Wednesday, March 03, 2010

ಹೆಜ್ಜೆ ಗುರುತು

ವೃತ್ತಿಯಲ್ಲಿ ಏಕತಾನತೆಯನ್ನು ನಿವಾರಿಸಲು ಪ್ರವೃತ್ತಿ ಬೇಕು. ಬರವಣಿಗೆ - ಮೆದುಳಿನಲ್ಲಿ ಸುಳಿದು ಹೋಗುವ ಅಲೆಗಳನ್ನು
ಹಿಡಿದಿಟ್ಟು ಅಭಿವ್ಯಕ್ತಗೊಳಿಸುವ ಸಾಧನ. ಮೊಂದೊಂದು ದಿನ ಬದುಕಿನ ಸಿಂಹಾವಲೋಕನಕ್ಕೆ ಇಂದು ಮಾಡುವ ಚಿಕ್ಕ ಹೆಜ್ಜೆ ಗುರುತು.
ಎಲ್ಲೋ ಹುಟ್ಟಿ ಹೇಗೋ ಬದುಕಿ ಅಳಿದು ಹೋಗುವ ಸಾವಿರ ಸಾವಿರ ಹುಲು ಮಾನವರಲ್ಲಿ ನಾವು ನಗಣ್ಯ. ಜಗತ್ತನ್ನು ಸುತ್ತಿ ಕಲ್ಪನಾತೀತ ಪ್ರಪಂಚದ
ಕಿರು ದರ್ಶನ ಪಡೆದ ನಾನು ನನ್ನ ಇತಿ-ಮಿತಿ ತಿಳಿದದ್ದೇ ಇ-ಜನ್ಮದ ದೊಡ್ಡ ಸಾಧನೆ!! ಹೆಚ್ಚು ತಿಳಿದಷ್ಟೂ ವಿವೇಕ ವಿಧೇಯತೆ! ವಿಭಿನ್ನ ದೃಷ್ಟಿ!
ನಿನ್ನೆಯ ಮಿಥ್ಯೆ ಇಂದು ಸತ್ಯ! ಇಂದಿನ ಸತ್ಯ ನಾಳೆಗೆ ಮಿಥ್ಯೆ! ನಿತ್ಯ ವೈರುಧ್ಯಗಳೊಂದಿಗೆ ಬದುಕು! ಬರೆದರೆ ಮುಗಿಯದು!ಹೊಸತು ಬರೆಯುವ ಹಂಬಲ!
ನಿನ್ನೆಯ ಲವಲೇಶವು ತಾಕದ ಶುದ್ದ ಹೊಸತರ ಶೋಧನೆಯಲ್ಲಿದ್ದೇನೆ! ಸಿಕ್ಕರೆ ಖಂಡಿತ ನಾನೂ ಬರೆಯುತ್ತೇನೆ... ತೃಪ್ತಿಗಾಗಿ...

No comments: