಲ್ಲಿ ಸ್ವಾವಲಂಬನೆ ಒಂದು ಆಯ್ಕೆಯಲ್ಲ! ಅದು ಶಾಸನ! ಜೀವ ವಿಮೆ ಕೂಡ ಒಂದು ಶಾಸನ! ಆರೋಗ್ಯ ಮತ್ತು ಶಿಕ್ಷಣ ಕೂಡ ! ವ್ಯವಸ್ಥೆಯೇ ಜನರನ್ನು ಕರ್ಮ ಮಾರ್ಗಿಗಳನ್ನಾಗಿ ಮಾಡಿದೆ!


ನಮ್ಮಲ್ಲೂ ಮೂಲಭೂತ ಹಕ್ಕುಗಳ ಕಲ್ಪನೆ ಇದೆ. ನಮ್ಮಲ್ಲೂ ಶಾಸನ ಇದೆ. ಸ್ವಲ್ಪ ಜಾಸ್ತಿಯೇ ಇರಬೇಕು! ಜನ ಪಾಲಿಸದಷ್ಟು... ಸರ್ಕಾರ ನಿಯಂತ್ರಿಸದಸ್ತು ಅಥವಾ ನಿರಾಸಕ್ತಿ ಬರುವಷ್ಟು... ಹಣ ಇದ್ದರೇ ಎಲ್ಲವು. ನಮ್ಮ ವ್ಯವಸ್ತೆ ಶ್ರೀಮಂತರಿಗಾಗಿ... ದರಿದ್ರರಿಗೆಕೆ ವ್ಯವಸ್ತೆ? ಅದು ಅವರ ಕರ್ಮ !
ನಮ್ಮ ಇಚ್ಚಾಶಕ್ತಿ ಇರುವುದು ಹಕ್ಕುಗಳ ಅನುಸ್ತಾನದಲ್ಲಲ್ಲ... ಹಕ್ಕುಗಳನ್ನು ಕಸಿಯುವುದರಲ್ಲಿ...
ಹಾಗಾಗಿಯೇ ನಾವು ಅಲ್ಪ ಪ್ರಾಪಂಚಿಕ ವಸ್ತುಗಳಿದ್ದರೂ ಅತ್ಯಾನಂದ ಭರಿತರು! ಇಸ್ಟೆಲ್ಲಾ ಸಮಸ್ಯೆಯಿದ್ದರೂ ಪ್ರಪಂಚದಲ್ಲಿ ಭಾರತೀಯರೇ ಬಹು ಸಂತೋಷಿಗಳು!ನಿತ್ಯ ಆತ್ಯಂತಿಕ ಸಂತೋಷ ಅನುಭವಿಸುವ ಮದನ ಸಂತಾನರು!

ಇಂದು ಅಮೆರಿಕ ಸಾಮಾಜಿಕ ಅಸ್ಥಿರತೆಯಿಂದ ತೊಳಲಾಡುತ್ತಿದೆ! ವಿತ್ತ ಸ್ವಾತಂತ್ರ್ಯ - ಸಂಭಂಧಗಳಲ್ಲಿ ಬಿರುಕು ಮೂಡಿಸುತ್ತಿದೆ! ದಣಿದ ಶರೀರ ಸಹಭಾಗಿಯ ಅವಜ್ಞೆಗೆ ಅನ್ನವಾಗಿದೆ!ಮಾತೃತ್ವ - ಪಿತೃತ್ವ ಅರ್ಥಕಳೆದುಕೊಂಡು ಎಲ್ಲಿಯೂ ಪಾವಿತ್ರ್ಯದ ಪರಿಕಲ್ಪನೆ ನಶಿಸಿಹೋಗಿದೆ!

ಇಲ್ಲಿಯ ವೈಭವದ ಸುಲಭ ಜೀವನದ ಮಹದಾಸೆಯಿಂದ ವಲಸಿಗರಾಗಿ ಬಂದ ಭಾರತೀಯರು ಅತ್ತ ಮರಳಲಾರದೆ ಇತ್ತ ಇರಲು ಆಗದೆ ಸಾಕ್ಷಾತ್ ತ್ರಿಶಂಕು ಸ್ವರ್ಗದ ವಿಶಿಸ್ತ ಅನುಭವದಲ್ಲಿ ಮೀಯುತ್ತಿದ್ದಾರೆ!ಸತ್ಯದ ಅರಿವಾದರೂ ತಾನು ಮಾಡಿದ್ದು ಸರಿ ಅನ್ನುವ ಬಿಂಕದ ಮಾತು ಮಾತ್ರ ಇನ್ನು ಜೀವಂತ! ಇನ್ನು ಹೆಚ್ಚು ವಲಸಿಗರನ್ನು ಕರೆದು ತಂದು ಬಹುಸಂಖ್ಯಾತರಾಗಿ ತನ್ನ ಸ್ವಾರ್ಥ ಸಾಧಿಸುವ ಹುನ್ನಾರ ಬೇರೆ!

