Wednesday, April 14, 2010

ಮೂರ್ಖ ಚರಿತ್ರೆ

 ಮೂರ್ಖರ ದಿನ ಬರೆಯಬೇಕದದ್ದನ್ನ ಮೂರ್ಖರ ತಿಂಗಳಿನಲ್ಲಾದರು ಬರೆದುಮುಗಿಸೋಣ ಅಂದುಕೊಂಡೆ. ಯಾಕೆಂದರ ನಾನು ಮಾತ್ರ ಮೂರ್ಖ ಅಲ್ಲ ಅನ್ನೋ ಬಲವಾದ ನಂಬಿಕೆ ನನ್ನದು. ಅದು ಮದುವೆ ಆದಮೇಲೆ! ನಾನು ಈ ವಾಕ್ಯ ಬರೆಯುವ ಹೊತ್ತಿಗೆ ಮೂರ್ಖರ ಸಂಖ್ಯೆ ಇನ್ನು ಹೆಚ್ಚಾಗಿರಬಹುದು! ಈ ಮೂರ್ಖರನ್ನು ಸರ್ವೇ ಮಾಡುವ ಕೆಲಸ ಬಹಳ ಕಷ್ಟ. ಮೂರ್ಖತನಕ್ಕೆ ಹಲವು ಮುಖ. ಅದಕ್ಕೆ ಇರಬೇಕು. ಬೇರೆಯವರಿಗೆ ಬಹು ಬೇಗ ತಿಳಿಯೋ ತನಗೆ  ಮಾತ್ರ ಗೊತ್ತಾಗದ  ದೊಡ್ಡ ಗುಣ ಅಲ್ಲವೇ ಇದು?ಅಯ್ಯೋ ಮಾತಾಡಿ ಮೂರ್ಖ ಆಗುವುದಕ್ಕಿಂತ ಸುಮ್ಮನೆ ಇದ್ರೆ ಒಳ್ಳೇದು ಬಿಡಿ. ಸುಮ್ನೆ ಇದ್ರೂ ಈ ಮೂರ್ಖ ಅನ್ನೋ ಕೀರೀಟ ತಪ್ಪಿದ್ದಲ್ಲ.  
ಮಾಡಿದವನಿಗಿಂತ ಅಡಿದವನೇ ಮೂರ್ಖ ಈಗಿನ ಕಾಲದಲ್ಲಿ. ಈ ಲೇಖನ ಓದಿದಮೇಲೆ ನಿಮಗೆ ತಿಳಿಯಬಹುದು!ಆಡಿದವ ಅಂದ ತಕ್ಷಣ ನೆನಪಾಯ್ತು. ಕ್ರಿಕೆಟ್ ನಲ್ಲಿ ಮಾತ್ರ ಆಡಿದವನಿಗಿಂತ ನೋಡಿದವ ಮೂರ್ಖ. ಅಯ್ಯೋ ಮೂರ್ಖರ ಮೇಲೆ ನನಗೆಷ್ಟು  ಪ್ರೀತಿ ಅಂದುಕೋಬೇಡಿ! ಮೂರ್ಖರು ಇರೋದ್ರಿನ್ದನೆ ನಾನೂ ಬುಧ್ಧಿವಂತ ಅನ್ನಿಸಿಕೊಳ್ಳೋಕೆ  ಸಾಧ್ಯ ಅಲ್ವ?
ಬರೀ ಗಂಡಸರು ಮಾತ್ರ ಮೂರ್ಖರು ಅಂದುಕೊಂಡಿದ್ದೆ. ಆದ್ರೆ ಮೂರ್ಖರ ಸೃಷ್ಟಿಗೆ ಹೆಂಗಸರೂ ಕೈಜೋದಿಸಿರ್ಲೆಬೇಕು ಅಲ್ವೇ?
ಹಾಗಾಗಿ ಲಿಂಗ ಭೇದ ಸುದ್ದಿ ತೆಗೆದು ಹೊಸ ಗಲಾಟೆ ಮಾಡು ಮೂರ್ಖತನ ಬೇಡ ಬಿಡಿ.
ಮೊನ್ನೆ ನಡೆದ  ನಿತ್ಯಾನಂದ ಜಗದ್ಗುರುಗಳ ವಿಷ್ಯ ತಗೊಳ್ಳಿ...ಅಲ್ಲರೀ ಸ್ವಾಮೀಜಿಗಳ ಬಳಿ ಹುಡುಗಿ ಬಿಟ್ಟವರನ್ನ ಏನಂತ ಕರೆಯೋಣ?
ಹುಡುಗಿ ವಿಷಯದಲ್ಲಿ ಗಲಾಟೆ ಅದಮೇಲು ಮತ್ತೆ ಸನ್ಯಾಸಿಗಳ ಹತ್ರ ಹೋಗಬೇಕಾದ್ರೆ ರೋಮಾಂಚಕ ಡ್ರೆಸ್ ಮಾಡ್ಕೊಂಡು ಮತ್ತೆ ಹೋಗೋದೇ ಇಲ್ವಾ ನಮ್ಮ ಜನ? ಹಾಗಾಗೆ ಹೇಳಿದ್ದು ಸಂಖ್ಯೆ ಬೆಳೀತಾನೆ ಇದೆ.
ಮೂರ್ಖರ ಕೈಯಲ್ಲಿ ಇಂತ ಗುಟ್ಟಿನ ವಿಷ್ಯ ಹೇಳಲೇ ಬಾರ್ದು. ಮತ್ತೆ ನಾಲ್ಕು ಜನಕ್ಕೆ ಹೇಳಿ ಜಗತ್ತಿನಲ್ಲಿ ಮೂರ್ಖರಿಲ್ಲದ ಮನೇನೆ ಇಲ್ಲದ ಹಾಗೆ ಮಾಡಿಬಿಡ್ತಾರೆ. ಮದುವೆ ಆದ್ರೆ ಮೂರ್ಖ ಅಂತಾರೆ. ನಿತ್ಯಾನಂದ ಸನ್ಯಾಸಿ ಆಗಿದ್ದು ಅದಕೆ ಇರ್ಬೇಕು.
ಮದುವೆ ಅಂದ ಕೂಡ್ಲೇ ನೆನಪಾಯ್ತು ನೋಡಿ. ಮದುವೆ ಆದ್ರೆ ಮೂರ್ಖ ಅಂತಾರಲ್ಲ? ಅದು ಗಂಡೋ ಹೆಣ್ಣೋ? ಅಪ್ಪ ಅಮ್ಮ ಮೂರ್ಖರಿರ್ಲಿಕ್ಕಿಲ್ಲ ಬಿಡಿ! ಕೆಲವು  ಬುದ್ದಿವಂತರು ಹುಟ್ಟಿಲ್ವ? ಅದ್ರು ಮಗುವೆ ಆಗೋದು ಮುಂಚೆ cooker ತಗೊಂಡ್ರೆ ವಾಶಿಂಗ್ ಮಷಿನ್ ತಗೊಂಡ್ರೆ ಮೂರ್ಖ ಅಂತಾರೆ. ಅಕಸ್ಮಾತ್ ಮೊದಲೇ ತಗೊಂಡ್ರೆ ಮದುವೆ ಯಾಕೆ ಅಲ್ವ?
ಹೆಂಡತಿಗೆ ಹೇಳ್ಬೇಡಿ... ಅವಳ ಅಣ್ಣ, ಅಪ್ಪ ಎಲ್ಲರಿಗು ಹೇಳಿ ನಾನು ಮೂರ್ಖ ಅನ್ನೋದು ಸಾಬೀತು ಮಾಡೀಯಾರು! 
ಮೊನ್ನೆ ಅಷ್ಟೇ ಬೆಂಗಳೂರಲ್ಲಿ ಜನ ಮೂರ್ಖರಾದ್ರು. ಮತ ಹಾಕಿ. ರಾಜಕಾರಣಿಗಳ   ಮಾತಾ ನಂಬಿದ್ರೆ ಬುಧ್ಧಿವಂತ ಆಗೋದು ಒಂದೇ ಸಲ! ಹೋಗ್ಲಿ ಇಲ್ಲಿ ಅಮೇರಿಕಾದಲ್ಲಿ ಸ್ವಲ್ಪ ಕಡಿಮೆ ಮೂರ್ಖರು ಇರಬಹುದು ಅಂದುಕೊಂಡಿದ್ದೆ.
ಅಯ್ಯೋ ದೇವ್ರೇ! ಇವರೆಲ್ಲ ಬುಧ್ಧಿವಂತ ಮೂರ್ಖರು... ಡಾಲರ್ ಆಶೆಗೆ ಇಲ್ಲಿಗೆ ಬಂದು ಅಪ್ಪ ಅಮ್ಮನೇ ಮೂರ್ಖರು ಅಂತ ಇದ್ದಾರೆ!  ಅಪ್ಪ ಅಮ್ಮನ ದೂರ ಮಾಡಿ ಮೂರ್ಖರಾದ್ವಿ ಅನ್ನೋ ಸ್ನೇಹಿತರು ಇದ್ದಾರೆ.ಡಾಲರ್ ಕನ್ವರ್ಟ್ ಮಾಡಿ ಬ್ಯಾಂಕ್ನಲ್ಲಿ ಇಟ್ಟು ಹಣ ಬೆಳೀತಾ ಇದೆ ಅನ್ನೋ ಮೂರ್ಖರು ಒಂದಷ್ಟು. ಅದೆಂತದೋ ಈ ಆರ್ಥಿಕ ಕುಸಿತ ದಿಂದ ಇವರ ಸಂಖ್ಯೆ ಇನ್ನು ಹೆಚ್ಚಾಗಿ ಯಾರನ್ನು ನೋಡಿದರು ಮೂರ್ಖರೆ ಅನ್ನಿಸೋ ಹಾಗಾಗಿದೆ ಇಲ್ಲಿ.  
ಆದರು ಮೂರ್ಖರು ಹೆಚ್ಚಿರೋದು ನಮ್ಮ ದೇಶದಲ್ಲಿ. ಅತೀ ವೇಗದಲ್ಲಿ ಮೂರ್ಖರ ಸೃಷ್ಟಿ ನಡೀತಿದೆಯಲ್ಲ! ಇನ್ನು ಸ್ವಲ್ಪ ದಿನ
