೨೦ ನೆ ಶತಮಾನದ ಅದ್ಬುತ ಆವಿಷ್ಕಾರಗಲ್ಲಿ ಕೋಶ ದೂರವಾಣಿಯು[ಸೆಲ್ ಫೋನ್] ಕೂಡ ಒಂದು. ಅದರ ಸಂಶೋಧಕ ಅಮೆರಿಕಾದ ಮಾರ್ಟಿನ್ ಕೂಪೆರ್. ಸಂಶೋಧನೆ ನಡೆದದ್ದು ೧೯೬೦ ಕ್ಕೂ ಮೊದಲು. ಚಲಿಸುವ ಕಾರಿನ ಸಂಪರ್ಕ ಸಾಧಿಸುವ ಉಪಕರಣದ ನಿರ್ಮಾಣದ ಗುರಿ ಹೊತ್ತಿದ್ದ ತಂಡಕ್ಕೆ ಹೊಳೆದದ್ದು ವೈಯಕ್ತಿಕ ಸಂಪರ್ಕ ಸಾಧನದ ಉಪಾಯ. ಅದಾಗಲೇ ಮರ್ಕೊನಿಯಿಂದ ತಂತು ರಹಿತ ರೇಡಿಯೋ ಸಂಶೋಧನೆಯಾಗಿತ್ತು. ಬಾನುಲಿಯ ಮುಂದುವರೆದ ಅಭಿವ್ರುಧ್ಧಿಯೇ ಈ ಕೋಶ ದೂರವಾಣಿ ಅಥವಾ ಸೆಲ್ ಫೋನ್.ಸೀಮಿತ ಕಂಪನ ವ್ಯಾಪ್ತಿಯ [limited frequency range ] ಮೂಲ ವಿಚಾರವನ್ನು ಕಲ್ಪನೆನ್ನು ಆಧಾರವಾಗಿಸಿ ಈ ಹೊಸ ಉಪಕರಣವನ್ನು ಸಿಧ್ಧಪದಿಸಲಾಗಿತ್ತು.ವರ್ಣಪಟಲದ ಮರುಉಪಯೋಗ ಮತ್ತು ಕೋಶದಿಂದ ಕೋಶಕ್ಕೆ ಮಾಹಿತಿಯ ಹಸ್ತಾಂತರ ಮಾಡಿ ಗುರಿಯನ್ನು ತಲುಪುವಂತೆ ಮಾಡುವುದೇ ತಂತ್ರಜ್ಞಾನದ ಆಶಯವಾಗಿತ್ತು. ಈ ಹೊಸ ಉಪಕರಣದ ಮೊದಲ ಆವೃತ್ತಿಯಲ್ಲಿ ಬಿತ್ತರವಾಗಿದ್ದು ಮಾಹಿತಿಯ ಒಂದು ತುಂಡು [ bit ] ಮಾತ್ರ ಅದು ೬ ಸೆಕೆಂಡುಗಳಲ್ಲಿ. ಆಗ ಅತಿಕಿರಿದಾದ ವರ್ಣಪಟಲವನ್ನು ಈ ಉದ್ದೇಶಕ್ಕೆ ಬಳಸಲಾಗಿತ್ತು..ಇಂದು ಕೋಟಿ ಕೋಟಿ ಅಷ್ಟಕಗಳನ್ನು [ bytes ] ಅದೇ ಕಂಪನ ವ್ಯಾಪ್ತಿಯಲ್ಲಿ ಬಿತ್ತರಗೊಲಿಸಲಾಗುತ್ತಿದೆ... ವರ್ಣಪಟಲದ ಫಲದಾಯಕತೆ [efficiency ] ಹೆಚ್ಚಿಸಲಾಗಿದೆ. ವಿದ್ಯುತ್ ಕಾಂತೀಯ ಅಲೆಗಳ ಪ್ರಸರಣಕ್ಕೆ ಬೇಕಾಗುವ ಸ್ಪರ್ಶಿಕೆಗಳು ಕೂಡ [antenna ] ಸಾಕಷ್ಟು ನಯಗೊಳಿಸಲ್ಪತ್ತಿವೆ.
