ಚೆಸ್ ಆಟವನ್ನು ಮೂರು ಹಂತಗಳಲ್ಲಿ ವಿಂಗಡಿಸಬಹುದು.
ಚೆಸ್ ಒಪೆನಿಂಗ್ ಅಥವಾ ಆರಂಭ
ಮಿಡ್ಲ್ ಗೇಂ ಅಥವಾ ಮಧ್ಯಮ ಆಟ
ಎಂಡ್ ಗೇಂ ಅಥವಾ ಕೊನೆಯಾಟ
ಆರಂಭ :
ಆಟದ ಆರಂಭದಲ್ಲಿ ಎಲ್ಲ ಕಾಯಿಗಳೂ ಫಲಕದ ಮೇಲೆ ಇರುತ್ತವೆ. ಹೀಗಾಗಿ ಒಂದೊಂದು ನಡೆಯೂ ಕೂಡ ಆಟವನ್ನು ವಿಕಸಿಸುತ್ತಾ ಎದುರಾಳಿಯ ಮೇಲೆ ಆಕ್ರಮಣಕ್ಕೆ ವ್ಯೂಹ ರಚನೆಯ ತಂತ್ರವನ್ನು ಬಲಪಡಿಸುತ್ತ ಆಟಗಾರನ ಬೌಧ್ಧಿಕ ಹಾಗು ವಿಶ್ಲೇಷಣಾ ಸಾಮರ್ಥ್ಯಕ್ಕೆ ಚೆಸ್ ಸಿಧ್ಧಾಂತದ ಜ್ಞಾನಕ್ಕೆ ತಕ್ಕಂತೆ ಹಿಡಿತವನ್ನು ಸಾಧಿಸುತ್ತ ಮುನ್ನಡೆಯುತ್ತಿರುತ್ತದೆ. ಆರಂಭದಲ್ಲಿ ಎಡವಿದರೆ ಸೋಲು ಖಚಿತ. ಆದರೆ ಆರಂಭದ ಆಟಕ್ಕೆ ಸಿಧ್ಧ ಸೂತ್ರಗಳೂ ಲಭ್ಯ.
ಆಟಗಾರನೊಬ್ಬ ತನ್ನ ಅನುಭವದ ಆಧಾರದಿಂದ ಆರಂಭಿಕ ಆಟವನ್ನು ಆಡಬಹುದು. ಇಲ್ಲಿ ಯುಕ್ತಿಗಿಂತಲೂ ಪಾಂಡಿತ್ಯ ಹೆಚ್ಚು ಉಪಯುಕ್ತವಾಗಿರುತ್ತದೆ. ಆದರೂ ಆರಂಭದ ಆಟದ ಎಲ್ಲ ರೀತಿಯ ಉಪಾಯಗಳೂ ಕೂಡ ಈಗಾಗಲೇ ದಾಖಲಾಗಿವೆ. ಗಣಕಗಳಲ್ಲಿ ಅಳವಡಿಸಿ ಉತ್ತಮ ಸರಣಿಯ ೧೦-೧೫ ನಡೆಗಳ ಪಟ್ಟಿಯು ಕೂಡ ಪುಸ್ತಕಗಳಲ್ಲಿ ಸಿಗುತ್ತದೆ. ರುಯ್ ಲೋಪೆಜ್, ಕಾರೋ ಕ್ಯಾನ್, ಕಿಂಗ್ಸ್ ಇಂಡಿಯನ್ ಆಕ್ರಮಣ, ಗ್ರುಎನ್ ಫೆಲ್ಡ್ ರಕ್ಷಣೆ, ರೆಟಿ ಒಪೆನಿಂಗ್ ಫ್ರೆಂಚ್ ಒಪೆನಿಂಗ್ ಇತ್ಯಾದಿ ಆರಂಭ ಆಟದ ಸೂತ್ರಗಳು ಮತ್ತು ಪ್ರಕಾರಗಳು ಟೂರ್ನಮೆಂಟ್ ಆಟಗಳಲ್ಲಿ ಸಾಮಾನ್ಯವಾಗಿ ಕಾಣಬಹುದು. ಆರಂಭ ಆಟ ಉತ್ತಮವಾದ ಮಧ್ಯಂತರ ಸಂಗ್ರಾಮಕ್ಕೆ ಸುಭದ್ರ ಬುನಾದಿಯನ್ನು ಒದಗಿಸುತ್ತದೆ. ಆಟದ ಎಲ್ಲ ಒಳಸುಳಿ, ತಿರುವುಗಳ ಬಗೆಗೆ ಅಂತರ್ದೃಷ್ಟಿಯನ್ನು , ಆಳವಾದ ಜ್ಞಾನವನ್ನು ಹೊಂದಿದ ಕುಶಲಿಗಳು ಸಂಕೀರ್ಣವಾದ ಬಲೆಯನ್ನು ಬೀಸಿ ಎದುರಾಳಿಯನ್ನು ಹತ್ತಿಕ್ಕಬಲ್ಲರು.
