ವೇದಪುರುಷನ ಸುತನ ಸುತನ ಸ
ಹೋದರನ ಮೊಮ್ಮಗನ ಮಗನ ತ
ಳೋದರಿಯ ಮಾತುಳನ ಮಾವನನತುಳ ಭುಜಬಲದಿ
ಕಾದಿ ಗೆಲಿದವನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ
ಆದಿ ಮೂರುತಿ ಸಲಹೊ ಗದುಗಿನ ವೀರನಾರಯಣ ೨೩
ವೇದಪುರುಷ - ಮಹಾವಿಷ್ಣು
ಸುತನ - ಬ್ರಹ್ಮ ಸುತ - ನಾರದ ಸಹೋದರ- ಮರೀಚಿ
ಮೊಮ್ಮಗ - ಇಂದ್ರ [ಮರೀಚಿಯ ಮಗ ಕಶ್ಯಪನ ಮಗ ]
ಮಗ - ಅರ್ಜುನ - ಅರ್ಜುನನನ ತಳೋದರಿ - ಸುಭದ್ರೆ
ಸುಭದ್ರೆಯ ಮಾತುಳ - ಕಂಸ
ಕಂಸನ ಮಾವ - ಜರಾಸಂಧ
ಜರಾಸಂಧನ ಕಾದಿ ಗೆಲಿದವ - ಭೀಮ
ಭೀಮನ ಅಣ್ಣ- ಧರ್ಮರಾಜ
ಧರ್ಮಜನ ಅವ್ವೆ - ಕುಂತಿ
ಕುಂತಿಯ ನಾದಿನಿ - ದೇವಕಿ
ದೇವಕಿಯ ಹೊಟ್ಟೆಯಲ್ಲಿ ಹುಟ್ಟಿದ ಆದಿ ಮೂರುತಿ - ಕೃಷ್ಣ = ಗದುಗಿನ ವೀರನಾರಾಯಣ
7 comments:
ಒಟ್ಟಾರೆ ಅರ್ಥ ಗೊತ್ತಿದ್ದರೂ ಶಬ್ದಶಃ ಅರ್ಥ ಮರೆತು ಹೊದಿತ್ತು...ಮತ್ತೆ ನೆನಪಿಸಿದ್ದಕ್ಕೆ ಥ್ಯಾಂಕ್ಸ್.
ಒಳ್ಳೆಯ ಒಗಟು ಕೊಟ್ಟಿದ್ದಕ್ಕೆ ಧನ್ಯವಾದ. ಇದೇ ರೀತಿ ಕನಕದಾಸರ ರಚನೆಗಳಲ್ಲೂ ಒಗಟಿನ ಧಾಟಿಯಲ್ಲಿ ಕೀರ್ತನೆಗಳು ಇವೆ.
ದೀಪಸ್ಮಿತ ಮತ್ತು ನಾರಾಯಣ ಭಟ್ಟರಿಗೆ ಧನ್ಯವಾದಗಳು.
ನಾನು ಚಿಕ್ಕವನಾಗಿದ್ದಾಗ ಕಷ್ಟಪಟ್ಟು ಬಿಡಿಸಿದ್ದ ಸಮಸ್ಯೆ ಇದು.
ನನ್ನ ಪ್ರೀತಿಯ ಅಣ್ಣ ಇಂಥಹ ಒಗಟುಗಳನ್ನು ಆಯ್ದು ನನ್ನ ಬುಧ್ಧಿ ಚುರುಕುಗೊಲಿಸುತ್ತಿದ್ದರು!
ಗದುಗಿನ ಭಾರತ ಬ್ಲಾಗಿನ ಲಿಂಕ್ ಕೊಟ್ಟ ನಾಭಿಯವರಿಗೆ ಮುಹುರ್ಧನ್ಯವಾದಗಳು !
nice....!!
ಚುಕ್ಕಿ ಚಿತ್ತಾರ,
ಧನ್ಯವಾದಗಳು. ಬ್ಲೋಗಾಯಣಕ್ಕೆ ಮತ್ತೆ ಸ್ವಾಗತ
ಶಿವರಾಂ
nice!!!!!!!!!!
ಸೀತಾರಾಮ್ ಅವರಿಗೆ ಧನ್ಯವಾದಗಳು ಮತ್ತು ನನ್ನ ಬ್ಲಾಗಿಗೆ ಸ್ವಾಗತ
Post a Comment