Friday, March 19, 2010

ಶ್ರೀ ಕೃಷ್ಣ ಸಂಧಾನ ಯಕ್ಷಗಾನ ಪದ್ಯಗಳು

ಶ್ರೀ ಕೃಷ್ಣ ಸಂಧಾನ ಯಕ್ಷಗಾನ ಪದ್ಯಗಳು

ಶೃಂಗಾರ  ಕರುಣ ಭೀಭತ್ಸ ಶಾಂತ ರೌದ್ರ ಭಕ್ತಿ ಮೊದಲಾದ ರಸೋಪೇತವಾದ ಕೃಷ್ಣ ಸಂಧಾನ ನನ್ನ ಅಚ್ಚುಮೆಹ್ಚಿನ ಪ್ರಸಂಗ.
ಮಳೆಗಾಲದ ಸುರಿಯುವ ಮಳೆಯಲ್ಲಿ ಕತ್ತಲಿನ ರಾತ್ರಿಯಲ್ಲಿ ಬೆಂಕಿಯನ್ನು ಕಾಯಿಸುತ್ತಾ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡುವ
ನನ್ನ ಅಪ್ಪನ   ಭಾಗವತಿಕೆಗೆ ನಾನು ಅರ್ಥಧಾರಿಯಾಗಿ ಅನುಭವಿಸಿದ ಮಧುರ ಕ್ಷಣಗಳು ನೆನಪಾದರೆ ಈಗಲೂ ಊರಿಗೆ ಓಡೋಣ ಎನ್ನಿಸುತ್ತದೆ. ಗದ್ದೆಯ ಮಾಳ, ಆಲೆಮನೆ, ಅಡಿಕೆ ಸುಲಿಯುವಾಗಿನ  ನಮ್ಮ ತಾಳಮದ್ದಲೆ  ಇಂದು ನೆನಪಾದರೆ ಮನಸ್ಸು ಆನಂದ ತುಂದಿಲವಾಗುತ್ತದೆ. software ಅನ್ನೋ ಶುಷ್ಕ ಬದುಕನ್ನು ತ್ಯಜಿಸಿ ಮರಳಿ ಗೂಡಿಗೆ ಸೇರುವ ಸೆಳೆತ   ಬಲವಾಗುತ್ತದೆ.
ಒಂದೊಂದು ಪದ್ಯವು ಕೂಡ ಭಕ್ತಿ-ಭಾವ  ಪೂರಿತವಾಗಿ ಸ್ವರ ಲಯ ಬಧ್ಧವಾಗಿ ರಸಿಕನ ಮನಸ್ಸಿಗೆ ರಸಗವಳದ ಪುಷ್ಕಳ ರುಚಿಯನ್ನ ನೀಡದಿರದು.

ಧರ್ಮಜನ ಶಾಂತತೆ ಸಾತ್ವಿಕತೆ, ವಿದುರನ ಭಕ್ತಿ ಭೀಮನ ಪೌರುಷ ಕೌರವನ ಛಲ ಅರ್ಜುನನ ಪರಾಕ್ರಮ ಕೃಷ್ಣನ  ವಾತ್ಸಲ್ಯ ದ್ರೌಪದಿಯ ಹತಾಶೆ,ಕರುಣೆ, ಶೃಂಗಾರ ಗುಣಗಳ ನೈಜ, ಜೀವಂತ ನಿರೂಪಣೆ ಇಲ್ಲಿದೆ.
ಪ್ರಕಾಂಡ  ಪಾಂಡಿತ್ಯ ಆಶು ವಾಕ್ಪಟುತ್ವ ಅಧ್ಬುತ ಅಭಿನಯ ಭಾವಪೂರಿತ ಪಾತ್ರ ಪೋಷಣೆ ಪ್ರಸಂಗದ ಚೌಕಟ್ಟಿನಲ್ಲಿ
ಅರ್ಥಗರಿಕೆಯನ್ನ  ನೇಯ್ದು  ನೃತ್ಯ ವೈಭವ ನಟನ ಕೌಶಲ ಮೆರೆದು ನಮ್ಮನ್ನು  ಪರವಶರನ್ನಗಿಸುವ ಬೃಹಸ್ಪತಿಗಳನೆಕರು ಈ ಕಲೆಯನ್ನು ಶ್ರೀಮಂತಗೊಳಿಸಿದ್ದಾರೆ.

ಪದ್ಯಗಳನ್ನು ಓದಿ ಆನಂದ ಪಡಿ..

ಗಜಮುಖ ನಾನಿನ್ನ ಪಾದವ ನೆನೆವೆ
ಭಜಕಗೆ ಕರುಣಿಸೋ ವರಗಳ ಪ್ರಭುವೇ
ಮೂಷಿಕ ವಾಹನ ಮೋದಕ ಹಸ್ತ
ಪಾಶಾಂಕುಶ ಧರ ಪರಮ ಪವಿತ್ರ

ದೇವ ದೇವರ ದೇವ ದೇವನಲ್ಲವೇ
ಓ ದೇವ ದೇವರ ದೇವನಲ್ಲವೇ


ಇಂದಿರೆಗೆ ತಲೆಬಾಗಿ ಪರಮಾನಂದ ಭಕ್ತಿಯೋಳಜನ ಧ್ಯಾನಿಸಿ
ವಂದಿಸುವೆ ಶಾರದೆಗೆ ಶಕ್ರಾದಿ ಅಮರರಿಂಗೆರಗಿ
ನಾಂದಿಯೋಳು ಗುರು ಕೃಪಾದ್ಯರ ಚರಕಾನತನಾಗಿ
ಮುನಿಗಳ ಸನ್ನಿಧಿಗೆರಗಿ ಪೇಳುವೆ ಈ ಕಥಾಮೃತವ



ಬಂದನು ದೇವರ ದೇವ
ಬೆಂಬಿಡದೆ ಭಕ್ತರ ಕಾಯ್ವ
ಚಂದ್ರ ಕೋಟಿಪ್ರಕಾಶ
ಚಾರುತರ ವಿಲಾಸ
ಇಂದುಧರನ ಮಿತ್ರ ಕರುಣ ಸಂಜೀವ




ದಾಯಭಾಗದೊಲೈದು ಗ್ರಾಮವಂ ತನಗೆ
ಕುರುರಾಯ ಸುವಿವೆಕದಿಂ ಕೊಡುವಂದದಲಿ
ಕೃಷ್ಣರಾಯ ಸಂಧಾನವಂ ಮಾಡಿ ಬರಬೇಕು
ನೀನೆನಲೆಂದ ಆ ಮಹಿಮನು

ನೀತಿಯೇ ಕರುಣಾಳು ನಿನಗೆ ವಿಘಾತನೆನಿಸಿದ
ದುಷ್ಟನಲಿ ಸಂಪ್ರೀತಿಯೇ
ಸಂಧಾನಕನುವಾಗುವರೆ ಪೇಳೆನಲು
ಖ್ಯಾತ ಧರ್ಮಜ ನುಡಿದ
ಅನಿಬರಪಾತಕವು ಮಗುಳವರ ಪೊಂದುವುದು
ಆತನಲಿ ಸಂಧಿಯ ಪ್ರಯತ್ನವ ಮಾಡಿ ಬಹುದೆಂದ

ಅರಸನಿಂದೆನಲಾಗ ಮಾಧವ
ಕಿರುನಗೆಯ ಕೇವಣಿಸಿ ಮಾಧವ
ಭೀಮನ ಕರೆದು ಧರ್ಮಜನಿಂದು
ಕುರುಭೂವರನ ಬಳಿಗೆ

ಅಣ್ಣನವರಿಗೆ ನೀತಿಯಾದರೆ
ನಿನ್ನಮನಕೊಪ್ಪಿದರೆ
ಭೂತಲವನ್ನು ಕೌರವನಿತ್ತರೆನಗೆನಿಂನು ದುಗುಡ?
ಎನಲು ಪಾರ್ಥಗೆ ಮಾದ್ರಿಯನುಗರು
ಅನುವರಿಸಲರುಹಿದರು ಮೂವರ ಮನವೇ
ನಿನ್ನಯ ಚಿತ್ತವೆನ್ದರ್ಜುನ ನಕುಲರು