ಆರಂಭದಲ್ಲಿ ಕುಶಲಿಗಳಿಗೆ ಯಾವಾಗ ಯಾವ ಕಾಯಿಯನ್ನು ಚಲಿಸಬೇಕು? ಹೇಗೆ ಒತ್ತಡವನ್ನು ಕಾಯ್ದುಕೊಳ್ಳಬೇಕು? ಹೇಗೆ ಒತ್ತಡವನ್ನು ಕಡಿಮೆ ಮಾಡಬೇಕು? ಹೇಗೆ ರಾಜನ ಸಮೀಪ ಅಥವಾ ಫಲಕದ ನಿರ್ದಿಷ್ಟ ಭಾಗದಲ್ಲಿ ಆಕ್ರಮಣ ಮಾಡಿ ಕಾಯಿಯನ್ನು ಗೆಲ್ಲಬೇಕು? ಹೇಗೆ ಫಲಕದ ಮಧ್ಯಭಾಗದ ಹತೋಟಿ ಕಾಯ್ದುಕೊಳ್ಳಬೇಕು? ಯಾವುದು ಬಲವಾದ ನಡೆ? ಯಾವುದು ದುರ್ಬಲ ನಡೆ? ಯಾವುದು ಸರಿ ನಡೆ? ಯಾವುದು ತಪ್ಪು ನಡೆ? ಯಾವುದು ತಾಂತ್ರಿಕವಾದ ನಡೆ? ಯಾವಾಗ ಆಟವನ್ನು ಸರಲೀಕರಿಸಬೇಕು? ಯಾವಾಗ ಆಟವನ್ನು ಮತ್ತಷ್ಟು ಸಂಕೀರ್ಣಗೊಳಿಸಿ ಎದುರಾಳಿಯನ್ನು ಗೊಂದಲಕ್ಕೆ ಈಡು ಮಾಡಬೇಕು? ಹೇಗೆ ಎದುರಾಳಿಯನ್ನು ಚಕಿತಗೊಳಿಸಬೇಕು?ಹೀಗೆ ನಾನಾರೀತಿಯ ನಿರ್ಣಯ ತೆಗೆದುಕೊಳ್ಳುವ ಯುಕ್ತಿ ಸಿಧ್ಧಿಸಿರುತ್ತದೆ. ಯಾಕೆಂದರೆ ಎಲ್ಲ ಮನುಷ್ಯರ ಮೆದುಳು ಒಂದೇ ರೀತಿ ಯೋಚಿಸುವುದಿಲ್ಲ. ಎಲ್ಲರ ನಿರ್ಧಾರಗಳೂ ಒಂದೇ ಇರಲಾರದು. ಚೆಸ್ಸ್ ಆಟ ಎದುರಾಳಿಗಳ ಚಲನೆಗೆ ಉತ್ತರ-ಪ್ರತ್ಯುತ್ತರಗಳ ಸರಣಿಯಾಗಿ ಹೊಸ ಹೊಸ ರೀತಿಯಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಚದುರಂಗದಲ್ಲಿ ಸಂಶೋಧಕರ ಹೆಸರಿನಿಂದ ಪ್ರಸಿದ್ಧಿಯನ್ನು ಪಡೆದ ನೂರಾರು ಆರಂಭ ಆಟದ ಪ್ರಕಾರಗಳು ಇದೆ. ಇಂದಿಗೂ ಜಾಗತಿಕ ಮಟ್ಟದ ಪಂದ್ಯಾವಳಿಗಳಲ್ಲಿ ಪ್ರಸಿಧ್ಧ ಆಟಗಾರರು ಇದನ್ನು ಅಳವಡಿಸಿಕೊಳ್ಳುತ್ತಿದ್ದಾರೆ.