ಮೊದಲು ಈ ತಂತ್ರಜ್ಞಾನದ ಅಭಿವೃಧ್ದಿಗೆ ಸಹಸ್ರಾರು ಡಾಲರುಗಳನ್ನು ವ್ಯಯಿಸಲಾಗಿತ್ತು. ಅದು ೧೯೭೩ ರ ಕಾಲದ ಡಾಲರು. ಮೊದಲ ಉಪಕರಣದ ಬೆಲೆ ೪೦೦೦ ಡಾಲರು ಆಗಿತ್ತು. ಅದರ ತೂಕ ೨.೨ ಕಿಲೋ. ಇಂತಹ ಉಪಕರಣ ವನ್ನು ಉಳ್ಳವರು ಮಾತ್ರವೇ ಕೊಳ್ಳಬಹುದಾಗಿತ್ತು. ಹೌದು ಮಾರ್ಟಿನ್ ಕೂಪೆರ್ ಅಸ್ಟೊಂದು ದುಬಾರಿಯಾದ ಇಂತಹ ಸಾವಿರಾರು ಉಪಕರಣಗಳನ್ನು ಮಾರಿ ಲಾಭಗಳಿಸಿ ತಂತ್ರಜ್ಞಾನವನ್ನು ಇನ್ನು ಅಭಿವೃಧ್ಧಿಗೊಳಿಸಿದರು. ಮೋಟೊರೋಲ ಕಂಪನಿ ಕೂಡ ಇದಕ್ಕೆ ಪುಷ್ಟಿ ನೀಡಿತ್ತು.
ಪ್ರತಿ ೩೦ ತಿಂಗಳಿಗೆ ವರ್ಣಪಟಲದ ವಿಸ್ತಾರವಾಗುತ್ತಿದೆ. ಮೊದಲು ೧೦೦ ಮೇಗ ಹೆರ್ತ್ಜ್ ತಂತ್ರಜ್ಞಾನದಿಂದ ಪ್ರಾರಂಭವಾದ ತಂತ್ರಜ್ಞಾನ ಇಂದು ೩ ಗೀಗ ಹೆರ್ತ್ಜ್ ತನಕ ಬಂದು ನಿಂತಿದೆ.. ಅದೇ ವರ್ಣಪಟಲದಲ್ಲಿ ಹೆಚ್ಚು ಹೆಚ್ಚು ಮಾಹಿತಿಯನ್ನು ಹೇರಿ ಬಿತ್ತರಿಸುವ ತಂತ್ರೋಪಾಯಗಳಿವೆ. ಮಾಹಿತಿಯ ವಿಸ್ಪೋಟವು ಅದೇ ವೇಗದಲ್ಲಿ ನಡೆಯುತ್ತಿದೆ. ಈಗಿನ ವರ್ಣಪಟಲದ[ spectrum ] ಸಾಮರ್ಥ್ಯದ ಸಾವಿರಪಟ್ಟು ಹೆಚ್ಚು ಬಿತ್ತರಯೋಗ್ಯ ಮಾಹಿತಿ ನಮ್ಮಲ್ಲಿದೆ. ಬೇಡಿಕೆ ಕೂಡ ಈದೆ. ಆದರೆ ಅದು ಸರಕಾರದ ನಿಯಂತ್ರಣದಲ್ಲಿದೆ. ಅದನ್ನು ಬೇರೆ ಬೇರೆ ಸಾಧನಗಳಲ್ಲಿ ಬಳಸಲಾಗುತ್ತಿದೆ. ವ್ಯೋಮಂತರಿಕ್ಷ ವಾಹಕಗಳು, ಯುದ್ದ ನೌಕೆಗಳು, ಮಿಲಿಟರಿ ಉಪಕರಣಗಳು ಮತ್ತು ದೇಶವಾಸಿಗಳ ಸುರಕ್ಷತಾ ವ್ಯವಸ್ತೆಗಳಲ್ಲಿ ಬಳಕೆಯಲ್ಲಿದೆ. ಅದನ್ನು ಹೆಚ್ಚು ಬೆಲೆ ನಿಗದಿ ಪಡಿಸಿ ಸವಾಲುಗಳ ಮೂಲಕ ಹಂಚಿಕೆ ಮಾಡಲಾಗುತ್ತಿದೆ. ಇಂತಹ ನಿಸ್ತಂತು ಸಂಪರ್ಕ ವ್ಯವಸ್ತೆಗೆ ಇನ್ನು ೧೦೦೦ ಪಟ್ಟು ಹೆಚ್ಚು ವಿಸ್ತಾರದ ಹರಹಿನ ವರ್ಣಪಟಲ ಇದ್ದರು ಸಾಲದು.. ಹಾಗಾಗಿ ಈ ದಿಶೆಯಲ್ಲಿ ಸರಕಾರ ಸಹಾಯಧನ ನೀಡಿ ಸಂಶೋದನೆ ಕೈಗೆತ್ತಿಕೊಳ್ಳಬೇಕು.
