ನಾನು 8ನೆ ತರಗತಿಯಲ್ಲಿ ಇದ್ದಾಗ ನಡೆದ ಘಟನೆ ಇದು. ಪಕ್ಕದಮನೆಯಲ್ಲಿ ಒಬ್ಬರು ಅಜ್ಜಿ ಇದ್ದರು. ಅವರ ಮಗನ ಅಳಿಯನ ಹೆಸರು ವಿನಯ ಹೆಗಡೆ.
ಈ ಅಜ್ಜಿ ಯಾವಾಗಲು ಅವನನ್ನು ಕರೆಯುತ್ತಿದ್ದದ್ದು "ಇನಿಯ ಬಾರೋ" ಅಥವಾ "ಯಮ್ಮನೆ ಇನಿಯಾ"ಇತ್ಯಾದಿ.
ಮೊಮ್ಮಗಳ ಗಂಡ ಅಜ್ಜಿಗೆ ಈ ರೀತಿ "ಇನಿಯ" ಆಗಿದ್ದ!
ನನ್ನ ಭಾವ ಸುಮಾರು 6-8 ವರ್ಷ ಅಮೇರಿಕಾದಲ್ಲಿ ಇದ್ದ. ತಪ್ಪದೆ ಪ್ರತೀ ವಾರ ಅಮ್ಮನಿಗೆ ಫೋನ್ ಮಾಡ್ತಿದ್ದ.
ಸುಮಾರು ದಿನದಿಂದ ಅವನ ಅಮ್ಮ ಕಾಲು ನೋವಿನಿಂದ ಬಳಳುತ್ತಿದ್ದದ್ದನ್ನು ಮಗನ ಬಳಿ ಮೊದಲ ಬಾರಿ
ಫೋನ್ ನನಲ್ಲಿ ವಿಷಯ ಪ್ರಸ್ತಾಪಿಸಿ
"ಕಾಲು ನೋವು ಶುರು ಅಯ್ದೋ ಮಾರಾಯ"
ಭಾವ ತಕ್ಷಣ " ಮುಂದಿನ ಕಾಲೋ ಹಿಂದಿನ ಕಾಲೋ?" ಕೇಳಿದ್ದ... ಇಂದು ಇದನ್ನು ನೆನಪಿಸಿ ನಾವು ಈಗಲೂ ನಗುತ್ತಿರುತ್ತೇವೆ!.
ಭೇದಿಯಿಂದ ನರಳುತ್ತಿರುವ ಮಗನನ್ನು ಕುರಿತು ಟೆನ್ಶನ್ ಮಾಡಿಕೊಂಡ ತಾಯಿ ಗಂಡನಿಗೆ ಫೋನ್ ಮಾಡಿ
"ಅಯ್ಯೋ ನಮ್ಮನೆ "ಪಾಪು" ಗೆ ಸಿಕ್ಕಾಪಟ್ಟೆ ಭೇದಿ ಆಗೋಯ್ದು."
ಗಂಡನಿಂದ ತಕ್ಷಣವೇ ಉತ್ತರ ಬಂತು.
"ಅದು ಕಡಿಮೆ ಆಗ್ತು. ಆದ್ರೆ ನೀನು ಅದ್ರ ತಲೆಗೆ ಹಚ್ಹ್ಚಿಕ್ಯಳ್ಳಡಾ":-)
ನನಗೆ ಸಣ್ಣವನಿರುವಾಗಿನ ಅಡ್ಡ ಹೆಸರು "ಮರಿ"!!. ಅಜ್ಜನ ಹೆಸರೇ ನನಗೂ ಇಟ್ಟಿದ್ದರಿಂದ ನನ್ನ ಅಜ್ಜಿ ನನ್ನ ಹೆಸರನ್ನು ಕರೆಯಲು ಆಗದೆ ಇಟ್ಟ ಪ್ರೀತಿಯ ಹೆಸರು ಅದು. ಆದರೆ ಶಿವರಾಮ ಅನ್ನುವ ಹೆಸರಿನ ಗಂಡ ಇರುವ ಎಲ್ಲರಿಗು ಒಳ್ಳೆ ಅನುಕೂಲ ಆಗಿತ್ತು.