ಆರಂಭ ಆಟಗಳಲ್ಲಿ ಅನೇಕ ವಿಧ.
೧. ರಾಜನ ಬದಿಯ ಆರಂಭ
೨. ರಾಣಿಯ ಬದಿಯ ಆರಂಭ
೩. ಅಸಹಜ ಆರಂಭ
೪. ಏಕ ಪೇದೆಯ ಆರಂಭ
೫. ಯುಗಳ ಪೇದೆಯ ಆರಂಭ
೬. ಬಲಿಕೊಡುವುದು [ ಗ್ಯಾಮ್ಬಿಟ್ ]
೭. ಬಲಿ ನಿರಾಕರಣೆ [ ಗ್ಯಾಮ್ಬಿಟ್ ದಿಕ್ಲ್ಯ್ನಡ್]
೮. ಬಲಿ ಸ್ವೀಕರಣೆ [ ಗ್ಯಾಮ್ಬಿಟ್ ಅಕ್ಸೆಪ್ತೆಡ್ ]
ಮುಂದಿನ ಸಂಚಿಕೆಯಲ್ಲಿ ಇಂತಹ ಒಂದೊಂದು ಆಟದ ವಿಧಾನವನ್ನೂ ಅಭ್ಯಸಿಸೋಣ. ಆರಂಭದ ೫೦೦ ಕ್ಕೂ ಹೆಚ್ಚು ಪ್ರಭೇದಗಳು ಚಾಲ್ತಿಯಲ್ಲಿವೆ.
ಮಧ್ಯಮ ಆಟ:
ಇದು ಚದುರಂಗದ ಮುಖ್ಯ ಹಂತ. ಆಟಗಾರನೊಬ್ಬ ತನ್ನ ಆಳವಾದ ಅಂತರ್ದೃಷ್ಟಿಯ ಪರಾಕಾಷ್ಟೆಯನ್ನು ಅಭಿವ್ಯಕ್ತಿಸಿ ಅದ್ಭುತ ನಡೆಗಳನ್ನು ಸೃಷ್ಟಿಸುವ ಮುಖ್ಯ ಘಟ್ಟ. ಜಗತ್ತಿನಲ್ಲಿ ಇಂದು ಇದೊಂದು ಜನಪ್ರಿಯ ಮನರಂಜನೆಯ ಆಟವಾಗಿ ಅಷ್ಟೇ ಉಳಿದಿಲ್ಲ. ಚದುರಂಗವೊಂದು ವಿಜ್ಞಾನ, ಕಲೆ,ಪ್ರತ್ಯಕ್ಷ ಯುಧ್ಧಕಲೆ. ಇದೊಂದು ಆಪಾರ ಸಂಭವನೀಯತೆಯ ಆಗರ. ಯಾಕೆಂದರೆ ಈ ಆಟದ ಒಟ್ಟು ನಡೆಗಳ ಸಂಖ್ಯೆ ಜಗತ್ತಿನ ಎಲ್ಲ ಪರಮಾಣುಗಳ ಒಟ್ಟಾರೆ ಮೊತ್ತಕ್ಕಿಂತ ಮಿಗಿಲು ಎಂದು ಲೆಕ್ಕ ಹಾಕಲಾಗಿದೆಯಂತೆ! ಹೀಗಾಗಿಯೇ ಮಧ್ಯಮ ಆಟ ಅತ್ಯಂತ ಸಂಕೀರ್ಣ ಹಾಗೂ ಕಷ್ಟ ಕೂಡ. ಮಧ್ಯಮ ಆಟದ ಕೆಲವು ಸರಳ ಸೂತ್ರಗಳು ತಿಳಿದಿದ್ದರೆ ಗುಣಮಟ್ಟದ ಆಟ ಆಡಲು ಸಾಧ್ಯ. ಮಧ್ಯ ಹಂತದ ಆಟ ಅಂತಿಮ ಆಟದ ದಿಕ್ಕನ್ನು ಸೂಚಿಸುತ್ತದೆ. ಆಟವನ್ನು ಅಂತ್ಯಗೊಳಿಸಲು ಬೇಕಾದ ಪೂರ್ವ ಸಿದ್ದತೆಯೇ ಈ ಹಂತದ ಮುಖ್ಯ ಗುರಿ. ಫಲಕದಲ್ಲಿ ಎಲ್ಲ ಕಾಯಿಗಳೂ ಕೂಡ ಹೆಚ್ಚಿನ ಚಲನೆಯನ್ನು ಪಡೆದುಕೊಂಡು ಮುನ್ನುಗ್ಗಿರುತ್ತವೆ. ಕೆಲವು ಕಾಯಿಗಳು ಅಥವಾ ಪೇದೆಗಳು ಎದುರಾಳಿಯ ಸ್ವಾಧೀನಕ್ಕೊಳಪತ್ತಿರುತ್ತವೆ. ಈ ಹಂತದಲ್ಲಿಯೇ ಆಟಗಾರರು ತಪ್ಪು ನಡೆಗಳನ್ನು ಮಾಡುವ ಸಂಭವ ಹೆಚ್ಚು. ಯಾಕೆಂದರೆ ಆರಂಭಕ್ಕೂ ಮಧ್ಯಮ ಆಟಕ್ಕು ನೇರವಾದ ಸಂಭಂಧ ಕಲ್ಪಿಸುವುದು ಕಷ್ಟ. ಮಧ್ಯ ಅಟ್ಟಕ್ಕೆ ಸಿಧ್ಧ ಸೂತ್ರಗಲಿಲ್ಲ.
ಇಲ್ಲಿ ಆಟಗಾರನ ಕ್ರಿಯಾತ್ಮಕತೆಯೇ ಗೆಲುವನ್ನು ತರಬಲ್ಲದು. ಇಲ್ಲಿ ಹೆಚ್ಚು ಮುನ್ನಡೆಯನ್ನು ಕಾಯ್ದುಕೊಂಡರೆ ಕೊನೆಯಾಟದಲ್ಲಿ ಸುಲಭ. ಕಾಯಿಗಳ ವಿನಿಮಯ ಹೆಚ್ಚಾಗಿ ನಡೆಯುವುದು ಈ ಹಂತದಲ್ಲೇ. ಅನೇಕ ರೀತಿಯಲ್ಲಿ ವ್ಯೂಹ ರಚಿಸಿ ಬಲೆಯಲ್ಲಿ ಕೆಡವಿ, ಕವಲು-ಕೊಕ್ಕೆ, ಶೂಲ, ಅಡೆತಡೆಗಳನ್ನು ನಿರ್ಮಿಸಿ ಸುಭದ್ರ ಕೋಟೆಯಲ್ಲಿ ತನ್ನ ರಾಜನನ್ನು ರಕ್ಷಿಸುವುದು ಎದುರಾಳಿ ರಾಜನ ಆಟ ಕಟ್ಟುವುದು ಈ ಹಂತದ ಉದ್ದೇಶ.
(ಮುಂದುವರಿಯುವುದು... )

1 comment:
tumbaa sarala nirupane. aatada bagge olle maahiti adu shudhdha kannadadalli..
Post a Comment