ಹೌದು ಎಲ್ಲವು ಒಂದು ಅನುಭವ! ನಾನು ಬಣ್ಣಿಸಿದ ಸಮಕಾಲೀನ ಭಾರತವು ಒಂದು ಅನುಭವ ಆದರೆ ಅನುಭವಗಳು ಸ್ವಲ್ಪ ಬೇರೆ! ಅಷ್ಟೇ!

ಅದಕ್ಕೆ ಹೇಳಿದ್ದು ನಾವು ಬಯಸುವ ಬದಲಾವಣೆ ನಾವಾಗಲು ಸಿಧ್ಧರಿಲ್ಲ ನಮ್ಮ ಮನೆಯನ್ನು ಸ್ವಚ್ಚಗೊಳಿಸಲು ನಾವು ಸಿಧ್ಧರಿಲ್ಲ!

ಎಲ್ಲಿ ಸುಲಭವೋ ಅಲ್ಲಿ ನಾವು!

ಹಾಗಾಗಿಯೇ ನಾವು ಇನ್ಫೋಸಿಸ್ ವಿಪ್ರೋ ಮತ್ತು TCS ಗಳಲ್ಲೇ ತೃಪ್ತಿ. ಸೇವೆಯೇ ಪರಮೋಧರ್ಮ! ಸೇವೆಯಿಂದ ಸುಲಭ ಗಳಿಕೆ! SAVE ಇಂದ ಸುಲಭ ಜೀವನ ನಮ್ಮ ಮಂತ್ರ!

ಹಾಗಾಗಿ ಕೊಳೆತು ನಾರುವಷ್ಟು ಹಣ ನಮಗೆ ಬೇಕು! ಇನ್ನು ಬೇಕು ಮತ್ತು ಬೇಕು!

ಯಾಕೆಂದರೆ ನಾನು ಮದುವೆಯಾಗಬೇಕು ಸುಂದರ ಕನ್ಯೆ ನನ್ನವಳಾಗಬೇಕಾದರೆ! ನಾನು ಗಳಿಸಬೇಕು ಉಳಿಸಬೇಕು! ಹಾಗಾಗಿ ನಾನು ತುಳಿದ ದಾರಿ ಹಣ ತರುವನ್ತಿರಬೇಕು

ನಾನು ಪ್ರೀತಿಸುವ ವಸ್ತು ನನ್ನದಾಗಬೇಕು... ಇಂತಹ ಮನೋಧರ್ಮ ನಮ್ಮದು.

ಸಾಂಘಿಕವಾಗಿ ನಾವು ಇಂತಹ ಭಾವನೆಗಳನ್ನು ಉಳಿಸುತ್ತೇವೆ ಬೆಳೆಸುತ್ತೇವೆ ಒಂದು ರೀತಿಯಲ್ಲಿ ನಾವು ಭಯೋತ್ಪಾದಕರೆ! ಭಯೋತ್ಪಾದಕರ ಗುರಿಯು ದೇಶದ ಉತ್ಪನ್ನತೆಯನ್ನು ಕುಂದಿಸುವುದು ನಾವು ಮಾಡುತ್ತಿರುವುದು ಅದನ್ನೇ! ನಮ್ಮ ಭಯೋತ್ಪಾದನಾ ಮಾರ್ಗ ಮಾತ್ರ ಬೇರೆ!

ನನ್ನ ಉದ್ದೇಶ ನಮ್ಮ ವೈಫಲ್ಯಕ್ಕೆ ಕಾರಣ ಎತ್ತಿತೊರಿಸುವುದು ನಮ್ಮ "blind spot " ಅಥವಾ "ಕುರುಡುತನದ" ಅರಿವು ಮೂಡಿಸುವುದು! ನಮಗೆ ಬೇಕಾಗಿರುವುದು ದೃತರಾಷ್ಟ್ರ ಗಾಂಧಾರಿಗಳಲ್ಲ!ಚೈತನ್ಯವನ್ನು ಸಂಸ್ಫುರಿಸಿ ಸಮರೋತ್ಸಾಹ ತುಂಬುವ ಗೀತಾಚಾರ್ಯರು!

ವಿಷಾದ ಯೋಗದಿಂದ ಭಗವದ್ಗೀತೆ ಹುಟ್ಟಿತು! ನನ್ನ ಅಧುನಿಕ ವಿಷಾದ ಮುಂದಿನ ಸಾಂಖ್ಯ ಯೋಗವನ್ನು ಸೃಷ್ಟಿಸಲಿ. ಕರ್ಮ, ಜ್ಞಾನ ಯೋಗದಿಂದ ಹಿಡಿದು ಮೋಕ್ಷ ಸನ್ಯಾಸ ಯೋಗದವರೆಗೆ ನಮ್ಮನ್ನು ಸುಲಲಿತವಾಗಿ ಕೊಂಡೊಯ್ಯುವ ನೌಕೆ ನಮಗೆ ಬೇಕಲ್ಲವೇ?