ಇದು ಇಷ್ಟೇ ಆಗಿದ್ದರೆ ಸಮಸ್ಯೆಯೇ ಇರಲಿಲ್ಲ. ನನ್ನ ಮಾವನ ಮಗನ ಹೆಸರೂ "ಮರಿ" ಆಯಿತು. ಕೊನೆಗೆ ಅವನಿಗೆ "ದೊಡ್ದಮರಿ" ಎಂದು ಬದಲಾಯಿಸಿದ್ದರು. ನಮ್ಮ ಮನೆ ಅಡಿಕೆ ತೋಟದ ಸಮೀಪ ಸ್ವಲ್ಪ ತಗ್ಗು ಪ್ರದೇಶದಲ್ಲಿತ್ತು. ಹಾಗಾಗಿ ನಮ್ಮ ಮನೆಗೆ "ಕೆಳಗಿನ ಮನೆ " ಅನ್ನೋ ಹೆಸರು. ಕೊನೆಗೆ ಈ ನಾಮ ವಿಶೇಷವೂ ನನ್ನ ಹೆಸರಿಗೆ ಅಂಟಿಕೊಂಡು ಪಡ್ಡೆ ಹುಡುಗರ-ಹುಡುಗಿಯರ ಬಾಯಲ್ಲಿ "ಕೆಳಗಿನ ಮರಿ" ಆಯ್ತು. ಚಿಕ್ಕವನಿರುವಾಗ ಹೇಗೋ ಅದು ಅಷ್ಟು ತಲೆ ನೋವು ಆಗಿರಲಿಲ್ಲ. ಕೊನೆಗೆ ನನ್ನನ್ನು ಕೆಣಕಲು "ಕೆಳಗಿನ ಮರಿ" ಎಂದು ಕರೆದು ಹಾಸ್ಯ ಮಾಡತೊಡಗಿದ್ದರು. ಈಗ ಮಾತ್ರ ನನಗೆ ಮುಜುಗರ ಉಂಟಾಗಿತ್ತು. "ಕೆಳಗಿನ ಮರಿ" ಎಂದು ಕರೆದಾಗ "ಮರಿ ಬೇಕ ?" ಹೇಳಿ ಕೇಳಲು ಶುರು ಮಾಡಿದಮೆಲೆಯೇ ಅವರು "ತಮ್ಮ" ಎಂದು ಬದಲಾಯಿಸಿದ್ದು!!.
ಇದೆ ರೀತಿ ನಮ್ಮೊರಿನ "ರಾಮಕೃಷ್ಣ" ಅನ್ನುವ ವ್ಯಕ್ತಿಗೆ ಸುಂದರ ಹೆಸರಿದ್ದು ಬಳಕೆ ಹೆಸರು "ಕುಟ್ಟು" ಆಗಿತ್ತು . ಅವನನ್ನು "ಕುಟ್ಟು ಭಾವ" ಅನ್ನುತ್ತಿದ್ದರು. "ಕುಟ್ಟು ಬಾರೋ" ಎಂತಲೋ "ಕುಟ್ಟು ಭಟ್ಟ" ಎಂತಲೋ ಕರೆದಾಗ ಕಿಲಾಡಿಗಳು ನಗುತ್ತಿದ್ದದ್ದು ಮಜವಾಗಿತ್ತು.
ನಮ್ಮೂರಿನಲ್ಲಿ ಇರುವ ಹಳೆ ಕಾಲದ ಜನರಲ್ಲಿ ಅಪಾರ ಹಾಸ್ಯದ ಪ್ರಜ್ಞೆ ಇತ್ತು. ಶ್ರಾಧ್ಧಕ್ಕೆ ನಮ್ಮ ಮನೆತನದವರೊಬ್ಬರ ಮನೆಗೆ ಹೋಗಿ ತಿರುಗಿ ಬರುವಾಗ ಸಿಕ್ಕಿದ ಭಟ್ಟರನ್ನು ನಮ್ಮ ದೊಡ್ಡಪ್ಪ ಕೆಣಕಲು "ಭಟ್ರೇ ಶ್ರಾಧ್ಧ ಚಲೋ ಆತ? ಎಲ್ಲಾ ಪಿತ್ರುಗೋ ಬಂದಿದ್ವ? ನಮ್ಮನೆ ಅಪ್ಪಯ್ಯ ಬಂದಿದ್ನ?" ಅಂದ. [ಶ್ರಾಧ್ಧದಲ್ಲಿ ಸಮೀಪದ ಎಲ್ಲ ಕೈಲಾಸವಾಸಿ ಪಿತೃ ಗಳನ್ನೂ ಕರೆಯುವುದು ಪಧ್ಧತಿ.] ಅದಕ್ಕೆ ತಕ್ಷಣ ಚತುರ ಮತಿಯಾಗಿದ್ದ ಅವರು"ಹೌದೋ ಬಂದಿದ್ದ. ನಿನಗೂ ಬರುಲೇ ಹೇಳಿದ್ದ" ಅಂದಕೂಡಲೇ ಬಸ್ ಸ್ಟ್ಯಾಂಡ್ ನಲ್ಲಿ ಇದ್ದ ನಾವೆಲ್ಲಾ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದೆವು.
ಮಾಗೋಡು KPC ಕಾಲೋನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾನು ನಾಲ್ಕನೆ ತರಗತಿಯಲ್ಲಿ ಇದ್ದಾಗ ನಡೆದಾಡು. ನನ್ನ ಸಹಾಪಾಥಿ ಚಲುವಾದಿ ಅನ್ನುವ ಹುಡುಗ ಒಬ್ಬ ಇದ್ದ. ಸರಸ್ವತಿಯ ಅವಕೃಪೆಗೆ ಒಳಗಗಿದ್ದನೋ ಇಲ್ಲ ಕಾಳಿದಾಸನ ಭವಿಷ್ಯ ಇತ್ತೋ ಗೂತ್ತಿಲ್ಲ್ಲ. ಆದರೆ ಓದು ಮಾತ್ರ ಹತ್ತಿರಲಿಲ್ಲ. ಕಿರು ಪರೀಕ್ಷೆಯೊಂದರಲ್ಲಿ ನನ್ನ ಪಕ್ಕ ಕುಳಿತಿದ್ದ. ಕಾಪಿ ಮಾಡಲು ಈ ಛಲವಾದಿ [?] ನನ್ನ ಪೇಪರ್ ತೋರಿಸುವಂತೆ ಕೇಳುತ್ತಿದ್ದ. ತಂದೆಯಿಂದ ಕ್ರೂರವಾಗಿ ಹೊಡೆತ ತಿನ್ನುವುದನ್ನು ಕಣ್ಣಾರೆ ಕಂಡಿದ್ದ ನಾನು ಪಾಪ ಎಂದು ಪೇಪರ್ ತೋರಿಸಿದ್ದೆ. ಎಲ್ಲ ಚೆನ್ನಾಗಿಯೇ ಕಾಪಿ ಮಾಡಿದ್ದ. ಆದರೆ ಪೇಪರ್ ಕೊಟ್ಟಾಗ ನನಗೆ ಒಂದೇ ವಿಷಯದಲ್ಲಿ ಎರಡು ಪೇಪರ್. ಈ ಚಲುವಾದಿ ಉತ್ತರವಲ್ಲದೆ ನನ್ನ ಹೆಸರನ್ನೂ ಕಾಪಿ ಮಾಡಿದ್ದ!!.
ಆಮೇಲೆ ಇಬ್ಬರು ಚೆನ್ನಾಗಿ ಮಾಸ್ತರರ ಮಂತ್ರ ದಂಡದಿಂದ ಅನುಗ್ರಹಕ್ಕೊಳಗಾದದ್ದು ನೀವು ಸುಲಭವಾಗೇ ಊಹಿಸಬಹುದು.
ಹಾಸ್ಯದ ಸರಣಿಯಲ್ಲಿ ಇನ್ನೂ ಇದೆ. ಸಮಯದ ಆಭಾವ!!.
4 comments:
ಹೌದು...
ಈ ರೀತಿಯ ಪೇಚಿನ ಪ್ರಸ೦ಗ ನನಗೂ ಇದೆ...ನಮ್ಮನೆಯಲ್ಲಿ ನನ್ನ ಅಕ್ಕ೦ಗೆ ದೊಡ್ಪಾಪು, ನನಗೆ ಸಣ್ಪಾಪು ಎನ್ನುತ್ತಿದ್ದರು. ನನ್ನ ಚಿಕ್ಕಮ್ಮನ ಮಕ್ಕಳು ನಮ್ಮನ್ನ ದೊಡ್ಡಕ್ಕ ಸಣ್ಣಕ್ಕ ಅನ್ನುತ್ತಿದ್ದರೆ... ಎಲ್ಲರೂ ದೋಡ್ ಖ, ಸಣ್ ಕ... ಎ೦ದು ತಮಾಶೆ ಮಾಡುತ್ತಿದ್ದರು..
ಈಗಲೂ ಊರಿಗೆ ಹೋದಾಗ ನನಗೆ ಸಣ್ಪಾಪುವಿನ ಸಣ್ಣ, ಸಣ್ಣ ಪಾಪುಗಳು ಹೇಗಿವೆ ಎ೦ದು ಕಿಚಾಯಿಸುತ್ತಾರೆ....
ಚ೦ದದ ಬರಹ..
ಹಹಹಾ..ಹಾಸ್ಯ ಪ್ರಸ೦ಗಗಳು.. ಒ೦ದಕ್ಕಿ೦ತ ಒ೦ದು ನಗುಬರಿಸಿದವು..ನಾನೂ ಒ೦ದು ಸಣ್ಣ ನಗು ಪ್ರಸ೦ಗವನ್ನು ಬರೆದಿದ್ದೇನೆ.ಬನ್ನಿ.
ಮನಮುಕ್ತ ಅವರೇ,
ತಮಗೆ ಸುಸ್ವಾಗತ! ನಿಮಗೆ ಆಸರಿಗೆ :-) ತಣ್ಣಗಿಂದು ಕೊಡಲೋ? ಬಿಸಿ ಮಾಡಲೋ?
ಖಂಡಿತ ಬರುತ್ತೇನೆ!
ಚುಕ್ಕಿ-ಚಿತ್ತಾರಕ್ಕ,
ಚೆನ್ನಾಗಿದ್ದು. ನಿಮ್ಮ ಫ್ಲೂ ಗೀತೆ ಸೂಪರ್!
ಮಕ್ಕಳೀಗೆ ಜ್ವರ ಬಂದಾಗ ಬರು ಫೀಲಿಂಗ್ಸ್ ಎಲ್ಲ
ಅಕ್ಷರದಲ್ಲಿ ನಯವಾಗಿ ಪೋಣಿಸಿ.....
-ಶಿವರಾಮ
hey...really good one...good sense of humor...keep writing....
Santhosh Ananthapura
Post a Comment