ನಾನು ಮೊದಲೇ ಹೇಳಿದ ಹಾಗೆ ಎಲ್ಲ ಉಪಕರಣಗಳು ಕೂಡ ಇತರ ಉಪಕರಣಗಳ ಸಹಾಯದಿಂದಲೇ ಉಪಯುಕ್ತತೆಗಳನ್ನು ಪಡೆಯುತ್ತವೆ. ಮಾಹಿತಿಯನ್ನು ಸಂಗ್ರಹಿಸುವ, ಮಾಹಿತಿಯನ್ನು ರೂಪಾಂತರ ಗೊಳಿಸುವ, ಮಾಹಿತಿಯನ್ನು ಸಂಕುಚಿಸುವ, ಮಾಹಿತಿಯನ್ನು ಸಂಸ್ಕರಿಸುವ ತಂತ್ರಜ್ನಾನವಿಲ್ಲದೇ ಮಾಹಿತಿಯನ್ನು ಬಿತ್ತರುವ ತಂತ್ರಜ್ಞಾನ ಬೆಳೆಯದು. ಕೋಶ ದೂರವಾಣಿಯನ್ನು ಶೋಧಿಸಿದಾಗ ಗಣಕ ಯಂತ್ರವಿರಲಿಲ್ಲ . ಸಂಗೀತವನ್ನು ಸೊಗಸಾಗಿ ನುಡಿಸುವ ಶ್ರಾವ್ಯಕಗಳಿರಲಿಲ್ಲ [ audio players ]..ಪರದೆಯಮೇಲೆ ಚಲನ ದೃಶ್ಯಗಳನ್ನು ದೋಷರಹಿತವಾಗಿ ಪ್ರದರ್ಶಿಸುವ, ಮುದ್ರಿಸುವ ಸಾಧನಗಲಿರಲಿಲ್ಲ. ಇಂದು ನೂರಾರು ಬಳಕೆಗಳನ್ನು ಒಂದೇ ಉಪಕರಣದಲ್ಲಿ ಕಾಣಬಹುದು. "iphone " ಆವಿಷ್ಕಾರ ವಿವಿಧ ಬಳಕೆಗಳ ಏಕೀಕೃತ ಸಾಧನ. ಒಂದೊಂದು ತುಣುಕು ಕೂಡ ಬೇರೆಯಾಗಿ ಬೇರೆಯವರಿಂದ ಬೇರೆ ಬೇರೆ ಸಮಯದಲ್ಲಿ ಸಂಶೋಧಿಸಲ್ಪತ್ತವು. ಅದರ ಜಾಣ ಉಪಯುಕ್ತತೆಯನ್ನು ಮನುಕುಲದ ಬದುಕನ್ನು ಹಸನಾಗಿಸಲು ನಿರಂತರ ಪ್ರಯತ್ನದಿಂದ ಸಿದ್ಧಗೊಳಿಸಲಾಯಿತು.
ಈ ಸೆಲ್ ಫೋನ್ ಅಥವಾ ಮೊದಲ ಮೊಬೈಲ್ ಫೋನ್ ಕೂಡ ಕೇವಲ ಇಪ್ಪತ್ತು ನಿಮಿಷ ಮಾತ್ರ ಕೆಲಸ ಮಾಡುತ್ತಿತ್ತು. ವಿದ್ಯುತ್ಸಂಗ್ರಾಹಕದಲ್ಲಿ ವೇಗವಾಗಿ ಶಕ್ತಿಯ ವ್ಯಯ ವಾಗುತ್ತಿತ್ತು. ವಿಜ್ಞಾನಿಗಳು ಅದನ್ನು ಕೂಲಂಕುಶವಾಗಿ ಪರಿಶೋಧಿಸಿ ಶಕ್ತಿಯ ಅಪವ್ಯವವನ್ನು ತಡೆಗಟ್ಟಿ ಅದನ್ನು ಗಂಟೆಗಳ ಕಾಲ ಬಾಳುವಂತೆ ಮಾಡಿದರು. 3G ವರ್ಣಪಟಲದ ನಂತರ ಭೌತಶಾಸ್ತ್ರ ಅಡ್ಡಗಾಲು ಹಾಕುತ್ತದೆ... ಕಂಪನದ ಸೃಷ್ಟಿ ಸಾಧ್ಯವಿಲ್ಲ ಸೃಸ್ತಿಸಿದರೂ ಮತ್ತು ಶುಧ್ಧತೆ ಧ್ವನಿ ವಾಹಕವಾಗಿ ಯೋಗ್ಯವಾಗಲಾರದು. ಸಂಕೇತಗಳ ವಿಶ್ವಾಸಾರ್ಹತೆ ಇಲ್ಲಿ ಮುಖ್ಯವಾಗುತ್ತದೆ
"antenna " ಅಭಿವೃದ್ದಿಯು ಕೂಡ ಸರಳ ತತ್ವದ ಆಧರದ ಮೇಲೆ ನಿಂತಿದೆ. ಗುರಿಯನ್ನು ತಲುಪದ ಮಾಹಿತಿಯೆಲ್ಲ ಅನುಪಯುಕ್ತವೆ ತ್ಯಾಜ್ಯ ಯೋಗ್ಯವೇ. ಮೊದಲು ಅನುಪಯುಕ್ತ ಸಂಜ್ಞೆಗಳನ್ನು ತ್ಯಜಿಸುವುದು.. ಅನುಪಯುಕ್ತ ದಿಶೆಯಲ್ಲಿ ಬಿತ್ತರಿಸಿ ಮಾಹಿತಿ ತ್ಯಾಜ್ಯವಾಗದಂತೆ ನೋಡಿಕೊಳ್ಳುವುದು ಸಂಜ್ಞೆಯು ಕಲುಷಿತ ವಾಗದಂತೆ ತಡೆಯುವುದು ಸಂಜ್ಞೆಯು ಅನ್ಯ ತರಂಗಗಳ ಅಲೆಗಳಿಂದ ಅಡ್ದಬರದಂತೆ ರೂಪಿಸುವುದು ಇತ್ಯಾದಿ. ಸುಧಾರಣೆಯು ಮಾಹಿತಿಯನ್ನು ಕಳುಹುವುದರಲ್ಲಿ ಮತ್ತು ಸ್ವೀಕರಿಸುವಿದರಲ್ಲಿ ನಡೆಯುತ್ತಲೇ ಇದೆ.