ನನ್ನ ಮುಂದಿನ ಲೇಖನ ಅಂತಹ ಒಂದು ಪ್ರಯತ್ನಕ್ಕೆ ನಾಂದಿ ಹಾಡಲಿದೆ! ನಿರೀಕ್ಷಿಸಿ......

Thursday, March 04, 2010

ನಾವೇಕೆ ಹೀಗೆ?

ಇಂದಿನ ದಿನಪತ್ರಿಕೆಯಲ್ಲಿ ಇನ್ನೊಂದು ಸ್ಪೋಟಕ ಸುದ್ದಿ! ಬೆಂಕಿ! ಪೋಲಿಸ್! ದೊಂಬಿ
ಎಲ್ಲರ ಬಾಯಲ್ಲೂ ಇದೆ ಮಾತು! ಮೊನ್ನೆಯ ಕೋಮು ಗಲಭೆ ಇನ್ನೂ ಕಾವಾರುವ ಮುನ್ನ !
ಮೊನ್ನೆಯಷ್ಟೇ ನ್ಯೂ ಯಾರ್ಕ್ ನಗರ ನೋಡಿ ಸ್ತಂಭೀಭೂತನಾಗಿದ್ದ ನಾನು ವಿಚಾರ ಮಗ್ನನಾಗಿದ್ದೆ
ವಲಸಿಗರ ನಾಡಾದ ಅಮೇರಿಕ ಇಂದು ಜಗತ್ತಿನ ಶ್ರೀಮಂತ ದೇಶ. ೧೬ ಲಕ್ಷ ಬುಧ್ಧಿವಂತ ಭಾರತೀಯರನ್ನು ಆಕರ್ಷಿಸಿದ ಸ್ವರ್ಗ!
ಕೇವಲ ೩ ಶತಮಾನದಲ್ಲಿ ಇಷ್ಟು ಸಾಧನೆ! ೨೬ ಕೋಟಿ ಜನಸಂಖ್ಯೆ. ಅತ್ಯಂತ ಕಷ್ಟಕರ ಭೌಗೋಲಿಕ ಪರಿಸರ. ಹೀಗಿದ್ದು ಇಂತಹ ಸಾಧನೆ ಹೇಗೆ ಸಾಧ್ಯ? ವಿವಿಧ ದೇಶಿಗರು ವಿವಿಧ ಧರ್ಮೀಯರು ವಿವಿಧ ಮೂಲವಾಸಿಗಳನ್ನು ಹೊಂದಿದ, ಯಾವುದೇ ಒಂದು ಸಂಸ್ಕೃತಿಯ ಒಂದು ಜನಾಂಗದ ನೆಲೆಬೀಡಾಗಿರದ ಈ ದೇಶ ಇಂದು ಅಭಿವೃದ್ದಿಯ ಉತ್ತುಂಗಕ್ಕೇರಿದೆ
ನಮ್ಮಲ್ಲಿ ಒಂದು apple, ಒಂದು google ಒಂದು intel ಒಂದು TI ಒಂದು ಮೈಕ್ರೊಸಾಫ್ಟ್
ಯಾಕಿಲ್ಲ? ಅಂತಹ ಸಾಧನೆ ಸಾಧ್ಯವೇ? ಭವ್ಯ ನಗರಗಳ ನಿರ್ಮಾಣ ನಮ್ಮಲ್ಲಿ ಸಾಧ್ಯವೇ? ಕೋಟಿ ಕೋಟಿ ಋಷಿ ಸಂತಾನರನ್ನು ಹೊಂದಿದ್ದ ಭಾರತ ಇಂದು ಕೇವಲ ಪಶು ಸಂತಾನರ ಬೀಡಾಗಿ ಹೋಗಿದ್ದೇಕೆ?
ನನ್ನ ಮನಸ್ಸು ಕುಗ್ಗಿ ಹೋಗಿತ್ತು ಕ್ಲೆಶಭರಿತವಾಗಿತ್ತು.
ನಾಡು-ನುಡಿಯ ಕುರಿತಾದ ನನ್ನ ಮನದ ಭಾವನೆಗಳು ರಕ್ತ ನಾಡಿಗಳನ್ನು ಸೇರಿ ಹೃದಯದೊಂದಿಗೆ ಮಿಳನಗೊಂದು ಮಸ್ತಿಸ್ಕದಲ್ಲಿ ಮಿಡಿಯತೊದಗಿತ್ತು!
ಕುವೆಂಪು ವಿರಚಿತ "ಭಾರತ ಜನನಿಯ ತನುಜಾತೆ" ಕವಿತೆಯಾಗಿ ಏಕೆ ಉಳಿಯಿತು?
ಜನ ಗಣ ಮನ ವಿಶ್ವದ ಸುಂದರ ರಾಷ್ಟ್ರ ಗೀತೆ ಎಂದು ಕರೆಸಿಕೊಂಡಿತು! ಗೀತೆ ರವೀಂದ್ರರ ಕನಸೇ? ಭ್ರಮೆಯೇ? ಕೃಣ್ವoತೋ ವಿಶ್ವಮಾರ್ಯಂ ಘೋಷಣೆಯಾಗಿ ಉಳಿಯಿತೆಕೆ?
ಹೌದು! ಕಾರಣ ?
  • ಅಲ್ಪ ತೃಪ್ತಿ, ಆತ್ಮ ರತಿ
  • ಸೋಲಿನ ಭೀತಿ.
  • ನಮ್ಮ ಶ್ರಮ ದೊಂಬಿಗಲಲ್ಲಿ, ವ್ಯರ್ಥ ಚಿಂತನೆಯಲ್ಲಿ, ವ್ಯರ್ಥಾಲಾಪದಲ್ಲಿ ವ್ಯಯ
  • ನಾವು ಋಣಾತ್ಮಕ ಚಿಂತಕರು
  • ಪಲಿತಾಂಶದಲ್ಲಿಲ್ಲ ನಮ್ಮ ಗಮನ
  • ನಾವು ಭಾಷಣ ಶೂರರು
  • ಕೂತು ತಿನ್ನುವವರು ಹಲವರಾದರೆ ದುಡಿಯುವವರು ಕೆಲವು
  • ನಾವು ಬಯಸುವ ಬದಲಾವಣೆ ನಮ್ಮಿಂದ ಸಾಧ್ಯವಿಲ್ಲ ಬದಲಾವಣೆ ನಾವಾಗಲು ಸಿದ್ಧರಿಲ್ಲ

ಎಲ್ಲಿದೆ ಆಶಾ ಕಿರಣ ?

ನಾನಂತೂ ಮೂರು ದಶಕಗಳನ್ನು ಸವೆಸಿ ನಲ್ಕದರತ್ತ ದಾಪುಗಾಲು ಹಾಕುತ್ತಿರುವೆ!! ನಮ್ಮ ತಲೆಮಾರಿಗೆ ನಮ್ಮ ಅನ್ಧತೆಯ ಅರಿವಿಲ್ಲ ಅರಿವಾಗುವಷ್ಟರಲ್ಲಿ ಮಿನ್ಚಿಹೋಗಿದೆ ಕಾಲ! ನಾವು ಮಾಡಬೇಕಾದುದು ಇಸ್ಟೇ.ನಮ್ಮ ಮುಂದಿನ ಪೀಳಿಗೆಗೆ ಗುರಿಯ ಕಿಚ್ಚು ಹೊತ್ತಿಸಿ ವಾಸ್ತವಿಕತೆಯ ಬೆಳಕು ತೋರಿಸುವುದು! ಮಕ್ಕಳೇ ನಮ್ಮ ಆಸ್ತಿ! ನಮ್ಮ ಹೂಡಿಕೆ !ಸತ್ಯ ಮಾರ್ಗದರ್ಶನ ಭದ್ರ ಬುನಾದಿ!

ಮುಂದಿನ Bill Gate ಭಾರತದಲ್ಲಿ ಎನ್ನುವ ಅಮೆರಿಕನ್ನರ ಭವಿಷ್ಯ ನಿಜವಾಗಲಿ

ಸುಲಭದ ಪ್ರಶ್ನೆ ಕಷ್ಟದ ಉತ್ತರ

1989 ನಾನು ಆಗ ಭರತನ ಹಳ್ಳಿಯ ಪ್ರಗತಿ ಪ್ರೌಢ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ. ನಮ್ಮೂರಿನವರೇ ಆದ ಗಣಪತಿ ಭಟ್ IRS ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರಿಂದ ಸನ್ಮಾನ ಏರ್ಪಡಿಸಲಾಗಿತ್ತು. ಸಮಾರಂಭದ ಅಂಗವಾಗಿ ರಸಪ್ರಶ್ನೆ ಕಾರ್ಯಕ್ರಮ.
ಪ್ರಶ್ನೆ :
೧೯೮೭ನೆ ವರ್ಷದ ವಿಶೇಷತೆ ಏನು?