ರಣವ ಗಂಟಿಕ್ಕುವನೆ ಮುರರಿಪು
ಸನುಮತವಿದೆನ್ದಬಲೇ
ಪೋನ್ನಂದಣವನೇರಿಯೇ ಪೊರಟಲು

ಅಮ್ಬುಜಾಕ್ಷಿಯರಗಡಣದಲಿ
ಇನ್ತಾನಂದದೊಲಾ ಸಿರಿವನ್ತೆಯು
ಬಂದು ಅನ್ದಳವಿಡಿದು ಅನಿಳಜಗೆರಗಳು
ಕಂತುವಿನರಗಿಣಿಯಂ ಕಂಡು
ಅಂತಃಕರಣದಿ ಮನ್ನಿಸುತೆಂದ ಸತಿಯೋಳು

ಕೋಮಲಾಂಗಿ ಕೇಳೆ
ಮದಗಜ ಗಾಮಿನಿ ಪಾಂಚಾಲೆ
ಕಾಮುಕ ಕುರುಭೂಕಾಂತನ ನಿಳಯಕೆ
ಸ್ವಾಮಿಯ ಸಂಧಿಗೆ ಧರ್ಮಜ ಕಳುಹುವ

ಆತನ ದುಷ್ಕ್ರುತವು
ಮಗುಳಿನ್ನಾತನ ಪೊಂದುವವು
ಆತನೋಳನುಬರವೇತಕೆ ನಮಗೆ
ಇನ್ನಾತನೋಲೈರೀತನು ಬೇಡುವ




ಸಂಧಿಯೇ ಕಲಿ ಭೀಮ ನಿನಗಾನಂದವೇ
ಕುರುಭೂಪನೊಳು ಹಿತಬಂದುದೆ
ಧರುಮಜಗೆ ಪಾರ್ಥಗೆ ಹರಿಗೆ ಸನುಮತವೆ
ಚಂದದೊಳಗಿನ್ನೊಮ್ಮೆ ನುಡಿ ಮೊದಲೆಂದ ವಚನವ ಶಿವ ಶಿವಾ
ನೀವಿಂದು ಕೈಗೊಂಡಿರೆ ಯತಿತ್ಯವನಿಂದು ಹೊರಳಿದಳು



ಏನಯ್ಯ ಪವನಜನೆ
ಕೌರವನಿಗೆ ನಾನೇ ದುರ್ಜನಲಾದೆನೆ
ಹೀನ ವೃತ್ತಿಯ ತಾಳ್ದಿರಿ
ನೀವೈವರೆನ್ನ ಪ್ರಾಣಕೆ ಬಗೆಯಾದಿರಿ

ಮಂದಲೆಯ ಪಿಡಿದು
ನಿನ್ನಯಾ ಕಣ್ಣ ಮುಂದೆ ಸೀರೆಯ ಪೆಳೆದು
ಬಂಧಿಸಿರುವ ಮುಡಿಯ ಸುರಿದುದೋ ಕಂಗಳಿಂದ
ನೋಡಿವಿರಕ್ತಿಯೂ




ಲಲನೆ ತಾನತಿ ಮರುಗುತಿರಲು
ಖಲಿ ಮರುತ್ಸುತ ನುಡಿದ ತನ್ನೆದಿರು ಅವನದಿರು
ತಾ ಮಾಡ್ವುದೇನು ಅರಿ ಭಟರ ಮುಂದಿನಲಿ
ತಿಳುಹು ಯಮಜಗೆ ಮರಳಿ ಕೃಷ್ಣಗೆ
ಒಲಿಸಿ ನಕುಲಾದಿಗಳನುರೆ
ರೋಷವನ್ನೇಳಿಸೆನ್ದಳು