ನಾವು ವೈಜ್ಞಾನಿಕ ಕ್ಷೇತ್ರದಲ್ಲಿ ೨೦ನೆ ಶತಮಾನದಲ್ಲಿ ಹಿಂದೆ ಬಿದ್ದಿದ್ದು ನಿಜ.. ಪ್ರಪಂಚ ನಿಬ್ಬೆರಗಾಗುವ ಯಾವುದೇ ಘನ ಆವಿಷ್ಕಾರ ನಮ್ಮಿಂದ ನಡೆದಿಲ್ಲ.ಇದೆ ವಿಷಯವನ್ನಿಟ್ಟುಕೊಂಡು ಕಾರಣವನ್ನು ಅಭ್ಯಾಸಿಸೋಣ.
ಸಂಶೋಧನೆಗೆ ಸಾಧನೆಗೆ ಪೂರಕ ಪರಿಸರ ಮುಖ್ಯ. ೧೯೪೭ರಲ್ಲಿ ಆಗಷ್ಟೆ ಸ್ವತಂತ್ರರಾಗಿ ಚೆತರಿಸಿಕೊಳ್ಳುತ್ತಿದ್ದ ಭಾರತ ಹಿಂದೆ ಬಿದ್ದಿರುವುದು ಸಹಜ. ಇಂದು ಭಾರತ ವಿಶ್ವದ ಬೃಹತ್ ಮಾರುಕಟ್ಟೆ. ಇದನ್ನೇ ಗುರಿಯಾಗಿಸಿ ವಿಶ್ವದ ಅನೇಕ ಕಂಪನಿಗಳು ಲಗ್ಗೆ ಹಾಕಿವೆ.. ಎಲ್ಲಿ ಕೊಳ್ಳುವರಿರುವರೋ ಅಲ್ಲಿ ಎಲ್ಲವು ಸಹಜವಾಗಿ ಸಿಧ್ಧಿಸುತ್ತವೆ. ನಮ್ಮ ಅಪರಿಮಿತ ಮಾನವ ಸಂಪನ್ಮೂಲ ಮೊಂದೊಂದು ದಿನ ಅಸಾಧಾರಣ ಶಕ್ತಿಯಾಗುವುದರಲ್ಲಿ ನಿಸ್ಸಂಶಯ ಆದರೆ ಅದು ನಮ್ಮ ಜೀವಿತದಲ್ಲೇ ಆಗಿದ್ದರೆ ನಾವು ಹೆಮ್ಮೆ ಪಡಬಹುದೇನೋ.. ಅನುಭವಿಸಬಹುದೇನೋ.ಹೊಸ ಆವಿಷ್ಕಾರಗಳು ನಡೆದೇ ನಡೆಯುತ್ತವೆ. ನಡೆಯಲೇ ಬೇಕು...ನಡೆದೇ ತೀರುತ್ತವೆ.. ಅದು ಕೂಡ ನಮ್ಮಲ್ಲೇ ನಡೆದರೆ ನಾವು ಅದರ ಫಲದ ಬೃಹತ್ ತುಣುಕನ್ನು ಪಡೆಯಬಹುದು.
ಈ ಉದಾಹರಣೆಯನ್ನೇ ತೆಗೆದುಕೊಳ್ಳಿ...