ಉಳಿದ ಮೂರುತಂಡಗಳು ಉತ್ತರ ನೀಡುವ ಉತ್ಸುಕರಿದ್ದರು. ಆದರೆ ಉತ್ತರಿಸುವುದು ನನ್ನ ಸರದಿ . ನಾನು ಎದ್ದು ನಿಂತು ದೈರ್ಯವಾಗಿ ಹೇಳಿದೆ "ಫ್ರೆಂಚ್ ಕ್ರಾಂತಿಯ ದ್ವಿಶತಮಾನೋತ್ಸವ " ನಿರ್ಣಾಯಕರ ದೃಷ್ಟಿಯಲ್ಲಿ ಉತ್ತರ ತಪ್ಪಾಗಿತ್ತು ಉಳಿದವರು ಎದ್ದು ನಿಂತು ಜವಾಹರ ಲಾಲ್ ನೆಹರು ಜನ್ಮ ಶತಮಾನೋತ್ಸವ ಎಂದು ಹೇಳಿ ಪೂರ್ಣ ಅಂಕ ಗಿಟ್ಟಿಸಿದ್ದರು ... ಯಾಕೆಂದರೆ ಆ ವರ್ಷ ದೇಶಾದ್ಯಂತ ನೆಹರು ಜನ್ಮ ಶತಾಬ್ದಿ ವರ್ಷಾಚರಣೆ ನಡೆಯುತ್ತಿತ್ತು . ಸುಲಭದ ಪ್ರಶ್ನೆಗೆ ಸುಲಭದ ಉತ್ತರ ಎಲ್ಲರಿಗು ತಿಳಿದಿತ್ತು . ಆದರೆ ನನ್ನ ಉತ್ತರ ಬೇರೆಯೇ ಆಗಿತ್ತು . ಆಗ ನನ್ನ ನೆರವಿಗೆ ಬಂದಿದ್ದು ಗಣಪತಿ ಭಟ್ . ಹೌದು ನಿಜವಾಗಿಯೂ ೧೯೮೭ ಫ್ರೆಂಚ್ ಕ್ರಾಂತಿಯ ದ್ವಿಶತಮಾನೋತ್ಸವ ವರ್ಷವೇ ಆಗಿತ್ತು . ಸುಲಭದ ಪ್ರಶ್ನೆಗೆ ನಾನು ನೀಡಿದ್ದ ಉತ್ತರ ಉಳಿದವರಿಗೆ ಕಷ್ಟಕರವಾಗಿತ್ತು. ನನಗೆ ಪೂರ್ಣ ಅಂಕ ಕೊಡಿಸಿದ ಗಣಪತಿ ಭಟ್ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರತ್ಯುತ್ಪನ್ನ ಮತಿತ್ವ ಸಹಾಯಕಾರಿ ಎಂದು ವಿವರಿಸಿದ್ದರು ಕೂಡ.

Wednesday, March 03, 2010

ಹೆಜ್ಜೆ ಗುರುತು

ವೃತ್ತಿಯಲ್ಲಿ ಏಕತಾನತೆಯನ್ನು ನಿವಾರಿಸಲು ಪ್ರವೃತ್ತಿ ಬೇಕು. ಬರವಣಿಗೆ - ಮೆದುಳಿನಲ್ಲಿ ಸುಳಿದು ಹೋಗುವ ಅಲೆಗಳನ್ನು
ಹಿಡಿದಿಟ್ಟು ಅಭಿವ್ಯಕ್ತಗೊಳಿಸುವ ಸಾಧನ. ಮೊಂದೊಂದು ದಿನ ಬದುಕಿನ ಸಿಂಹಾವಲೋಕನಕ್ಕೆ ಇಂದು ಮಾಡುವ ಚಿಕ್ಕ ಹೆಜ್ಜೆ ಗುರುತು.
ಎಲ್ಲೋ ಹುಟ್ಟಿ ಹೇಗೋ ಬದುಕಿ ಅಳಿದು ಹೋಗುವ ಸಾವಿರ ಸಾವಿರ ಹುಲು ಮಾನವರಲ್ಲಿ ನಾವು ನಗಣ್ಯ. ಜಗತ್ತನ್ನು ಸುತ್ತಿ ಕಲ್ಪನಾತೀತ ಪ್ರಪಂಚದ
ಕಿರು ದರ್ಶನ ಪಡೆದ ನಾನು ನನ್ನ ಇತಿ-ಮಿತಿ ತಿಳಿದದ್ದೇ ಇ-ಜನ್ಮದ ದೊಡ್ಡ ಸಾಧನೆ!! ಹೆಚ್ಚು ತಿಳಿದಷ್ಟೂ ವಿವೇಕ ವಿಧೇಯತೆ! ವಿಭಿನ್ನ ದೃಷ್ಟಿ!
ನಿನ್ನೆಯ ಮಿಥ್ಯೆ ಇಂದು ಸತ್ಯ! ಇಂದಿನ ಸತ್ಯ ನಾಳೆಗೆ ಮಿಥ್ಯೆ! ನಿತ್ಯ ವೈರುಧ್ಯಗಳೊಂದಿಗೆ ಬದುಕು! ಬರೆದರೆ ಮುಗಿಯದು!ಹೊಸತು ಬರೆಯುವ ಹಂಬಲ!
ನಿನ್ನೆಯ ಲವಲೇಶವು ತಾಕದ ಶುದ್ದ ಹೊಸತರ ಶೋಧನೆಯಲ್ಲಿದ್ದೇನೆ! ಸಿಕ್ಕರೆ ಖಂಡಿತ ನಾನೂ ಬರೆಯುತ್ತೇನೆ... ತೃಪ್ತಿಗಾಗಿ...

ಮಂದಸ್ಮಿತ

ಮಕ್ಕಳು ಇರುವ ಬದುಕು ಸುಂದರ! ಮಕ್ಕಳ ಮುದ್ದು ಮಾತು ಅಷ್ಟೇ ಸೊಗಸು. ಮಕ್ಕಳು ಪ್ರತ್ಯುತ್ಪನ್ನ ಮತಿಗಳಾಗಿ ಸದಾ ನಮ್ಮನ್ನು ಚಕಿತ ಗೊಳಿಸುತ್ತಾರೆ.ನನ್ನ ಸ್ಮೃತಿಪಟಲದ ಪುಟದಿಂದ ಆಯ್ದ ಕೆಲವು ಇಲ್ಲಿದೆ


ಅಮ್ಮಂಗೆ ಮ್ಯಾನೆರ್ಸ್ ಇಲ್ಲೆ

ನನ್ನ ಭಾವನ ಒಬ್ಬನೇ ಪುತ್ರ ರತ್ನ ಅನುರಾಗ್ ಬಹಳ ಚುರುಕು. ಅವನಿಗೆ ಆಗ ೩-೪ ರ ವಯಸ್ಸು. ದಿನಾಲು manners ಬಗ್ಗೆ ದೊಡ್ಡವರಿಂದ ಪಾಠ ಕೇಳುತ್ತಿದ್ದ ಪುಟ್ಟುಗೆ ಒಂದು ಸಮಸ್ಯೆ.ಅಪ್ಪ ಆದ್ರೆ "Man".  manners ಇರುವುದು ಓ. ಕೆ.  ಆದ್ರೆ ಅಮ್ಮಂಗೆ "manners" ಇರಲೆ ಹೆಂಗೆ ಸಾಧ್ಯ? ಪುಟ್ಟುನ ಪುಟ್ಟ ಪ್ರಶ್ನೆಗೆ ನಾವೆಲ್ಲ ಹೊಟ್ಟೆ ತುಂಬಾ ನಕ್ಕಿದ್ದೋ ನಕ್ಕಿದ್ದು.

ಅಜ್ಜಿಗೆ ಅಪ್ಪ ಇರ್ತ್ನ?

ನನ್ನ ಮಗಳು ಅನನ್ಯ ಪ್ರಶ್ನೆ ಕೆಳುದ್ರಲ್ಲಿ ಎತ್ತಿದ ಕೈ. ಕೆಲವೊಮ್ಮೆ ಹೊರಗಿನವರಿಗೆ  ತಲೆನೋವು ಅಂತ ಅನ್ನಿಸಿದ್ರೂ ಅವಳ ತಾರ್ಕಿಕ ಮತಿತ್ವಕ್ಕೆ ನಾವೆಲ್ಲ ಬೆರಗಾಗಿದ್ದೆ ಹೆಚ್ಚು.


ಅವಳಿಗೆ ಸುಮಾರು ೫.೫ ವರ್ಷ ಇದ್ದಿರಬಹುದು. ನಾನು ಅವಳ ಪ್ರಭುದ್ಧ ಪ್ರಶ್ನೆಯೊಂದಕ್ಕೆ [ ಬಹುಷಃ ಪುನರ್ಜನ್ಮ ಮತ್ತು ನರಕದ ವಿಷಯವೇ ಇರಬೇಕು. ಸಾವು ಮತ್ತು ಸ್ವರ್ಗದ ವಿಷಯ ಬಂದಾಗ ಜಾಣ ಮೌನ ತಾಳುತ್ತಿದ್ದ ನಾನು ಬೇಕೆಂತಲೇ ಉತ್ತರಿಸುತ್ತಿರಲಿಲ್ಲ ] ಉತ್ತರವಿಲ್ಲದೆ ಒಳ್ಳೆ ಅಜ್ಜಿತರ ಅಗೊದ್ಯಲಿ ನೀನು. ದೊಡ್ಡವರು ತಿಳಿದುಕೊಳ್ಳುವ ವಿಚಾರ ನಿನಗೆ ಈಗ ಬೇಡ ಎಂದೇ. ತಕ್ಷಣ ರಾಮಬಾಣದಂತೆ ಬಂತು ಮತ್ತೊಂದು ಪ್ರಶ್ನೆ. ಹಂಗಾದ್ರೆ ಅಜ್ಜಿಗೆ ಅಪ್ಪ ಇರ್ತ್ನ? ನಾನು ಅಜ್ಜಿ ಹೆಂಗೆ ಆಗ್ತೆ? ಈಗ ಸುಸ್ತಾಗು ಸರದಿ ನನ್ನದಾಗಿತ್ತು.