ಮರುಗುತ ಭೀಮನ ಕೊರಳಪ್ಪಿಯೇ
ನಯನದಾ ಶರದೊಲಂಗವ ತೊಳೆದು
ವರಭಾಷೆಗಳ ತೀರ್ಚದಿರೆ ಪ್ರಾಣ ಬಿಡುವೆ
ಎಂಬರಸಿಗೆ ಮಗುಲೆಂದನು


ವನಿತೆ ಕೇಳ ಜನನಿಯ
ಬಸಿರಿಂದಿಲಿದಾ ಮೇಲೆ
ದಿನವೊಂದಾದರು ಸುಖವ
ಕನಸಿಲಿ ಕಂಡವ ನಾನಲ್ಲ

ಕಷ್ಟವ ಉಳುತಾ ನೂಕಿದೆ ಜನ್ಮವ
ಭಾರವಾಯಿತು ಗದೆ
ಧೈರ್ಯ ಹಿಂಗೊಲಿಸಿತು
ನಾರಿ ನೀನೇನೆ ಅಂದರು

ಕೌರವ ಣ ನೀಕೊಲಲಾರೆ
ಈ ಪೌರುಷವೆಕೆನಲೆನ್ದಳು
ಅಹಹ ಪವನಜ ಗಂಡುಗಲಿ
ನೀ ಅಹುದೆಲೈ
ಖಳ ಕುರುನ್ರುಪಾಲನ
ಸಹಜ ಏನ್ನೆಯ ತುರುಬನೆಲೆಯುತ್ತಿಹುದ ನೋಡಿ



ನನಗೆ ಬಲ ಸಹದೇವ ಪಾಪಿಯೋಲ್
ತನಯರೈವರು ಖಲಿ ಘತೊತ್ಚಚ
ಜನಕ ದ್ರುಪದಂದಿಹುದು
ಮೂರಕ್ಸ್ಹೋಹಿನಿ ಬಲವು

ವನಿತೆಯ ಕಟೋರ ನುಡಿಯಂ ಕೇಲ್ದು ಪವನಜಂ
ಖಳನೋಗ್ರವೆತ್ತು ಗದೆಯಂ ತಿರುಹುತೆಂದ





ಈಶನ ಮೊರೆಹೊಗಲಿನ್ನು

ಬಿಡೆ ನಾಸಮರಡಿ ರಿಪುಗಳನು

ನಾಶವ ಮಾಡುವೆನಯ್ಯ

ವರ ಭಾಷೆಯ ಸಲಿಸುವೆ ಮತಿಯ



ದಾನವಾಂತಕ ಕೇಳು ಏನೆಂಬೆ ಬಗೆಗೆ

ಮಾನಿನಿ ಅನಿಲಜ ಆಡುವ ನುಡಿಗೆ

ಆವ ಜನ್ಮದಿ ಗೈದ ಪಾಪದ ಪಳದಿ

ಕುವಲಯವ ಬಿಟ್ಟು ಅಲೆದೆವೋ ವನದಿ



ದೊರೆತನ ಸುದಲಿನ್ನು

ಬಡತನ ಯೆನಗಕ್ಕು

ಕುರುರಾಯ ಸುಖಿಯೆಂದು ಕೇಳ್ದರೆ ಸಾಕು



ವರ ಸಂಧಿ ಲೇಸು

ತೋರ್ಪುದೋ ಎನ್ನ ಮನದಿ

ವಿರಚಿಸಲರ್ಜುನ ಭೀಮಾದಿಗಳ ತೆರದಿ



ಫಲುಗುಣನುಸುರಿದ

ಯಮಸುತ ವಿಪಿನದಿ ಬಳಲಿದ ದುಗುಡವನು

ಖಳನುತ ರಿಪುಗಳ ಶರದಲಿ ತರಿಯದೆ

ಅಳುಕುವುದ್ ಉಂಟೆನಯ್?



ಧನುಜಾರಿ ದ್ರೌಪದಿಯಂ ಸತೈಸಳನ್ನಿದಂ

ಮಣಿಮಯ ವರೂಥವಂ ದಾರುಕಂ ತರಲು

ದುರ್ಜನೆರೆಡೆಗೆ ಪೋಪುದೆಂದು

ಅಗಣಿತಾಯುಧವ ಸಾತ್ಯಕಿ ತುಂಬಿದ ರಥದೊಳು





ನೋಡಿದಂ ಕಣ್ ದಣಿಯೇ

ಚಿನುಮಯನ ಮೂರ್ತಿಯಂ

ಮಾಡಿದಂ ನಿಯತ ಸಂಸ್ತುತಿಗಳಂ

ಪಿರಿದು ಕೊಂಡಾಡಿದಂ

ತನಗೆ ಲಕ್ಷ್ಮೀ ರಮಣ ದಯವಾದ

ಎನುತಲಾ ವಿದುರನಂದು

ಪಾಡಿದಂ ಗುಣ ಗಣವ

ಬೇಕಾದ ವರಗಳಂ ಬೇಡಿದಂ

ಮನದೊಳಾನಂದ ಸಾಗರದಲಿ ಒಲಾಡಿದಂ

ಕೈಮುಗಿದು ನಿಂದಿರಲವನ ತಕ್ಕೈಸಿ ಮುರಹರನೆಂದನು

ನಿನ್ನ ಭಕ್ತಿಗೆ ಮೆಚ್ಚಿದೇನೋ

ವಿದುರಾ ಎನಗಿನ್ನು ತೀರದು ನಿನ್ನ ಪೊಗಳಲು

ಅನ್ನ ಪಾನಗಳಿಲ್ಲದೆ ಬಳಲೀರ್ಪೆ ತಾನೆಂದಾ



ಮಗುಲೇ ಪುರುಷೋತ್ತಮನ
ಸುಪ್ಪತ್ತಿಗೆಯನೆರಿಸಿ ಸಿರಿಪದಾಮ್ಬುಜಯುಗಳ ಅರ್ಚಿಸಿ
ನಮಿಸಿ ಪೇಲ್ದನು ನಗುತತನ್ನಯ ಸವಿಯೋಳು ತೋಷವೆಂದಾ

ಅರಸ ಕೇಳಾ ಕುರುಭೂವರನ
ಒಡ್ಡೋಲಗದ ಘನ ಸಿರಿ
ಮೆರೆಯುತಿಹನೆನೆಮ್ಬೆ ಇಂದ್ರನ
ಸಭೆಯ ನಿಂದಿಸಿತು

ನೋಡಿದೆಯ ವಿದುರ
ಕೌರವ ಮಾಡಿದೊಲಗವ
ಓಡಿ ಹೋಗಲಿ ಕೃಷ್ಣ ಎನುತ
ಗಾಢಗರ್ವದಲಿ ಕುಳಿತಿರುವ ಈ ಭೂವರನು
ಕೇಡುಗರ ಒಡನಾಡಿ ಕೆಟ್ಟ

ಸಲಹೆ ಕೇಳಿದೆಯ ಕರ್ಣ
ಜೂಜಿಗೆ ಮಹಿಯ ಸೋತವರೆನ್ನ
ಸಹನ ವೇಕೆ ಎನಗೆ ಸಂಧಾನಕೆ




ಅಟ್ಟಿರುವರೀ ಚೋರನ

ಮತ್ತೆಮಗೆ ಕೆಟ್ಟೆಒದೆಮಗೆನಿವನ

ಶೇಷದಿಮ್ ಕುಳಿತನೆನುತ

ಸಖನ ಕೈ ತಟ್ಟಿ ಪೇಳಿದನು ನಗುತ

ಏನಯ್ಯ ಅಂಥದ್ದೆನಯ್ಯ
ನಮ್ಮೆಯ ಬರವ ಕಂಡು
ಜ್ಞಾನ ತಪ್ಪೀತೆ ಪರಮಾನಂದದೊಳಗೆ

ವರಗದ್ದುಗೆಯ ಇಳಿವುದು ತಡವೆನುತ
ಭರದಿಂದೆಕೋಭಾವದಲಿ ಪೀಠ ಸಹಿತ
ಚರಣ ದೋಲ್ ಉರುಳುವುದುಂತೆ
ನಾನಿನ್ನ ಸರಿಸಕೆ ಬರುತೀರ್ದೆನಲ್ಲೋ ಸಂಪನ್ನ