ಮಾರುಕಟ್ಟೆಯ ಬಗ್ಗೆ ಕಿಂಚಿತ್ತು ವಿಶ್ವಾಸವಿಲ್ಲದೇ ಹೂಡಿದ ಹಣ ತಿರುಗಿ ಲಾಭ ತರುವ ಭರವಸೆಯಿಲ್ಲದೆ ಇಂತಹ ಅಸಾಮಾನ್ಯ ಸಾಹಸ ನಮ್ಮಲ್ಲಿ ಸಾಧ್ಯವೇ? ನಾವು ತತ್ರಜ್ನಾನಕ್ಕೆ ಬೆಂಬಲ ಸೂಚಿಸಲಾಗಲಿ, ತಂತ್ರಜ್ಞಾನವನ್ನು ಮೊದಲು ಕೊಂಡು ಅನುಭವಿಸುವುದಕ್ಕಾಗಲಿ ಅಥವಾ ತಂತ್ರಜ್ಞಾನವನ್ನು ತಿಳಿದುಕೊಳ್ಳುವುದಕ್ಕಾಗಲಿ ಹಣ ತೆರುವುದಿಲ್ಲ.. ಅದು ಬೇರೆಯವರು ಕೊಂಡು ಬಿನ್ನಾಣದಿಂದ ಬಿಂಕದಿಂದ ಬೀಗುವುದನ್ನು ಕಂಡಾಗ ಮಾತ್ರ ನಾವು ಪ್ರತಿಸ್ತೆಗಾಗಿ ಕೊಳ್ಳುತ್ತೇವೆ. ಯಾರಾದರು ಕೊಡುಗೆ ನೀಡಿದರೆ ಇನ್ನು ಸಂತೋಷ. ಪುಕ್ಕಟೆಯಾಗಿ ಕೊಡುತ್ತಾರೆಂದರೆ ಕಡಲೆ ಬೀಜಕ್ಕು ಸರದಿಸಾಲಿನಲ್ಲಿ ನಿಲ್ಲುವ ನಾವು ಇನ್ನು ಇಂತಹ ಉತ್ಪನ್ನಗಳನ್ನು ಪ್ರೋತ್ಸಾಹಿಸುವುದು ಕನಸಿನ ಮಾತು. ನಾವು ಕೂಡ ಸಮಾಜದ ಶಕ್ತಿ ಅಪವ್ಯಯವಗುವುದನ್ನು ಮೊದಲು ಗುರುತಿಸಬೇಕು. ಗುರುತಿಸಿದಮೇಲೆ ನಿಯಂತ್ರಿಸಬೇಕು. ನಂತರ ಸಮಾನಾಂತರವಾದ ಮಾರ್ಗಗಳನ್ನು ಹುಡುಕಬೇಕು.ಪರಿಹಾರ ಇರುವುದೇ ಅಲ್ಲಿ.
ಇಂತಹ ಭಾಧ್ಯತೆ ಮತ್ತು ಬದ್ದತೆಯನ್ನು ನಾವು ಹೊಂದಿದ್ದೆವೆಯೇ? ನಮ್ಮನ್ನಾಳುವವರು ಹೊಂದಿದ್ದರೆಯೇ?
ಎಲ್ಲ ಯಶಸ್ಸಿಗೂ ಮೂಲ ಬಧ್ಧತೆ ಮತ್ತು ಧೋರಣೆ.
ತಂತ್ರಜ್ಞಾನ ಸಂಶೋದನೆಗೆ ಮುನ್ನ ವಿಜ್ಞಾನದ ಮೂಲ ತತ್ವಗಳ ಅರಿವು ಮುಖ್ಯ ಆಳವಾದ ಜ್ಞಾನ ಮುಖ್ಯ. ಇದ್ಯಾವುದರ ಪರಿವೆಯೇ ಇಲ್ಲದ ನಮ್ಮವರು ಮೊಬೈಲ್ ಫೋನ್ ಆರೋಗ್ಯಕ್ಕೆ ಹಾನಿಕರ ಎನ್ನುವ ವಿತಂಡವಾದವನ್ನು ಮಂಡಿಸಿ ಧೀನತರೆಂದು ಕರೆಸಿಕೊಂಡಿದ್ದಾರೆ.ವಿದ್ಯುತ್ ಸಂಕೇತಗಳು, ನಿರೋಧಕಗಳು, ವಿದ್ಯುತ್ ಪ್ರವಾಹ, ಅರ್ಧ-ವಾಹಕಗಳ ಗುಣ, ಮೊಬೈಲ್ ಫೋನ್ ಗಳಲ್ಲಿ ಉಷ್ಣದ ಉತ್ಪತ್ತಿ ಏಕೆ ಮತ್ತು ಹೇಗೆ ಆಗುತ್ತದೆ?ಶಕ್ತಿಯ ಉಳಿತಾಯ ಮತ್ತು ಸೋರಿಕೆ ಇತ್ಯಾದಿ ವಿಷಯಗಳ ಮೇಲೆ ಅಧಿಕಾರಯುಕ್ತ ತಿಳಿವಳಿಕೆ ಇರಬೇಕು. ಇಲ್ಲವಾದಲ್ಲಿ ಸಾಧನೆಯ ದಾರಿಯಲ್ಲಿ ಸಾಗುವುದರ ಬದಲು ಸಾಧಕರನ್ನು ಹೊಗಳುವುದು ಅಥವಾ ಸಾಧಕರನ್ನು ವಿಮರ್ಶಿಸುವುದು, ತೆಗಳುವುದನ್ನು ವೃತ್ತಿಯನ್ನಾಗಿಸಿ ನಾವು ಪ್ರಾಜ್ನರೆನ್ನಿಸಿಕೊಳ್ಳುತ್ತೇವೆ.