ಮನೆಯೆಲ್ಲ ಹಲ್ಲಿಗಳದ್ದು, ಜಿರಲೆಗಳದ್ದೆ ಅಗೊಯ್ದು

ಡಿಸೆಂಬರ್ ರಜಕ್ಕೆ ನಾವು ನಮ್ಮ ನೆಚ್ಚಿನ ಹಳ್ಳಿಯ ಮನೆ ಮಾಲದಮನೆಗೆ ಹೋಗುವುದು ರೂಢಿ. ಈ ಸಲ ನಾನು ನನ್ನ ಹಿರಿಯ ಮಗಳು ಅನನ್ಯ ಒಬ್ಬಳನ್ನೇ ಕರೆದುಕೊಂಡು ಹೋಗಿದ್ದೆ. ಹಳ್ಳಿಯ ಮನೆಗೆ ಸುಲಭವಾಗಿ ಹೊಂದಿಕೊಂಡಿದ್ದ ಅನನ್ಯ ಹಲ್ಲಿಯನ್ನು ಕಂಡಾಗ ಅಥವಾ ಪುಚು ಪುಚು ಅನ್ನೋ ಹಲ್ಲಿಯ ಧ್ವನಿಯನ್ನು ಕೇಳಿದಾಗ ಭಯ ಪಡುತ್ತಿದ್ದುದನ್ನು ಕಂಡ ಅವಳ ಅಜ್ಜ "ಏನೇ ಪುಟ್ಟಿ ಬೆಂಗಳೂರಲ್ಲಿ ಹಲ್ಲಿ ಜಿರಲೆ ಜಿಗಳಿ ಎಲ್ಲ ನೋಡುಲೆ ಸಿಗ್ತೆ ಇಲ್ಲೆ ನೋಡು. ಇಲ್ಲಾದರೆ ಮಂಗ, ದನ, ಹಲ್ಲಿ, ಹಾವು ಜಿರಲೆ ಜಿಗಳಿ ಎಲ್ಲ ಇದ್ದು" ಅಂದ್ರು


ತಕ್ಷಣ ರಾಮ ಬಾಣದಂತೆ ಬಂತು ಅನನ್ಯಾಳ ಉತ್ತರ.. " ಇಲ್ಯೋ ಅಜ್ಜ ಬೆಂಗಳೂರ ನಮ್ಮ ಮನೇನು ಈಗ ಜಿರಲೆ, ಹಲ್ಲಿ , ಸೊಳ್ಳೆ ಗಳದ್ದೇ ಆಗೋಯ್ದು. " ಮೊಮ್ಮಗಳ ಮುದ್ದು ಮಾತನ್ನು ಕೇಳಿ ಎಲ್ಲರು ಗೊಳ್ಳೆಂದು ನಕ್ಕೆವು.

"ಈ ಆತ್ಮ ಚಲೋ ಇಲ್ಲೆ ಬೇರೆ ಆತ್ಮ ಬೇಕು ಎಂತಕ್ಕೆ ಅಂದ್ರೆ ಈ ಆತ್ಮ ಕಿಲಾಡಿ ಮಾಡ್ತು"

ಆತ್ಮದ ಬಗ್ಗೆ ಅಲ್ಪ ಸ್ವಲ್ಪ ತಿಳಿದಿದ್ದ ಅನನ್ಯ ನನ್ನ ಬಳಿ ಮುಂದಿಟ್ಟ ಹೊಸ ಬೇಡಿಕೆ ನನಗೆ ಬೇರೆ ಆತ್ಮ ಬೇಕು. ಎಂತಕ್ಕೆ ಅಂದ್ರೆ ಈ ಆತ್ಮ ಚಲೋ ಇಲ್ಲೆ ಬರೀ ಕಿಲಾಡಿ ಮಾಡ್ಸಿ ಅಮ್ಮನ ಹತ್ರ ಬಯ್ಯಿಸಿಕೊಳ್ತಾ ಇರ್ತು. ಮುದ್ದು ಮಗಳ ಎಲ್ಲ ಆಸೆಗಳನ್ನು ಯಶಸ್ವಿಯಾಗಿ ಪೂರೈಸುವ ನಾನು ಅವಳ ಈ ಹೊಸ ಬೇಡಿಕೆ ಕೇಳಿ ಬೆಚ್ಚಿ ಬಿದ್ದಿದ್ದೆ. ಇದೆ ಆತ್ಮನೆ ಸ್ವಲ್ಪ ಸರಿ ಮಾಡಿ ಒಳ್ಳೆ ಆತ್ಮ ಮಾಡ್ವ ಹೇಳಿ ಸಮಜಾಯಿಸಿ ನೀಡಿ ತಪ್ಪಿಸಿಕೊಂಡೆ.