ಅರಸ  ನೀ   ಅತಿ ಸುಖವನ್ತನಲ್ಲಯ್ಯ
ಹರ ಹರ ತನುಎಸು ನೊಂದಿತೋ ನಿನಗೆ
ಹೊರಳ ಬೇಡೆಳೆಂದ    ಈ ಸಭೆಯೊಳಗೆ

ಪೋದವಿಗೊಸುಗ ಬಳಗ ಸಹಿತಲಿ

ನಡೆಯಬೇಡ ಕೃತಾನ್ತನಲ್ಲಿಗೆ

ಕೊಡು ಕುಶಸ್ತಲ ವರ ವ್ರುಕಸ್ಥಳ ವಾರನಾವತಿಯ

ಬಿದುಬೆ ಬಿದೆಳವೋ ಅವನ್ತಿನಗರವ

ಒಡನೆ ಶಕ್ರಪ್ರಶ್ಥ ಪುರವನು

ಮಿದುಕದೆ ಧರ್ಮಜಗೆ ಸಾಮದೊಲೆನಲು

ಮಗುಳೆಂದ





ನಡೆಯಲೋ ಮುರಾರಿ ಸುಖದೊಳು

ಸಲುಗೆ ಮಾತನುಡಿದು ಪೆಟ್ಟ ತಿನ್ನದೇನ್ನೋಳು

ನೀನು ಬೇಡಿತೈದು ಗ್ರಾಮಕೆ

ನಾನು ಕೊಡುವನಲ್ಲ ಸಾಮದಿ


ಎಲವೋ ಪಾತಕಿ ಬರಿದೆ ಸಾಯದಿರ್


ಒಲಿದು ಪಾಂಡವರುಗಳ ಕೂಡಿಕೋ


ಕೊಲಿಸಲಾರೆನು ಸರ್ವಥಾsss ಕುಳುಗುಳದಿ ನಿನ್ನ

1





ಎಲೆ ಧರಾಧಿಪ ನುಡಿಯನರಿತಿಹೆ

ದನುಜರಿಪು ನೀ ಇಳೆಯ ಭಾರವ

ಇಳಿಸಲವತಸಿರುವ ಮಾಯಾ ಮನುಜನೆಂದು



ಧುರಕೆ ಬೆದರುವನಲ್ಲ ರಿಪುಗಳ

ಕರೆಸಿಕೊದುವವನಲ್ಲ ರಾಜ್ಯವ

ಹರಣದಾಸೆಗಳಿಲ್ಲ ನನಗೆಂದರಸ ನುಡಿದಾ



ಎಲೆ ಮುರಾನ್ತಕ ಲಾಲಿಸೈ

ಬೆಂಬಳಕೆ ಭೂಪರನರಹಿ ಕುರುಮಂಡಳಕೆ

ಸಂನಧ್ಧವಾಗಿ ಸಮರಕೆ ಬರಲಿ ಪಾಂಡವರು



ಕಲಹದಲಿ ನಿನ್ನೆಯೋಳೆನ್ನೆಯ

ತಲೆಯನಿದು ಸಮರ್ಪಿಸ್ಸುವೆ

ಇದಕಳುಗೆ ಎಂದೆನುತ ವೀಲ್ಯವನಿತ್ತ ಅಚ್ಚುತಗೆ



ನಡುಗಲಾ ಮಾಧವಮ್ ದ್ರೋಣ ಕೃಪ ಗಾಂಗೆಯರಿಗೆ ಪೇಳ್ದ

ಮರಣವಂ ಬಯಸೀರ್ಪ ನೀ ಖಳಂ

ಮಗುಳೆನ್ನದೂರದಿರೆ ಎನುತ ನೀತಿಯಾ ತಿಳುಹಿ

ಮಾರನಯ್ಯನ ಮಾತ
ಮೀರದೆ ಗೋಕುಲ
ಭೂವರೇಣ್ಯನಾ ಉದರದಲಿ ಪುಟ್ಟಿ
ಧೀರ ಕಂಸಗೆ ತನ್ನ
ಘೋರರೂಪವ ತೋರಿ
ಹಾರಿದೆ ಗಗನಕೆ ಸೇರಿದೆ ಇಳೆಗೆ





ಮಂಗಳಂ

ಶುಭಮಸ್ತು

2 comments:

ಚುಕ್ಕಿಚಿತ್ತಾರ said...

ಶಿವರಾ೦ ಅವರೆ...
ಈ ಯಕ್ಷಗಾನ ಪದ್ಯಗಳನ್ನು ಕೇಳುತ್ತಿದ್ದರೆ..ಅದೊ೦ದು ತೆರನಾದ ಹುಚ್ಚು...!
ನನಗೆ ಮೊದಲು ಈ ಹುಚ್ಚು ಹಿಡಿದಿರಲಿಲ್ಲ...
ಮದುವೆಯಾದ ನ೦ತರದಲ್ಲಿ ಹಿಡಿಯಿತು....!!!!
ನನ್ನವರಿಗೆ ಯಕ್ಷಗಾನವೆ೦ದರೆ ಪ್ರಾಣ.

ಅಣ್ಣನವರಿಗೆ ನೀತಿಯಾದರೆ ....
...................
ಈ ಭಾಗ ನನಗಿಷ್ಟವಾದದ್ದು.ಎಲ್ಲವನ್ನೂ ಮರೆಸುತ್ತೆ ಈ ಯಕ್ಷಗಾನ ಅನ್ನುವುದು ನಿಜ..
ವ೦ದನೆಗಳು.
[ನೀವು follower link ಹಾಕಿದ್ದರೆ ಚನ್ನಾಗಿತ್ತು ]

ಶಿವರಾಮ ಭಟ್ said...

ಚುಕ್ಕಿಚಿತ್ತಾರ ಅವರೇ,
ನೀವು ಪ್ರತಿಕ್ರಿಯಿಸಿರುವುದು ನಮ್ಮ ಅಪಾರ ಆನಂದಕ್ಕೆ ಕಾರಣವಾಗಿದೆ:-) ನನ್ನ ಬಡ ಬ್ಲಾಗಿಗೆ ಓದುಗರಿದ್ದಾರೆಂದು ತಿಳಿದು!!
"ನೋಡಿದಂ ಕಣ್ ದಣಿಯೇ ಚಿನುಮಯನ ಮೂರ್ತಿಯಂ " ಮತ್ತು ಕೃಷ್ಣನ ಪದ್ಯಗಳು ನನಗೆ ತುಂಬಾ ಇಷ್ಟ.
ಗಣಕ ರಾಕ್ಷಸನ ಮಾಯೆಯಿಂದ ಸರಿಪಡಿಸಲಸಾಧ್ಯ ತಪ್ಪುಗಳು ಸೇರಿಕೊಂಡಿವೆ
Follower ಲಿಂಕ್ ಹಾಕುವ ಸುಲಭ ವಿಧಾನವೇನು? ನನ್ನ ಬ್ಲಾಗ್ನಲ್ಲಿ ಅದು ಯಾಕೋ downlight ಆಗಿ experimental ಅಂತ ಬರ್ತಾ ಇದೆ.
ನಿಮ್ಮ ಸಲಹೆ ಪ್ರತಿಕ್ರಿಯೆ ಎರಡಕ್ಕೂ ಧನ್ಯವಾದ.

ನಮಸ್ಕಾರ.