ತಂತ್ರಜ್ಞಾನ ಬೆಳೆದಂತೆಲ್ಲ ಅದರ ಕುರಿತಾದ ಭಯವು ಹುಟ್ಟಿಕೊಳ್ಳುತ್ತದೆ ಅದರ ದುರುಪಯೋಗದ ಕುರಿತು ಕಾಲೇಜಿನ ಹೆಣ್ಣು ಮಕ್ಕಳಿಂದ ಹಿಡಿದು ಸುಂದರ ಸುಕೋಮಲ ಶರೀರೆಯರಾದ ನವ ತರುಣಿಯರನ್ನ ಕೇಳಬೇಕು ಸೆಲ್ ಫೋನ್ ನ ಹಾನಿಯಕುರಿತು! ವೃಧ್ಧೆಯರ ಕಿವಿಯಲ್ಲಿ ಹೊಸ ಚಲನ ಚಿತ್ರ ಗೀತೆಯ ಪ್ರೇಮ ಕವಿತೆಗಳು ರಿಂಗ್ tone ಆಗಿ ಮಾರ್ದನಿಸುತ್ತವೆ ಅದು ರಾತ್ರಿಯಲ್ಲಿ... ಯಾಕೆಂದರೆ ಅಜ್ಜಿಯ ಮೊಮ್ಮಗ ತನ್ನ ಪ್ರೇಯಸಿಗಾಗಿ ಹಾಕಿದ ಕುಚೋದ್ಯದ ಗೀತೆ ಅಜ್ಜಿ ತಾಯಿ ತಂಗಿಯರ ಕಿವಿಯಲ್ಲಿ ಅಸಹ್ಯ ಹುಟ್ಟಿಸುತ್ತದೆ!
ಸೆಲ್ ಫೋನ್ ನಿಂದ ಮೆದುಳು ಕಾನ್ಸೆರ್ ಬರುತ್ತದೆ ಅನ್ನುವ ಊಹೆ ಕೂಡ ಇದೆ. ಆದರೆ ಅದು ಅಧಾರ ಸಮೇತ ಪ್ರಾಯೋಗಿಕವಾಗಿ ನಿಖರವಾಗಿ ಪುನರಾವರ್ತಿತವಾಗಿ ನಿರೂಪಿಸಲ್ಪತ್ತಿಲ್ಲ. ಮಾನವ ದೇಹದ ಮೇಲಾಗುವ ಪರಿಣಾಮದ ಕುರಿತು ಅನುರಣಿತವಾಗಿ ಕೂಗು ಕೇಳಿಬರುತ್ತಲೇ ಇರುತ್ತದೆ. ಆದರೆ ಸುಮಾರು ದಶಕಗಳಿಂದ ಬಳಸಿದ ಅಸಂಖ್ಯಾತ ಗ್ರಾಹಕರು ಬಾಹ್ಯಗೊಚರವಾಗುವ ಯಾವುದೇ ಪರಿಣಾಮ ಅನುಭವಿಸಿಲ್ಲ. ಉಪಕರಣದ ಉಷ್ಣದ ಪ್ರಭಾವ ನಗಣ್ಯ.
ವರ್ಣ ಪಟಲ ಒಂದು ಅಮೂಲ್ಯ ಆಸ್ತಿ. ಹಾಗಾಗಿಯೇ ಸಂಪರ್ಕ ಕ್ಷೇತ್ರ ಸರಕಾರದ ಅಧೀನ. ಪ್ರಜೆಗಳ ಹಿತಾಸಕ್ತಿಯನ್ನು ಕಾಪಾಡಲು ಸರಕಾರ ಬಧ್ಧವಾಗಿರಬೇಕು. ಯಾರ್ಯಾರು ಎಸ್ಟೆಷ್ಟು ತರಂಗ ಪಟಲದ ಹರವನ್ನು ಯಾವ ಯಾವ ಬಳಕೆಗೆ ಬಳಸುತ್ತಿದ್ದಾರೆ ಎನ್ನುವ ನಿಖರ ಮಾಹಿತಿ ಪಾರದರ್ಶಕವಾಗಿ ದೊರೆಯುವಂತಿರಬೇಕು.