ಅಪ್ಪ ಭಾಷಣ ಅಂದ್ರೆ ಎಂತದು?
ಅನನ್ಯ ನಾವು ಮಾತಾಡುವಾಗ "ಭಾಷಣ" ಅನ್ನೋ ಶಬ್ಧ ಹೇಗೋ ಅವಳ  ಕಿವಿಗೆ  ಬಿತ್ತು.  ತಕ್ಷಣ ಬಂತು ಪ್ರಶ್ನೆ. ಅಪ್ಪ ಭಾಷಣ ಅಂದ್ರೆ ಎಂತದು? ನಾನು  "ಒಬ್ಬರು ಯಾವುದಾದರು ವಿಷಯದ ಬಗ್ಗೆ ಮಾತನಾಡುವುದನ್ನು ಬಹಳ ಜನ ಕೇಳುತ್ತಿದ್ದರೆ ಅದು ಭಾಷಣ" ಎಂದು ಉತ್ತರಿಸಿದೆ. ತಕ್ಷಣ ಬಂತು ಇನ್ನೊಂದು ಪ್ರಶ್ನೆ. ನೀನು ಯಾವಾಗಲು ಮಾತನಾಡುವುದನ್ನು ನಾನು ಅಮ್ಮ ಕೇಳುವ ಹಂಗೆ ಅಲ್ದಾ? ತನ್ನದೇ ರೀತಿಯಲ್ಲಿ ಭಾಷಣದ ಅರ್ಥ  ಅವಳ ಪುಟ್ಟ ತಲೆಯೊಳಗೆ  ಸೇರಿತ್ತು..ಆದ್ರೆ ನಾನು ಮಾತ್ರ ಪೆಚ್ಚಾಗಿದ್ದೆ. ನಾವು ಮಾತನಾಡುವಾಗ ಬೇರೆಯವರೂ ಭಾಗವಹಿಸಿದರೆ, ಮಾತನಾಡಲು ಅವಕಾಶ ಸಿಕ್ಕರೆ ಅದು ಸಂಭಾಷಣೆ ಅನ್ನಿಸಿಕೊಳ್ಳುತ್ತದೆ. ಒಬ್ಬರೇ ಮಾತನಾಡಿ ಆಕ್ರಮಿಸಿಕೊಂಡಿದ್ದರೆ ಅದು ಭಾಷಣ ಅಲ್ಲವೇ?

ಇದೆsss ಬಾಲsss
ಅನನ್ಯ ಸುಮಾರು ಎರಡು ವರೆ ವರುಷದ ಮಗುವಾಗಿದ್ದಾಗ ನಾವು ಕುಟುಂಬ ಸಮೇತ  ಸ್ನೇಹಿತರೊಬ್ಬರ  ಮನೆಗೆ ಹೋಗಿದ್ದೆವು. ನಾವು ಹೊರಗೆ ಕುಳಿತು ಮಾತನಾಡುತ್ತಿದ್ದಾಗ ಸ್ನೇಹಿತನ ಅತ್ತೆ ಹೊಟ್ಟೆ ಹುಣ್ಣಾಗುವಷ್ಟು ನಗುತ್ತ ಹೊರಗೆ ಬಂದರು. ಏನಾಯ್ತು ಎಂದು ಕೇಳಿದರೆ ಅವರು ಮುಖ ಕೆಂಪಗೆ ಮಾಡಿಕೊಂಡು ಹೇಳಲು ಸಂಕೋಚ ಪಡುತ್ತಿದ್ದರು. ನಡೆದದ್ದು ಇಷ್ಟು.
ಅನನ್ಯ ಸ್ನೇಹಿತನ ಬೆಡ್ ರೂಮಿನಲ್ಲಿ ಮಲಗಿಸಿದ್ದ ಒಂದು ವರ್ಷದ ಗಂಡು ಮಗುವನ್ನು ನೋಡಿ "ಇದೆss ಇವಂಗೆ ಮುಂದೆ ಬಾಲ" ಇದ್ದಲಿ ಹೇಳಿ ಜೋರಾಗಿ ತನ್ನ ಮುದ್ದು ಭಾಷೆಯಲ್ಲಿ ಹೇಳುತ್ತಿದ್ದಳು. ಅದನ್ನು ಮುಟ್ಟಲು ಕೈ ಮುಂದು ಮಾಡುತ್ತಿದ್ದಳು...

"ಅಮ್ಮ ಸೌಟ ತೊಳಕ! "
ಅನನ್ಯ ಊಟ ಮಾಡುವಾಗ ಜುನ್ಕ್ ಫುಡ್ ತಿಂದರೆ ಅಮ್ಮ ಗದರಿಸುವುದು ನಿತ್ಯದ ಸಂಗತಿ. ಕೀಟಲೆ ಮಾಡಿದಾಗ ಪಕ್ಕದಲ್ಲೇ ಇದ್ದ ಸೌಟು ತೋರಿಸಿ ಇದರಲ್ಲೇ ಏಟು ಹಾಕ್ತೆ ನೋಡು ಎಂದು ಹೆದರಿಸಿದ ಅಮ್ಮನಿಗೆ ತಟ್ಟನೆ ಅನನ್ಯಾ "ಅಮ್ಮಾ ಸೌಟು 
ತೊಳಕನ್ಡಾದರೂ  ಹೊಡಿ. ನನ್ನ ಮೈಯೆಲ್ಲಾ ಮುಸುರೆ ಆಗೋಗ್ತು"  ಅಂದಳು. ಇದನ್ನು ಕೇಳಿ ಮುಖ ಕೆಂಪಗಾಗಿದ್ದ ಅಮ್ಮ, ಪಕ್ಕದಲ್ಲಿದ್ದ ನಾವೆಲ್ಲ ಮತ್ತು ಕಟಿಣ ಶಿಕ್ಷೆಯಿಂದ ಸುಲಭವಾಗಿ ಪಾರಾದ ಅನನ್ಯ ಹೊಟ್ಟೆ ತುಂಬಾ ನಕ್ಕೆವು.