ಮಕ್ಕಳು ಇರುವ ಬದುಕು ಸುಂದರ! ಮಕ್ಕಳ ಮುದ್ದು ಮಾತು ಅಷ್ಟೇ ಸೊಗಸು. ಮಕ್ಕಳು ಪ್ರತ್ಯುತ್ಪನ್ನ ಮತಿಗಳಾಗಿ ಸದಾ ನಮ್ಮನ್ನು ಚಕಿತ ಗೊಳಿಸುತ್ತಾರೆ.ನನ್ನ ಸ್ಮೃತಿಪಟಲದ ಪುಟದಿಂದ ಆಯ್ದ ಕೆಲವು ಇಲ್ಲಿದೆ
ಅಮ್ಮಂಗೆ ಮ್ಯಾನೆರ್ಸ್ ಇಲ್ಲೆ
ನನ್ನ ಭಾವನ ಒಬ್ಬನೇ ಪುತ್ರ ರತ್ನ ಅನುರಾಗ್ ಬಹಳ ಚುರುಕು. ಅವನಿಗೆ ಆಗ ೩-೪ ರ ವಯಸ್ಸು. ದಿನಾಲು manners ಬಗ್ಗೆ ದೊಡ್ಡವರಿಂದ ಪಾಠ ಕೇಳುತ್ತಿದ್ದ ಪುಟ್ಟುಗೆ ಒಂದು ಸಮಸ್ಯೆ.ಅಪ್ಪ ಆದ್ರೆ "Man". manners ಇರುವುದು ಓ. ಕೆ. ಆದ್ರೆ ಅಮ್ಮಂಗೆ "manners" ಇರಲೆ ಹೆಂಗೆ ಸಾಧ್ಯ? ಪುಟ್ಟುನ ಪುಟ್ಟ ಪ್ರಶ್ನೆಗೆ ನಾವೆಲ್ಲ ಹೊಟ್ಟೆ ತುಂಬಾ ನಕ್ಕಿದ್ದೋ ನಕ್ಕಿದ್ದು.
ಅಜ್ಜಿಗೆ ಅಪ್ಪ ಇರ್ತ್ನ?
ನನ್ನ ಮಗಳು ಅನನ್ಯ ಪ್ರಶ್ನೆ ಕೆಳುದ್ರಲ್ಲಿ ಎತ್ತಿದ ಕೈ. ಕೆಲವೊಮ್ಮೆ ಹೊರಗಿನವರಿಗೆ ತಲೆನೋವು ಅಂತ ಅನ್ನಿಸಿದ್ರೂ ಅವಳ ತಾರ್ಕಿಕ ಮತಿತ್ವಕ್ಕೆ ನಾವೆಲ್ಲ ಬೆರಗಾಗಿದ್ದೆ ಹೆಚ್ಚು.
ಅವಳಿಗೆ ಸುಮಾರು ೫.೫ ವರ್ಷ ಇದ್ದಿರಬಹುದು. ನಾನು ಅವಳ ಪ್ರಭುದ್ಧ ಪ್ರಶ್ನೆಯೊಂದಕ್ಕೆ [ ಬಹುಷಃ ಪುನರ್ಜನ್ಮ ಮತ್ತು ನರಕದ ವಿಷಯವೇ ಇರಬೇಕು. ಸಾವು ಮತ್ತು ಸ್ವರ್ಗದ ವಿಷಯ ಬಂದಾಗ ಜಾಣ ಮೌನ ತಾಳುತ್ತಿದ್ದ ನಾನು ಬೇಕೆಂತಲೇ ಉತ್ತರಿಸುತ್ತಿರಲಿಲ್ಲ ] ಉತ್ತರವಿಲ್ಲದೆ ಒಳ್ಳೆ ಅಜ್ಜಿತರ ಅಗೊದ್ಯಲಿ ನೀನು. ದೊಡ್ಡವರು ತಿಳಿದುಕೊಳ್ಳುವ ವಿಚಾರ ನಿನಗೆ ಈಗ ಬೇಡ ಎಂದೇ. ತಕ್ಷಣ ರಾಮಬಾಣದಂತೆ ಬಂತು ಮತ್ತೊಂದು ಪ್ರಶ್ನೆ. ಹಂಗಾದ್ರೆ ಅಜ್ಜಿಗೆ ಅಪ್ಪ ಇರ್ತ್ನ? ನಾನು ಅಜ್ಜಿ ಹೆಂಗೆ ಆಗ್ತೆ? ಈಗ ಸುಸ್ತಾಗು ಸರದಿ ನನ್ನದಾಗಿತ್ತು.
ಮನೆಯೆಲ್ಲ ಹಲ್ಲಿಗಳದ್ದು, ಜಿರಲೆಗಳದ್ದೆ ಅಗೊಯ್ದು
ಡಿಸೆಂಬರ್ ರಜಕ್ಕೆ ನಾವು ನಮ್ಮ ನೆಚ್ಚಿನ ಹಳ್ಳಿಯ ಮನೆ ಮಾಲದಮನೆಗೆ ಹೋಗುವುದು ರೂಢಿ. ಈ ಸಲ ನಾನು ನನ್ನ ಹಿರಿಯ ಮಗಳು ಅನನ್ಯ ಒಬ್ಬಳನ್ನೇ ಕರೆದುಕೊಂಡು ಹೋಗಿದ್ದೆ. ಹಳ್ಳಿಯ ಮನೆಗೆ ಸುಲಭವಾಗಿ ಹೊಂದಿಕೊಂಡಿದ್ದ ಅನನ್ಯ ಹಲ್ಲಿಯನ್ನು ಕಂಡಾಗ ಅಥವಾ ಪುಚು ಪುಚು ಅನ್ನೋ ಹಲ್ಲಿಯ ಧ್ವನಿಯನ್ನು ಕೇಳಿದಾಗ ಭಯ ಪಡುತ್ತಿದ್ದುದನ್ನು ಕಂಡ ಅವಳ ಅಜ್ಜ "ಏನೇ ಪುಟ್ಟಿ ಬೆಂಗಳೂರಲ್ಲಿ ಹಲ್ಲಿ ಜಿರಲೆ ಜಿಗಳಿ ಎಲ್ಲ ನೋಡುಲೆ ಸಿಗ್ತೆ ಇಲ್ಲೆ ನೋಡು. ಇಲ್ಲಾದರೆ ಮಂಗ, ದನ, ಹಲ್ಲಿ, ಹಾವು ಜಿರಲೆ ಜಿಗಳಿ ಎಲ್ಲ ಇದ್ದು" ಅಂದ್ರು
ತಕ್ಷಣ ರಾಮ ಬಾಣದಂತೆ ಬಂತು ಅನನ್ಯಾಳ ಉತ್ತರ.. " ಇಲ್ಯೋ ಅಜ್ಜ ಬೆಂಗಳೂರ ನಮ್ಮ ಮನೇನು ಈಗ ಜಿರಲೆ, ಹಲ್ಲಿ , ಸೊಳ್ಳೆ ಗಳದ್ದೇ ಆಗೋಯ್ದು. " ಮೊಮ್ಮಗಳ ಮುದ್ದು ಮಾತನ್ನು ಕೇಳಿ ಎಲ್ಲರು ಗೊಳ್ಳೆಂದು ನಕ್ಕೆವು.
"ಈ ಆತ್ಮ ಚಲೋ ಇಲ್ಲೆ ಬೇರೆ ಆತ್ಮ ಬೇಕು ಎಂತಕ್ಕೆ ಅಂದ್ರೆ ಈ ಆತ್ಮ ಕಿಲಾಡಿ ಮಾಡ್ತು"
ಆತ್ಮದ ಬಗ್ಗೆ ಅಲ್ಪ ಸ್ವಲ್ಪ ತಿಳಿದಿದ್ದ ಅನನ್ಯ ನನ್ನ ಬಳಿ ಮುಂದಿಟ್ಟ ಹೊಸ ಬೇಡಿಕೆ ನನಗೆ ಬೇರೆ ಆತ್ಮ ಬೇಕು. ಎಂತಕ್ಕೆ ಅಂದ್ರೆ ಈ ಆತ್ಮ ಚಲೋ ಇಲ್ಲೆ ಬರೀ ಕಿಲಾಡಿ ಮಾಡ್ಸಿ ಅಮ್ಮನ ಹತ್ರ ಬಯ್ಯಿಸಿಕೊಳ್ತಾ ಇರ್ತು. ಮುದ್ದು ಮಗಳ ಎಲ್ಲ ಆಸೆಗಳನ್ನು ಯಶಸ್ವಿಯಾಗಿ ಪೂರೈಸುವ ನಾನು ಅವಳ ಈ ಹೊಸ ಬೇಡಿಕೆ ಕೇಳಿ ಬೆಚ್ಚಿ ಬಿದ್ದಿದ್ದೆ. ಇದೆ ಆತ್ಮನೆ ಸ್ವಲ್ಪ ಸರಿ ಮಾಡಿ ಒಳ್ಳೆ ಆತ್ಮ ಮಾಡ್ವ ಹೇಳಿ ಸಮಜಾಯಿಸಿ ನೀಡಿ ತಪ್ಪಿಸಿಕೊಂಡೆ.
ಅಪ್ಪ ಭಾಷಣ ಅಂದ್ರೆ ಎಂತದು?
ಅನನ್ಯ ನಾವು ಮಾತಾಡುವಾಗ "ಭಾಷಣ" ಅನ್ನೋ ಶಬ್ಧ ಹೇಗೋ ಅವಳ ಕಿವಿಗೆ ಬಿತ್ತು. ತಕ್ಷಣ ಬಂತು ಪ್ರಶ್ನೆ. ಅಪ್ಪ ಭಾಷಣ ಅಂದ್ರೆ ಎಂತದು? ನಾನು "ಒಬ್ಬರು ಯಾವುದಾದರು ವಿಷಯದ ಬಗ್ಗೆ ಮಾತನಾಡುವುದನ್ನು ಬಹಳ ಜನ ಕೇಳುತ್ತಿದ್ದರೆ ಅದು ಭಾಷಣ" ಎಂದು ಉತ್ತರಿಸಿದೆ. ತಕ್ಷಣ ಬಂತು ಇನ್ನೊಂದು ಪ್ರಶ್ನೆ. ನೀನು ಯಾವಾಗಲು ಮಾತನಾಡುವುದನ್ನು ನಾನು ಅಮ್ಮ ಕೇಳುವ ಹಂಗೆ ಅಲ್ದಾ? ತನ್ನದೇ ರೀತಿಯಲ್ಲಿ ಭಾಷಣದ ಅರ್ಥ ಅವಳ ಪುಟ್ಟ ತಲೆಯೊಳಗೆ ಸೇರಿತ್ತು..ಆದ್ರೆ ನಾನು ಮಾತ್ರ ಪೆಚ್ಚಾಗಿದ್ದೆ. ನಾವು ಮಾತನಾಡುವಾಗ ಬೇರೆಯವರೂ ಭಾಗವಹಿಸಿದರೆ, ಮಾತನಾಡಲು ಅವಕಾಶ ಸಿಕ್ಕರೆ ಅದು ಸಂಭಾಷಣೆ ಅನ್ನಿಸಿಕೊಳ್ಳುತ್ತದೆ. ಒಬ್ಬರೇ ಮಾತನಾಡಿ ಆಕ್ರಮಿಸಿಕೊಂಡಿದ್ದರೆ ಅದು ಭಾಷಣ ಅಲ್ಲವೇ?