ಹೌದು ನಮ್ಮಲ್ಲಿ ಯಾವುದೇ ಬದಲಾವಣೆ ಬರುವುದು ಸುಲಭವಲ್ಲ. ಅಧಿಕಾರಶಾಹಿ ಧೋರಣೆ.. ಪಂಡಿತ ಪಂಡಿತರಲ್ಲಿ ಇರದ ಹೊಂದಾಣಿಕೆ ಕಾರಣವಿರಬಹುದು.ನಮ್ಮಲ್ಲಿಯ ಮೇಧಾವಿಗಳು ಯಾವುದೇ ವಿಷಯದಲ್ಲಿ ಬೇಗ ಸಮ್ಮತಿಸಿ ಸೇರಿ ನಡೆಯಲಾರರು.ನಮ್ಮ ಸಮಸ್ಯೆಗಳು ಹೊಸತವೇನಲ್ಲ ಜಗತ್ತಿನ ಯಾವುದೋ ಮೂಲೆಯಲ್ಲಿ ಮಾನವ ಇತಿಹಾಸದಲ್ಲಿ ಅನುಭವಿಸಿದ ಪರಿಹರಿಸಿದವುಗಳೇ.ನಾವು ಕೇವಲ ಹುಡುಕುವ ಕೆಲಸ ಮಾಡಿದರೆ ಸಾಕು.. ಭ್ರಷ್ಟತೆ ರಹಿತವಾದರೆ ಸಾಕು.. ನಾವು ತಂತ್ರಾಂಶ ಅಭಿವೃದ್ಧಿಯಲ್ಲಿ ವಾಸ್ತುಶಿಲ್ಪಗಳಮಾದರಿ ಪಡಿಯಚ್ಚಿನ ಬೇಟೆ ಮಾಡಿ ಹೊಸ ಹೊಸ ವಿನ್ಯಾಸ ರೂಪಿಸುತ್ತೇವೆ. ಅದನ್ನೇ ಅದೇ ಉಪಾಯವನ್ನೇ ನಮ್ಮ ಮೂಲ ಸೌಕರ್ಯಗಳ ಅಭಿವೃಧ್ಧಿಗೆ ನಗರ ನಿರ್ಮಾಣಕ್ಕೆ ಯಾಕೆ ಬಳಸಬಾರದು?
ನಾನು ಮೊದಲೇ ಹೇಳಿದ ಹಾಗೆ ಬಧ್ಧತೆ ಮತ್ತು ಧೋರಣೆ ಬದಲಾಗಬೇಕು ಅಷ್ಟೇ.
ಖಾಸಗಿ ಕಂಪನಿಗಳು ಕೂಡ ಹೊಸ ವಿದ್ಯುನ್ಮಾನ ಉಪಕರಣಗಳ ಸ್ವತಂತ್ರ ನಿರ್ಮಾಣದಂತಹ ಸಾಹಸಕ್ಕೆ ಕೈ ಹಾಕಲಾರವು. ಏಕೆಂದರೆ ಗ್ರಾಹಕ ಕಂಪನಿಗಳ ತಂತ್ರಜ್ಞಾನ ಬಯಲು ಮಾಡದಂತೆ ಅವು ಕಾನೂನಿನ ಕಟ್ಟಳೆಗೆ ಒಳಪಟ್ಟಿರುತ್ತವೆ. ತಾವು ವಿದ್ಯುನ್ಮಾನ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿ ಎಂದು ಗ್ರಾಹಕ ಕಂಪನಿಗಳು ದೂರಸರಿದರೆ ಎನ್ನುವ ಭಯ ಬೇರೆ. ಇನ್ನು ಮುಖ್ಯ ವಿಷಯವೆಂದರೆ ಸಂಶೋಧನೆ ಮತ್ತು ಅಭಿವೃದ್ದಿ ಕಮಪನಿಗಳ ಭವಿಷ್ಯದ ನೋಟದಲ್ಲಿಯೇ ಇಲ್ಲ. ಆವಿಷ್ಕಾರ ಅದರ ವರ್ಣ ತಂತುಗಳಲ್ಲಿ ಮೊದಲೇ ಇಲ್ಲ. ಇತ್ತೀಚಿಗೆ ವಾರ್ಷಿಕ ಕಾರ್ಯನಿರ್ವಹಣೆಯ ಬೆಲೆಕಟ್ಟುವ ಪರಿಸ್ಕರಣಾ ಪಧ್ಧತಿಯಲ್ಲಿ ಪೇಟೆಂಟ್ ಅನ್ನುವ ಕ್ರಮ ಅಳವಡಿಸಿದ್ದಾರೆ. ಆದರೆ ಮೂಲ ಆಶಯವೇ ಬೇರೆ. ಗ್ರಾಹಕರನ್ನು ಆಕರ್ಷಿಸಲು ನಡೆಸುತ್ತಿರುವ ದೊಮ್ಬರಾಟದಂತೆ ಅದು ವಾಮಮಾರ್ಗೀಯ ಚಟುವಟಿಕೆಯಾಗಿ ಅಂಕಿ-ಸಂಖ್ಯೆಗಳ ಪ್ರದರ್ಶನದ ಆಟವಾಗಿದೆ.
ಪೇಟೆಂಟ್ ಜ್ಞಾನವನ್ನು ಸೃಷ್ಟಿಸಿ ಕಾನೂನು ಬದ್ಧ ರಕ್ಷಣೆ ಪಡೆದು ರಾಯಧನ ಪಡೆಯುವ ಸಾಧನವಸ್ತೆ. ಉತ್ಪನ್ನವಾಗಿ ಲಾಭತರದ ಅದೆಸ್ಟೋ ಸಂಶೋಧನೆಗಳು ಹಣದ ಹೂಡಿಕೆಯಿಲ್ಲದೆ ಮಾರುಕಟ್ಟೆಗೂ ಬರದೆ ಸಂಗ್ರಾಹಕಗಳಲ್ಲಿ ಕೊಲೆಯುತ್ತಿರುತ್ತವೆ. ಪ್ರತಿಸ್ಪರ್ಧಿಗಳನ್ನು ತಾಂತ್ರಿಕವಾಗಿ ನಿಯಂತ್ರಿಸುವ ಕಟ್ಟಿಹಾಕುವ ಶಕುನಿ ಉಪಾಯದಲ್ಲಿ ಇದು ಕೂಡ ಒಂದು.
ಹೌದು ಎಲ್ಲರು ಕಂಪನಿಗಳನ್ನು ಕಟ್ಟುವುದು ಲಾಭಕ್ಕಾಗಿ. ಅಲ್ಲಿ ಲಾಭವೇ ಮೂಲಮಂತ್ರ. ಲಾಭ ಬದುಕುವುದಕ್ಕೆ ಅನುವು ಮಾಡಿಕೊಡುತ್ತದೆ. ಕಂಪನಿಗಳು ಮೊದಲು ಬದುಕುವುದು ಮುಖ್ಯ. ಆದರೆ ಅದೇ ಸಾರ್ವಕಾಲಿಕ ಗುರಯಾಗಬಾರದು.ಕಾರಣಗಳು ಅನೇಕವಿರಬಹುದು..ಆದರೆ ನಮ್ಮ ಅಧುನಿಕ ಭಾರತ ಅದ್ಭುತ ಕನಸುಗಾರರ ಕೊರತೆಯಿಂದ ಬಡವಾಗಿದೆ. ಇನ್ನೊಬ್ಬ ಟಾಟಾ ಮತ್ತೆ ಹುಟ್ಟಿ ಬರಬೇಕೇನೋ.
3 comments:
upayukta maahiti...
ಕೋಶ ದೂರವಾಣಿಯ ನನಗೆ ಬಗ್ಗೆ ಹೆಚ್ಚಿಗೇನೂ ಗೊತ್ತಿರಲಿಲ್ಲ..ಅದನ್ನು ಕಿವಿಯಲ್ಲಿ ತೂರಿಸಿಕೊಂಡು ಓಡಾಡುತ್ತಾ ಮಾತನಾಡುವದೊಂದನ್ನು ಬಿಟ್ಟರೆ! ಇದೊಂದೇ ಅಲ್ಲ..ನಾವು ಯಾವಾಗಲೂ ಬಳಸುವ ಟಿ.ವಿ., ಕಂಪ್ಯೂಟರ್ ಮುಂತಾದ ಉಪಕರಣಗಳಿಗೂ ಇದು ಅನ್ವಯಿಸುತ್ತದೆ. ಇಂಥ ಆವಿಷ್ಕಾರಗಳ ಬಗ್ಗೆ ಸಂಕ್ಷಿಪ್ತವಾಗಿಯಾದರೂ ಅರಿವಿರುವದು ಅವಶ್ಯಕ ಅನ್ನಿಸುತ್ತಿದೆ.
ಚುಕ್ಕಿ ಚಿತ್ತಾರ ಅವರೇ,
ನನ್ನ ಬ್ಲಾಗಿಗೆ ಭೇಟಿಯಿತ್ತು ಪ್ರತಿಸ್ಪಂದಿಸಿದ್ದಕ್ಕೆ ಕೃತಜ್ಞತೆಗಳು..
ಇಂತಿ ಸ್ನೇಹಿತ,
ಶಿವರಾಂ
ಪ್ರೀತಿಯ ಮಾವ,
ನನ್ನ ಪ್ರತಿಯೊಂದು ಗೀಚನ್ನು ಓದಿ ಪ್ರೋತ್ಸಾಹಿಸಿದ್ದಕ್ಕೆ, ಮತ್ತು ಈ ಬ್ಲಾಗ್ ಪ್ರಾರಂಭಕ್ಕೆ ಹುರಿದುಮ್ಬಿಸಿದ್ದಕ್ಕೆ
ನಾನು ಚಿರಋಣಿ.
ನಿನ್ನ ಅವ್ಯಾಜ ಪ್ರೀತಿ ಹೀಗೆ ಸದಾ ಇರಲಿ.
ಶಿವಣ್ಣ
Post a Comment