ಅನನ್ಯ ಭಾವ
ಮಗಳಾಗಿ ನಾ ಪಡೆದೆ ನಿನ್ನನೀ ಭವದಿ
ಹರ್ಷವ ನೀ ತಂದೆ ಏನ್ನೆಯ ಮನದಿ
ಇಲ್ಲವಾಯಿತು ನನ್ನ ಭಾಗ್ಯದ ಪರಿಧಿ
ನಿತ್ಯವೂ ನೀ ಎನ್ನ ಪ್ರೇಮದ ಜಲಧಿ
ಬಾಲಭಾಷೆಯ ನಿನ್ನ ಮಾತಿನ ವಿಧದಿ
ಬಾಲಮುಕುಂದ ನಿನ್ನಪಾರ ಗುಣದಿ
ಮನೆಯಾಯ್ತು ಮಥುರೆಯ ನಂದನ ತೆರದಿ
ಅನಿವಾರ್ಯ ಬಹುದೂರ ಬದುಕು ಈ ಜಗದಿ
ಆತ್ಮಜೆಯೇ ಬಹುಬೇಗ ಮುಗಿಯಲಿ ಅವಧಿ
ಆಕಳು ಕರುವನು ಸೇರುವ ತೆರದಿ
ಓಡೋಡಿ ಬೇಗ ನಾಬರುವೆ ನಿಶ್ಚಯದಿ!!