ಇದೆsss ಬಾಲsss
ಅನನ್ಯ ಸುಮಾರು ಎರಡು ವರೆ ವರುಷದ ಮಗುವಾಗಿದ್ದಾಗ ನಾವು ಕುಟುಂಬ ಸಮೇತ ಸ್ನೇಹಿತರೊಬ್ಬರ ಮನೆಗೆ ಹೋಗಿದ್ದೆವು. ನಾವು ಹೊರಗೆ ಕುಳಿತು ಮಾತನಾಡುತ್ತಿದ್ದಾಗ ಸ್ನೇಹಿತನ ಅತ್ತೆ ಹೊಟ್ಟೆ ಹುಣ್ಣಾಗುವಷ್ಟು ನಗುತ್ತ ಹೊರಗೆ ಬಂದರು. ಏನಾಯ್ತು ಎಂದು ಕೇಳಿದರೆ ಅವರು ಮುಖ ಕೆಂಪಗೆ ಮಾಡಿಕೊಂಡು ಹೇಳಲು ಸಂಕೋಚ ಪಡುತ್ತಿದ್ದರು. ನಡೆದದ್ದು ಇಷ್ಟು.
ಅನನ್ಯ ಸ್ನೇಹಿತನ ಬೆಡ್ ರೂಮಿನಲ್ಲಿ ಮಲಗಿಸಿದ್ದ ಒಂದು ವರ್ಷದ ಗಂಡು ಮಗುವನ್ನು ನೋಡಿ "ಇದೆss ಇವಂಗೆ ಮುಂದೆ ಬಾಲ" ಇದ್ದಲಿ ಹೇಳಿ ಜೋರಾಗಿ ತನ್ನ ಮುದ್ದು ಭಾಷೆಯಲ್ಲಿ ಹೇಳುತ್ತಿದ್ದಳು. ಅದನ್ನು ಮುಟ್ಟಲು ಕೈ ಮುಂದು ಮಾಡುತ್ತಿದ್ದಳು...
"ಅಮ್ಮ ಸೌಟ ತೊಳಕ! "
ಅನನ್ಯ ಊಟ ಮಾಡುವಾಗ ಜುನ್ಕ್ ಫುಡ್ ತಿಂದರೆ ಅಮ್ಮ ಗದರಿಸುವುದು ನಿತ್ಯದ ಸಂಗತಿ. ಕೀಟಲೆ ಮಾಡಿದಾಗ ಪಕ್ಕದಲ್ಲೇ ಇದ್ದ ಸೌಟು ತೋರಿಸಿ ಇದರಲ್ಲೇ ಏಟು ಹಾಕ್ತೆ ನೋಡು ಎಂದು ಹೆದರಿಸಿದ ಅಮ್ಮನಿಗೆ ತಟ್ಟನೆ ಅನನ್ಯಾ "ಅಮ್ಮಾ ಸೌಟು
ತೊಳಕನ್ಡಾದರೂ ಹೊಡಿ. ನನ್ನ ಮೈಯೆಲ್ಲಾ ಮುಸುರೆ ಆಗೋಗ್ತು" ಅಂದಳು. ಇದನ್ನು ಕೇಳಿ ಮುಖ ಕೆಂಪಗಾಗಿದ್ದ ಅಮ್ಮ, ಪಕ್ಕದಲ್ಲಿದ್ದ ನಾವೆಲ್ಲ ಮತ್ತು ಕಟಿಣ ಶಿಕ್ಷೆಯಿಂದ ಸುಲಭವಾಗಿ ಪಾರಾದ ಅನನ್ಯ ಹೊಟ್ಟೆ ತುಂಬಾ ನಕ್ಕೆವು.
2 comments:
I am not as good as u in kannada..:)
which i felt after reading ur posts..:)
But seriously ur daughter is too naughty huh:-)
may be resembles dad wat say?
Hi,
Thank you very much for cooments & visiting my blog.
Regards
Shivaram
Post a Comment