ಹೋದ್ರೆ ಮೂರ್ಖರ ಪಾರ್ಟಿ ಅಧಿಕಾರ ಹಿಡಿದು ಬುದ್ದಿವಂತರನ್ನ ಹೀಯಾಳಿಸೋಕೆ ಶುರು ಮಾಡಿದ್ರೆ? ಬದುಕು ಶಾಶ್ವತ ಅನ್ನೋದೇ ಒಂದು ಮೂರ್ಖತನ ಆಗಿರುವಾಗ ಇದೆಲ್ಲ ಏನ್ ಬಿಡಿ? ಜಾಣರನ್ನು ದಡ್ಡರ ಮಾಡೋದು ಗೊತ್ತಿರೋದು ಮೂರ್ಖರಿಗೆ ಮಾತ್ರ. ಹಾಗಾಗಿ ಮೂರ್ಖರೆ ಬಲಾಡ್ಯರು.  ದುಡಿದಿದ್ದಕ್ಕಿಂತ ಹೆಚ್ಚು ಖರ್ಚು ಮಾಡಿದ್ರೆ ಮೂರ್ಖರಗೋದು ಗ್ಯಾರಂಟೀ.
ಈ ಮೂರ್ಖತನ ಅನ್ನೋದು ಯಾರನ್ನು ಬಿಟ್ಟಿಲ್ಲ ನೋಡಿ. ಧರ್ಮರಾಜನೆ ದೊಡ್ಡ ಮೂರ್ಖ ಆಗಿದ್ದ. ಬ್ರಿಟಿಷರನ್ನು ಓಡಿಸಿದ ಗಾಂಧಿನೇ ಮೂರ್ಖ ಅನ್ನೋ ಕಾಲ ಇದು. "ಸಗರ ಮನು ಮಾಂಧಾತರೆ ಶಾಶ್ವತವಾಗಿ ಈ ಭೂಮಿಯನ್ನು ಆಳಿಲ್ಲ.
"ನೈಕೆನೋಪಿ ಸಮಂಗತೆ ವಸುಮತಿ ಮುಂಜತ್ವಯೋ ಯಸ್ಯತಿ" ಎಂದು ಮೂರ್ಖತನವನ್ನು ಎತ್ತಿತೋರಿಸಿದ ಭೋಜರಾಜ ರಾಜ್ಯವನ್ನೇ  ಪಡೆದ. ಆದರೆ ಇಂತಹ ವಿಚಾರ ಈಗ ಹೇಳಿದರೆ ನಾವು ಮೂರ್ಖರಾಗುವುದು ಶತಃ ಸಿಧ್ಧ.
ಈಗಂತೂ "ಫೂಲ್"ಗಳಿಗೆ "ಟೂಲ್" ಸಿಧ್ಧಪದಿಸೋ ಭರಾಟೆ. "ಫೂಲ್ ವಿಥ್ ಅ ಟೂಲ್ ಇಸ್ ಸ್ಟಿಲ್ ಅ ಫೂಲ್ " ಅನ್ನೋದು
ಈ ಫೂಲ್ಗಳಿಗೆ ಹೇಗೆ ಗೊತ್ತಾಗುತ್ತೆ ಅಲ್ವ?
ಮೂರ್ಖರೆಲ್ಲ ಸೇರಿ ಒಂದುದಿನ ಗಲಾಟೆ ಮಾಡ್ತಾ ಇದ್ರೂ. ಅಧ್ಯಕ್ಷರ ಆಯ್ಕೆ ಸಮಸ್ಯೆ. ಎಲ್ಲರಿಗೂ ಸಮಾನ ಅರ್ಹತೆ ಇರೋದ್ರಿಂದನೆ ಈ ಸಮಸ್ಯೆ. ಬುಧ್ಧಿವಂತನ  ಹತ್ರ ಬಂದು ಮೂರ್ಖರ ಸಂಘಕ್ಕೆ ಅಧ್ಯಕ್ಷರನ್ನ ಆಯ್ಕೆ ಮಾಡುವ ಉಪಾಯ ಕೇಳಿದ್ರು.
ಬುಧ್ಧಿವಂತ ಮನಸ್ಸಿನಲ್ಲೇ ಒಂದು ಹಣ್ಣು ನೆನಪಿಸಿಕೊಂಡು ಅದರ ಹೆಸರು ಯಾರು ಹೇಳುತ್ತಾರೋ ಅವರೇ ಅಧ್ಯಕ್ಷರು ಅಂದ.
ಬುಧ್ಧಿವಂತ ಅದೇ ಹಳದಿ ಬಣ್ಣದ ಹಣ್ಣು ಇದೆಯಲ್ಲ ಅದನ್ನ ಮನಸ್ಸಲ್ಲಿ ಇಟ್ಕೊಂಡಿದ್ದ. ನಿಮಗೆ ಗೊತ್ತ ಹಳದಿ ಬಣ್ಣದ ಯಾವ್ಯಾವ ಹಣ್ಣುಗಳಿದೆ ಅಂತ?ನೆನಪಾದ್ರೆ ಕಾಮೆಂಟ್ ನಲ್ಲಿ ಹಾಕಿ. 
ರಾತ್ರಿ ಹನ್ನೆರದಾಯ್ತು. ಇನ್ನು ಈ ಮೂರ್ಖಪುರಾಣ ನಿಲ್ಲಿಸದಿದ್ದರೆ ನಾಳೆ ಆಫೀಸಿನಲ್ಲಿ ನಾನು ಮೂರ್ಖನಾಗುವುದು ಖಂಡಿತ.
 

3 comments:

Narayan Bhat said...

ಮೂರ್ಖ ಪುರಾಣ ಚೆನ್ನಾಗಿದೆ ಎಂದು ಪ್ರತಿಕ್ರಿಯಿಸುವದರಲ್ಲಿ ಮೂರ್ಖತನವಿಲ್ಲವೆಂಬ ನಂಬಿಕೆ ನನಗಿದೆ. ಜಾಣರಾದವರು "ಜನರನ್ನು ಮೂರ್ಖರನ್ನಾಗಿ ಮಾಡುವದು ಹೇಗೆ?" ಎನ್ನುವ ಬಗ್ಗೆ ಕೋಚಿಂಗ್ ಕ್ಲಾಸುಗಳನ್ನು ಪ್ರಾರಂಭಿಸಿದರೆ, ಅದು ಒಂದು ಲಾಭದಾಯಕ ಉದ್ಯಮವಾಗಿ ಬೆಳೆಯುವದರಲ್ಲಿ ಸಂಶಯವಿಲ್ಲವೆಂದು ಅನ್ನಿಸುತ್ತಿದೆ.

ಚುಕ್ಕಿಚಿತ್ತಾರ said...

:):)

ಶಿವರಾಮ ಭಟ್ said...

ನಾವು ನಿಜವಾಗಿಯೂ ಇರುವುದಕ್ಕಿಂತ ಹೆಚ್ಚು ಮೂರ್ಖರು ನಾವೆಂದು ಜನ ಭಾವಿಸಿದ್ದರೆ ಲಾಭ ಹೆಚ್ಚು. ಸಮಸ್ಯೆ ಕಡಿಮೆ.
ಮಾವ ಮತ್ತು ಚುಕ್ಕಿ ಚಿತ್ತಾರ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು